ಡಿಜಿಟಲ್ ಅರೆಸ್ಟ್ ಹಗರಣ; ಮಹಿಳಾ ವೈದ್ಯರಿಗೆ 59 ಲಕ್ಷ ರೂ. ವಂಚನೆ

Date:

ಉತ್ತರ ಪ್ರದೇಶದ ನೋಯ್ಡಾ ಮೂಲದ ಮಹಿಳಾ ವೈದ್ಯರೊಬ್ಬರಿಗೆ ಸೈಬರ್‌ ವಂಚಕರು 48 ಗಂಟೆಗಳ ಕಾಲ ‘ಡಿಜಿಟಲ್‌ ಅರೆಸ್ಟ್’ ಗೊಳಪಡಿಸಿ 59 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ. ದೆಹಲಿ ಎನ್‌ಸಿಆರ್‌ ವಿಭಾಗದಲ್ಲಿ ಇತ್ತೀಚಿಗೆ ಸೈಬರ್‌ ವಂಚನೆ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ.

- Advertisement -

ನೋಯ್ಡಾ ಸೆಕ್ಟರ್‌ನ 77ರ ನಿವಾಸಿ ಡಾ. ಪೂಜಾ ಗೋಯಲ್‌ ಅವರಿಗೆ ಜುಲೈ 13 ರಂದು ಕರೆ ಬಂದಿದೆ. ತಾನೊಬ್ಬ ಭಾರತೀಯ ದೂರ ನಿಯಂತ್ರಣ ಪ್ರಾಧಿಕಾರದ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಪೂಜಾ ಗೋಯಲ್‌ ಅವರಿಗೆ ನಿಮ್ಮ ಪೋರ್ನ್‌(ಅಶ್ಲೀಲ) ವಿಡಿಯೋ ವೈರಲ್‌ ಆಗುತ್ತಿದೆ ಎಂದು ತಿಳಿಸಿದ್ದಾನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೌಜನ್ಯಳನ್ನು ಕೊಂದವರು ಯಾರು? ಹೊಸ ತನಿಖೆಯಲ್ಲಿ ಉತ್ತರ ಸಿಗುವ...

14 ವರ್ಷಗಳು... 3 ತನಿಖಾ ಸಂಸ್ಥೆಗಳಾದ ಪೊಲೀಸ್, ಸಿಐಡಿ, ಸಿಬಿಐ ತನಿಖೆಗಳು... ಅಮಾಯಕನಾದ ಒಬ್ಬನೇ ಆರೋಪಿಯ ಸುತ್ತಲಿನ ತನಿಖೆ-... ಕೊನೆಗೆ ಆತ ನಿರಪರಾಧಿ ಎಂದು ಸಾಬೀತು, ಆತನ ಖುಲಾಸೆ. ಹಾಗಾದರೆ 17 ವರ್ಷದ...

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ವ್ಯಕ್ತಿಯ ಆರೋಪವನ್ನು ವೈದ್ಯರು ಆರಂಭದಲ್ಲಿ ತಿರಸ್ಕರಿಸಿದ್ದಾರೆ. ವೈದ್ಯರಿಗೆ ಬಲವಂತಪಡಿಸಿದ ವ್ಯಕ್ತಿ ವಿಡಿಯೋ ಕಾಲ್‌ ಸ್ವೀಕರಿಸುವಂತೆ ತಿಳಿಸಿದ್ದಾನೆ. ವಿಡಿಯೋ ಕಾಲ್‌ನಲ್ಲಿ ಮಹಿಳೆಯನ್ನು 48 ಗಂಟೆಗಳ ಕಾಲ ಬೆದರಿಸಿ ಡಿಜಿಟಲ್‌ ಬಂಧನಕ್ಕೆ ಒಳಪಡಿಸಲಾಗಿತ್ತು. ಕಾಲ್‌ನಲ್ಲಿ ಹಣ ನೀಡದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸಲಾಗಿದೆ.

ಅನಂತರದಲ್ಲಿ ಮಹಿಳೆಯಿಂದ 59.54 ಲಕ್ಷ ರೂ. ಹಣವನ್ನು ನಿರ್ದಿಷ್ಟ ಖಾತೆಗೆ ವರ್ಗಾವಣೆಗೊಳಿಸಿದ ನಂತರ ಮಹಿಳೆಯನ್ನು ಡಿಜಿಟಲ್‌ ಅರೆಸ್ಟ್‌ನಿಂದ ಬಂಧಮುಕ್ತಗೊಳಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದಿನಕ್ಕೆ 14 ಗಂಟೆ ಕೆಲಸ ಅಮಾನವೀಯ ನಡೆ, ಸರ್ಕಾರ ತಿರಸ್ಕರಿಸಲಿ

ಹಣ ಕಳೆದುಕೊಂಡ ನಂತರ ಇದೊಂದು ಹಗರಣ ಎಂದು ಮಹಿಳೆಗೆ ಗೊತ್ತಾಗಿದೆ. ಜುಲೈ 22 ರಂದು ಮಹಿಳಾ ವೈದ್ಯರು ನೋಯ್ಡಾ ಸೆಕ್ಟರ್‌ 36ರಲ್ಲಿ ಸೈಬರ್‌ ಠಾಣೆಗೆ ಪೊಲೀಸ್ ದೂರು ನೀಡಿದ್ದಾರೆ.

ಸೈಬರ್‌ ವಿಭಾಗದ ಎಸಿಪಿಯಾದ ವಿವೇಕ್‌ ರಂಜನ್‌ ರೈ, ಗೋಯಲ್‌ ಅವರು ಹಣ ವರ್ಗಾವಣೆಗೊಳಿಸಿದ ಖಾತೆಯ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಡಿಜಿಟಲ್‌ ಅರೆಸ್ಟ್ ಹಗರಣದ ಮೂಲಕ ಜನರನ್ನು ಹೆಚ್ಚಾಗಿ ವಂಚನೆಗೊಳಿಸಲಾಗುತ್ತಿದೆ. ಸೈಬರ್‌ ವಂಚಕರು ಮನೆಗಳಲ್ಲಿ, ಕೊಠಡಿಗಳಲ್ಲಿ ಅಥವಾ ಸರ್ಕಾರಿ ಅಧಿಕಾರಿಗಳ ರೂಪದಲ್ಲಿ ಮೋಸಗೊಳಿಸಲಾಗುತ್ತಿದೆ.

ದೆಹಲಿಯಲ್ಲಿ ಕೆಲವು ದಿನಗಳ ಹಿಂದೆಯಷ್ಟೆ 72 ವರ್ಷದ ವೃದ್ಧೆಯೊಬ್ಬರನ್ನು ಪೂಜಾ ಗೋಯಲ್‌ ರೀತಿಯಲ್ಲಿಯೇ ಗುರಿ ಮಾಡಿ 83 ಲಕ್ಷ ರೂ. ವಂಚನೆಗೊಳಿಸಲಾಗಿತ್ತು. ವೃದ್ಧೆಯನ್ನು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೀರೆಂದು ಬಿಂಬಿಸಿ 12 ಗಂಟೆಗಳ ಕಾಲ ಡಿಜಿಟಲ್‌ ಬಂಧನಕ್ಕೊಳಪಡಿಸಲಾಗಿತ್ತು.

ಸೈಬರ್‌ ಅಪರಾಧಿಗಳಿಂದ ಕೆಲವು ತಿಂಗಳುಗಳಿಂದ ಈ ರೀತಿಯ ವಂಚನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನೋಯ್ಡಾ ಪೊಲೀಸರು ಸಾರ್ವಜನಿಕರಿಗೆ ಮಾರ್ಗಸೂಚಿಗಳನ್ನು ನೀಡಿ ಮೋಸಕ್ಕೊಳಗಾಗದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾಳೆ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ; ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ನಾಳೆ, 2026ರ ಸೆಪ್ಟೆಂಬರ್...

ವಿದ್ಯಾರ್ಥಿನಿ ಮೇಲೆ ಗೂಂಡಾಗಿರಿ; ಬಿಹಾರ ಸರ್ಕಾರದ ವಿರುದ್ಧ ರಾಹುಲ್ ಕಿಡಿ; ಪೋಕ್ಸೋ ಕಾಯ್ದೆಯಡಿ ಕ್ರಮಕ್ಕೆ ಆಗ್ರಹ

ಬಿಹಾರದ ಜಮುಯಿ ಜಿಲ್ಲೆಯಲ್ಲಿ 10ನೇ ತರಗತಿಯ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳಿಗೆ ಸಾರ್ವಜನಿಕ...

ಬಿಹಾರ: ಅಪ್ರಾಪ್ತೆಯನ್ನು ನಡುರಸ್ತೆಯಲ್ಲಿ ಎಳೆದಾಡಿ, ಕಿರುಕುಳ ನೀಡಿದ ಪುಂಡರು

ಬಿಹಾರದ ಜಮುಯಿಯಲ್ಲಿ 10ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳನ್ನು ಯುವಕರ ಗುಂಪೊಂದು ನಡುರಸ್ತೆಯಲ್ಲಿ...

ಐಐಟಿ ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಹಿಂದಿನ ಹೇಳಿಕೆಗೆ ಆಡಳಿತ ಮಂಡಳಿ ಕ್ಷಮೆ, ಡೀನ್ ಅಮಾನತು

ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ವಿದ್ಯಾರ್ಥಿಗಳ...