ಭಾರತೀಯ ಕರಾವಳಿಯಲ್ಲಿ ಇಸ್ರೇಲ್ ಹಡಗಿನ ಮೇಲೆ ಡ್ರೋಣ್ ದಾಳಿ

Date:

ಭಾರತದ ನೈಋತ್ಯ ಗುಜರಾತ್‌ನ ವೆರಾವಲ್ ಕರಾವಳಿಯಲ್ಲಿ ಇಸ್ರೇಲ್‌ಗೆ ಸಂಬಂಧಿಸಿದ ಹಡಗಿನ ಮೇಲೆ ಅಪರಿಚಿತ ಡ್ರೋಣ್ ದಾಳಿ ನಡೆಸಿದೆ ಎಂದು ನೌಕಾಪಡೆಯ ಎರಡು ಏಜನ್ಸಿಗಳು ತಿಳಿಸಿವೆ. ಆದರೆ ಘಟನೆಯಲ್ಲಿ ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ.

ಯುನೈಟೆಡ್ ಕಿಂಗ್‌ಡಮ್ ಮೆರೈನ್ ಟ್ರೇಡ್ ಆಪರೇಷನ್ಸ್ ನೌಕಾಸಂಸ್ಥೆ(ಯುಕೆಎಂಟಿಒ) ಪ್ರಕಾರ, ಈ ಘಟನೆಯು ಭಾರತದ ವೆರಾವಲ್‌ನಿಂದ ನೈಋತ್ಯಕ್ಕೆ ಇರುವ 200 ಕಿಮೀ ದೂರದಲ್ಲಿ ಸಂಭವಿಸಿದೆ.

ಡ್ರೋಣ್ ದಾಳಿಯಿಂದ ಹಡಗಿನಲ್ಲಿ ಬೆಂಕಿ ಹೊತ್ತುಕೊಂಡಿದೆ. ಮಾನವರಹಿತ ವೈಮಾನಿಕ ದಾಳಿಯಿಂದ (ಯುಎಎಸ್) ಹಡಗಿನ ಮೇಲೆ ಸ್ಫೋಟ ಉಂಟಾಗಿದೆ ಎಂದು ಯುಕೆಎಂಟಿಒ ತಿಳಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಕ್ಷಿ ಮಲಿಕ್‌ ʼಶೂʼಗಳು ಭಾರತದ ಆತ್ಮಸಾಕ್ಷಿಯನ್ನು ಅಣಕಿಸುವ ಸಂಕೇತವಾಗಿ ಉಳಿಯಲಿದೆ

“ಲೈಬೀರಿಯಾ- ಫ್ಲಾಗಡ್ ರಾಸಾಯನಿಕ ಉತ್ಪನ್ನಗಳ ಟ್ಯಾಂಕರ್ ಇಸ್ರೇಲ್ ಸಂಯೋಜಿತವಾಗಿದೆ. ಲೈಬೀರಿಯನ್ ಫ್ಲಾಗಡ್ ರಾಸಾಯನಿಕ ಉತ್ಪನ್ನಗಳ ಟ್ಯಾಂಕರ್‌ನಲ್ಲಿ ಹೊತ್ತುಕೊಂಡಿದ್ದ ಬೆಂಕಿಯನ್ನು ಹಡಗಿನ ಸಿಬ್ಬಂದಿ ಸಾವುನೋವುಗಳಿಲ್ಲದೆ ನಂದಿಸಿದ್ದಾರೆ. ಹಡಗಿಗೆ ತುಸು ಹಾನಿಯಾಗಿದ್ದು, ಸ್ವಲ್ಪ ನೀರು ಕೂಡ ಒಳಗೆ ಪ್ರವೇಶಿಸಿದೆ” ಎಂದು ಯುಕೆಎಂಟಿಒ ತಿಳಿಸಿದೆ.

ಯುಕೆಎಂಟಿಒ ಶನಿವಾರದಂದು ಅಧಿಸೂಚನೆಯನ್ನು ಹೊರಡಿಸಿದ್ದು, ಆ ಪ್ರದೇಶದಿಂದ ಹಡಗುಗಳು ಸಾಗದಂತೆ ಎಚ್ಚರಿಕೆ ನೀಡಿದೆ. ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಯುಕೆಎಂಟಿಒ ತಿಳಿಸಿದೆ.

ಡಿ.18ರಂದು ಮಾಲ್ಟಾ ಫ್ಲಾಗಡ್‌ ಸರಕು ಸಾಗಣೆ ಹಡಗನ್ನು ಅಪಹರಿಸಲು ಯತ್ನಿಸುವಾಗ ಭಾರತೀಯ ನೌಕಾಪಡೆ ಸಹಾಯ ಮಾಡಿದ ಕೆಲವು ದಿನಗಳ ನಂತರ ಈ ಘಟನೆ ಸಂಭವಿಸಿದೆ. ಅರೇಬಿಕ್ ಸಮುದ್ರದಲ್ಲಿ ಎಂವಿ ರುಯೆನ್ ಎಂಬ ಹಡಗಿಗೆ ಆರು ಕಡಲ್ಗಳ್ಳರು ಅಕ್ರಮವಾಗಿ ಪ್ರವೇಶಿಸಿದ್ದರು. ಇದನ್ನು ಭಾರತೀಯ ನೌಕಾಪಡೆ ಸಿಬ್ಬಂದಿ ಅಪಹರಣ ಯತ್ನವನ್ನು ವಿಫಲಗೊಳಿಸಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಬಿಡುಗಡೆಗೊಂಡಿದ್ದ ಅಪರಾಧಿ ಸಾವು

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ, ಬಳಿಕ ಬಿಡುಗಡೆಗೊಂಡಿದ್ದ...

6 ಕಾಂಗ್ರೆಸ್ ಶಾಸಕರನ್ನು ಕರೆದೊಯ್ದ ಸೇನೆ: ಬಿಜೆಪಿ ವಿರುದ್ಧ ಹಿಮಾಚಲ ಪ್ರದೇಶ ಸಿಎಂ ಆರೋಪ

ಅರೆಸೇನಾ ಪಡೆ ಮತ್ತು ರಾಜ್ಯ ಪೊಲೀಸ್‌ ಬೆಂಗಾವಲೊಂದಿಗೆ ಕಾಂಗ್ರೆಸ್‌ನ ಐದರಿಂದ ಆರು...

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಮುಂದಿನ ತಿಂಗಳು ಜಾರಿ ಸಾಧ್ಯತೆ

ನೆರೆಯ ದೇಶಗಳಿಂದ ಭಾರತಕ್ಕೆ ಬಂದು ನೆಲಸಿರುವ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದ...