ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರಿನಲ್ಲಿ ಕಸ್ತೂರಿರಂಗನ್ ವರದಿ ಕುರಿತು ಸಾರ್ವಜನಿಕರ ಸಭಾ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಯವರು ಆಗಮಿಸಿದ ಸಂದರ್ಭದಲ್ಲಿ ಮಾತನಾಡಿ,”ಮುಖ್ಯಮಂತ್ರಿ ಅವರು ಜನರ ಸಮಸ್ಯೆ ಕೇಳಿ ಬಂದಿರುವುದು ಇದೆ ಮೊದಲ ಬಾರಿಗೆ, ಭದ್ರ , ಶೆಟ್ಟಿಹಳ್ಳಿ, ನ್ಯಾಶನಲ್ ಪಾರ್ಕ್,ಮಾಧವ ಗಾಡ್ಗಿಳ್, ಕಸ್ತೂರಿ ರಂಗನ್ ಇಂತಹ ವರದಿಯನ್ನು ಜಾರಿ ಮಾಡಿದರಿಂದ ಕಾಫಿ ಬೆಳೆಗಾರರು, ನಿವೇಶನ ವಂಚಿತರು, ಸಣ್ಣ ರೈತರು ಇದ್ದಾರೆ ಅವರಿಗೆ ಪರಿಹಾರ ಹಕ್ಕು ಪತ್ರ ಕೊಡದೆ ಸಾಯಿಸುತ್ತಿದ್ದಾರೆ” ಎಂದು ಮಲೆನಾಡು,ಕರಾವಳಿ ಜನಪರ ಒಕ್ಕೂಟ ಮುಖಂಡರಾದ ಸುಧೀರ್ ಕುಮಾರ್ ಮುರೊಳ್ಳಿ ತಿಳಿಸಿದರು.
ಮಲೆನಾಡಿನಲ್ಲಿ ವರದಿಯ ಉಲ್ಲೇಖದಲ್ಲಿ ಬಿಡಿ ಗ್ರಾಮಗಳಾಗಿ ಮಾಡಿದ್ದಾರೆ. ಇದನ್ನ ಸೂಕ್ಷ್ಮ ಪರಿಸರ ಅರಣ್ಯ ಪ್ರದೇಶವಾಗಿ ಬಿಂಬಿಸಿದ್ದಾರೆ. ಮಲೆನಾಡು ಕರಾವಳಿ ವಲಯನ್ನ ಕೃಷಿ ವಲಯ ಎಂದು ಮಾಡಬೇಕು. ಕಾವೇರಿ, ಹೇಮಾವತಿ, ತುಂಗಾ ಭದ್ರ, ಇನ್ನು ಅನೇಕ ನದಿಗಳು ಈ ಭಾಗದಲ್ಲಿ ಹುಟ್ಟಿ ಬೇರೆಡೆ ಹರಿಯುತ್ತವೆ. ಆಗಾಗಿ ನೀರಿನ ಘಟಕ ಮಾಡಬೇಕು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಅರಣ್ಯ ಕಾಯ್ದೆ: ಭೂಮಿ, ವಸತಿ ಇಲ್ಲದೆ ಜನರ ಬದುಕು ಕಷ್ಟ; ಟಿ.ಡಿ ರಾಜೇಗೌಡ
ರೈತರ ಕೃಷಿಗೆ ಹಾಗೂ ಮನೆ, ಕಣಕ್ಕೆ ಹೋಗಲು ಬಂಡಿ ದಾರಿ ವ್ಯವಸ್ಥೆ ಮಾಡಬೇಕು. ಸಂಸದರನ್ನು ಕರೆಸಿ ಸಭೆ ಮಾಡಿದ್ದೀರಿ ಕೇಂದ್ರ ಸರ್ಕಾರದ ಪರಿಸರ ಜೀವಿ ಸಂರಕ್ಷಣ ಸಚಿವರನ್ನು ಮಲೆನಾಡಿಗೆ ಕರೆಸಿ ಜನರ ಮುಂದೆ ಸಭೆ ಮಾಡಬೇಕು ಎಂದು ಕರಾವಳಿ ಜನಪರ ಒಕ್ಕೂಟ ಮುಖಂಡರಾದ ಸುಧೀರ್ ಕುಮಾರ್ ಮುರೊಳ್ಳಿ ತಿಳಿಸಿದರು.




