ಅನುದಾನ ಬೇಕಂದ್ರೆ ಬಿಜೆಪಿ ಸೇರಬೇಕಾ; ದಕ್ಷಿಣದ ರಾಜ್ಯಗಳಿಗೆ ಮೋದಿ ಕೊಟ್ರಾ ಎಚ್ಚರಿಕೆ?

Date:

ತೆಲಂಗಾಣ ರಾಜಕೀಯದಲ್ಲಿ ಈಗ ಹೊಸ ಚರ್ಚೆಯ ಕೇಂದ್ರಬಿಂದು ಆಗಿರುವುದು ಪ್ರಧಾನಿ Narendra Modi ಮತ್ತು ತೆಲಂಗಾಣ ಮುಖ್ಯಮಂತ್ರಿ A. Revanth Reddy ನಡುವಿನ ಮಾತುಕತೆ. ಪ್ರಧಾನಿ ನರೇಂದ್ರ ಮೋದಿ ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ನಡುವಿನ ಇತ್ತೀಚಿನ ವಾಕ್ಸಮರ ಮತ್ತು “ಮೇರೆ ಸೆ ಜೋಡೋ” (ನನ್ನೊಂದಿಗೆ ಸೇರಿ) ಎಂಬ ಹೇಳಿಕೆ ಭಾರತೀಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಹೈದರಾಬಾದ್‌ನಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭವು ಕೇವಲ ಸರ್ಕಾರಿ ಕಾರ್ಯಕ್ರಮವಾಗಿ ಉಳಿಯದೆ, ಕೇಂದ್ರ-ರಾಜ್ಯ ಸಂಬಂಧಗಳ ನಡುವಿನ ಸಂಘರ್ಷ ಮತ್ತು ಬಿಜೆಪಿಯ ರಾಜಕೀಯ ತಂತ್ರಗಾರಿಕೆಯನ್ನು ಪ್ರತಿಬಿಂಬಿಸುವ ವೇದಿಕೆಯಾಗಿ ಮಾರ್ಪಟ್ಟಿದೆ. ಈ ಘಟನೆಯನ್ನು ಆಳವಾಗಿ ವಿಶ್ಲೇಷಿಸಿದರೆ, ಇದರಲ್ಲಿ ಮರೆಮಾಚಲಾಗದ ಕೆಲವು ರಾಜಕೀಯ ಸತ್ಯಗಳು ಮತ್ತು ಕೇಂದ್ರದ ‘ಮಲತಾಯಿ ಧೋರಣೆ’ ಎದ್ದು ಕಾಣುತ್ತವೆ.

- Advertisement -
WhatsApp Image 2026 05 12 at 1.19.00 PM

ಘಟನೆಯ ಹಿನ್ನೆಲೆ: ಅಭಿವೃದ್ಧಿಯ ಹೆಸರಿನಲ್ಲಿ ರಾಜಕೀಯ ದಾಳ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಿವೀಸ್ ಕೋಟೆಯಲ್ಲಿ ಇತಿಹಾಸ ಬರೆಯುವತ್ತ ಶುಭಮನ್ ಗಿಲ್ ಪಡೆ:...

ನವೆಂಬರ್ 13 ಮತ್ತು 15ರಂದು ನಡೆಯಲಿರುವ ಕಿವೀಸ್ ವಿರುದ್ಧದ ನಾಲ್ಕು ಹಾಗೂ ಐದನೇ ಏಕದಿನ ಪಂದ್ಯಗಳಲ್ಲಿ ನಾಯಕ ಶುಭಮನ್ ಗಿಲ್ ಅವರ ನಾಯಕತ್ವದ ಕೌಶಲ ಮತ್ತೊಮ್ಮೆ ಒರೆಗಲ್ಲಿಗೆ ಹಚ್ಚಲ್ಪಡಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ...

ತುರ್ತುಪರಿಸ್ಥಿತಿ ಸರಿಯೇ- ತಪ್ಪೇ? ಸೋನಿಯಾ ತಮ್ಮ ಆತ್ಮಕಥೆಯಲ್ಲಿ ಏನಂತಾರೆ?

The Guardian ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತುರ್ತುಪರಿಸ್ಥಿತಿ ಘೋಷಣೆಯೇ ತಪ್ಪು ನಿರ್ಧಾರವಾಗಿತ್ತು ಎಂದು ಸೋನಿಯಾ ಅಭಿಪ್ರಾಯಪಟ್ಟಿದ್ದಾರೆ. ರಾಜೀವ್ ಗಾಂಧಿ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಮುಂದಿನ ಚುನಾವಣೆಯವರೆಗೆ ಕಾಯುವಂತೆ ಇಂದಿರಾ ಗಾಂಧಿಯವರಿಗೆ ಸಲಹೆ...

GMPL ಘಟಕದಿಂದ ಪರಿಸರಕ್ಕೆ ಕುತ್ತು: ಜನವಸತಿ ಪ್ರದೇಶದಲ್ಲಿ ವಿಷ...

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಬಜ್ಪೆ ಶಾಂತಿಗುಡ್ಡೆ ಪರಿಸರದ ಜನರು ಕೆಲವು ದಿನಗಳಿಂದ ಆತಂಕದಿಂದಲೇ ಬದುಕನ್ನು ಸಾಗಿಸುವಂತಾಗಿದೆ. ತಮ್ಮ ಪರಿಸರ ವಿಶೇಷ ಆರ್ಥಿಕ ವಲಯವಾಗಿದ್ದರೂ, ಪರಿಸರದ ಮನೆಗಳ ಅಂಗಳ, ಬಾವಿಗಳ ನೀರಿಗೂ...

ಹೈದರಾಬಾದ್‌ನ ಎಚ್‌ಐಸಿಸಿಯಲ್ಲಿ ಸುಮಾರು 9,377 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಸಿಎಂ ರೇವಂತ್ ರೆಡ್ಡಿ ಅವರು ಪ್ರಧಾನಿ ಮೋದಿ ಅವರಿಗೆ ಒಂದು ವಿಶೇಷ ಮನವಿ ಮಾಡಿದರು. ಗುಜರಾತ್ ಮಾದರಿಯನ್ನು ಉಲ್ಲೇಖಿಸಿದ ಅವರು, “ನೀವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ನಿಮಗೆ ಹೇಗೆ ಸಹಕಾರ ನೀಡಿದ್ದರೋ, ಹಾಗೆಯೇ ತೆಲಂಗಾಣದ ಅಭಿವೃದ್ಧಿಗೆ ನೀವು ಸಹಕರಿಸಬೇಕು” ಎಂದರು. ಅಲ್ಲದೆ, ತೆಲಂಗಾಣಕ್ಕೆ ಹೆಚ್ಚಿನ ಅನುದಾನ ನೀಡಿದರೆ ದೇಶದ ಜಿಡಿಪಿಗೆ (GDP) ರಾಜ್ಯವು ಶೇಕಡಾ 10 ರಷ್ಟು ಕೊಡುಗೆ ನೀಡಲು ಸಿದ್ಧವಿದೆ ಎಂಬ ಭರವಸೆಯನ್ನೂ ನೀಡಿದರು.

ರೇವಂತ್ ರೆಡ್ಡಿ ಅವರ ಈ ಮಾತುಗಳು ಅತ್ಯಂತ ತಾರ್ಕಿಕವಾಗಿದ್ದವು. ಫೆಡರಲ್ ವ್ಯವಸ್ಥೆಯಲ್ಲಿ ರಾಜ್ಯವೊಂದು ಕೇಂದ್ರದ ಮುಂದೆ ತನ್ನ ಹಕ್ಕುಗಳನ್ನು ಕೇಳುವುದು ಸಹಜ. ಆದರೆ, ಇದಕ್ಕೆ ಪ್ರಧಾನಿ ಮೋದಿ ನೀಡಿದ ಉತ್ತರವೇ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿರುವುದು.

“ನಮ್ಮ ಜೊತೆ ಬಂದ್ಬಿಡಿ”: ಇದು ಆಹ್ವಾನವೋ ಅಥವಾ ಎಚ್ಚರಿಕೆಯೋ?

ರೇವಂತ್ ರೆಡ್ಡಿ ಅವರ ಮನವಿಗೆ ಉತ್ತರಿಸಿದ ಪ್ರಧಾನಿ ಮೋದಿ, “ರೇವಂತ ಜೀ, ಕಳೆದ ಹತ್ತು ವರ್ಷಗಳಲ್ಲಿ ಗುಜರಾತ್ ಗೆ ಎಷ್ಟು ಕೊಟ್ಟಿದ್ದೇನೆಯೋ ನಿಮಗೂ ಅಷ್ಟು ಕೊಡಲು ನಾನು ತಯಾರಿದ್ದೇನೆ. ಆದರೆ ಹಂಗೆ ಕೊಟ್ಟಾಕ್ಷಣದಿಂದ ನಿಮಗೆ ಈಗ ಸಿಗ್ತಾ ಇರೋದು ಅರ್ಧ ಆಗಿಬಿಡ್ತದೆ ಅಥವಾ ಅರ್ಧದಷ್ಟು ಕಡಿಮೆ ಆಗ್ತದೆ. ನೀವು ಎಲ್ಲಿಗೆ ತಲುಪಲು ಬಯಸುತ್ತೀರೋ, ಅಲ್ಲಿಗೆ ತಲುಪಲಾರಿರಿ. ಹಿಂಗಾಗಿ ನಂಜೊತೆ ಬಂದ್ಬಿಡೋದೇ ಒಳ್ಳೇದು” ಅಂತ ಹೇಳಿದ್ದಾರೆ.  ಮೇಲ್ನೋಟಕ್ಕೆ ಇದು ಹಾಸ್ಯದಂತೆ ಕಂಡರೂ, ಇದರ ಹಿಂದೆ ಅಡಗಿರುವ ರಾಜಕೀಯ ಸಂದೇಶ ಅತ್ಯಂತ ಗಂಭೀರವಾದುದು.

https://www.facebook.com/share/v/1LYUYKYpzr/?mibextid=wwXIfr

ಮೋದಿಯವರ ಈ ಹೇಳಿಕೆಯಲ್ಲಿ ಎರಡು ಪ್ರಮುಖ ಆಯಾಮಗಳಿವೆ ̤ 

ಅನುದಾನದ ರಾಜಕೀಯ: ನೀವು ವಿರೋಧ ಪಕ್ಷದ (ಕಾಂಗ್ರೆಸ್) ಆಡಳಿತವಿರುವ ರಾಜ್ಯದಲ್ಲಿದ್ದರೆ ನಿಮಗೆ ಸಿಗಬೇಕಾದ ನ್ಯಾಯಸಮ್ಮತವಾದ ಅನುದಾನಗಳು ಸುಲಭವಾಗಿ ಸಿಗುವುದಿಲ್ಲ. ರಾಜ್ಯದ ಅಭಿವೃದ್ಧಿ ವೇಗವಾಗಿ ನಡೆಯಬೇಕೆಂದರೆ ನೀವು ಬಿಜೆಪಿ ಅಥವಾ ಕೇಂದ್ರ ಸರ್ಕಾರದ ನೆರಳಿನಲ್ಲೇ ಇರಬೇಕು ಎಂಬ ಪರೋಕ್ಷ ಸಂದೇಶ ಇಲ್ಲಿದೆ.

ಆಪರೇಷನ್ ಕಮಲದ ಸುಳಿವು: ದೇಶದಾದ್ಯಂತ ಚುನಾಯಿತ ಸರ್ಕಾರಗಳನ್ನು ಉರುಳಿಸಿ ಬಿಜೆಪಿ ಅಧಿಕಾರ ಹಿಡಿಯುವ ‘ಆಪರೇಷನ್ ಕಮಲ’ದ ಚಾಳಿ ಎಲ್ಲರಿಗೂ ತಿಳಿದಿದೆ. ಮೋದಿಯವರ “ನನ್ನ ಜೊತೆ ಸೇರಿ” ಎಂಬ ಮಾತು ರೇವಂತ್ ರೆಡ್ಡಿ ಅವರಿಗೆ ನೀಡಿದ ರಾಜಕೀಯ ಆಫರ್‌ನಂತೆ ಭಾಸವಾಗುತ್ತಿದೆ.

photo 6059993349520822770 y

ಕೇಂದ್ರದ ಮಲತಾಯಿ ಧೋರಣೆ ಮತ್ತು ಪ್ರಾದೇಶಿಕ ಅಸಮಾನತೆ

ಪ್ರಧಾನಿ ಮೋದಿಯವರ ಮಾತುಗಳು ಕೇಂದ್ರ ಸರ್ಕಾರವು ಬಿಜೆಪಿಯೇತರ ರಾಜ್ಯಗಳ ವಿರುದ್ಧ ಮಲತಾಯಿ ಧೋರಣೆ ತಳೆಯುತ್ತಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡುತ್ತವೆ. ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ಈಗಾಗಲೇ ಈ ಬಗ್ಗೆ ದನಿಯೆತ್ತಿವೆ.

ತೆರಿಗೆ ಹಂಚಿಕೆಯಲ್ಲಿ ಅನ್ಯಾಯ: ದಕ್ಷಿಣ ಭಾರತದ ರಾಜ್ಯಗಳು ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಪಾವತಿಸುತ್ತವೆಯಾದರೂ, ಬದಲಿಗೆ ಕೇಂದ್ರದಿಂದ ಸಿಗುವ ಪಾಲು ಅತ್ಯಲ್ಪ. ಕರ್ನಾಟಕವು ‘ನಮ್ಮ ತೆರಿಗೆ ನಮ್ಮ ಹಕ್ಕು’ ಎಂಬ ಘೋಷಣೆಯೊಂದಿಗೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಅನುದಾನ ತಡೆ: ಬರ ಪರಿಹಾರ ಇರಲಿ ಅಥವಾ ವಿಶೇಷ ಅಭಿವೃದ್ಧಿ ಪ್ಯಾಕೇಜ್‌ಗಳಿರಲಿ, ಬಿಜೆಪಿಯೇತರ ರಾಜ್ಯಗಳು ಕೇಂದ್ರದ ಮುಂದೆ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೋದಿಯವರು ರೇವಂತ್ ರೆಡ್ಡಿಗೆ “ನನ್ನ ಜೊತೆ ಸೇರಿ” ಎಂದು ಹೇಳುವ ಮೂಲಕ, “ನೀವು ನಮ್ಮವರಾದರೆ ಮಾತ್ರ ನಿಮಗೆ ಹಣ ಸಿಗುತ್ತದೆ” ಎಂಬ ಅಲಿಖಿತ ನಿಯಮವನ್ನು ಒಪ್ಪಿಕೊಂಡಂತಾಗಿದೆ.

ಗುಜರಾತ್ ಮಾದರಿ ಮತ್ತು ಇಂದಿನ ವಾಸ್ತವ

ರೇವಂತ್ ರೆಡ್ಡಿ ಅವರು ಮನಮೋಹನ್ ಸಿಂಗ್ ಕಾಲದ ಗುಜರಾತ್ ಅಭಿವೃದ್ಧಿಯನ್ನು ಉಲ್ಲೇಖಿಸಿದಾಗ, ಮೋದಿ ಅವರು “ಅಂದಿನ ಮಾದರಿ ಅನುಸರಿಸಿದರೆ ಈಗ ಸಿಗುತ್ತಿರುವ ಅನುದಾನದ ಅರ್ಧದಷ್ಟು ಮಾತ್ರ ನಿಮಗೆ ಸಿಗುತ್ತದೆ” ಎಂದು ವ್ಯಂಗ್ಯವಾಡಿದರು. ಆದರೆ ವಾಸ್ತವ ಏನೆಂದರೆ, ಯುಪಿಎ ಸರ್ಕಾರವಿದ್ದಾಗ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಮೋದಿಯವರಿಗೆ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರದ ಬೆಂಬಲ ಸಿಕ್ಕಿತ್ತು ಎಂಬುದನ್ನು ಸ್ವತಃ ಮೋದಿಯವರೇ ಹಲವು ಬಾರಿ ಈ ಹಿಂದೆ ಒಪ್ಪಿಕೊಂಡಿದ್ದರು. ಆದರೆ ಇಂದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ರಾಜ್ಯಗಳ ಸ್ವಾಯತ್ತತೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂಬುದು ವಿಪರ್ಯಾಸ.

photo 6059993349520822768 y

ಪ್ರಜಾಪ್ರಭುತ್ವಕ್ಕೆ ಒದಗಿದ ಸಂಕಷ್ಟ

ಒಬ್ಬ ಪ್ರಧಾನಿ ಬಹಿರಂಗ ವೇದಿಕೆಯಲ್ಲಿ ಮತ್ತೊಂದು ಪಕ್ಷದ ಮುಖ್ಯಮಂತ್ರಿಗೆ “ನನ್ನ ಜೊತೆ ಸೇರಿ” ಎಂದು ಹೇಳುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದುದು. ಇದು ಕೇವಲ ರಾಜಕೀಯ ಆಮಿಷವಲ್ಲ, ಬದಲಿಗೆ ಒಕ್ಕೂಟ ವ್ಯವಸ್ಥೆಗೆ ನೀಡಿದ ಪೆಟ್ಟು. ರಾಜ್ಯಗಳು ತಮ್ಮ ರಾಜಕೀಯ ಸಿದ್ಧಾಂತದ ಆಧಾರದ ಮೇಲೆ ಅಭಿವೃದ್ಧಿಯ ಫಲವನ್ನು ಪಡೆಯಬೇಕೆ ಹೊರತು, ಕೇಂದ್ರದಲ್ಲಿರುವ ಪಕ್ಷಕ್ಕೆ ಶರಣಾಗುವ ಮೂಲಕ ಅಲ್ಲ. ತೆಲಂಗಾಣದ ಜನತೆ ರೇವಂತ್ ರೆಡ್ಡಿ ಅವರ ಕಾಂಗ್ರೆಸ್ ಸರ್ಕಾರಕ್ಕೆ ಬಹುಮತ ನೀಡಿದ್ದಾರೆ. ಅಂತಹ ಜನಾದೇಶವನ್ನು ಗೌರವಿಸಿ ರಾಜ್ಯದ ಅಭಿವೃದ್ಧಿಗೆ ಸಹಕರಿಸುವುದು ಕೇಂದ್ರದ ಕರ್ತವ್ಯ. ಅದನ್ನು ಬಿಟ್ಟು ರಾಜಕೀಯ ಲಾಭಕ್ಕಾಗಿ ಮುಖ್ಯಮಂತ್ರಿಗಳಿಗೆ ಆಫರ್ ನೀಡುವುದು “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಎಂಬ ಘೋಷಣೆಗೆ ಮಾಡುವ ಅಪಮಾನವಾಗಿದೆ.

ಮೋದಿಯವರ ಈ ಹೇಳಿಕೆ ತೆಲಂಗಾಣದ ರಾಜಕೀಯದಲ್ಲಿ ಸಂಚಲನ ಮೂಡಿಸಿರುವುದು ಸುಳ್ಳಲ್ಲ.   ಇದು ರೇವಂತ್ ರೆಡ್ಡಿ ಅವರಿಗೆ ನೀಡಿದ ‘ಡೈರೆಕ್ಟ್ ಆಫರ್’ ಎಂದು ವಿಶ್ಲೇಷಿಸಲಾಗುತ್ತಿದೆ. ಒಂದು ವೇಳೆ ರೇವಂತ್ ರೆಡ್ಡಿ ಕೇಂದ್ರದ ನಿಲುವಿಗೆ ಬಗ್ಗದಿದ್ದರೆ, ಮುಂದಿನ ದಿನಗಳಲ್ಲಿ ತೆಲಂಗಾಣಕ್ಕೆ ನೀಡುವ ಅನುದಾನದಲ್ಲಿ ಮತ್ತಷ್ಟು ಕಡಿತ ಉಂಟಾಗುವ ಭೀತಿ ಇದೆ. ಒಟ್ಟಾರೆಯಾಗಿ, ಈ ಘಟನೆಯು ಭಾರತದ ಒಕ್ಕೂಟ ವ್ಯವಸ್ಥೆಯು ಎತ್ತ ಸಾಗುತ್ತಿದೆ ಎಂಬುದನ್ನ ಪ್ರಶ್ನಿಸುತ್ತಿದೆ. ಅಭಿವೃದ್ಧಿ ಎಂಬುದು ರಾಜಕೀಯ ಬಣ್ಣದ ಮೇಲೆ ನಿರ್ಧಾರವಾಗಬಾರದು. ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳನ್ನು ಸಮಾನವಾಗಿ ಕಾಣುವತ್ತ ಗಮನಹರಿಸದಿದ್ದರೆ, ಪ್ರಾದೇಶಿಕ ಅಸಮಾಧಾನ ಸ್ಫೋಟಗೊಂಡು ದೇಶದ ಐಕ್ಯತೆಗೆ ಧಕ್ಕೆ ತರುವ ಸಾಧ್ಯತೆ ಇದೆ. ರೇವಂತ್ ರೆಡ್ಡಿ ಅವರ ಮನವಿಗೆ ಮೋದಿಯವರು ನೀಡಿದ ‘ಆಫರ್’ ವ್ಯಂಗ್ಯವಲ್ಲ, ಅದು ಇಂದಿನ ಭಾರತದ ಕಟು ರಾಜಕೀಯ ವಾಸ್ತವ. ಭಾರತವನ್ನು ಏಕ ಭಾಷೆ, ಏಕ ಧರ್ಮ, ಏಕ ಸಂಸ್ಕೃತಿ, ಏಕ ಚುನಾವಣೆಯ ದೇಶದ ಜೊತೆಗೆ ಇದೀಗ ಏಕ ಪಕ್ಷದ ದೇಶ ಮಾಡುವ ಒಕ್ಕೂಟ ವಿರೋಧೀ, ಸರ್ವಾಧಿಕಾರೀ ಕುತಂತ್ರವಿದು.

WhatsApp Image 2025 09 25 at 3.16.47 PM e1758793879498
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾಗರಹೊಳೆ: ಜೇನುಕುರುಬ ಕುಟುಂಬಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ; ಸರ್ಕಾರದ ಕ್ರಮಕ್ಕೆ ಆದಿವಾಸಿಗಳ ಆಕ್ರೋಶ

ಕೊಡಗು ಮತ್ತು ಮೈಸೂರು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ‘ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ’ದಲ್ಲಿ...

ಹಾವೇರಿ | ನ.14ರಂದು ಜಿಲ್ಲಾ ಮಟ್ಟದ ಯುವ ಸಂಸತ್ತು ಅಧಿವೇಶನ

ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ...

ಕರ್ನಾಟಕದ ಜೈನ ಪರಂಪರೆಗೆ ಹಾವೇರಿಯ ಕೊಡುಗೆ ಅಪಾರ: ಡಾ. ಶಿವಯೋಗಿ ಆರ್ ಕೋರಿಶೆಟ್ಟರ್‌

ಕರ್ನಾಟಕದಲ್ಲಿ ಪ್ರತಿ ಐದು ಗ್ರಾಮಗಳಿಗೆ ಒಂದು ಜೈನಧರ್ಮಕ್ಕೆ ಸಂಬಂಧಿದ ಕುರುಹುಗಳು ದೊರೆಯುತ್ತವೆ....

ಸೌದಿ ಅರೇಬಿಯಾ: ವಿವಾಹೇತರ ಗರ್ಭಧಾರಣೆಗೆ ಕೀನ್ಯಾ ಮಹಿಳೆಗೆ 100 ಛಡಿಯೇಟಿನ ಶಿಕ್ಷೆ

ಸೌದಿ ಅರೇಬಿಯಾದಲ್ಲಿ ವಿವಾಹೇತರ ಸಂಬಂಧದಿಂದ ಮಗುವಿಗೆ ಜನ್ಮ ನೀಡಿದ ಕೀನ್ಯಾದ ಗೃಹ...