ʼRSSʼ ಬ್ರಿಟಿಷರ ವಿರುದ್ಧ ಸಣ್ಣ ಧ್ವನಿಯನ್ನೂ ಎತ್ತಿಲ್ಲ: ಸಚಿವ ಪ್ರಿಯಾಂಕ್‌ ಖರ್ಗೆ

Date:

“ಬ್ರಿಟಿಷರು ನಮ್ಮನ್ನು ಇನ್ನೂರು ವರ್ಷಕ್ಕೂ ಅಧಿಕ ಕಾಲ ಆಳಿದರು. ಅವರ ವಿರುದ್ಧ ಟಿಪ್ಪು ಸುಲ್ತಾನ್‌ ಹೋರಾಡಿದರು, ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದರು. ಟಿಪ್ಪು ನಿಜವಾದ ಸ್ವಾತಂತ್ರ್ಯ ಹೋರಾಟಗಾರರು. ಆದರೆ, ʼಆರ್‌ಎಸ್‌ಎಸ್‌ʼನವರು ಬ್ರಿಟಿಷರ ವಿರುದ್ಧ ಸಣ್ಣ ಧ್ವನಿಯನ್ನು ಎತ್ತಲಿಲ್ಲ. ಟಿಪ್ಪುವಿನ ವಿರುದ್ಧ ಹುಸಿ ಇತಿಹಾಸವನ್ನು ಸೃಷ್ಟಿಸುತ್ತಾರೆ ಅಷ್ಟೇ. ಪ್ರಸ್ತುತ ಸಮಾಜದಲ್ಲಿ ಒಗ್ಗಟ್ಟಾಗಿ ಬಾಳುವುದು ಅವಶ್ಯಕತೆಯಲ್ಲ, ಅನಿವಾರ್ಯವಾಗಿದೆ” ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

- Advertisement -

ಬೆಂಗಳೂರಿನಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಅವರು ರಚಿಸಿರುವ ‘ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. “ಇತ್ತೀಚೆಗೆ ನಾನು ಏನಾದ್ರು ಮಾತನಾಡಿದರೆ, ಆರ್‌ಎಸ್‌ಎಸ್‌ನವರು ಪ್ರತಿಕ್ರಿಯಿಸುತ್ತಾರೆ. ಇವರಿಗೆ ಇತಿಹಾಸವನ್ನು ತಿರುಚುವುದು ಚಾಳೀ ಆಗಿದೆ. ವಾಟ್ಸಾಪ್‌ ಯೂನಿವರ್ಸಿಟಿಯಿಂದ ಹೊರಗಡೆ ಬಂದು ಸಿನಿಮಾ ಮಾಡೋಕೆ ನಿಂತಿದ್ದಾರೆ. ಸುಳ್ಳು ಮತ್ತು ಹುಸಿ ಇತಿಹಾಸವನ್ನು ಹೇಳಲು ಚಿತ್ರಮಂದಿರದ ದೊಡ್ಡ ಪರದೆಗಳನ್ನೇ ಬಳಸಿಕೊಳ್ಳುತ್ತಿದ್ದಾರೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

“ಇತ್ತೀಚೆಗೆ ಬಿಡುಗಡೆಯಾದ ಧುರಂಧರ್‌ ಸಿನಿಮಾವನ್ನು ನೋಡಿದ ಇತಿಹಾಸ ಶಿಕ್ಷಕರು, ಈ ಸಿನಿಮಾ ನೋಡಿ ನನಗೆ ಕಣ್ಣು ತೆರೆಯಿತು ಅಂತ ಹೇಳಿದ್ದಾರೆ. ಆ ಶಿಕ್ಷಕಿ 100 ಮಕ್ಕಳ ಮೇಲೆ ಪ್ರಭಾವ ಬೀರುವ ವ್ಯಕ್ತಿ. ಆ ನೂರು ಮಕ್ಕಳು ಸಾವಿರಾರು ಮಕ್ಕಳ ಮೇಲೆ ಪ್ರಭಾವ ಬೀರಬಲ್ಲರು. ಇದೇ ಈ ಕಾಲದ ದೊಡ್ಡ ದುರಂತ. ಆರ್‌ಎಸ್‌ಎಸ್‌ ಹೆಸರಿನಲ್ಲಿಯೇ ಸಿನಿಮಾ ಬಿಡುಗಡೆಯಾಯಿತು. ಅದರ ಕಲೆಕ್ಷಷನ್‌ ನೂರು ಕೋಟಿ ದಾಟಲಿಲ್ಲ. ಯಾಕೆಂದರೆ ಅದರಲ್ಲಿ ಇತಿಹಾಸವಿರಲಿಲ್ಲ” ಎಂದು ಹೇಳಿದರು.

ಟಿಪ್ಪು ಪುಸ್ತಕ ಬಿಡುಗಡೆ

“ನೂರು ವರ್ಷದಲ್ಲಿ ಆರ್‌ಎಸ್‌ಎಸ್‌ನವರ ಹತ್ತು ಸಾಧನೆ ಕೇಳಿದರೆ ಹೇಳುವುದಿಲ್ಲ. ಅದನ್ನು ಬಿಟ್ಟು ಕೇರಳದಲ್ಲಿ ಪ್ರವಾಹ ಆದಾಗ ಹೋಗಿದ್ದನ್ನು ಹೇಳುತ್ತಾರೆ. ಅದನ್ನು ರೋಟರಿ ಕ್ಲಬ್‌ ಅವರು ಮಾಡುತ್ತಾರೆ. ನಮ್ಮ ಯುವ ಕಾಂಗ್ರೆಸ್‌ನವರು ಮಾಡುತ್ತಾರೆ” ಎಂದರು.

“ಇತ್ತೀಚಿನ ದಿನಗಳಲ್ಲಿ ಇತಿಹಾಸವನ್ನು ವಾಟ್ಸಾಪ್‌ ಯೂನಿವರ್ಸಿಟಿಯ ಪದವಿದರರು ತಿರುಚುತ್ತಿದ್ದಾರೆ. ಟಿವಿಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಾಡಿಗೆ ಭಾಷಣಕಾರರೇ ಇರುತ್ತಾರೆ. ಎಲ್ಲ ಸಂದರ್ಭದಲ್ಲಿಯೂ ಅವರೇ ಇತಿಹಾಸಕಾರರು, ಆರ್ಥಿಕ ತಜ್ಞರು, ಜಾಗತಿಕ ತಜ್ಞರೂ ಆಗಿರುತ್ತಾರೆ. ಇತಿಹಾಸವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಈ ಬಾಡಿಗೆ ಭಾಷಣಕಾರರು ಹೇಳಿದ್ದನ್ನೇ ಬಿಜೆಪಿಯವರು ಒತ್ತಿ ಒತ್ತಿ ಹೇಳುತ್ತಾರೆ” ಎಂದರು.

“ಸಾಮ್ರಾಜ್ಯ ವಿಸ್ತರಣೆ ಮೂರು ಕಾರಣಗಳಿಗೆ ನಡೆದಿರುತ್ತದೆ. ಒಂದು ಯುದ್ಧಕ್ಕೆ ಹೋದಾಗ, ಇನ್ನೊಂದು ತೆರಿಗೆ ಸಂಗ್ರಹ ಮಾಡಲು ಹೋದಾಗ, ಮೂರನೆಯದು ಒಪ್ಪಂದದ ಮೂಲಕ. ಪ್ರತಿಯೊಬ್ಬ ರಾಜನ ಇತಿಹಾಸವನ್ನು ನೋಡಿದರೆ, ಆತನ ವ್ಯಕ್ತಿತ್ವದಲ್ಲಿ ಹೀರೋ ಮತ್ತು ವಿಲನ್‌ ಇಬ್ಬರೂ ಇರುತ್ತಾರೆ. ನಾವು ನೋಡುವ ದೃಷ್ಟಿಕೋನದಿಂದ ಅದು ತಿಳಿಯುತ್ತದೆ” ಎಂದು ಅಭಿಮತ ವ್ಯಕ್ತಪಡಿಸಿದರು.

“ಭಾರತದ ಇತಿಹಾಸದ ಪುಟದಲ್ಲಿ ಬಹಳಷ್ಟು ಸ್ವಾತಂತ್ರ್ಯ ಹೋರಾಟಗಾರರ ಹೆಸರಿದೆ. ಆದರೆ ಬ್ರಿಟಿಷರ ಇತಿಹಾಸದಲ್ಲಿ ಭಾರತ ಸ್ವಾತಂತ್ರ್ಯ ಹೋರಾಟಗಾರರ ಹೆಸರಿದ್ದರೆ, ಅದು ಟಿಪ್ಪು ಸುಲ್ತಾನ್‌ ಕೂಡ ಒಬ್ಬರು. ಬ್ರಿಟಿಷ್‌ ಅಧಿಕಾರಿ ಲಾರ್ಡ್‌ ವೆಲ್ಲೆಸ್ಲಿಯೇ ಸಹ ʼಟಿಪ್ಪು ತರದ ವಾರಿಯರ್ ನೋಡಿಲ್ಲʼ ಎಂದು ಬರೆಯುತ್ತಾರೆ” ಎಂದು ಹೇಳಿದರು.  

“ಟಿಪ್ಪುಗೆ ತೋಟಗಾರಿಕೆಯಲ್ಲಿ ಸಾಕಷ್ಟು ಆಸಕ್ತಿ ಇರುತ್ತದೆ. ಅದಕ್ಕಾಗಿ ಬೆಂಗಳೂರಿನಲ್ಲಿ ಹೈದರ್‌ ಮತ್ತು ಟಿಪ್ಪು ʼಲಾಲ್‌ ಬಾಗ್‌ʼ ಕಟ್ಟಿಸಿದ್ದಾರೆ. ಆದರೆ ಅಲ್ಲಿನ ಲೋಕಸಭಾ ಸದಸ್ಯ ಟಿಪ್ಪುವನ್ನು ವಿರೋಧಿಸುತ್ತಾರೆ. ನಮ್ಮ ದೇಶಕ್ಕೆ ಬರುವುದು ಎಲ್‌ಪಿಜಿ ಇಸ್ಲಾಮಿಕ್‌ ದೇಶಗಳಿಂದ. ಅತಿ ಹೆಚ್ಚು ಪೆಟ್ರೋಲ್‌ ಬರುವುದು ಮಧ್ಯಪ್ರಾಚ್ಯದಿಂದ. ಇದನ್ನು ಮಾತನಾಡಲು ಹೋದಾಗ ಆರ್‌ಎಸ್‌ಎಸ್‌ನವರು ಸುಮ್ಮನೆ ಆಗ್ತಾರೆ” ಎಂದರು.

“ಟಿಪ್ಪು 150 ಕ್ಕೂ ಹೆಚ್ಚು ದೇವಸ್ಥಾನಗಳನ್ನು ಜೀರ್ಣೋದ್ದಾರ ಮಾಡಿದ್ದಾರೆ. ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಇದನ್ನು ಬಿಟ್ಟು, ಟಿಪ್ಪು ಹಿಂದು ವಿರೋಧಿ ಎಂಬ ನರೇಟಿವ್‌ಗಳನ್ನು ಸೃಷ್ಟಿ ಮಾಡುತ್ತಾರೆ. ನಮ್ಮ ನಿಜವಾದ ಇತಿಹಾಸ ಇರುವುದು ಪಾಲಿ ಮತ್ತು ಪ್ರಾಕೃತ ಭಾಷೆಯಲ್ಲಿಯೇ ಹೊರತು ಸಂಸ್ಕೃತದಲ್ಲಿ ಅಲ್ಲ. ಇದರ ಬಗ್ಗೆ ಸರಿಯಾದ ಅಧ್ಯಯನಗಳು ಆಗಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಟಿಪ್ಪು ಪುಸ್ತಕ ಬಿಡುಗಡೆ ೧

“ನಮ್ಮ ಗ್ರಾಮೀಣ ಗ್ರಂಥಾಲಯಗಳಲ್ಲಿ ಮಕ್ಕಳು ಓದಬೇಕಾದ ಪುಸ್ತಕಗಳನ್ನು ಬಿಟ್ಟು, ರೋಹಿತ್‌ ಚಕ್ರತೀರ್ಥನಂತಹ, ಬಾಡಿಗೆ ಭಾಷಣಕಾರರ ಪುಸ್ತಕಗಳನ್ನು ಇಟ್ಟಿದ್ದರು. ಈಗ ಶುದ್ಧಿಕರಣ ಮಾಡಿದ್ದೇವೆ. ಸಂವಿಧಾನದ ಮೌಲ್ಯವನ್ನು ಹೇಳುವ, ಭ್ರಾತೃತ್ವ ಭಾವನೆಯನ್ನು ಉಂಟುಮಾಡುವ‌, ಪರೀಕ್ಷೆಗೆ ಉಪಯೋಗವಾಗುವ ಪುಸ್ತಕಗಳನ್ನು ಇಡಲಾಗುತ್ತಿದೆ” ಎಂದರು.

ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್‌, ಇತಿಹಾಸಕಾರರು ಡಾ.ರುಚಿಕಾ ಶರ್ಮ, ಹಿರಿಯ ಚಿಂತಕ ಡಾ.ಸಿದ್ದನಗೌಡ ಪಾಟೀಲ್‌, ಹಿರಿಯ ಪತ್ರಕರ್ತ ಸುದೀಪ್ತೋ ಮೊಂಡಲ್‌, ಹೋರಾಟಗಾರ ಮುನೀರ್‌ ಕಾಟಿಪಳ್ಳ, ಪುಸ್ತಕದ ಕತೃ ನವೀನ್‌ ಸೂರಿಂಜೆ, ನಿರೂಪಕಿ ಧನಲಕ್ಷ್ಮೀ ದೇವರಾಜ್‌ ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದ 17 ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರೀ ಮಳೆ: ಹವಾಮಾನ ಇಲಾಖೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿದೆ. ಪರಿಣಾಮ, ಕರ್ನಾಟಕದ 17 ಜಿಲ್ಲೆಗಳಲ್ಲಿ ಮುಂದಿನ ನಾಲ್ಕು...

‘ಮತದಾನದ ಹಕ್ಕು ಕಸಿಯಲು ಯಾರಿಗೂ ಅಧಿಕಾರವಿಲ್ಲ’: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

"ಈ ದೇಶದಲ್ಲಿ ಹುಟ್ಟಿರುವ ಯಾವುದೇ ನಾಗರಿಕನ ಮತದಾನದ ಹಕ್ಕನ್ನು ಕಸಿಯಲು ಯಾರಿಗೂ...

ಬಿಡದಿ ರೈತರ ಮೇಲೆ ಪೊಲೀಸ್ ದೌರ್ಜನ್ಯ: ಸಂಯುಕ್ತ ಹೋರಾಟ ಕರ್ನಾಟಕ ತೀವ್ರ ಖಂಡನೆ

ಕಳೆದ ಐದು ದಿನಗಳಿಂದ ಬೈರಮಂಗಲ ವೃತ್ತದಲ್ಲಿ ರಸ್ತೆ ತಡೆ ಹಾಗೂ ಸರಣಿ...

‘ಅಟ್ಟಿಕಾ ಗೋಲ್ಡ್’ ಕಚೇರಿಗಳ ಮೇಲೆ ದಾಳಿ: ನಗದು, ಆಭರಣ ಜಪ್ತಿ

ಕಳ್ಳತನವಾದ ಚಿನ್ನಾಭರಣಗಳನ್ನು ಖರೀದಿಸಿ, ಆ ಮೂಲಕ ಅಕ್ರಮವಾಗಿ ಹಣ ಸಂಪಾದಿಸಿದ ಆರೋಪದ...