ನೀಟ್ ಯುಜಿ 2024 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆಯೇ? ಎನ್‌ಟಿಎ ಏನು ಹೇಳುತ್ತೆ?

Date:

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮೇ 5ರಂದು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್ ಯುಜಿ) 2024 ಪರೀಕ್ಷೆಯನ್ನು ನಡೆಸಿದೆ. ದೇಶದಾದ್ಯಂತ 557 ನಗರಗಳಲ್ಲಿ ಮತ್ತು ವಿದೇಶದ 14 ನಗರಗಳಲ್ಲಿ ಪ್ರರೀಕ್ಷಾ ಕೇಂದ್ರದಲ್ಲಿ ಈ ಪರೀಕ್ಷೆ ನಡೆದಿದೆ. ಈ ನಡುವೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹರಿದಾಡುತ್ತಿದೆ.

- Advertisement -

ಇನ್ನು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಬಾಲಕಿಯರ ಆದರ್ಶ ವಿದ್ಯಾ ಮಂದಿರ ಶಾಲೆಯಲ್ಲಿ ಹಿಂದಿ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಂಗ್ಲ (ಇಂಗ್ಲಿಷ್) ಮಾಧ್ಯಮದ ಪ್ರಶ್ನೆ ಪತ್ರಿಕೆಯನ್ನು ನೀಡಲಾಗಿದೆ ಎಂದೂ ಕೂಡಾ ವರದಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು?...

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್‌, ಹರಿತ ವಸ್ತುವಿನಿಂದ ಪೈಲಟ್ ಮೇಲೆ...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್...

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು ಸುರಿಸುತ್ತಿದ್ದಾನೆ. ಆದರೆ, ಇದಕ್ಕೆ ಸ್ಪಂದಿಸಬೇಕಾದ ಮೋದಿ ಸರ್ಕಾರ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೂಲಕ ಜಾಗತಿಕ ವೇದಿಕೆಗಳಲ್ಲಿ ವಿದೇಶಿ ಯುದ್ಧಗಳತ್ತ...

ಈ ಎರಡು ಆರೋಪಗಳ ಬಗ್ಗೆ ಎನ್‌ಟಿಎ ಸ್ಪಷ್ಟಣೆಯನ್ನು ನೀಡಿದೆ. ತಪ್ಪು ಪ್ರಶ್ನೆ ಪತ್ರಿಕೆ ನೀಡಿರುವುದನ್ನು ಒಪ್ಪಿಕೊಂಡಿರುವ ಎನ್‌ಟಿಎ ನೀಟ್ ಯುಜಿ 2024 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದನ್ನು ನಿರಾಕರಿಸಿದೆ.

ಇದನ್ನು ಓದಿದ್ದೀರಾ?  ಪ್ರಶ್ನೆಪತ್ರಿಕೆ ಸೋರಿಕೆ: ಅಭ್ಯರ್ಥಿಗಳ ಪ್ರತಿಭಟನೆಗೆ ಮಣಿದು ಪೊಲೀಸ್ ಪರೀಕ್ಷೆ ಅಮಾನ್ಯಗೊಳಿಸಿದ ಯೋಗಿ ಸರ್ಕಾರ

“ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬುವುದು ಸುಳ್ಳು ಸುದ್ದಿಯಾಗಿದೆ. ಜನರಲ್ಲಿ ಆತಂಕ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಯಾರೋ ಸುಳ್ಳು ಸುದ್ದಿ ಹರಡಿದ್ದಾರೆ. ಆದರೆ ಆದರ್ಶ ವಿದ್ಯಾ ಮಂದಿರ ಶಾಲೆಯಲ್ಲಿ ಹಿಂದಿ ಮಾಧ್ಯಮದ ವಿದ್ಯಾರ್ಥಿಗಳಿಗೆ ತಪ್ಪಾಗಿ ಆಂಗ್ಲ ಮಾಧ್ಯಮದ ಪ್ರಶ್ನೆ ಪತ್ರಿಕೆಯನ್ನು ನೀಡಿರುವುದು ಹೌದು. ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ತಮ್ಮ ತಪ್ಪನ್ನು ಸರಿಪಡಿಸುವಷ್ಟರಲ್ಲಿ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯೊಂದಿಗೆ ಪರೀಕ್ಷೆ ಕೊಠಡಿಯಿಂದ ಹೊರನಡೆದಿದ್ದಾರೆ” ಎಂದು ಎನ್‌ಟಿಎ ತಿಳಿಸಿದೆ.

ಇದನ್ನು ಓದಿದ್ದೀರಾ?  ತೆಲಂಗಾಣ | ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್‌ ಬಂಧನ

“ನಿಯಮಗಳ ಪ್ರಕಾರ ವಿದ್ಯಾರ್ಥಿಗಳು ಪರೀಕ್ಷೆ ಮುಗಿದ ನಂತರ ಮಾತ್ರ ಪಶ್ನೆ ಪತ್ರಿಕೆಯೊಂದಿಗೆ ಕೊಠಡಿಯಿಂದ ಹೊರಗೆ ನಡೆಯಬಹುದು. ಆದರೆ ಕೆಲವು ವಿದ್ಯಾರ್ಥಿಗಳು ಬಲವಂತದಿಂದ ಹೊರ ಹೋಗಿದ್ದಾರೆ. ಈ ಕಾರಣದಿಂದಾಗಿ ಪ್ರಶ್ನೆ ಪತ್ರಿಕೆಯು ಸಂಜೆ 4ರ ಸುಮಾರಿಗೆ ಅಂತರ್ಜಾಲದಲ್ಲಿ ಪ್ರಸಾರವಾಗಿದೆ. ಆದರೆ ಅಷ್ಟರಲ್ಲಿ ದೇಶದಾದ್ಯಂತ ಇತರೆ ಎಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ಆರಂಭವಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಮೇ 5ರಂದು ಮಧ್ಯಾಹ್ನ 2 ರಿಂದ 5:20 ರವರೆಗೆ ನೀಟ್ ಯುಜಿ 2024 ಪರೀಕ್ಷೆ ನಡೆದಿದ್ದು ಈ ವೈದ್ಯಕೀಯ ಪ್ರವೇಶ ಪರೀಕ್ಷೆಯು ದೇಶಾದ್ಯಂತ 557 ನಗರಗಳಲ್ಲಿ ಮತ್ತು ವಿದೇಶದ 14 ನಗರಗಳಲ್ಲಿ ನಡೆದಿದೆ. ಈ ವರ್ಷ, ದಾಖಲೆಯ ಪ್ರಮಾಣದಲ್ಲಿ 23 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಡಿ ಅಧಿಕಾರಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ಪ್ರಕರಣ: ಪ್ರತಿಕ್ರಿಯಿಸಲು ವಿಳಂಬ ಮಾಡಿದ ಸಿಎಂ ಸೊರೇನ್‌ಗೆ ಜಾರ್ಖಂಡ್ ಹೈಕೋರ್ಟ್ ದಂಡ

ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ...

ಪತ್ರಕರ್ತರು, ನಾಗರಿಕರ ವಿರುದ್ಧ ವಿಶೇಷಾಧಿಕಾರ ಅಸ್ತ್ರ ಬೇಡ: ಸುಪ್ರೀಂಗೆ CPIM ನಾಯಕಿ ಸುಭಾಷಿಣಿ ಅಲಿ ಮನವಿ

ಶಾಸಕಾಂಗವನ್ನು ಟೀಕಿಸಿದ ಮಾತ್ರಕ್ಕೆ ಸಂಸತ್ ಸದಸ್ಯರಲ್ಲದ ನಾಗರಿಕರು ಅಥವಾ ಪತ್ರಕರ್ತರ ವಿರುದ್ಧ...

3,000 ಮದರಸಾಗಳ ನಿರ್ವಹಣೆ, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ರಾಜಸ್ಥಾನ ಹೈಕೋರ್ಟ್‌ ಸೂಚನೆ

ರಾಜಸ್ಥಾನದಲ್ಲಿ ಕಾರ್ಯಾಚರಿಸುತ್ತಿರುವ ಸುಮಾರು 3,000 ಮದರಸಾಗಳ ಪರಿಣಾಮಕಾರಿ ನಿರ್ವಹಣೆ, ಮೇಲ್ವಿಚಾರಣೆ ಹಾಗೂ...