ಜೆಡಿಯು ನೂತನ ಅಧ್ಯಕ್ಷರಾಗಿ ನಿತೀಶ್ ಕುಮಾರ್ ನೇಮಕ ಸಾಧ್ಯತೆ

Date:

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಲಾಲನ್ ಸಿಂಗ್ ಅವರಿಗೆ ಜೆಡಿಯು ಅಧ್ಯಕ್ಷ ಸ್ಥಾನದಿಂದ ಕೋಕ್‌ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ 29ರಂದು ದೆಹಲಿಯಲ್ಲಿ ನಡೆಯಲಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಊಹಾಪೋಹಗಳ ಸುದ್ದಿಗಳ ಪ್ರಕಾರ ನಿತೀಶ್ ಕುಮಾರ್ ಅವರೇ ಪಕ್ಷದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪಕ್ಷದೊಳಗಿನ ಆಂತರಿಕ ಕಚ್ಚಾಟ ನಿವಾರಣೆಗೆ ನಿತೀಶ್ ಅವರೇ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬೇಕು ಎಂದು ಆಪ್ತರು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇಲ್ಲದಿದ್ದರೆ ಲಾಲನ್ ಸಿಂಗ್ ಬದಲಿಗೆ ಹೊಸ ಹೆಸರನ್ನು ಸೂಚಿಸಬಹುದು.

ನಿತೀಶ್ ಕುಮಾರ್ ಅವರು ಲಾಲನ್ ಸಿಂಗ್ ಅವರು ಕಾರ್ಯನಿರ್ವಹಿಸುತ್ತಿರುವ ರೀತಿ ಮತ್ತು ಮುಖ್ಯವಾಗಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಡಿಸಿಎಂ ತೇಜಸ್ವಿ ಯಾದವ್ ಅವರೊಂದಿಗೆ ಹೆಚ್ಚು ಆಪ್ತವಾಗಿರುವ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

2024 ರ ಲೋಕಸಭೆ ಚುನಾವಣೆಯಲ್ಲಿ ಮುಂಗಾರಿ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಲು ಲಾಲನ್ ಸಿಂಗ್ ಉತ್ಸುಕರಾಗಿದ್ದಾರೆ ಮತ್ತು ಅವರು ಆರ್‌ಜೆಡಿ ಟಿಕೆಟ್‌ನಲ್ಲಿ ಸ್ಪರ್ಧಿಸಬಹುದು ಎಂದು ವರದಿಗಳು ತಿಳಿಸಿವೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಕ್ಷಿ ಮಲಿಕ್‌ ʼಶೂʼಗಳು ಭಾರತದ ಆತ್ಮಸಾಕ್ಷಿಯನ್ನು ಅಣಕಿಸುವ ಸಂಕೇತವಾಗಿ ಉಳಿಯಲಿದೆ

ನಿತೀಶ್ ಅವರು ತಮ್ಮ ರಾಷ್ಟ್ರೀಯ ಮಹತ್ವಾಕಾಂಕ್ಷೆಗಳನ್ನು ಈಡೇರಿಸಲು ಇಂಡಿಯಾ ಒಕ್ಕೂಟದ ಪಾಲುದಾರರೊಂದಿಗೆ ಉತ್ತಮವಾಗಿ ಸಹಕರಿಸುವಲ್ಲಿ ವಿಫಲರಾದ ಲಾಲನ್ ಸಿಂಗ್ ಅವರೊಂದಿಗೆ ಅಸಮಾಧಾನಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಲಾಲನ್‌ ಸಿಂಗ್ ಅವರು ನಿತೀಶ್ ಅವರಿಗೆ ಅತ್ಯಂತ ನಿಕಟವಾಗಿದ್ದರೂ ಪಕ್ಷದ ಮುಖ್ಯಸ್ಥ ಸ್ಥಾನದಿಂದ ಕಿತ್ತೊಗೆಯಲ್ಪಟ್ಟರೆ, ಜಾರ್ಜ್ ಫರ್ನಾಂಡಿಸ್, ಶರದ್ ಯಾದವ್, ಆರ್‌ಸಿಪಿ ಸಿಂಗ್, ಉಪೇಂದ್ರ ಕುಶ್ವಾಹ ಮತ್ತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರಂತಹ ಪಕ್ಷದ ಇತರ ಹಿರಿಯ ನಾಯಕರ ಸಾಲಿಗೆ ಸೇರ್ಪಡೆಗೊಳ್ಳುತ್ತಾರೆ.

ಏತನ್ಮಧ್ಯೆ, ಇಂಡಿಯಾ ಒಕ್ಕೂಟದ ಇತ್ತೀಚಿನ ಸಭೆಯಲ್ಲಿ, ನಿತೀಶ್ ಅವರು ಜನವರಿಯೊಳಗೆ ಸೀಟು ಹಂಚಿಕೆ ವ್ಯವಸ್ಥೆಯನ್ನು ಅಂತಿಮಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದರು ಎಂದು ಜೆಡಿಯು ನಾಯಕರಾದ ಸಂಜಯ್ ಕುಮಾರ್ ಝಾ ತಿಳಿಸಿದ್ದಾರೆ.

“ಜನವರಿ ಒಳಗೆ ಸೀಟು ಹಂಚಿಕೆ ಪೂರ್ಣಗೊಳ್ಳಬೇಕು ಎಂದು ನಿತೀಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಎಲ್ಲ ಪಕ್ಷಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮದೊಂದಿಗೆ ಸಿದ್ದರಾಗಬೇಕು, ಏಕೆಂದರೆ  ಕೇಂದ್ರದ ವಿರುದ್ಧ ಹೋರಾಟ ನಡೆಸಲು ನಾವು ಪ್ರತಿ ಕಾರ್ಯತಂತ್ರ ರೂಪಿಸಿ ಪ್ರಚಾರಕ್ಕೆ ಧುಮುಕಬೇಕು” ಎಂದು ಸಂಜಯ್ ಕುಮಾರ್ ಝಾ ಹೇಳಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರಿಯಾಣ ಐಎನ್‌ಎಲ್‌ಡಿ ಅಧ್ಯಕ್ಷನ ಗುಂಡಿಕ್ಕಿ ಕೊಲೆ

ಅಪರಿಚಿತ ದುಷ್ಕರ್ಮಿಗಳು ಭಾರತ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ) ಹರಿಯಾಣ ಘಟಕದ ಅಧ್ಯಕ್ಷ...

ರಷ್ಯಾ | ಉಕ್ರೇನ್ ಸೇನೆ ದಾಳಿಯಿಂದ ಭಾರತೀಯ ಸಾವು; ದುರಂತ ಪ್ರತ್ಯಕ್ಷ ಕಂಡ ಕರ್ನಾಟಕದ ನಿವಾಸಿ

ರಷ್ಯಾ – ಉಕ್ರೇನ್ ಗಡಿಯಲ್ಲಿನ ದೊನೆಸ್ಟಕ್‌ನಲ್ಲಿ ಉಕ್ರೇನ್ ಕೈಗೊಂಡ ಡ್ರೋನ್ ದಾಳಿಯಲ್ಲಿ...

ನ್ಯಾಯ ಯಾತ್ರೆ | ಸೀಟು ಹಂಚಿಕೆಯಾದ ಬೆನ್ನಲ್ಲೇ ರಾಹುಲ್ ಜೊತೆ ಹೆಜ್ಜೆ ಹಾಕಿದ ಅಖಿಲೇಶ್

ಉತ್ತರ ಪ್ರದೇಶದ ಆಗ್ರಾ ಮೂಲಕ ಸಾಗುತ್ತಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್...

ಜೆ-ಕೆಯಲ್ಲಿ ಚುನಾವಣೆಗಳನ್ನು ಸುಪ್ರೀಂ ಕೋರ್ಟ್‌ ಘೋಷಿಸಬೇಕಿರೋದು ನಾಚಿಕೆಗೇಡಿನ ಸಂಗತಿ: ಒಮರ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಕುರಿತು ಚುನಾವಣಾ ಆಯೋಗಕ್ಕಿಂತ ಹೆಚ್ಚಾಗಿ ಸುಪ್ರೀಂ...