ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರಿನ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಹಣ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನಿಂದ ₹1 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ಬಂಧಿತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಹುಲಿಕಟ್ಟಿ ಮಹಿಳೆಯೊಬ್ಬರ ಹಣ ದೋಚಿದ ಪ್ರಕರಣವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕುಲವಳ್ಳಿ ನಿಂಗಾಪುರ ಗ್ರಾಮದ ವಿದ್ಯಾಶ್ರೀ ಶಿವಾನಂದ ಸಂಗೊಳ್ಳಿ ಅವರು ಕೆವಿಜಿ ಬ್ಯಾಂಕ್‌ನಲ್ಲಿ ಹಣ ಪಡೆದು ಬಸ್‌ನಲ್ಲಿ ಊರಿಗೆ ತೆರಳುತ್ತಿದ್ದ ವೇಳೆ, ಕಿತ್ತೂರು-ಅಳ್ಳಾವರ ಮಾರ್ಗದ ಬಸ್‌ನಲ್ಲಿ ಅವರ ಬ್ಯಾಗ್ ಕತ್ತರಿಸಿ ₹99,000 ಕಳ್ಳತನ ಮಾಡಲಾಗಿದೆ.
ಇದೇ ರೀತಿಯಲ್ಲಿ ಹುಲಿಕಟ್ಟಿ ಗ್ರಾಮದ ಗಿರಿಜೆವ್ವ ದುಂಡಪ್ಪ ಶಹಾಪುರ ಅವರು ಬ್ಯಾಂಕ್‌ಗೆ ತೆರಳುತ್ತಿದ್ದ ವೇಳೆ ಬಸ್‌ನಲ್ಲಿ ಇದ್ದ ₹63,000 ನಗದು ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.
ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ. ಬಸರಗಿ, ಡಿವೈಎಸ್ಪಿ , ಸಿಪಿಐ ಶಿವಾನಂದ ಗುಡಗನಟ್ಟಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಪ್ರವೀಣ ಗಂಗೋಳ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ.



