ಗುರುಮಠಕಲ್ ಪಟ್ಟಣದ ಹರಿಜನವಾಡ (ತಲಾರಿ ಓಣಿ) ಬಡಾವಣೆಯಲ್ಲಿ ನರೇಂದ್ರ ರಾಠೋಡ್ ಬೊರಬಂಡಾ ಎಂಬುವವರು ಸಾರ್ವಜನಿಕರ ಶುದ್ಧ ಕುಡಿಯುವ ನೀರಿನ ಬಾವಿಯನ್ನು ಜೆಸಿಬಿಯಿಂದ ತೆರವುಗೊಳಿಸಿದ್ದಾರೆ. ಸರ್ವಜನಿಕರ ನೀರಿನ ಬಳಕೆಗೆ ತೊಂದರೆ ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಯಾದಗಿರಿ ಜಿಲ್ಲೆ ಗುರುಮಿಠಕಲ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಗುರುಮಿಠಕಲ್ ಪುರಸಭೆ ಮುಖ್ಯಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ ಕಾರ್ಯಕರ್ತರು, “ಪುರಾತನ ಕಾಲದಿಂದ ಶುದ್ಧ ಕುಡಿಯುವ ನೀರಿನ ಬಾವಿಗೆ ಹೋಗಲು ಸ್ಥಳೀಯ ಸರ್ಕಾರ(ಪುಸುರಸಭೆ ಕಾರ್ಯಲಯ) ಸಿಸಿ ರಸ್ತೆ ನಿಮಾರ್ಣ ಮಾಡಿರುವುದನ್ನು ತೆರವುಗೊಳಿಸಿ ಪ್ಲಾಟ್‌ಗಳನ್ನು ಮಾಡಿದ್ದಾರೆ” ಎಂದು ಆರೋಪಿಸಿದರು.
ಲಾಲಪ್ಪ ತಲಾರಿ ಮಾತನಾಡಿ, “ಸಾರ್ವಜನಿಕರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶುದ್ಧ ಕುಡಿಯುವ ನೀರಿಗಾಗಿ ಏನೆಲ್ಲ ಯೋಜನೆಗಳನ್ನು ಜಾರಿಗೆಗೊಳಿಸಿದರೂ ಕೂಡ ಇಲ್ಲಿ ಒಬ್ಬ ದೂತ ಮಾನವೀಯತೆ ಮರೆತು ಹಣದ ಅಹಂಕಾರದಿಂದ ಎಲ್ಲ ಸಾರ್ವಜನಿಕ ಬಾವಿಯನ್ನು ತೆರವುಗೊಳಿಸಿದ್ದಾನೆ” ಎಂದು ಕಿಡಿಕಾರಿದರು.
“ಹಳೆ ಕಾಲದಿಂದಲೂ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ದೇವರ ಬಾವಿ ಎಂದು ಬಡಾವಣೆಯ ಸಾರ್ವಜನಿಕರು ಬಾವಿಯ ನೀರನ್ನು ಹಲವು ಕಾರ್ಯಕ್ರಮಗಳ ಪೂಜೆಗಳಿಗೆ ಉಪಯೋಗಿಸುತ್ತಿದ್ದರು. ಅಲ್ಲದೇ ಕುಡಿಯಲು ಇದೇ ನೀರನ್ನು ಬಳಸುತ್ತಿದ್ದರು” ಎಂದರು.
“ನೀರಿಗಾಗಿ ಹಲವು ಕಡೆ ಸಾವಿರರಾರು ಅಡಿ ಆಳದವರೆಗೆ ಕೊಳವೆ ಬಾವಿಗಳನ್ನು ಕೊರೆದರೂ ಒಂದು ಹನಿ ನೀರು ಸಿಗದೆ, ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಇಂತಹ ಬರ ಪೀಡಿತ ಕಾಲದಲ್ಲಿ ಸದರಿ ಬಡಾವಣೆಯ ಬಾವಿಯಲ್ಲಿ ನೀರು ಸದಾಕಲ ಇರುತ್ತಿತ್ತು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತಿತ್ತು” ಎಂದು ತಿಳಿಸಿದರು.
“ಯಾವುದೇ ಕಾನೂನು ಭಯವಿಲ್ಲದೆ ಅಧಿಕಾರವನ್ನು ಕೈಗೆತ್ತಿಕೊಂಡು ʼಸರ್ಕಾರ ನನಗೆ ಹಳೆಯ ಬಾವಿಯನ್ನು ಮುಚ್ಚಲು ಆದೇಶ ನೀಡಿದೆ. ಆದ್ದರಿಂದ ಈ ಸದರಿ ಬಾವಿಯನ್ನು ಮುಚ್ಚಿ ನಾನು ಪ್ಲಾಟ್‌ಗಳನ್ನು ಮಾಡಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತೇನೆʼಎಂದು ಪುರಾತನ ಬಾವಿಯನ್ನು ತೆರವುಗೊಳಿಸಿದ್ದಾನೆ” ಎಂದು ಆರೋಪಿಸಿದರು.
“ಸ್ಥಳೀಯ ಹಾಗೂ ದೇಶದ ಪುರಾತನ ಪ್ರಾಚೀನತೆ , ಸಾಂಸ್ಕೃತಿಯನ್ನು ಕಾಪಾಡುವ ಅಧಿಕಾರಿಗಳಿಗೆ ಸಾರ್ವಜನಿಕರು (ಪುರಸಭೆ ಮುಖ್ಯಾಧಿಕಾರಿಗಳಿಗೆ) ಮೌಖಿಕವಾಗಿ ತಿಳಿಸಿದರೂ ಕೂಡ ಸ್ಥಳಕ್ಕೆ ಭೇಟಿ ನೀಡಿ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಷಯದ ಕುರಿತು ನನಗೆ ಲಿಖಿತ ರೂಪದಲ್ಲಿ ಮನವಿಯನ್ನು ಕೊಟ್ಟರೆ ಮಾತ್ರ ನಾವು ಕ್ರಮಕೈಗೊಳ್ಳುತ್ತೇವೆಂದು ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಬಡಾವಣೆಯ ಸಾರ್ವಜನಿಕರು ಶುದ್ಧ ಕುಡಿಯುವ ನೀರಿಲ್ಲದೆ ಕೊಳಚೆ ನೀರು ಕುಡಿಯುವುದು ಅನಿವಾರ್ಯವಾಗಿದೆ. ಇದರಿಂದ ಬಡವಣೆಯ ಸಾರ್ವಜನಿಕರಿಗೂ ಹಾಗೂ ಮಕ್ಕಳಿಗೂ ರೋಗ ರುಜಿನಗಳು ಬಂದು ಆಸ್ಪತ್ರೆಗಳತ್ತ ಸುತ್ತುವ ಪರಿಸ್ಥಿತಿ ನಿಮಾರ್ಣವಾಗಿದೆ. ಈ ಕುರಿತು ಅಧಿಕಾರಿಗಳಿಗೆ ಗೊತ್ತಿದ್ದರೂ ಮೌನವಾಗಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಕೆಕೆಆರ್‌ಡಿಬಿ ಹಣ ದುರ್ಬಳಕೆ | ರಾಯಚೂರು ವಿವಿ ಆಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ
“ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಪುರಾತನ ಬಾವಿ ಹಾಗೂ ಬಾವಿಗೆ ಹೋಗುವ ಸಿಸಿ ರಸ್ತೆ ಮತ್ತು ಅದರ ಸುತ್ತಲು ಬೇಲಿಯನ್ನು ನಿರ್ಮಿಸಿ ಇಂತಹ ಕೃತ್ಯ ಎಸಗಿದ ಹಾಗೂ ಅಮಾನವೀಯತೆ ತೊರಿದ, ನೇರೆಂದ್ರ ರಾಠೋಡ್ ಬೊರಬಂಡಾ ಅವರ ವಿರುದ್ಧ ಕಠಿಣ ಕಾನೂನು ಕ್ರಮಜರುಗಿಸಬೇಕು” ಎಂದು ಸಾರ್ವಜನಿಕರ ಪರವಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಲಾಲಪ್ಪ ತಲಾರಿ, ಬಿ ಎಸ್ ತಲಾರಿ, ಬಸವರಾಜ, ದೊಡ್ಮನಿ, ಗುರುನಾಥ ಕುಂಬಾರ, ಅಶೋಕ್ ಎಸ್, ಸೈಬಣ್ಣ, ಕೃಷ್ಣ, ಮೈಪಲ್, ನರಸಪ್ಪ, ಶ್ರೀನಿವಾಸ್, ಪವಿ ಸಿ, ಸುರೇಶ, ರಮೇಶ್, ಶ್ರೀಕಾಂತ ತಲಾರಿ ಇದ್ದರು.