ಉಡುಪಿ | ಕಾರ್ಕಳ ಪುರಸಭೆಯಲ್ಲಿ ತಡರಾತ್ರಿ ಸಭೆ; ಮಹಿಳಾ ಸಿಬ್ಬಂದಿಗೆ ಅವಮಾನ, ಬೆದರಿಕೆ ಆರೋಪ

Date:

ಉಡುಪಿ ಜಿಲ್ಲೆಯ ಕಾರ್ಕಳ ಪುರಸಭೆ ಸಿಬ್ಬಂದಿಗಳಿಗೆ ತಡರಾತ್ರಿ ವರೆಗೆ ಸಭೆ ನಡೆಸಿದ ಉಡುಪಿ ಜಿಲ್ಲಾ ಯೋಜನಾ ನಿರ್ದೇಶಕ ಮಹಿಳಾ ಸಿಬ್ಬಂದಿಗಳನ್ನು ಗದರಿಸಿ ಬೆದರಿಸಿ ಏಕವಚನ ಬೈದು ಅವಮಾನ ಮಾಡಿ ಕೆಲಸದಿಂದಲೇ ಕಿತ್ತು ಹಾಕುತ್ತೇನೆ ಎಂದು ಸಿಟ್ಟಿನಿಂದ ಅತಿರೇಕವಾಗಿ ವರ್ತಿಸಿದ ಘಟನೆ ಕಾರ್ಕಳ ಪುರಸಭೆಯಲ್ಲಿ ನಡೆದಿದೆ ಎನ್ನಲಾಗಿದೆ.

- Advertisement -

ಬುಧವಾರ ಸಾಯಂಕಾಲ 5.15ಕ್ಕೆ ಕಾರ್ಕಳ ಪುರಸಭೆ ಕಚೇರಿಗೆ ಬಂದ ಯೋಜನಾ ನಿರ್ದೇಶಕ ಸುಬ್ರಮಣ್ಯ ಶೆಟ್ಟಿ ನೇತೃತ್ವದ ತಂಡ ಸಿಬ್ಬಂದಿಗಳನ್ನು ಕಚೇರಿ ಸಮಯವಾದರೂ ಹೋಗದಂತೆ ಅದೇಶಿಸಿ ಪುರಸಭಾ ಮುಖ್ಯಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಸುಬ್ರಮಣ್ಯ ಸೆಟ್ಟಿ ಪೌರ ಕಾರ್ಮಿಕರ ಕೊರತೆ ಇದೆ ಇರುವ ಪೌರ ಕಾರ್ಮಿಕರನ್ನು ಬಳಸಿಕೊಂಡು ಸ್ವಚ್ಛತೆ ಮನೆ ಮನೆ ಕಸ ಸಂಗ್ರಹಣೆ ಹಾಗೂ ನಗರ ಸುಂದರೀಕರಣ, ಚರಂಡಿ ಸ್ವಚ್ಛತೆ ಮಾಡಲಾಗ್ತುತಿದೆ ಎಂದು ವಿವರಣೆ ನೀಡುತ್ತಿದ್ದಾಗ ಏಕ ಏಕಿ ಮಹಿಳಾ ಸಿಬ್ಬಂದಿಗೆ ಏಕವಚನದಲ್ಲಿ ಬೈದು ನಿಂದಿಸಿ ಅವಮಾನಿಸುವುದರ ಜೊತೆಗೆ ನಿನ್ನನ್ನು ಇಲ್ಲಿಂದ ಓಡಿಸ್ತೇನೆ ಬೆದರಿಕೆ ಹಾಕಿರುವ ಬಗ್ಗೆ ತಿಳಿದು ಬಂದಿದೆ ತನ್ನ ಕಂಪ್ಯೂಟರ್ ನಲ್ಲಿರುವ ಇಂಜಿನಿಯರಿಂಗ್ ವಿಭಾಗದ ಕಡತಗಳು ಉದ್ದೇಶ ಪೂರ್ವಕವಾಗಿ ಡಿಲೀಟ್ ಮಾಡಲಾಗಿದೆ ಎಂದು ಕಿರಿಯ ಅಭಿಯಂತರರು ಮುಖ್ಯಾಧಿಕಾರಿಯವರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೆ ಸ್ವತಃ ಕಿರಿಯ ಅಭಿಯಂತರದ್ದೆ ಜವಾಬ್ದಾರಿ ಎಂಬಂತೆ ನಿರ್ಲಕ್ಷ ತೋರಲಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ...

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ ಮುಕ್ತವಾಗಿರಬೇಕು. ಆದರೆ ಚುನಾವಣೆ ಸ್ಪರ್ಧಿಸುವ ಆಡಳಿತ ಪಕ್ಷವೇ ತನಗೆ ಇಷ್ಟವಾದ ವ್ಯಕ್ತಿಯನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಿಕೊಂಡರೆ, ವಿರೋಧ ಪಕ್ಷಗಳಿಗೆ...

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ ವಿರುದ್ಧ ಎದ್ದಿರುವ ಅನುಮಾನಗಳಿಂದ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಈ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ...

ತೆಲಂಗಾಣ ಬೆಳೆ ರಕ್ಷಣೆಗೆ 3 ಟಿಎಂಸಿ ನೀರು: ಅಚ್ಚುಕಟ್ಟು...

ಕೃಷ್ಣಾ ನದಿಯ ನೀರು ಮತ್ತೊಮ್ಮೆ ಕರ್ನಾಟಕ–ತೆಲಂಗಾಣದ ನಡುವಿನ ಪ್ರಮುಖ ವಿಚಾರವಾಗಿ ಮುನ್ನೆಲೆಗೆ ಬಂದಿದೆ. ತೆಲಂಗಾಣದ ಕೃಷಿ ಪ್ರದೇಶದಲ್ಲಿನ ನಿಂತಿರುವ ಬೆಳೆಗಳನ್ನು ರಕ್ಷಿಸಲು ಕರ್ನಾಟಕದಿಂದ ಕೃಷ್ಣಾ ನೀರು ಬಿಡುಗಡೆ ಮಾಡುವಂತೆ ಆ ರಾಜ್ಯದ ಸಚಿವರು...

ಸಭೆಯ ಸಂದರ್ಭದಲ್ಲಿ ದೂರು ನೀಡಿದ ಮಹಿಳಾ ಕಿರಿಯ ಅಭಿಯಂತರಯನ್ನೇ ತರಾಟೆಗೆ ತೆಗೆದುಕೊಂಡ ಯೋಜನಾ ನಿರ್ದೇಶಕ ಸುಬ್ರಮಣ್ಯ ಶೆಟ್ಟಿ ಏಕವಚನದಲ್ಲಿ ಬೈದು ನಿಂದಿಸಿ ಅಪಮಾನಿಸಿದ್ದಾರೆ ಎಂದು ತಿಳಿದು ಬಂದಿದೆ ರಾತ್ರಿ 8.30 ಆದರೂ ಮನೆಗೆ ಬಾರದ ಫೋನ್ ಕಾಲ್ ಉತ್ತರ ಬರದೇ ಇದ್ದಾಗಕೆಲವೊಂದು ಮಹಿಳಾ ಸಿಬ್ಬಂದಿಯ ಕುಟುಂಬಸ್ಥರು ಪುರಸಭೆಗೆ ಬಂದಾಗ ಸಭೆ ನಡೆಯುತ್ತಿರುವುದು ಕಂಡು ಬಂತು ರಾತ್ರಿ ಸಮಯದಲ್ಲಿ ಪುರಸಭೆ ಬಾಗಿಲು ತೆರೆದೇ ಇದೆ ಕಚೇರಿ ವಿದ್ಯುತ್ ದೀಪಗಳು ಉರಿಯುತ್ತಿರುವುದನ್ನು ಕಂಡು ಸಾರ್ವಜನಿಕರು, ಪತ್ರಕರ್ತರೊಬ್ಬರು ಕಚೇರಿಗೆ ಹೋದಾಗ ಕೂಡಲೇ ಸಭೆ ಮುಗಿಸಿ ತಮ್ಮ ತಮ್ಮ ಸರಕಾರಿ ವಾಹನಗಳಲ್ಲಿ ಹೊರಟುಹೋದರೆ ದೂರದ ಊರಿಗೆ ಹಳ್ಳಿಗಳಿಗೆ ಹೋಗಬೇಕಾಗಿದ್ದ ಸಿಬ್ಬಂದಿಗಳು ಬಸ್ಸು ಗಳಿಲ್ಲದೆ ಪರದಾಡುತ್ತಿದ್ದರೆ ಸೂಕ್ತ ವ್ಯವಸ್ಥೆ ಮಾಡಬೇಕಿದ್ದ ಮುಖ್ಯಧಿಕಾರಿ,ಯೋಜನಾ ನಿರ್ದೇಶಕರು ತಮ್ಮ ಸರ್ಕಾರಿ ವಾಹನಗಳಲ್ಲಿ ನಿಶ್ಚಿoತೆಯಾಗಿ ಮನೆ ಸೇರಿ ಪುರಸಭೆ ಸಿಬ್ಬಂದಿಗಳು ಮಹಿಳಾ ಸಿಬ್ಬಂದಿಗಳು ಪರಿಸ್ಥಿತಿ ಕಂಡು ಸಾರ್ವಜನಿಕರು ವ್ಯವಸ್ಥೆ ಮಾಡಿ ಮನೆ ತಲುಪುವoತಾಯಿತು ಈ ಹಿಂದೆಯೂ ಹಲವಾರು ಬಾರಿ ಪುರಸಭಾ ಅಧಿಕಾರಿಗಳು, ಮಹಿಳಾ ಸಿಬ್ಬಂದಿಗಳನ್ನು ಹಲವಾರು ಬಾರಿ ತಮ್ಮಕಛೇರಿಗೆ ಕರೆಸಿ ಬೈದು ನಿಂದಿಸುತ್ತಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದು ಇವರ ಸೂಕ್ತ ಕ್ರಮ ಕೈಗೊಳ್ಳಬೇಕು ಆಗ್ರಹಗಳು ಸಿಬ್ಬಂದಿಗಳು ಹಾಗೂ ಅವರ ಕುಟುಂಬಸ್ಥರಿಂದ ಕೇಳಿ ಬರುತ್ತಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಮಕ್ಕಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ನ್ಯಾ. ಹೆಚ್. ಶಶಿಧರ್ ಶೆಟ್ಟಿ

ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಕೇವಲ ಸರ್ಕಾರ, ಇಲಾಖೆಗಳು ಅಥವಾ ಸರ್ಕಾರೇತರ ಸಂಸ್ಥೆಗಳ...

ಉಡುಪಿ | ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜಿನಾಮೆಗೆ ಆಗ್ರಹಿಸಿ ಪ್ರತಿಭಟನೆ

SIR (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆ ರದ್ದುಪಡಿಸುವುದು, ಮತದಾರರ ಪಟ್ಟಿಯಿಂದ ತೆಗೆದುಹಾಕಿರುವ...

ಉಡುಪಿ | ವಿದ್ಯಾರ್ಥಿನಿಯರಿಗಾಗಿ ಇನ್ನೂ ಎರಡು ವಸತಿ ನಿಲಯ : ಸಚಿವ ಶಿವರಾಜ ತಂಗಡಗಿ

ಅಜ್ಜರಕಾಡಿನ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು...

ಚಿಕ್ಕಮಗಳೂರು | ಸೆ. 26ರಂದು ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು ನಗರದಲ್ಲಿ 66/11 ಕೆ.ವಿ. ಹಿರೇಮಗಳೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ...