ಪ್ರಸನ್ ಅವರ ರಚನೆಯ ‘ಜಂಗಮದ ಬದುಕು’ ನಾಟಕವನ್ನು ಯಶೀಶ್ ಎಸ್ ಕೊಳ್ಳೆಗಾಲ ನಿರ್ದೇಶನದಲ್ಲಿ ಜಂಗಮರಾಟ ಪ್ರಸ್ತುತ ಪಡಿಸುತ್ತಿದ್ದು, ಇಂದು ಬುಧವಾರ (ಜುಲೈ 28ಕ್ಕೆ) ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಮೈಸೂರ ಮಠದಲ್ಲಿ ಆಯೋಜಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಸಯಹಯೋಗದಲ್ಲಿ ನಾಟಕ ಪ್ರದರ್ಶನಗೊಳ್ಳಲಿದ್ದು, ನಾಳೆ ಸಂಜೆ 7ಗಂಟೆಗೆ ಪ್ರದರ್ಶನ ಆರಂಭವಾಗಲಿದ್ದು, ಉಚಿತ ಪ್ರವೇಶವಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.




