ಕನ್ನರ್ಪಾಡಿ-ಕಿನ್ನಿಮುಲ್ಕಿ 21ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ ಕಿನ್ನಿಮುಲ್ಕಿ ಸ್ವಾಗತ ಗೋಪುರದ ಬಳಿಯ ಗಣಪತಿ ಮೈದಾನದಲ್ಲಿ ಸೆ.14ರಿಂದ 23ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳೊಂದಿಗೆ ಗಣೇಶೋತ್ಸವ ಸಂಭ್ರಮದಿಂದ ನಡೆಯಲಿದೆ.
ಸೆ.14ರಂದು ಬೆಳಗ್ಗೆ 8.30ಕ್ಕೆ ಮೆರವಣಿಗೆಯ ಮೂಲಕ ಗಣಪತಿ ವಿಗ್ರಹವನ್ನು ಗಣಪತಿ ಮೈದಾನಕ್ಕೆ ತರಲಾಗುವುದು. ಬೆಳಗ್ಗೆ 10 ಗಂಟೆಗೆ ಪ್ರಾರ್ಥನೆ ಹಾಗೂ 10.15ಕ್ಕೆ ಪ್ರಾಣ ಪ್ರತಿಷ್ಠೆ ವಿಧಿ ನೆರವೇರಲಿದೆ. ಉತ್ಸವದ ಅಂಗವಾಗಿ ಪ್ರತಿದಿನ ಭಜನೆ, ಭಕ್ತಿ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ 7.30ಕ್ಕೆ ರಂಗಪೂಜೆ ನೆರವೇರಲಿದೆ.
ಸೆ.15ರಂದು ರಾತ್ರಿ 7 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಿವಿಲ್ ಎಂಜಿನಿಯರ್ ಎಂ. ಗಂಗಾಧರ ರಾವ್ ಕನ್ನರ್ಪಾಡಿ (ನಂದ ಕುಮಾರ್) ಕಾರ್ಯಕ್ರಮವನ್ನು ಉದ್ಘಾಟಿಸುವರು. ನಾಡೋಜ ಡಾ. ಕೃಷ್ಣ ಪ್ರಸಾದ್ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ವಿದ್ಯಾನಿಧಿ ವಿತರಣೆ ನಡೆಯಲಿದೆ.
ಸೆ.21ರಂದು ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸೆ.22ರಂದು ರಾತ್ರಿ 7 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸುವರು. ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ. ನರೇಂದ್ರ ಬಹುಮಾನ ವಿತರಿಸುವರು. ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ ವಿದ್ಯಾನಿಧಿ ವಿತರಿಸಲಿದ್ದು, ನಾಡೋಜ ಡಾ. ಕೃಷ್ಣ ಪ್ರಸಾದ್ ಉಪಸ್ಥಿತರಿರುವರು.
ಸೆ.23ರಂದು ಸಂಜೆ 5ಕ್ಕೆ ರಂಗಪೂಜೆ ನಡೆಯಲಿದ್ದು, ಸಂಜೆ 5.30ಕ್ಕೆ ವೈಭವದ ವಿಸರ್ಜನಾ ಮೆರವಣಿಗೆ ನಡೆಯುವುದರೊಂದಿಗೆ ಹತ್ತು ದಿನಗಳ ಗಣೇಶೋತ್ಸವಕ್ಕೆ ತೆರೆ ಬೀಳಲಿದೆ.
ಗಣೇಶೋತ್ಸವದ ಅಂಗವಾಗಿ ಪ್ರತಿದಿನವೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸೆ.14: ಬೆಳಗ್ಗೆ 10.30ಕ್ಕೆ ಶ್ರೀಹರಿದರ್ಶನ ಯಕ್ಷಗಾನ ತಾಳಮದ್ದಳೆ, ಸಂಜೆ 6ಕ್ಕೆ ಸವಿತಾ, ಶ್ವೇತಾ ಹಾಗೂ ಸಂದೀಪ್ ಅವರಿಂದ ಸ್ಯಾಕ್ಸೋಫೋನ್ ವಾದನ ಮತ್ತು ರಾತ್ರಿ 8ಕ್ಕೆ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸೆ.15: ಸಂಜೆ 5ರಿಂದ ಭಕ್ತಿಗೀತೆ, ಭಾವಗೀತೆ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 9ಕ್ಕೆ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸೆ.16: ಸಂಜೆ 5ಕ್ಕೆ ಯಕ್ಷಗಾನ ತಾಳಮದ್ದಳೆ, ಸಂಜೆ 6ಕ್ಕೆ ಭಕ್ತಿ ಸಂಗೀತ, ರಾತ್ರಿ 7.30ಕ್ಕೆ ರಂಗಪೂಜೆ ಹಾಗೂ ರಾತ್ರಿ 9ಕ್ಕೆ ಶ್ರಾವಣಿ ನಾಟಕ ಪ್ರದರ್ಶನ ನಡೆಯಲಿದೆ. ಸೆ.17: ಸಂಜೆ 4ಕ್ಕೆ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ವೃಂದದಿಂದ ಭಕ್ತಿ ಸಂಗೀತ, ಸಂಜೆ 6ಕ್ಕೆ ಬೇಬಿ ಶ್ರೀಯಾ ಅವರಿಂದ ಭಕ್ತಿಗೀತಾ ಸಾಂಸ್ಕೃತಿಕ ವೈಭವ ಗಾಯನ ಹಾಗೂ ರಾತ್ರಿ 8ಕ್ಕೆ ಪುತ್ತೂರು ಜಗದೀಶ್ ಆಚಾರ್ಯ ಬಳಗದಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ. ಸೆ.18: ಸಂಜೆ 6ಕ್ಕೆ ದರ್ಪಣ ಸ್ಕೂಲ್ ಆಫ್ ಪರ್ಫಾಮಿಂಗ್ ಆರ್ಟ್ಸ್‌ನ ವಿದುಷಿ ರಕ್ಷಾ ಮತ್ತು ರಮ್ಯಾ ಅವರಿಂದ ನೃತ್ಯ ಕಾರ್ಯಕ್ರಮ ಹಾಗೂ ರಾತ್ರಿ 8.30ಕ್ಕೆ ಮಂಗಳೂರಿನ ಕಲಾಸಿರಿ ತಂಡದಿಂದ ನೃತ್ಯ ಕಲರವ ನಡೆಯಲಿದೆ. ಸೆ.19: ಸಂಜೆ 5ಕ್ಕೆ ಭಕ್ತಿ ಸಂಗೀತ, ಸಂಜೆ 6.30ಕ್ಕೆ ಉದ್ಯಾವರ ಶ್ರೀ ಕಲಾ ನಾಟ್ಯಾಲಯದಿಂದ ಭರತನಾಟ್ಯ ಪ್ರದರ್ಶನ ಹಾಗೂ ರಾತ್ರಿ 9ಕ್ಕೆ ಕವಿರತ್ನ ಕಾಳಿದಾಸ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸೆ.20: ಸಂಜೆ 6ಕ್ಕೆ ಮೇದಿನಿ ಭಟ್ ಕಿನ್ನಿಮುಲ್ಕಿ ಮತ್ತು ಬಳಗದಿಂದ ಭಕ್ತಿ ಭಾವಗಾನ ಹಾಗೂ ರಾತ್ರಿ 9ಕ್ಕೆ ‘ಕಥೆ ಏರ್ ಬರೆಪೆರ್’ ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಸೆ.21: ಬೆಳಗ್ಗೆ 11.30ಕ್ಕೆ ಸ್ವಾತಿ ಎಂ. ಭಟ್ ಮತ್ತು ಬಳಗದಿಂದ ಸಂಗೀತ ವೈವಿಧ್ಯ, ಮಧ್ಯಾಹ್ನ 1ಕ್ಕೆ ಭಜನೆ, ಸಂಜೆ 5ಕ್ಕೆ ಹಾಗೂ 6ಕ್ಕೆ ಭಕ್ತಿ ಸಂಗೀತ, ರಾತ್ರಿ 8ಕ್ಕೆ ನೃತ್ಯ ಪ್ರದರ್ಶನ ಮತ್ತು ರಾತ್ರಿ 9ಕ್ಕೆ ‘ಯಾನೊರಿ ಬರೊಲಿಯಾ’ ತುಳು ಹಾಸ್ಯ ನಾಟಕ ಪ್ರದರ್ಶನ ನಡೆಯಲಿದೆ. ಸೆ.22: ಸಂಜೆ 5ಕ್ಕೆ ಭಕ್ತಿ ಸಂಗೀತ ಹಾಗೂ ರಾತ್ರಿ 8ಕ್ಕೆ ಸ್ಥಳೀಯ ಮಕ್ಕಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ಸೆ.23: ಮಧ್ಯಾಹ್ನ 3ಕ್ಕೆ ರಾಜೇಶ್ ಶ್ಯಾನುಭಾಗ್ ಬಾರಕೂರು ತಂಡದಿಂದ ‘ಗಾನಾಮೃತ’ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಸಂಜೆ ರಂಗಪೂಜೆ ಹಾಗೂ ವೈಭವದ ವಿಸರ್ಜನಾ ಮೆರವಣಿಗೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.







