‘ಹನಿಟ್ರ್ಯಾಪ್‌’ ಬಲೆಗೆ ಬಿದ್ದ ನ್ಯಾಯಾಂಗ ಅಧಿಕಾರಿ; 52 ಲಕ್ಷ ವಂಚಿಸಿದ ಆರೋಪಿಗೆ ಜಾಮೀನು ನಿರಾಕರಣೆ

Date:

ಟಿಂಡರ್ ಡೇಟಿಂಗ್ ಆ್ಯಪ್ ಮೂಲಕ ಹರಿಯಾಣದ ನ್ಯಾಯಾಂಗ ಅಧಿಕಾರಿಯೊಬ್ಬರನ್ನು ‘ಹನಿಟ್ರ್ಯಾಪ್’ ಮಾಡಿ 52.81 ಲಕ್ಷ ರೂಪಾಯಿಗೂ ಅಧಿಕ ಹಣ ದೋಚಿದ ರೋಚಕ ಪ್ರಕರಣವೊಂದರಲ್ಲಿ ಆರೋಪಿ ದೀಪಕ್ ವಾಟ್ಸ್‌ನ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದೆ.

- Advertisement -

ಈ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ನೈಜ ಸಂತ್ರಸ್ತರು ಒಬ್ಬ ನ್ಯಾಯಾಂಗ ಅಧಿಕಾರಿಯಾಗಿದ್ದರೂ, ತಮ್ಮ ಮುಜುಗರವನ್ನು ಮರೆಮಾಚಲು ಮನೆ ಕೆಲಸದಾಕೆಯ ಹೆಸರಿನಲ್ಲಿ ದೂರು ದಾಖಲಿಸಿರುವುದು ನ್ಯಾಯಾಲಯದ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಜೂನ್ 9 ರಂದು ನಡೆದ ವಿಚಾರಣೆಯಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸೌರಭ್ ಪ್ರತಾಪ್ ಸಿಂಗ್ ಲಾಲೇರ್ ಅವರು ಈ ಆದೇಶವನ್ನು ಹೊರಡಿಸಿದ್ದು, ನ್ಯಾಯವನ್ನು ಎತ್ತಿಹಿಡಿಯಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ನ್ಯಾಯಾಂಗ ಅಧಿಕಾರಿಯೊಬ್ಬರು ಸತ್ಯವನ್ನು ಮರೆಮಾಚಿ ತಮ್ಮ ಕೆಲಸದಾಕೆಯ ಹೆಸರಿನಲ್ಲಿ ನ್ಯಾಯಾಲಯದ ಮೆಟ್ಟಿಲೇರಿರುವುದು ತೀವ್ರ ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ, ಜನರ ಬದುಕನ್ನು ಸುಡುತ್ತಿರುವ ಬೆಂಕಿ ಕಾಣುವುದಿಲ್ಲವೇ? ರಾಜಕಾರಣಿಯೊಬ್ಬರ ಖಾಸಗಿ ಬದುಕಿನ ಬಗ್ಗೆ ಸುದ್ದಿ ಹೊರಬಿದ್ದರೆ ಸಾಕು; ಮಾಧ್ಯಮಗಳಲ್ಲಿ ಚರ್ಚೆಗಳ ಮಹಾಪೂರ. ಯಾರು...

ಬ್ರೆಜಿಲ್‌ನಲ್ಲಿ ʼಲೂಲಾʼ ಐತಿಹಾಸಿಕ ಗೆಲುವು: ನಾಗರಿಕ ಸಂಘಟನೆಗಳು ಚುನಾವಣೆಯ...

ಬ್ರೆಜಿಲ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ನಾಯಕ ಲೂಯಿಸ್ ಇನಾಸಿಯೊ ಲೂಲಾ ಡಿ ಸಿಲ್ವಾ ಅವರು ಅತ್ಯಂತ ಐತಿಹಾಸಿಕ ರೀತಿಯಲ್ಲಿ ಮರುಆಯ್ಕೆಯಾಗಿದ್ದಾರೆ. ಅಕ್ಟೋಬರ್ 25ರಂದು ನಡೆದ ಎರಡನೇ ಸುತ್ತಿನ ಮತದಾನದಲ್ಲಿ ಅವರು ಬಲಪಂಥೀಯ ಅಭ್ಯರ್ಥಿ...

ರಕ್ತಪಾತಕ್ಕೆ ಬೇಕಿದೆ ಪೂರ್ಣವಿರಾಮ: ಇಸ್ರೇಲ್ ಚುನಾವಣೆಯಲ್ಲಿ ಮೊಳಗಲಿದೆಯೇ ಶಾಂತಿಯ...

ಇಸ್ರೇಲ್ ದೇಶದ ಸಂಸತ್ತನ್ನು ‘ನೆಸೆಟ್’ (Knesset) ಎಂದು ಕರೆಯಲಾಗುತ್ತದೆ. ಇಲ್ಲಿನ ಚುನಾವಣಾ ವ್ಯವಸ್ಥೆಯು ಜಗತ್ತಿನ ಇತರ ದೇಶಗಳಿಗಿಂತ ಭಿನ್ನವಾಗಿದ್ದು, 'ಪ್ರಾತಿನಿಧಿಕ ವ್ಯವಸ್ಥೆ' (Proportional representation) ಅಡಿಯಲ್ಲಿ ನಡೆಯುತ್ತದೆ. ಅಂದರೆ, ಭಾರತದಂತೆ ಇಲ್ಲಿನ ಮತದಾರರು...

ಏನಿದು ಪ್ರಕರಣ?

ಕಳೆದ ಫೆಬ್ರವರಿಯಲ್ಲಿ ದೆಹಲಿ ಪೊಲೀಸರ ವಿಶೇಷ ದಳವು ಆರೋಪಿ ದೀಪಕ್ ವಾಟ್ಸ್‌ನನ್ನು ಬಂಧಿಸಿತ್ತು. ಸಂತ್ರಸ್ತ ಅಧಿಕಾರಿಯ ಮನೆ ಕೆಲಸದಾಕೆ ದೀಕ್ಷಾ ದೇವಿ ಹೆಸರಿನಲ್ಲಿ FIR ದಾಖಲಾಗಿದ್ದು, ಆನ್‌ಲೈನ್ ಡೇಟಿಂಗ್ ಆ್ಯಪ್ ಮೂಲಕ ತನಗೆ 52,81,999 ರೂ. ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಆದರೆ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನ್ಯಾಯಾಲಯಕ್ಕೆ ಅಸಲಿ ಸತ್ಯ ತಿಳಿದುಬಂದಿದ್ದು, ದೂರುದಾರೆ ದೀಕ್ಷಾ ದೇವಿ ಇಡೀ ಅವಧಿಯಲ್ಲಿ ಒಂದೇ ಒಂದು ಡಿಜಿಟಲ್ ಪಾವತಿಯನ್ನೂ ಮಾಡಿಲ್ಲ ಎಂಬುದು ಸಾಬೀತಾಗಿದೆ. ಕೇವಲ 5 ಲಕ್ಷ ರೂ. ನಗದು ಜಮಾವಣೆ ಹೊರತುಪಡಿಸಿ, ಉಳಿದೆಲ್ಲಾ ಲಕ್ಷಾಂತರ ರೂಪಾಯಿಗಳ ಡಿಜಿಟಲ್ ವಹಿವಾಟುಗಳು ನೇರವಾಗಿ ಹರಿಯಾಣದ ನ್ಯಾಯಾಂಗ ಅಧಿಕಾರಿಯ ಬ್ಯಾಂಕ್ ಖಾತೆಗಳಿಂದಲೇ ನಡೆದಿವೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ.

ಆರೋಪಿ ವಾಟ್ಸ್‌ನ ಪ್ರಕಾರ, ಆತ ಮತ್ತು ಹರಿಯಾಣದ ನ್ಯಾಯಾಂಗ ಅಧಿಕಾರಿ ಟಿಂಡರ್ ಆ್ಯಪ್ ಮೂಲಕ ಪರಿಚಿತರಾಗಿದ್ದರು. ಅಧಿಕಾರಿಯು ಆ್ಯಪ್‌ನಲ್ಲಿ ‘Altruistic Joy’ ಎಂಬ ಹೆಸರಿನ ಪ್ರೊಫೈಲ್ ಮೂಲಕ ಸಂವಹನ ನಡೆಸುತ್ತಿದ್ದರು. 2025ರ ನವೆಂಬರ್ 23ರಿಂದ ಇಬ್ಬರ ನಡುವೆ ಸಂಬಂಧ ಬೆಳೆದಿತ್ತು. ಮನರಂಜನೆಗಾಗಿ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಖಾತೆಗಳಿಗೆ ನ್ಯಾಯಾಧೀಶೆಯೇ ಸ್ವಯಂಪ್ರೇರಿತರಾಗಿ ಹಣ ವರ್ಗಾವಣೆ ಮಾಡಿದ್ದರು ಎಂದು ಆರೋಪಿ ವಾದಿಸಿದ್ದಾನೆ. ನ್ಯಾಯಾಲಯವು ಉಭಯತರ ವಾಟ್ಸಾಪ್ ಚಾಟ್‌ಗಳನ್ನು ಪರಿಶೀಲಿಸಿದ್ದು, ಅದು ಇಬ್ಬರು ವಯಸ್ಕರ ನಡುವಿನ ಅತ್ಯಂತ ಆಪ್ತ ಹಾಗೂ ವೈಯಕ್ತಿಕ ಸಂಬಂಧವನ್ನು ಬಿಂಬಿಸುತ್ತದೆ ಎಂದು ಹೇಳಿದೆ. ಮೊದಲು ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯ, ನಂತರ ಪ್ರೀತಿ ಮತ್ತು ಆಪ್ತತೆ ಬೆಳೆಸಿಕೊಂಡು ಬಳಿಕ ಹೂಡಿಕೆ ಅಥವಾ ಉಡುಗೊರೆಗಳ ಹೆಸರಿನಲ್ಲಿ ಹಣ ವಸೂಲಿ ಮಾಡುವ ಹನಿಟ್ರ್ಯಾಪ್ ಜಾಲದ ಎಲ್ಲಾ ಲಕ್ಷಣಗಳು ಈ ಪ್ರಕರಣದಲ್ಲಿ ಎದ್ದು ಕಾಣುತ್ತಿವೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಕೆಲಸದಾಕೆ ದೀಕ್ಷಾ ದೇವಿ ತನ್ನ ಬಳಿ 5 ಲಕ್ಷ ರೂ. ನಗದು ಇಟ್ಟುಕೊಂಡಿದ್ದಳು ಎಂಬ ವಾದವನ್ನು ನ್ಯಾಯಾಲಯ ಸಂಪೂರ್ಣವಾಗಿ ತಳ್ಳಿಹಾಕಿದೆ. ಈ ನಗದನ್ನು ಹರಿಯಾಣದ ನ್ಯಾಯಾಲಯದ ಪ್ಯೂನ್‌ ಒಬ್ಬರು ಬ್ಯಾಂಕ್‌ಗೆ ಬಂದು ಜಮೆ ಮಾಡಿದ್ದು, ಇದು ಸ್ಪಷ್ಟವಾಗಿ ನ್ಯಾಯಾಧೀಶೆಯ ಹಣವೇ ಹೊರತು ಕೆಲಸದಾಕೆಯದಲ್ಲ ಎಂದು ಕೋರ್ಟ್ ಹೇಳಿದೆ. ಅಲ್ಲದೆ, ತನಿಖಾಧಿಕಾರಿಯು ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸದೆ, ಕೇವಲ ದೂರಿನ ಆಧಾರದ ಮೇಲೆ ತನಿಖೆ ನಡೆಸಿರುವುದನ್ನು ನ್ಯಾಯಾಲಯ ತೀವ್ರವಾಗಿ ಟೀಕಿಸಿದೆ. ಸಂತ್ರಸ್ತೆಯ ಫೋನ್‌ನಿಂದ ವಾಟ್ಸಾಪ್ ಡೇಟಾ, ಟಿಂಡರ್ ಮಾಹಿತಿ ಅಥವಾ ಕಾಲ್ ರೆಕಾರ್ಡ್‌ಗಳನ್ನು ಕಲೆಹಾಕದಿರುವುದು ತನಿಖೆಯ ದೊಡ್ಡ ಲೋಪ ಎಂದು ಕೋರ್ಟ್ ಅಸಮಾಧಾನ ಹೊರಹಾಕಿದೆ.

ಇದನ್ನೂ ಓದಿ: ಮರ್ಯಾದಾಗೇಡು ಹತ್ಯೆ | ದಲಿತ ಯುವಕನಿಗೆ ರಾತ್ರಿಯಿಡೀ ಚಿತ್ರಹಿಂಸೆ ನೀಡಿ ಕೊಂದ ಮೇಲ್ಜಾತಿ ಜನ

ಮಹಿಳಾ ಅಧಿಕಾರಿಗೆ ಆಗಿರುವ ವೈಯಕ್ತಿಕ ಮುಜುಗರ ಮತ್ತು ವೃತ್ತಿಪರ ಸೂಕ್ಷ್ಮತೆಯನ್ನು ನ್ಯಾಯಾಲಯ ಒಪ್ಪಿಕೊಂಡಿದೆಯಾದರೂ, ಅದಕ್ಕಾಗಿ ಕ್ರಿಮಿನಲ್ ತನಿಖೆಯ ಸಮಗ್ರತೆಯನ್ನು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ನ್ಯಾಯಾಧೀಶೆಯು ಸ್ವತಃ ಬಂದು ತನಿಖಾಧಿಕಾರಿ ಅಥವಾ ಮ್ಯಾಜಿಸ್ಟ್ರೇಟ್ ಮುಂದೆ ಸಂಪೂರ್ಣ ಸತ್ಯವನ್ನು ದಾಖಲಿಸಬೇಕು ಎಂದು ಸೂಚಿಸಿದೆ. ಆರೋಪಿಯು 52 ಲಕ್ಷಕ್ಕೂ ಅಧಿಕ ಹಣ ಪಡೆದಿರುವುದು, ತನ್ನ ಮೊಬೈಲ್ ಪಾಸ್‌ವರ್ಡ್ ನೀಡದೆ ಸಾಕ್ಷ್ಯ ನಾಶಕ್ಕೆ ಯತ್ನಿಸುತ್ತಿರುವುದು ಮತ್ತು ತನಿಖೆ ಇನ್ನೂ ಬಾಕಿ ಇರುವುದನ್ನು ಪರಿಗಣಿಸಿ ನ್ಯಾಯಾಲಯ ಆತನಿಗೆ ಜಾಮೀನು ನೀಡಲು ನಿರಾಕರಿಸಿ, ಅರ್ಜಿಯನ್ನು ವಜಾಗೊಳಿಸಿದೆ.

WhatsApp Image 2025 05 16 at 6.54.26 PM
Sub Editor at Eedina.com | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ : ನಾಳೆ ಮತ ಎಣಿಕೆ, ಸಕಲ ಸಿದ್ಧತೆ ಪೂರ್ಣ

ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ನಾಳೆ...

ಭದ್ರಾವತಿ | ಜಯಂತಿಗಳ ರಜೆ ರದ್ದುಪಡಿಸಲು ಸರಕಾರದ ಗಮನ ಸೆಳೆಯುವೆ: ಶಾಸಕಿ ಶಾರದಾ ಪುರ್ಯಾನಾಯ್ಕ್

ಉಪನ್ಯಾಸಕರ ಅಭಿಪ್ರಾಯದಂತೆ ದಾರ್ಶನಿಕರ ಹೆಸರಲ್ಲಿ ನೀಡುವ ರಜೆಗಳನ್ನು ರದ್ದು ಪಡಿಸಿ ಶಾಲಾ...

ವಿಜಯಪುರ | ಮಾನವೀಯ ಮೌಲ್ಯಗಳ ಸಂದೇಶ ಸಾರಿದ ಮಹರ್ಷಿ ವಾಲ್ಮೀಕಿ: ಶಾಸಕ ವಿಠ್ಠಲ ಕಟಕಧೊಂಡ

ಮಹರ್ಷಿ ವಾಲ್ಮೀಕಿ ಅವರು ರಾಮಾಯಣದ ಮೂಲಕ ಭಾರತೀಯ ಸಾಹಿತ್ಯ, ಸಂಸ್ಕೃತಿ ಹಾಗೂ...