ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ಎಸ್‌ಎಸ್‌ಎಫ್) ಹೊನ್ನಾಳ ಘಟಕದ ವತಿಯಿಂದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸತತ 26ನೇ ಬಾರಿಗೆ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭವು ಇಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಎಸ್‌ಎಸ್‌ಎಫ್ ಕುಂದಾಪುರ ಡಿವಿಜನ್ ಅಧ್ಯಕ್ಷ ಸುಲ್ತಾನ್ ಹಾಶಿಮಿ, ಶಿಕ್ಷಣವು ಸಮಾಜದ ಅಭಿವೃದ್ಧಿಗೆ ಮೂಲಾಧಾರವಾಗಿದ್ದು, ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ ಕಳೆದ ಹಲವು ದಶಕಗಳಿಂದ ಸಂವಿಧಾನದ ಅಡಿಯಲ್ಲಿ ವಿದ್ಯಾರ್ಥಿ ಯುವಕರ ನಡುವೆ ಶಾಂತಿ, ಸೌಹಾರ್ದತೆ, ಸಾಮರಸ್ಯದ ಕೆಲಸವನ್ನು ಮಾಡುತ್ತದ್ದಾ ಬಂದಿದ್ದು, ಸಮಾಜಮುಖಿ ಕಾರ್ಯಗಳಲ್ಲಿ ಸದಾ ಮುಂದುವರೆದಿದೆ ಅದರ ಭಾಗವೇ ಗ್ರಾಮೀಣ ಪ್ರದೇಶದಲ್ಲಿಯೂ ಸಹ ಎಸ್‌ಎಸ್‌ಎಫ್ ಕಳೆದ 26 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಈ ಸೇವಾ ಕಾರ್ಯವು ಇತರ ಸಂಘಟನೆಗಳಿಗೂ ಮಾದರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬ್ರಹ್ಮಾವರ ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಆಶಾ ಕಿರಣ್ ಎನ್. ಅವರು ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂತಹ ನೆರವುಗಳು ಶಿಕ್ಷಣದತ್ತ ಹೆಚ್ಚಿನ ಆಸಕ್ತಿ ಮೂಡಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ.ಎಸ್. ಅಬ್ದುಲ್ ಶುಕೂರ್, ಉಸ್ತಾದ್ ತೌಫೀರ್ ಅಮಾನಿ, ಕುಂದಾಪುರದ ಅಶ್ರಫ್ ಉಸ್ತಾದ್, ಶಾಲೆಯ ಮುಖ್ಯೋಪಾಧ್ಯಾಯ ರೋಬಿ ಪಿಂಟೊ, ನಿವೃತ್ತ ಮುಖ್ಯೋಪಾಧ್ಯಾಯ ಇಮಾಮ್ ಸಾಹೇಬ್ ಟಂಕಸಾಲಿ, ಮಾಜಿ ಪ್ರಭಾರ ಮುಖ್ಯೋಪಾಧ್ಯಾಯೆ ಜಯಲಕ್ಷ್ಮಿ, ಎಸ್‌ಎಸ್‌ಎಫ್ ಉಡುಪಿ ಡಿವಿಜನ್ ಅಧ್ಯಕ್ಷ ಇಮ್ತಿಯಾಜ್ ಸಂತೋಷನಗರ, ಖದೀಮಿ ಜಾಮಿಯಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಖತ್ತಾಬ್, ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಮುಸ್ತಾಕ್ ಅಹಮದ್ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಶಿಕ್ಷಣದ ಮಹತ್ವವನ್ನು ವಿವರಿಸಿದರು.

ಅಧ್ಯಕ್ಷತೆಯನ್ನು ಎಸ್‌ಎಸ್‌ಎಫ್ ಹೊನ್ನಾಳ ಘಟಕದ ಅಧ್ಯಕ್ಷ ಮೊಹಮ್ಮದ್ ಶೆಹರಾಜ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಅದರ ಜೊತೆಗೆ ಶಾಲೆಗೆ ಅಗ್ಯವಿದ್ದ ಎರಡು ಫ್ಯಾನಗಳನ್ನು ಎಸ್ ಎಸ್ ಎಫ್ ವತಿಯಿಂದ ಶಾಲೆಗೆ ಕೊಡುಗೆಯಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಫ್ ಹೊನ್ನಾಳ ಘಟಕದ ಸದಸ್ಯರಾದ ಬಿ.ಎಸ್. ಸೆಹ್ರಾನ್, ಸಾದ್ ಅಲಿ, ಮುಝಮ್ಮಿಲ್, ರಿಹಾನ್, ಅರ್ಸಲಾನ್, ಸಿರಾಜ್, ಶಾಲಾ ಮುಖ್ಯಮಂತ್ರಿಯಾದ ಮೊಹಮ್ಮದ್ ರುಶಾನ್ ಸೇರಿದಂತೆ ಎಸ್‌ಎಸ್‌ಎಫ್ ಪದಾಧಿಕಾರಿಗಳು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನೂತನ ಎಸ್ ಡಿಎಂ ಸಿ ಅಧ್ಯಕ್ಷರಾದ ಇಮ್ತೀಯಾಜ್ ಹೊನ್ನಾಳ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.







