ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ ಮತ್ತೆ ಮುನ್ನಲೆಗೆ: ಉತ್ತರ ಕರ್ನಾಟಕ ರೈತರ ಬದುಕಿಗೆ ಆಸರೆಯ ನಿರೀಕ್ಷೆ

Date:

ಉತ್ತರ ಕರ್ನಾಟಕದ ರೈತರ ಜೀವನಾಡಿ ಎಂದು ಕರೆಯುವ ಆಲಮಟ್ಟಿ ಎತ್ತರ ಹೆಚ್ಚಳ ವಿಚಾರ ಮತ್ತೆ ದೊಡ್ಡ ಹೋರಾಟದ ರೂಪ ಪಡೆದುಕೊಂಡಿದೆ. ಒಂದೆಡೆ ಲಕ್ಷಾಂತರ ರೈತರಿಗೆ ನೀರು ಸಿಗುವ ಆಸೆ ಇದ್ದರೆ, ಇನ್ನೊಂದಡೆ ಜಮೀನು ಕಳೆದುಕೊಳ್ಳುವ ರೈತರಿಗೆ ನ್ಯಾಯ ಸಿಗಬೇಕು ಎನ್ನುವ ಕೂಗು ಹೆಚ್ಚಾಗಿದೆ.

ಉತ್ತರ ಕರ್ನಾಟಕದ ಜೀವನಾಡಿ ಎಂದೇ ಕರೆಯುವ ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ರಿಂದ 524.256 ಮೀಟರ್‌ಗೆ ಹೆಚ್ಚಿಸಬೇಕು ಎನ್ನುವ ಬೇಡಿಕೆ ಮತ್ತೆ ಜೋರಾಗಿದೆ. ಹಲವು ವರ್ಷಗಳಿಂದ ರೈತರು, ಸಂಘಟನೆಗಳು ಹೋರಾಟ ಮಾಡುತ್ತ ಬಂದಿದ್ದರೂ ಕೂಡ ಈ ಯೋಜನೆ ಇವತ್ತಿಗೂ ನೆನೆಗುದಿಗೆ ಬಿದ್ದಿದೆ. ಇದರಿಂದ ಸಿಡಿದೆದ್ದ ರೈತರು ಈಗ ಕೃಷ್ಣಕಹಳೆ ಹೆಸರಿನಲ್ಲಿ ಮತ್ತೆ ದೊಡ್ಡ ಹೋರಾಟಕ್ಕೆ ಮುಂದಾಗಿದ್ದಾರೆ.

- Advertisement -

ವಿಜಯಪುರದಲ್ಲಿ ರೈತ ಮುಖಂಡರಾದ ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಪಡಸಲಗಿ ನೇತೃತ್ವದಲ್ಲಿ ಹೋರಾಟಕ್ಕೆ ಚಾಲನೆ ಸಿಕ್ಕಿದ್ದು, ನಮ್ಮ ಪಾಲಿನ ನೀರು ನಮಗೇ ಬೇಕು ಎಂದು ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಎತ್ತರ ಹೆಚ್ಚಾದರೆ 5 ಜಿಲ್ಲೆಗಳಿಗೆ ಅನುಕೂಲ

ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಿದರೆ ಸುಮಾರು 130 ಟಿಎಂಸಿ ನೀರು ಹೆಚ್ಚುವರಿಯಾಗಿ ಸಂಗ್ರಹ ಮಾಡಬಹುದೆಂದು ತಜ್ಞರು ಹೇಳುತ್ತಾರೆ. ಇದರಿಂದ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಸುಮಾರು 5.94 ಲಕ್ಷ ಹೆಕ್ಟೇ‌ರ್ ಜಮೀನಿಗೆ ನೀರಾವರಿ ಸೌಲಭ್ಯ ಸಿಗುವ ಸಾಧ್ಯತೆ ಇದೆ.

ಮಳೆ ಕೈಕೊಟ್ಟಾಗ ಬರದಿಂದ ಬೇಸತ್ತ ರೈತರಿಗೆ ಈ ಯೋಜನೆಯು ಆಸರೆಯಾಗುವ ನಿರೀಕ್ಷೆ ಇದೆ. ಒಂದು ಸಲ ಆಲಮಟ್ಟಿ ಎತ್ತರ ಹೆಚ್ಚಾದರೆ ಉತ್ತರ ಕರ್ನಾಟಕದ ರೈತನ ಬದುಕೇ ಬದಲಾಗುತ್ತದೆ ಎನ್ನುವುದು ರೈತ ಹೋರಾಟಗಾರರ ಮಾತು.

ನ್ಯಾಯಾಧೀಕರಣ ಒಪ್ಪಿಗೆ ಕೊಟ್ಟರೂ ಕೆಲಸ ಮಾತ್ರ ಶೂನ್ಯ

ಕೃಷ್ಣಾ ಜಲ ವಿವಾದ ನ್ಯಾಯಾಧೀಕರಣ 2010ರಲ್ಲೇ ಆಲಮಟ್ಟಿ ಎತ್ತರ ಹೆಚ್ಚಿಸಲು ಅನುಮತಿ ನೀಡಿತ್ತು. 15 ವರ್ಷ ಕಳೆದರೂ ಕೂಡ ಕೇಂದ್ರ ಸರ್ಕಾರ ಗೆಜೆಟ್‌ ಅಧಿಸೂಚನೆ ಹೊರಡಿಸದೇ ಇರುವುದಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯಗಳ ವಿರೋಧ ಕೂಡ ಯೋಜನೆಗೆ ದೊಡ್ಡ ಅಡ್ಡಿಯಾಗಿದ್ದು, ವಿಷಯ ಇನ್ನೂ ಕಾನೂನು ಹೋರಾಟದಲ್ಲೇ ಉಳಿದಿದೆ.

ರೈತರಲ್ಲಿ ಮುಳುಗಡೆ ಭೀತಿ

524 ಮೀಟರ್‌ಗೆ ಎತ್ತರ ಹೆಚ್ಚಿಸಿದರೆ ಸಾವಿರಾರು ಎಕರೆ ಭೂಮಿ ಹಿನ್ನೀರಿನಲ್ಲಿ ಮುಳುಗುವ ಸಾಧ್ಯತೆ ಇದೆ. ಸುಮಾರು 1,33,867 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

“ನಮ್ಮ ಜಮೀನು ಹೋಗುವುದುದಾದರೂ ಸರಿಯಾದ ಪರಿಹಾರ ಕೊಡಬೇಕು. ಪುನರ್ವಸತಿ ಕಲ್ಪಿಸಬೇಕುʼ ಎಂದು ಮುಳುಗಡೆ ಪ್ರದೇಶದ ರೈತರು ಆಗ್ರಹ ಮಾಡುತ್ತಿದ್ದಾರೆ. LARR Act 2013 ಪ್ರಕಾರ ನ್ಯಾಯಯುತ ಪರಿಹಾರ ಕೊಡಬೇಕೆಂಬುದು ರೈತರು ಮನವಿ.

ಮೂರು ಸಾವಿರ ಕೋಟಿ ಪರಿಹಾರ ಪ್ಯಾಕೇಜ್

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸುಮಾರು ₹3 ಸಾವಿರ ಕೋಟಿ ಪರಿಹಾರ ಪ್ಯಾಕೇಜ್‌ ನೀಡುವ ಭರವಸೆ ನೀಡಿದೆ. ಜತೆಗೆ ಆಲಮಟ್ಟಿ ಜಲಾಶಯದ 26 ಕ್ರಸ್ಟ್‌ಗೇಟ್‌ಗಳ ಎತ್ತರ ಹೆಚ್ಚಿಸುವ ನಿರ್ಣಯವನ್ನೂ ವಿಧಾನ ಪರಿಷತ್‌ ಅಂಗೀಕರಿಸಿದೆ.

ರಾಜ್ಯ ಸರ್ಕಾರ ಯೋಜನೆ ಜಾರಿಗೆ ನಾವು ಸಂಪೂರ್ಣ ಸಿದ್ಧವೆಂದು ಹೇಳುತ್ತಿದ್ದರೆ ಕೇಂದ್ರ ಜಲಶಕ್ತಿ ಸಚಿವರು ಸಂಬಂಧಿತ ರಾಜ್ಯಗಳ ಜತೆಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಆದರೆ ಇದುವರೆಗೂ ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸಿಲ್ಲ ಎನ್ನುವದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ಕರ್ನಾಟಕ ರಾಜ್ಯ ರೈತ ಸಂಘಟನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಈ ದಿನ.ಕಾಮ್ ಜತೆಗೆ ಮಾತನಾಡಿ, “ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಿ ಎಂದು ನಾವು 40-50 ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದೇವೆ. ಆದರೂ ಸರ್ಕಾರ ಮಾತ್ರ ಇವತ್ತಿನವರೆಗೂ ಜನಕ್ಕೆ ಸಬೂಬು ಹೇಳಿಕೊಂಡು ಬಂದಿದೆ. ಚುನಾವಣೆ ಬಂದಾಗ ಮಾತು ಕೊಡುತ್ತಾರೆ, ಆಮೇಲೆ ಮರೆತು ಬಿಡುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಶಾಸಕ ಯತ್ನಾಳ ಗೌಡ್ರು ಸೇರಿದಂತೆ ಇಲ್ಲಿನ ಹಲವು ಪ್ರಭಾವಿ ರಾಜಕಾರಣಿಗಳು ಹಿಂದುತ್ವದ ರಾಜಕಾರಣ ಮಾತನಾಡುತ್ತಾರೇ ಹೊರತು ರೈತರ ನೀರಿನ ಸಮಸ್ಯೆ ಬಗ್ಗೆ ಯೋಚನೆ ಮಾಡಿಲ್ಲ. ಮಾತನಾಡುವವರು ತುಂಬಾ ಮಂದಿ ಇದ್ದಾರೆ, ಆದರೆ ಕೆಲಸ ಮಾಡುವವರು ಯಾರೂ ಇಲ್ಲ. ಈ ಯೋಜನೆ ಆಗದಿದ್ದಕ್ಕೇ ನೀರು ಇಲ್ಲದೆ, ರೈತರು ಸಾಲದ ಹೊರೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ರೈತರ ಗೋರಿಯ ಮೇಲೆ ರಾಜಕಾರಣ ಮಾಡುತ್ತ ಬಂದಿದೆ. ಐದು ಜಿಲ್ಲೆಯ ಲಕ್ಷಾಂತರ ರೈತರು ಮತ್ತೆ ಹೋರಾಟಕ್ಕೆ ಇಳಿಯುತ್ತಿವೆ. ಆಲಮಟ್ಟಿ ಎತ್ತರ ಹೆಚ್ಚಿಸಬೇಕು, ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ರೈತರಿಗೆ ಸರಿಯಾದ ಪರಿಹಾರ ಹಾಗೂ ಪುನರ್ವಸತಿ ಕೊಡಬೇಕು” ಎಂದು ಆಗ್ರಹಿಸಿದರು.

ಇದನ್ನೂ ಓದಿದ್ದೀರಾ? ಪಾರಂಪರಿಕ ಮಣ್ಣಿನ ಮಡಕೆ ಕಾಯಕಕ್ಕೆ ಸಂಕಷ್ಟ: ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಕುಂಬಾರರು

ಉತ್ತರ ಕರ್ನಾಟಕದ ರೈತರ ಜೀವನಾಡಿ ಎಂದು ಕರೆಯುವ ಆಲಮಟ್ಟಿ ಎತ್ತರ ಹೆಚ್ಚಳ ವಿಚಾರ ಮತ್ತೆ ದೊಡ್ಡ ಹೋರಾಟದ ರೂಪ ಪಡೆದುಕೊಂಡಿದೆ. ಒಂದೆಡೆ ಲಕ್ಷಾಂತರ ರೈತರಿಗೆ ನೀರು ಸಿಗುವ ಆಸೆ ಇದ್ದರೆ, ಇನ್ನೊಂದಡೆ ಜಮೀನು ಕಳೆದುಕೊಳ್ಳುವ ರೈತರಿಗೆ ನ್ಯಾಯ ಸಿಗಬೇಕು ಎನ್ನುವ ಕೂಗು ಹೆಚ್ಚಾಗಿದೆ. ಇಷ್ಟು ವರ್ಷ ಮಾತಿನಲ್ಲೇ ಉಳಿದಿರುವ ಯೋಜನೆಗೆ ಈಗಲಾದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಗಂಭೀರವಾಗಿ ತೀರ್ಮಾನ ತೆಗೆದುಕೊಂಡು ರೈತರ ಬೇಡಿಕೆ ಈಡೇರಿಸಬಹುದೇ ಎಂದು ಉತ್ತರ ಕರ್ನಾಟಕದ ಜನರು ನಿರೀಕ್ಷೆಯಲ್ಲಿದ್ದಾರೆ.

WhatsApp Image 2025 11 17 at 5.27.06 PM
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

UPI ಮೇಲೆ MDR ಶುಲ್ಕ: ಸರ್ಕಾರದ ‘ಸಮರ್ಥನೆ’ಯ ಮರೆಯಲ್ಲಿ ದೈತ್ಯ ಕಂಪನಿಗಳಿಗೆ ಮಣೆ

​'ಡಿಜಿಟಲ್ ಇಂಡಿಯಾ'ದ ಯಶಸ್ಸಿನ ಬಗ್ಗೆ ಸದಾ ಬೆನ್ನು ತಟ್ಟಿಕೊಳ್ಳುವ ಬಿಜೆಪಿ ಸರ್ಕಾರ,...

ದೆಹಲಿ ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ: ‘ನಿರ್ಭಯಾ ಪ್ರಕರಣವನ್ನು ನೆನಪಿಸುವ ಭೀಕರತೆ’ ಎಂದ ಸುಪ್ರೀಂ ಕೋರ್ಟ್

ದೆಹಲಿ-ಎನ್‌ಸಿಆರ್ ವ್ಯಾಪ್ತಿಯಲ್ಲಿ ಚಲಿಸುವ ಬಸ್‌ನಲ್ಲಿ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಭೀಕರ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶೂನ್ಯ ಜನವಸತಿ!

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು...

RSSಗೆ ಅಪಾರ್ಟ್‌ಮೆಂಟ್ ಬಾಗಿಲು ತೆರೆದಿದ್ದಕ್ಕೆ ಪ್ರಿಯಾಂಕ್ ಖರ್ಗೆ ಆಕ್ಷೇಪ: ಪಾರದರ್ಶಕತೆ ಪ್ರಶ್ನಿಸುವಂತೆ ಸಂಘಗಳಿಗೆ ಸಲಹೆ

ಬೆಂಗಳೂರಿನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಆರ್‌ಎಸ್‌ಎಸ್‌ ಆಯೋಜಿಸಿದ್ದ ಸಭೆಗೆ ಗೃಹ ಸಚಿವ ಪ್ರಿಯಾಂಕ್...