ಯಾದಗಿರಿ | ಮಕ್ಕಳಲ್ಲಿ ಸಂಗೀತ ಪ್ರತಿಭೆ ಬೆಳೆಸುವ ನಾದಮಯ ಟ್ರಸ್ಟ್ ಕಾರ್ಯ ಶ್ಲಾಘನೀಯ

Date:

ಮಕ್ಕಳಲ್ಲಿನ ಸಂಗೀತ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಭಾರತೀಯ ಸಂಗೀತ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ನಾದಮಯ ಸಂಗೀತ ಸೇವಾ ಟ್ರಸ್ಟ್‌ನ ಕಾರ್ಯ ಶ್ಲಾಘನೀಯ ಎಂದು ಸಂಗನಗೌಡ ಪಾಟೀಲ್ ಅನವಾರ ಹೇಳಿದರು.

- Advertisement -

ಶಾಹಪುರ ನಗರದ ಪತಂಜಲಿ ಯೋಗ ವಿಜ್ಞಾನ ಕೇಂದ್ರದಲ್ಲಿ ನಾದಮಯ ಸಂಗೀತ ಸೇವಾ ಟ್ರಸ್ಟ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ತಿಂಗಳ ಸಂಗೀತ ಸಂಭ್ರಮ’ ಎರಡನೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸಂಗೀತ ಸಾಧಕರನ್ನು ಪರಿಚಯಿಸುವುದರೊಂದಿಗೆ ಮಕ್ಕಳಲ್ಲಿ ಕಲಾಸಕ್ತಿ, ಸಂಸ್ಕಾರ ಹಾಗೂ ಸಂಗೀತದ ಬಗ್ಗೆ ಆಸಕ್ತಿ ಬೆಳೆಸುವ ಕೆಲಸವನ್ನು ಟ್ರಸ್ಟ್ ಯಶಸ್ವಿಯಾಗಿ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೋಗಾಚಾರ್ಯ ನರಸಿಂಹ ವೈದ್ಯ ಗುರುಗಳು ಮಕ್ಕಳ ಸಂಗೀತ ಪ್ರದರ್ಶನವನ್ನು ಶ್ಲಾಘಿಸಿದರು. ಸೂರ್ಯವರ್ಧನ ಗುರುಗಳು ಆಶೀರ್ವಚನ ನೀಡಿ ಮಕ್ಕಳ ಕಲಾಸಾಧನೆಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶ್ರೀ ಪುಟ್ಟರಾಜೇಶ್ವರ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ಶಶಿಕಲಾ ಚಿನಗುಡಿ ಹಾಗೂ ಶಾರದಾ ಗೋಗಿ ಸುಗಮ ಸಂಗೀತ ಪ್ರಸ್ತುತಪಡಿಸಿ ಮೆಚ್ಚುಗೆ ಗಳಿಸಿದರು. ಸಮಾರೋಪದಲ್ಲಿ ಎಲ್ಲ ಕಲಾವಿದರು ಸೇರಿ ಭೈರವಿ ರಾಗದ ಛೋಟಾ ಖ್ಯಾಲ್‌ನ್ನು ಪ್ರಸ್ತುತಪಡಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದರು.

ಚಂದ್ರಶೇಖರ್ ಗೋಗಿ ಹಾರ್ಮೋನಿಯಂ ಹಾಗೂ ಮಲ್ಲಿಕಾರ್ಜುನ ಗೋಗಿ ತಬಲಾದಲ್ಲಿ ಸಾಥ್ ನೀಡಿದರು. ದೇವರೆಡ್ಡಿ ಹೊನ್ನಾರೆಡ್ಡಿ ವಂದಿಸಿದರು. ವೇದಿಕೆಯಲ್ಲಿ ಪ್ರಶಾಂತ್ ನಾಯಕ, ವಾಸುದೇವ ಜೋಶಿ ಉಪಸ್ಥಿತರಿದ್ದರು.

ಇದನ್ನು ಓದಿದ್ದೀರಾ? ಯಾದಗಿರಿ | ಮೂಲ ಸೌಕರ್ಯ ಕಲ್ಪಿಸಲು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹ

ಈ ಸಂದರ್ಭದಲ್ಲಿ ಸಂಗಣ್ಣ ನುಚ್ಚಿನ್, ಶ್ರೀಧರ್ ಕುಲಕರ್ಣಿ, ಡಾ. ಸಂತೋಷ್ ದೇಸಾಯಿ, ಚಂದ್ರಶೇಖರ್ ಶಿಕ್ಷಕರು, ರಾಘವೇಂದ್ರ ಪತ್ತಾರ, ಅಂಬರೀಶ್ ಚಿನಗುಡಿ, ದೇವರೆಡ್ಡಿ ಸೇರಿದಂತೆ ಅನೇಕ ಸಂಗೀತಾಸಕ್ತರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಆನ್‌ಲೈನ್ : ದೇವಿ ದರ್ಶನಕ್ಕೆ ಟಿಕೆಟ್ ಹಾಗೂ ಪ್ರಸಾದ ಲಭ್ಯವಿದೆ 

₹300 ಮತ್ತು ₹1,000 ವಿಶೇಷ ದರ್ಶನ ಟಿಕೆಟ್ಭ ಕ್ತರಿಗೆ ತ್ವರಿತ ಹಾಗೂ...

ಹಾಸನ | ಮೊದಲ ಮತ್ತು ಕೊನೆಯ ದಿನ ಹಾಸನಾಂಬ ದೇವಿ ದರ್ಶನವಿಲ್ಲ 

ಮೊದಲ ಮತ್ತು ಕೊನೆಯ ದಿನ ಸಾರ್ವಜನಿಕ ದರ್ಶನವಿಲ್ಲ ಸಂಪ್ರದಾಯದಂತೆ ದರ್ಶನೋತ್ಸವದ ಮೊದಲ...

ಹಾಸನ | ಅಕ್ಟೋಬರ್ 29ರಿಂದ ನವೆಂಬರ್ 8ರವರೆಗೆ ಹಾಸನಾಂಬ ಉತ್ಸವ 

ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬ...

ಹಾಸನ | ಜನರಿಗೆ ನದಿ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದು ಅಗತ್ಯ: ಶಾಸಕ ಎ.ಮಂಜು

ರಾಮನಾಥಪುರದ ಕಾವೇರಿ ನದಿಯ ವಹ್ನಿ ಪುಷ್ಕರಿಣಿಯಲ್ಲಿ ಮಂಗಳವಾರ ಹಾಸನ ಮತ್ತು ಕೊಡಗು...