ಗೃಹಲಕ್ಷ್ಮಿ ಹಣದಲ್ಲಿ ರೊಟ್ಟಿ ಉದ್ಯಮ: ಮಹಿಳೆಯರ ಸಬಲೀಕರಣಕ್ಕೆ ಆಸರೆಯಾಯಿತು ಗ್ಯಾರಂಟಿ

Date:

ಟೀಕೆಗಳ ನಡುವೆಯೂ ಫಲಾನುಭವಿಗಳ ಈ ಸಕಾರಾತ್ಮಕ ಪ್ರತಿಕ್ರಿಯೆಯೇ ಗ್ಯಾರಂಟಿ ಯೋಜನೆಗಳ ನಿಜವಾದ ಯಶಸ್ಸಿಗೆ ಅಳತೆಗೋಲಾಗಿದೆ. ಮಹಿಳೆಯರು ಸಬಲರಾದಾಗ ಸಮಾಜ ಸಬಲವಾಗುತ್ತದೆ ಎಂಬ ನಿಜವನ್ನು ಗೃಹಲಕ್ಷ್ಮಿ ಯೋಜನೆ ಮತ್ತೊಮ್ಮೆ ಸಾಬೀತುಪಡಿಸುತ್ತಿದೆ.

ರಾಜ್ಯದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಪಕ್ಷಗಳು ಟೀಕೆ ಮಾಡುತ್ತಿರುವುದರ ನಡುವೆಯೂ ಮಹಿಳೆಯರು ಇಡೀ ರಾಜ್ಯದ ಜನರೇ ಮೆಚ್ಚುವಂಥ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಗೃಹಲಕ್ಷ್ಮಿ ಹಣದಿಂದ ರೊಟ್ಟಿ ಲಟ್ಟಿಸುವ ಯಂತ್ರ ಖರೀದಿಸಿ ಹೊಸ ಉದ್ಯಮ ಆರಂಭಿಸಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.

- Advertisement -

ಮೂವರಿಂದ ತಲಾ 58 ಸಾವಿರ ರೂ. ಗೃಹಲಕ್ಷ್ಮಿ ಹಣ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ನಿವಾಸಿಗಳಾದ ಮಕ್ತುಂಬಿ ಕೊಪ್ಪಳ, ಹುಸೇನಬಿ ಮತ್ತು ಸಾಜನಬಿ ಎಂಬುವವರು ಒಗ್ಗೂಡಿ ಗೃಹಲಕ್ಷ್ಮಿ ಹಣದಲ್ಲಿ ಸ್ವಂತ ಉದ್ಯಮ ಆರಂಭಿಸಿದ್ದಾರೆ. ಒಂದೇ ಕುಟುಂಬದ ಸಂಬಂಧಿಗಳಾಗಿರುವ ಈ ಮೂವರು, ʼಗೃಹಲಕ್ಷ್ಮಿ ಯೋಜನೆ ಹಣ ಬರಲು ಶುರುವಾದಾಗಿನಿಂದಲೂ ಏನಾದರೂ ಉದ್ಯಮ ಆರಂಭಿಸಬೇಕು ಎನ್ನುವ ಯೋಚನೆ ಇತ್ತು. ಹೀಗಾಗಿ, ಪ್ರತಿ ತಿಂಗಳು ಬರುವ ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿಯನ್ನು ಯಾವುದಕ್ಕೂ ಖರ್ಚು ಮಾಡಿಲ್ಲ. ಆಗ ಹೊಳೆದಿದ್ದು ರೊಟ್ಟಿ ಉದ್ಯಮ. ಈವರೆಗೆ ಒಬ್ಬೊಬ್ಬರಿಗೆ ಜಮೆ ಆಗಿದ್ದ ತಲಾ ₹58 ಸಾವಿರ ರೂಪಾಯಿಯನ್ನು ಸೇರಿಸಿ ಹುಬ್ಬಳ್ಳಿಗೆ ಹೋಗಿ ಒಂದು ರೊಟ್ಟಿ ಲಟ್ಟಿಸುವ ಯಂತ್ರ ಖರೀದಿ ಮಾಡಿದ್ದೇವೆ. ಈ ಯಂತ್ರಕ್ಕೆ ಒಟ್ಟು 2 ಲಕ್ಷ ರೂಪಾಯಿ ಖರ್ಚಾಗಿದೆʼ ಎಂದು ಹೇಳಿಕೊಂಡಿದ್ದಾರೆ.

Advertisements

ಆರಂಭದಲ್ಲೇ ಭರವಸೆ ನೀಡಿದ ಗೃಹಲಕ್ಷ್ಮಿ

ಕುಷ್ಟಗಿಯ ತೆಗ್ಗಿನ ಓಣಿಯ ಶ್ರೀ ಗುರು ಚನ್ನಬಸವೇಶ್ವರ ಕಲ್ಮಠ ಕಾಂಪ್ಲೆಕ್ಸ್‌ನಲ್ಲಿ ಮೇ 14ರಂದು ಗೃಹಲಕ್ಷ್ಮಿ ರೊಟ್ಟಿ ಕೇಂದ್ರ ಓಪನ್ ಆಗಿದೆ. ದಿನನಿತ್ಯ ಜನರು ಅಂಗಡಿಗೆ ಬಂದು ರೊಟ್ಟಿ ಖರೀದಿ ಮಾಡುತ್ತಿದ್ದಾರೆ. ಮದುವೆ ಮತ್ತು ಇತ್ಯಾದಿ ಸಮಾರಂಭಗಳಿಗೂ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ ಹಾಗೂ ಚಪಾತಿಗಳನ್ನು ಹೋಲ್ ಸೇಲ್‌ ದರದಲ್ಲಿ ನೀಡುತ್ತಿದ್ದಾರೆ. ದಿನಕ್ಕೆ‌ ಏನಿಲ್ಲವೆಂದರೂ ಅಂಗಡಿಯಲ್ಲೇ 300-400 ರೊಟ್ಟಿ ಮಾರಾಟ ಆಗುತ್ತಿವೆ. ಬೇರೆ ಬೇರೆ ಕಡೆಯಿಂದ ದಿನಕ್ಕೆ ಒಂದು ಸಾವಿರಕ್ಕೂ ಹೆಚ್ಚು ರೊಟ್ಟಿಗಳ ಆರ್ಡರ್ ಬರುತ್ತಿದ್ದು, ಆರಂಭದಲ್ಲೇ ರೊಟ್ಟಿ ಉದ್ಯಮ ಯಜಮಾನಿಯರಿಗೆ ಹೊಸ ಭರವಸೆ ಹುಟ್ಟಿಸಿದೆ.

ಗೃಹಲಕ್ಷ್ಮಿ ರೊಟ್ಟಿ ಉದ್ಯಮ 1

ಗ್ಯಾರಂಟಿ ಹಣದಲ್ಲಿ ರೊಟ್ಟಿ ಉದ್ಯಮ ಆರಂಭಿಸಿರುವ ಮಕ್ತುಂಬಿ ಕೊಪ್ಪಳ, ಹುಸೇನಬಿ ಮತ್ತು ಸಾಜನಬಿ ಅವರನ್ನು ಈ ದಿನ.ಕಾಮ್ ತಂಡ ಭೇಟಿಯಾಗಿ ಮಾತಾಡಿಸಿದಾಗ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

“ಏನೂ ಕೆಲಸವಿಲ್ಲದೇ ಮನೆಯಲ್ಲಿ ಖಾಲಿ ಇದ್ದೆವು. ಗ್ಯಾರಂಟಿ ಹಣ ಕೂಡಿಟ್ಟಿದ್ದರಿಂದ ಈಗ ಸ್ವಂತ ಉದ್ಯಮ ಮಾಡಿ ದುಡಿದು ತಿನ್ನಲು ಅನುಕೂಲವಾಗಿದೆ. ಕಾಂಗ್ರೆಸ್ ಸರ್ಕಾರದ ಯೋಜನೆಗಳಿಂದ ನಾವು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗಿದೆ” ಎಂದು ಮಕ್ತುಂಬಿ ಕೊಪ್ಪಳ ಸಂತಸ ವ್ಯಕ್ತಪಡಿಸಿದರು.

ಹಾಗೆಯೇ ಹುಸೇನಬಿ ಕಮ್ಮಾರ ಮಾತನಾಡಿ, “ಗೃಹಲಕ್ಷ್ಮಿ ಹಣ ಕೂಡಿಟ್ಟು ರೊಟ್ಟಿ ಲಟ್ಟಿಸುವ ಯಂತ್ರ ತೆಗೆದುಕೊಂಡಿದ್ದೇವೆ. ಬೇರೊಬ್ಬರ ಬಳಿ ಕೂಲಿ ಹೋಗುವುದಕ್ಕಿಂತ ಈ ಉದ್ಯಮ ಮಾಡಲಾರಂಭಿಸಿದ್ದೇವೆ. ಸರ್ಕಾರದ ಉಚಿತ ಯೋಜನೆಗಳು ನಮ್ಮ ಜೀವನಕ್ಕೆ ಆಧಾರವಾಗಿದ್ದು, ಗ್ಯಾರಂಟಿ ಸ್ಕೀಂಗಳನ್ನು ಮುಂದುವರಿಸಬೇಕು” ಎಂದಿದ್ದಾರೆ.

ಗೃಹಲಕ್ಷ್ಮಿ ರೊಟ್ಟಿ ಉದ್ಯಮ 2

ಇನ್ನು ಸಾಜನಬಿ ದಾದಿಬಾಯಿ ಮಾತನಾಡಿ, “ಸಿದ್ದರಾಮಯ್ಯನವರ ಸರ್ಕಾರ ನಮಗೆ ಬಹಳ ಅನುಕೂಲ ಮಾಡಿದೆ. ಸ್ವಾವಲಂಬಿಯಿಂದ ದುಡಿದು ತಿನ್ನುವುದಕ್ಕೆ ದಾರಿ ಮಾಡಿಕೊಟ್ಟಿದೆ. ಮುಂದೆಯೂ ಇದೇ ಸರ್ಕಾರವೇ ಅಧಿಕಾರಕ್ಕೆ ಬರಲೆಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ” ಎಂದು ಮನದ ಮಾತಾಡಿದರು.

ಮತ್ತೊಂದೆಡೆ ಹುಸೇನಬಿ ಪತಿ ಮೆಹಬೂಬ್ ಮಾತನಾಡಿ, “ಗ್ಯಾರಂಟಿ ಯೋಜನೆಗಳು ಒಳ್ಳೆಯ ಯೋಜನೆಗಳು. ಗೃಹಲಕ್ಷ್ಮಿ ಹಣ ಕೂಡಿಟ್ಟು ಅದೇ ಹೆಸರಿನ ರೊಟ್ಟಿ ಕೇಂದ್ರ ಆರಂಭಿಸಿದ್ದು ತುಂಬಾ ಖುಷಿ ತಂದಿದೆ. ಈಗಾಗಲೇ ದೂರದ ಊರುಗಳಿಂದ ರೊಟ್ಟಿಗೆ ಆರ್ಡರ್ ಬರುತ್ತಿದ್ದು, ಮೊನ್ನೆಯಷ್ಟೇ ಮಂಗಳೂರಿಗೆ ಒಂದು ಸಾವಿರ ರೊಟ್ಟಿಗಳನ್ನು ಬಸ್‌ನಲ್ಲಿಟ್ಟು ಪಾರ್ಸೆಲ್ ಕಳುಹಿಸಿದ್ದೇವೆ. ದಿನದಿಂದ ದಿನಕ್ಕೆ ವ್ಯಾಪಾರ ಜೋರಾಗುತ್ತಿದೆ” ಎಂದು ಹೇಳಿದರು.

ಮಹಿಳೆಯರ ಉದ್ಯಮಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಮೆಚ್ಚುಗೆ

ಈ ವಿಚಾರ ತಿಳಿಯುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸ್ಟೋರಿ ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, “ಗ್ಯಾರಂಟಿ ಯೋಜನೆಗಳು ಕೇವಲ ಉಚಿತ ಕೊಡುಗೆಗಳಲ್ಲ, ಅವು ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಸ್ವಾವಲಂಬನೆಗೆ ದಾರಿದೀಪ ಎಂಬುದಕ್ಕೆ ಈ ಸಾಧಕ ಮಹಿಳೆಯರೇ ಪ್ರತ್ಯಕ್ಷ ಸಾಕ್ಷಿ. ಇವರ ಈ ಹೊಸ ಹೆಜ್ಜೆಗೆ ಹಾಗೂ ಉದ್ಯಮಶೀಲತೆಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು” ಎಂದು ಪೋಸ್ಟ್ ಹಾಕಿದ್ದಾರೆ. ಅಲ್ಲದೇ, ಇವರ ಸಾಧನೆ ನಾಡಿನ ಸಾವಿರಾರು ಮಹಿಳೆಯರಿಗೆ ಪ್ರೇರಣೆಯಾಗಲೆಂದು ಹಾರೈಸಿದ್ದಾರೆ.

ಈಗಾಗಲೇ ರೊಟ್ಟಿ ಲಟ್ಟಿಸುವ ಯಂತ್ರ ತಂದಿರುವ ಈ ಮೂವರಿಗೂ ಶಾವಿಗೆ ತಾಯಾರಿಸುವ ಯಂತ್ರ ಹಾಗೂ ಖಾರ ಬೀಸುವ ಯಂತ್ರ ತಂದು ಉದ್ಯಮವನ್ನು ಮತ್ತಷ್ಟು ವಿಸ್ತರಿಸುವ ಆಲೋಚನೆ ಇದೆ. ಗೃಹಲಕ್ಷ್ಮಿ ಹಣದಲ್ಲಿ ರೊಟ್ಟಿ ಉದ್ಯಮ ಆರಂಭಿಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ವಿಪಕ್ಷಗಳು ತೀವ್ರವಾಗಿ ಟೀಕಿಸುತ್ತಿದ್ದರೂ ಕೂಡ ಈ ಯೋಜನೆಗಳು ಮಹಿಳೆಯರ ಜೀವನದಲ್ಲಿ ನಿಜವಾದ ಬದಲಾವಣೆ ತಂದಿವೆ ಎಂಬುದನ್ನು ಮಾತ್ರ ಯಾರೂ ನಿರಾಕರಿಸಲಾಗದು.

ಇದನ್ನೂ ಓದಿದ್ದೀರಾ? ತುಮಕೂರಿನಲ್ಲಿ ‘ಸಾಧನೆಯ ಸೇವೆಗಳ ಸಮರ್ಪಣೆ’ ಕಾರ್ಯಕ್ರಮ

ಗೃಹಲಕ್ಷ್ಮಿ ಯೋಜನೆಯಡಿ ದೊರೆತ ಹಣವನ್ನು ಕೇವಲ ದೈನಂದಿನ ಖರ್ಚಿಗೆ ಸೀಮಿತಗೊಳಿಸದೆ, ರೊಟ್ಟಿ ಲಟ್ಟಿಸುವ ಉಪಕರಣಗಳನ್ನು ಖರೀದಿಸಿ ಸ್ವಂತ ಉದ್ಯಮ ಆರಂಭಿಸುತ್ತಿರುವ ಮಹಿಳೆಯರು ಸ್ವಾವಲಂಬಿ, ಮಹಿಳಾ ಸಬಲೀಕರಣಕ್ಕೆ ನಿಜವಾದ ಮಾದರಿಯಾಗಿ ನಿಂತಿದ್ದಾರೆ. ಇವರ ಯಶಸ್ಸು ಸಮಾಜದಲ್ಲಿ ಹೊಸ ಚೈತನ್ಯವನ್ನು ತುಂಬುತ್ತಿದ್ದು, ಇತರ ಮಹಿಳೆಯರಿಗೂ ಪ್ರೇರಣೆಯಾಗುತ್ತಿದೆ.

ಈ ಯೋಜನೆಗಳು ದೀರ್ಘಕಾಲದವರೆಗೆ ಸುಸ್ಥಿರವಾಗಿ ಮುಂದುವರೆದು, ಹೆಚ್ಚೆಚ್ಚು ಮಹಿಳೆಯರು ಆರ್ಥಿಕವಾಗಿ ಸಬಲರಾಗಿ, ಸ್ವಾವಲಂಬಿ ಸಮಾಜ ನಿರ್ಮಾಣಕ್ಕೆ ಪ್ರೋತ್ಸಾಹಿಸುವುದು ಎಲ್ಲರ ಜವಾಬ್ದಾರಿ. ಟೀಕೆಗಳ ನಡುವೆಯೂ ಫಲಾನುಭವಿಗಳ ಈ ಸಕಾರಾತ್ಮಕ ಪ್ರತಿಕ್ರಿಯೆಯೇ ಗ್ಯಾರಂಟಿ ಯೋಜನೆಗಳ ನಿಜವಾದ ಯಶಸ್ಸಿಗೆ ಅಳತೆಗೋಲಾಗಿದೆ. ಮಹಿಳೆಯರು ಸಬಲರಾದಾಗ ಸಮಾಜ ಸಬಲವಾಗುತ್ತದೆ ಎಂಬ ನಿಜವನ್ನು ಗೃಹಲಕ್ಷ್ಮಿ ಯೋಜನೆ ಮತ್ತೊಮ್ಮೆ ಸಾಬೀತುಪಡಿಸುತ್ತಿದೆ.

WhatsApp Image 2026 04 20 at 18.37.37 e1776691850820
ವಿಜಯಕುಮಾರ್ ಎಂ
+ posts

ವಿಜಯನಗರ ಕೋಆರ್ಡಿನೇಟರ್‌

ಪೋಸ್ಟ್ ಹಂಚಿಕೊಳ್ಳಿ:

ವಿಜಯಕುಮಾರ್ ಎಂ
ವಿಜಯಕುಮಾರ್ ಎಂ
ವಿಜಯನಗರ ಕೋಆರ್ಡಿನೇಟರ್‌

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು ದಸರಾ ಉದ್ಘಾಟನೆಗೆ ಅಭಿನವ ಗವಿಸಿದ್ದೇಶ್ವರ ಶ್ರೀಗೆ ಆಹ್ವಾನ

ಕೊಪ್ಪಳದ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಈ...

ಪತ್ರಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವೇ: ಮೋಶಾಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ವರದಿಗಾರಿಕೆ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯರ ಮೇಲೆ...