ಯಲ್ಲಾಪುರ | ಕರಡೊಳ್ಳಿ ನೀರಿನ ಸಮಸ್ಯೆಗೆ ಮುಕ್ತಿ: ಉದ್ಯಮಿ ಬಾಲಕೃಷ್ಣ ನಾಯಕರಿಂದ ಕೊಳವೆ ಬಾವಿ ನಿರ್ಮಾಣ

Date:

ಯಲ್ಲಾಪುರ: ತಾಲೂಕಿನ ಕರಡೊಳ್ಳಿ ಗ್ರಾಮದ ಗೌಳಿ ಸಮುದಾಯದ ಕುಟುಂಬಗಳು ಹಲವು ದಿನಗಳಿಂದ ಎದುರಿಸುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಉದ್ಯಮಿ ಹಾಗೂ ಸಮಾಜಸೇವಕ ಬಾಲಕೃಷ್ಣ ನಾಯಕ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಕೊಳವೆ ಬಾವಿ ಕೊರೆಸಿಸುವ ಮೂಲಕ ಶಾಶ್ವತ ಪರಿಹಾರ ಒದಗಿಸಿದ್ದಾರೆ. ಅವರ ಈ ಜನಪರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -


ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವದಿಂದ ಜನರು ತೊಂದರೆ ಅನುಭವಿಸುತ್ತಿರುವ ಕುರಿತು ಗ್ರಾಮಸ್ಥರು ಇತ್ತೀಚೆಗೆ ಬಾಲಕೃಷ್ಣ ನಾಯಕ ಅವರ ಗಮನಕ್ಕೆ ತಂದಿದ್ದರು. ಮನವಿಗೆ ತಕ್ಷಣ ಸ್ಪಂದಿಸಿದ ಅವರು ಕೊಳವೆ ಬಾವಿ ನಿರ್ಮಾಣಕ್ಕೆ ಮುಂದಾದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೂರು ಡಿ ಕೆ ಶಿವಕುಮಾರ್‌ ಹೆಗ್ಗಡೆ ಅವರೊಂದಿಗಿದ್ದಾರೆ- ಹಳೆಯ...

ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ ಎಂದು ಸದನದಲ್ಲಿ ವಿಪಕ್ಷಗಳು ಗದ್ದಲ ಮಾಡುತ್ತಿದ್ದಾಗ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು "ಧರ್ಮಸ್ಥಳದ ವಿರುದ್ಧ ಯಾರೆಲ್ಲ ಷಡ್ಯಂತ್ರ ಮಾಡಿದ್ದಾರೆ ಎಂಬುದು ಗೊತ್ತಿದೆ. ಅವರಿಗೆ ಸರಿಯಾದ ಪಾಠ ಕಲಿಸುತ್ತೇವೆ"...

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಕುರಿತು ಗಂಭೀರ ಆತಂಕಗಳನ್ನು ಹುಟ್ಟುಹಾಕಿದೆ. ರಾಜ್ಯದ 34 ಜಿಲ್ಲಾ ಮತ್ತು ನಗರ ಆಡಳಿತ ಘಟಕಗಳ...

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ...

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಅತ್ಯಂತ ಭೀಕರ ಮತ್ತು ಆಘಾತಕಾರಿ ಷಡ್ಯಂತ್ರವೊಂದು ದೇಶದಾದ್ಯಂತ ಬಹಿರಂಗವಾಗಿದೆ. ಆಡಳಿತರೂಢ ಬಿಜೆಪಿ ಮತ್ತು ಮೋದಿ-ಶಾ ಜೋಡಿಯ ಸೂತ್ರದ ಬೊಂಬೆ ಗ್ಯಾನೇಶ್‌...

ಈ ಸುದ್ದಿ ಓದಿದ್ದೀರಾ? ಸಿದ್ದಾಪುರ | ಕತ್ತಿ ತೋರಿಸಿ ಮಾಂಗಲ್ಯ ಸರ ದರೋಡೆ; 24 ಗಂಟೆಯೊಳಗೆ ಆರೋಪಿ ಬಂಧನ


ಮೊದಲ ಬಾರಿಗೆ ಸುಮಾರು 200 ಅಡಿ ಆಳದವರೆಗೆ ಕೊರೆದರೂ ನೀರು ಸಿಗದ ಕಾರಣ ಆ ಪ್ರಯತ್ನ ವಿಫಲವಾಯಿತು. ಆದರೂ ನಿರಾಶರಾಗದೆ ಮತ್ತೊಮ್ಮೆ ಕೊಳವೆ ಬಾವಿ ಕೊರೆಸಲು ಮುಂದಾದ ಅವರು, ಎರಡನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದು, ಸಮರ್ಪಕ ಪ್ರಮಾಣದಲ್ಲಿ ನೀರು ಲಭ್ಯವಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಸಂತಸ ಮನೆಮಾಡಿದೆ.


ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬಾಲಕೃಷ್ಣ ನಾಯಕ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಾಲಕೃಷ್ಣ ನಾಯಕ, ಸಮಾಜದ ಅಗತ್ಯಗಳಿಗೆ ಸ್ಪಂದಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಮುಂದಿನ ದಿನಗಳಲ್ಲಿಯೂ ಜನರ ಸಮಸ್ಯೆಗಳಿಗೆ ಸಾಧ್ಯವಾದ ಮಟ್ಟಿಗೆ ನೆರವಾಗುವ ಪ್ರಯತ್ನ ಮುಂದುವರಿಸುವುದಾಗಿ ತಿಳಿಸಿದರು.


ಈ ವೇಳೆ ಲಕ್ಷ್ಮಣ ಕೋಕರೆ, ಮದನೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ವಿಟ್ಟು ಶೇಳಕೆ, ಶ್ಯಾಮ್ ಸಿಂಧೆ, ಮಹೇಶ್ ದೇಸಾಯಿ, ಚಂದು ಮಾಡಾಕರ್, ವಿಜಯಕುಮಾರ್ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಪರವಾನಗಿ ಇಲ್ಲದೇ ಮದ್ಯ ಮಾರಾಟ; ಆರೋಪಿತನ ವಿರುದ್ಧ ಪ್ರಕರಣ ದಾಖಲು

ನಗರದ ಹೀರಾಪುರ ಬಡಾವಣೆಯಲ್ಲಿ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದ...

ಸುಡುಗಾಡು ಸಿದ್ಧರ ಕಾಲೋನಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಅಲೆಮಾರಿ ಜಾಗೃತ ಸಂಘ ಒತ್ತಾಯ

ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಸೆ.25: ಪಾಮನಕಲ್ಲೂರು ಕ್ರಾಸ್ ಸಮೀಪ...

ಹಾಸನ | ಸಹಕಾರ ಸಂಘದ ಏಳಿಗೆಗೆ ಎಲ್ಲರೂ ಕೈಜೋಡಿಸಿ: ಜಗದೀಶ್

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಅಭಿವದ್ಧಿಯಾದರೆ, ರೈತರ ಅಭಿವದ್ಧಿ ಸಾಧ್ಯ...

ರಾಯಚೂರು | ಸಿಡಿಲು ಬಡಿದು ಆಡುಗಳ ಸಾವಿಗೆ ಶಾಸಕರಿಂದ ₹40 ಸಾವಿರ ನೆರವು

ಮಸ್ಕಿ ಪಟ್ಟಣದ ಸಮೀಪ 2 ದಿನಗಳ ಹಿಂದೆ ಸುರಿದ ಮಳೆಯ ಸಂದರ್ಭದಲ್ಲಿ...