“ಟಿಪ್ಪು ಒಕ್ಕಲಿಗನೋ, ಬ್ರಾಹ್ಮಣನೋ, ಹೊಲೆಯ ಮಾದಿಗನೋ ಆಗಿದ್ರೂ ಇವತ್ತಿನ ಪರಿಸ್ಥಿತಿ ಇರುತ್ತಿರಲಿಲ್ಲ. ಬಹುಶಃ ಆತನ ಧರ್ಮದ ಕಾರಣಕ್ಕೆ ಟಿಪ್ಪುವಿನ ವಿರುದ್ಧ ವಿರೋಧಿ ಭಾವನೆಯನ್ನು ಸೃಷ್ಟಿಸಲಾಗುತ್ತಿದೆ.” ಎಂದು ಹೋರಾಟಗಾರ ಮುನೀರ್ ಕಾಟಿಪಳ್ಳ ಹೇಳಿದರು.
ಬೆಂಗಳೂರಿನಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಅವರು ರಚಿಸಿರುವ ‘ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಾವು ಟೋಲ್ ಗೇಟ್ ಹೋರಾಟ ಮಾಡುವಾಗ, ಬಿಜೆಪಿಯವರು ಸಹ ನಮ್ಮ ಪಕ್ಕದಲ್ಲಿ ಟೆಂಟ್ ಹಾಕಿ ಹೋರಾಟಕ್ಕೆ ಬಂದರು. ಆ ವೇಳೆ, ನನಗೆ ಕೇಳುವಂತೆ ʼಮುನೀರ್ ಬ್ಯಾರಿ, ನಾವು ಹಿಂದುಗಳು ಇಲ್ಲಿದ್ದೀವಿ ಬನ್ನಿʼ ಎಂದು ಕರೆದರು. ಇತರದ ಅನೇಕ ಅನುಭವಗಳು ನಮಗೆ ಆಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಟಿಪ್ಪು ಹೆಸರು ಎತ್ತಿದರೆ ಅಪರಾದವೆಂಬಂತೆ ಬಿಂಬಿಸಲಾಗುತ್ತಿದೆ. ಟಿಪ್ಪು ಜಯಂತಿ ಮಾಡುವುದು ಕಡಿಮೆ ಆಗಿದೆ. ಆದರೆ, ಶಿವಾಜಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಸೀದಿ ಮುಂದೆ ಗಲಾಟೆಯನ್ನು ಸಹ ಮಾಡಲಾಯಿತು” ಎಂದು ಹೇಳಿದರು.

“ಸರಿಯಾಗಿ ನೋಡಿದರೆ, ನಮ್ಮ ಕರಾವಳಿ ಭಾಗದಲ್ಲಿ ಟಿಪ್ಪು ಆಡಳಿತದ ಸಮಯದಲ್ಲಿ, ಭಂಟರು, ಜೈನರಿಗೆ ಭೂಮಿಯನ್ನು ಕೊಟ್ಟದ್ದಾರೆ ವಿನಹ, ನಮ್ಮ ಬ್ಯಾರಿಗಳಿಗೆ ಏನು ಕೊಟ್ಟಿಲ್ಲ. ಟಿಪ್ಪುವಿನ ಕಾಲದಲ್ಲಿ ಅನುಕೂಲ ಪಡೆದವರು ಟಿಪ್ಪುವನ್ನು ದೇಶದ್ರೋಹಿ, ಹಿಂದೂ ವಿರೋಧಿ ಎನ್ನುತ್ತಾರೆ. ಟಿಪ್ಪುವಿನ ಕಾಲಕ್ಕೆ ಒಂದಾದರೂ ಬ್ಯಾರಿ ಮನೆತನಗಳು ಉದ್ದಾರೆ ಆಗಿದ್ದರೆ ತೋರಿಸಿ
“ಕಬ್ಬನ್ ಪಾರ್ಕ್ ಕಟ್ಟಿದ್ದು ಕಬ್ಬನ್ ಎನ್ನುವ ಬ್ರಿಟಿಷ್ ಅಧಿಕಾರಿ. ಲಾಲ್‌ಬಾಗ್ ಕಟ್ಟಿದ್ದು ಹೈದರ್ ಅಲಿ. ಆದರೆ ಲಾಲ್‌ಬಾಗ್‌ಗೆ ಯಾಕೆ ಹೈದರ್ ಹೆಸರಿಟ್ಟಿಲ್ಲ. ಇದರ ಬಗ್ಗೆ ಚರ್ಚೆ ಆಗಬೇಕು ಅಲ್ಲವೇ?. ಟಿಪ್ಪು ಕಾಲದಲ್ಲಿ ಹೆಚ್ಚು ಲಾಭ ಪಡೆದವರು ಯಾರು ಎಂದು ಚರ್ಚೆ ಆಗಬೇಕು” ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್, ಇತಿಹಾಸಕಾರರು ಡಾ.ರುಚಿಕಾ ಶರ್ಮ, ಹಿರಿಯ ಚಿಂತಕ ಡಾ.ಸಿದ್ದನಗೌಡ ಪಾಟೀಲ್, ಹಿರಿಯ ಪತ್ರಕರ್ತ ಸುದೀಪ್ತೋ ಮೊಂಡಲ್, ಪುಸ್ತಕದ ಕತೃ ನವೀನ್ ಸೂರಿಂಜೆ, ನಿರೂಪಕಿ ಧನಲಕ್ಷ್ಮೀ ದೇವರಾಜ್ ಇದ್ದರು.




