ಯಾದಗಿರಿ | ನಗರಸಭೆ ಕಾರ್ಯಾಚರಣೆ; ಪೆಟ್ಟಿಗೆ ಅಂಗಡಿಗಳ ತೆರವು

Date:

ಪೆಟ್ಟಿಗೆ ಅಂಗಡಿಗಳನ್ನು ತೆರವು ಮಾಡಿದ ಬಳಿಕವೂ ನಗರಸಭೆ ವ್ಯಾಪ್ತಿಯ ಜಾಗಗಳಲ್ಲಿ ಅನಧಿಕೃತವಾಗಿ ಪೆಟ್ಟಿಗೆ ಅಂಗಡಿಗಳನ್ನು ಇಟ್ಟರೆ ದಂಡವನ್ನು ಹಾಕುವ ಮೂಲಕ ಪೆಟ್ಟಿಗೆಗಳನ್ನು ನಗರಸಭೆಯೇ ವಶಪಡಿಸಿಕೊಳ್ಳುತ್ತದೆ ಎಂದು ಯಾದಗಿರಿ ನಗರಸಭೆ ಅಭಿಯಂತರರು ರಜನಿಕಾಂತ್ ಶೃಂಗೇರಿ ಹೇಳಿದರು.

ಯಾದಗಿರಿ ನಗರದ ಬೀದಿಬದಿಗಳಲ್ಲಿ ಹಾಕಿಕೊಂಡಿದ್ದ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿ ಮಾತನಾಡಿದರು.

ಕಳೆದ 2 ತಿಂಗಳುಗಳಿಂದ ಎಲ್ಲ ಪೆಟ್ಟಿಗೆಗಳ ಮಾಲೀಕರನ್ನು ನಗರಸಭೆಗೆ ಕರೆಸಿ ಪೂರ್ವಭಾವಿ ಸಭೆ ಮಾಡಲಾಗಿತ್ತು. ನಗರದಲ್ಲಿ ಮೈಕ್‌ಗಳ ಮೂಲಕ ಅನೌನ್ಸ್‌ ಮಾಡಿ, ಪೇಪರ್ ಸ್ಟೇಟ್‌ಮೆಂಟ್‌ ಕೂಡಾ ನೀಡಲಾಗಿತ್ತು. ಆದರೂ ಮಾಲೀಕರು ಡಬ್ಬಿಗಳನ್ನು ತೆರವು ಮಾಡಿಲ್ಲ” ಎಂದು ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಯಾದಗಿರಿ | ನೀರು ಹರಿಸುವಂತೆ ದಸಂಸ ಮನವಿ

ಸುಮಾರು ವರ್ಷಗಳಿಂದ ಬೀದಿ ಬದಿಗಳಲ್ಲಿ ಪೆಟ್ಟಗೆ ಅಂಗಡಿಗಳನ್ನು ಹಾಕಿಕೊಂಡು ಬಡ ಜನರು ಜೀವನ ಸಾಗಿಸುತ್ತಿದ್ದರು. ಆದರೆ ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಇಂದು ನಗರಸಭೆಯ ಅಧಿಕಾರಿಗಳು, ಜೆಸ್ಕಾಂ ಅಧಿಕಾರಿಗಳು, ಪೊಲೀಸ್ ಇಲಾಖೆ ಸಮುಖದಲ್ಲಿ ಜೆಸಿಬಿ ಮೂಲಕ ಎಲ್ಲ ಪೆಟ್ಟಿಗೆ ಅಂಗಡಿಗಳನ್ನು ತೆರವು ಮಾಡಿದರು.

ವರದಿ : ರಾಹುಲ್ ಕೊಲ್ಲೂರಕರ್ ಯಾದಗಿರಿ

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ ಚುನಾವಣೆ | ಮತ ಎಣಿಕೆ; ಜೂ. 4ರಂದು ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ

ಲೋಕಸಭಾ ಚುನಾವಣೆಯ ಮತ ಎಣಿಕೆ ಹಿನ್ನೆಲೆ, ಜೂನ್ 4ರಂದು ಬೆಂಗಳೂರು ಪೊಲೀಸ್...

ಜೂನ್‌ನಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ ಒಟ್ಟು 13 ದಿನ ರಜೆ

ಈ ವರ್ಷದ ಆರಂಭದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬ್ಯಾಂಕ್ ರಜಾದಿನಗಳ...

ಬೆಂಗಳೂರು | ಗಗನಕ್ಕೇರಿದ ತರಕಾರಿ ಬೆಲೆ; ಬೀನ್ಸ್‌ ಕೆಜಿಗೆ ₹220

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತರಕಾರಿ ಬೆಲೆ ಏರಿಕೆಯಾಗುತ್ತಿದ್ದು, ಜನರು...

ಬೇಸಿಗೆ ವಿಶೇಷ | ಬೆಂಗಳೂರು-ಕಲಬುರಗಿ ಎಕ್ಸ್ ಪ್ರೆಸ್ ರೈಲು ರದ್ದು

ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿನ ಕಾರ್ಯಾಚರಣೆ ನಿರ್ಬಂಧಗಳ ಕಾರಣದಿಂದಾಗಿ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ...