ಸದನ ಸುಗಮವಾಗಿ ನಡೆಯಲು ಪ್ರಧಾನಿ, ಗೃಹ ಸಚಿವರು ಹಾಜರಿರಬೇಕು: ಮಲ್ಲಿಕಾರ್ಜುನ ಖರ್ಗೆ

Date:

ಸಂಸತ್ತಿನ ಮುಂಗಾರು ಅಧಿವೇಶನ ಸುಗಮವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಕಡ್ಡಾಯವಾಗಿ ಸದನದಲ್ಲಿ ಹಾಜರಿರಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

- Advertisement -

ಅಯೋಧ್ಯೆ ರಾಮಮಂದಿರದ ದೇಣಿಗೆ ಕಳ್ಳತನದ ಆರೋಪ ಮತ್ತು ಸಿಜೆಪಿ ನೇತೃತ್ವದಲ್ಲಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದ ಕುರಿತು ಸರ್ಕಾರ ಹೇಳಿಕೆ ನೀಡಬೇಕು. ಉಭಯ ಸದನಗಳಲ್ಲಿ ಈ ಬಗ್ಗೆ ಚರ್ಚೆಗೆ ಸಭಾಪತಿ ಹಾಗೂ ಸ್ಪೀಕರ್ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10...

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ ಅದು ಆಗಿಲ್ಲ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಇನ್ನೂ ಅವಕಾಶವಿದೆ" ಎಂದು ಕೃಷಿ ಅಧಿಕಾರಿಗಳು ಹೇಳಿದರು. ಮುಂಗಾರು ಆರಂಭದಲ್ಲಿ ಉತ್ತಮ...

ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ...

ಹಿಮಾಲಯವು ಕೇವಲ ಮಂಜಿನ ಬೆಟ್ಟಗಳ ಸಮೂಹವಲ್ಲ; ಅದು ಭಾರತದ ಆರ್ಥಿಕ ಸ್ಥಿರತೆ, ಆಹಾರ ಭದ್ರತೆ ಮತ್ತು ಶಕ್ತಿ ಭದ್ರತೆಯ ತಾಣ. ಇಂದಿನ ಜಾಗತಿಕ ತಾಪಮಾನ ಏರಿಕೆಯ ಸವಾಲನ್ನು ಭಾರತವು ಕೇವಲ ಪರಿಸರ ಸಮಸ್ಯೆಯಾಗಿ...

ಈ ದಿನ ಕವಿತೆ | ಇಸ್ರೇಲಿನ ವಾಯುದಾಳಿಯ ರಾತ್ರಿಯಲಿ...

ಈ ಬಾರಿ ಪ್ಯಾಲೆಸ್ತೀನ್‌ನ ಕವಿ ಮೊಸಾಬ್ ಅಬು ತೋಹಾ ಅವರ ಕವನವನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ತಂದಿದ್ದಾರೆ ಸಿ ಎಚ್‌ ಭಾಗ್ಯ ಅವಳು ತನ್ನ ಹಾಸಿಗೆಯ ಸುತ್ತಾ ಇರುವ ಮಕ್ಕಳನ್ನು ಒಟ್ಟೈಸುವಳು.ಹೊಟೇಲ್ ಬಿಡುವ...

ಮಂದಿರ ನಿರ್ಮಾಣದ ಭೂಮಿಪೂಜೆಯಿಂದ ಪ್ರಾಣಪ್ರತಿಷ್ಠೆ ಸಮಾರಂಭದವರೆಗೆ ಪ್ರಧಾನಿಯವರು ಪ್ರತಿಯೊಂದು ಹಂತದಲ್ಲೂ ಭಾಗಿಯಾಗಿದ್ದಾರೆ. ಮಂದಿರದ ಟ್ರಸ್ಟ್‌ಗೆ ಸರ್ಕಾರವೇ 70 ಎಕರೆ ಭೂಮಿಯನ್ನು ಹಸ್ತಾಂತರಿಸಿದೆ. ಹೀಗಿರುವಾಗ, ದೇಣಿಗೆ ಕಳ್ಳತನದಂತಹ ಅತ್ಯಂತ ಗಂಭೀರ ಆರೋಪಗಳಿಂದ ಪ್ರಧಾನಿ ನುಣುಚಿಕೊಳ್ಳಲು ಸಾಧ್ಯವಿಲ್ಲ. ಕೇಂದ್ರದ ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆಗಳು ಈಗ ಎಲ್ಲಿವೆ? ಭಗವಾನ್ ರಾಮನ ಹೆಸರಿನಲ್ಲಿ ಲೂಟಿ ಮಾಡುವವರು ಇಡೀ ದೇಶದ ಕ್ಷಮೆಯಾಚಿಸಬೇಕು ಹಾಗೂ ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು ಎಂದು ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.

ಗೃಹ ಸಚಿವರು ಹೆದರಿದ್ದಾರೆಯೇ ಅಥವಾ ಉದ್ದೇಶಪೂರ್ವಕವಾಗಿ ಸದನವನ್ನು ಅವಮಾನಿಸಲು ಬಯಸಿದ್ದಾರೆಯೇ, ಇದೇ ಕಾರಣಕ್ಕೆ ಅವರು ಸದನಕ್ಕೆ ಬರುತ್ತಿಲ್ಲ ಎಂದು ಖರ್ಗೆ ಕಿಡಿಕಾರಿದರು.

ಇದೇ ವೇಳೆ, ಹಿರಿಯ ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಕೂಡ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು. ವಿರೋಧ ಪಕ್ಷಗಳ ಈ ಭಾರಿ ಪ್ರತಿಭಟನೆ ಹಾಗೂ ಗದ್ದಲದ ನಡುವೆ, ಮಂಗಳವಾರ ರಾಜ್ಯಸಭೆಯ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಸತತ ಎರಡನೇ ಬಾರಿಗೆ ಮುಂದೂಡಲಾಯಿತು.

ಯಾವುದೇ ಸಮರ್ಪಕ ಚರ್ಚೆಯಿಲ್ಲದೆ ಏಕಪಕ್ಷೀಯವಾಗಿ ಸಂಸತ್ತಿನಲ್ಲಿ ಮಸೂದೆಗಳನ್ನು ಅಂಗೀಕರಿಸಲಾಗುತ್ತಿರುವ ಬಗ್ಗೆ ಆಜಾದ್ ಸಮಾಜ ಪಾರ್ಟಿ ಸಂಸದ ಚಂದ್ರಶೇಖರ್ ಆಜಾದ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ನಿನ್ನೆಯ ಸುಪ್ರೀಂ ಕೋರ್ಟ್ ಸಾಂವಿಧಾನಿಕ ತಿದ್ದುಪಡಿ ಮಸೂದೆ 2026ರ ಕುರಿತು ಮಾತನಾಡಲು ತಮಗೆ ಅವಕಾಶ ಸಿಗಲಿಲ್ಲ. ವಿರೋಧ ಪಕ್ಷಗಳು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಬಯಸುತ್ತವೆ, ಆದರೆ ಮಹತ್ವದ ಸಲಹೆಗಳನ್ನು ಆಲಿಸದೆ ಮಸೂದೆಗಳನ್ನು ಏಕಾಏಕಿ ಅಂಗೀಕರಿಸಲಾಗುತ್ತಿದೆ ಎಂದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‌ಮೈಸೂರು ವಿವಿ ಸಂಜೆ ಕಾಲೇಜು: ಸಾಂಸ್ಕೃತಿಕ ಹಾಗೂ NSS ಚಟುವಟಿಕೆಗಳಿಗೆ ಚಾಲನೆ

ಮೈಸೂರು ವಿವಿ ಸಂಜೆ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಿತಿಯಿಂದ 2026-27ನೇ ಶೈಕ್ಷಣಿಕ...

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10 ದಿನಗಳಲ್ಲಿ ಘೋಷಣೆ – ಶಾಸಕ ಅಶೋಕ ಪಟ್ಟಣ

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ...

ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ ಭವಿಷ್ಯ!

ಹಿಮಾಲಯವು ಕೇವಲ ಮಂಜಿನ ಬೆಟ್ಟಗಳ ಸಮೂಹವಲ್ಲ; ಅದು ಭಾರತದ ಆರ್ಥಿಕ ಸ್ಥಿರತೆ,...

ಮಂಗಳೂರಿನಲ್ಲಿ ಕಿದ್ವಾಯಿ, ಜಯದೇವ ಆಸ್ಪತ್ರೆಗಳ ಶಾಖೆ ನಿರ್ಮಾಣಕ್ಕೆ ಸರ್ಕಾರ ಅಸ್ತು

"ಮಂಗಳೂರಿನಲ್ಲಿ ಕಿದ್ವಾಯಿ, ಜಯದೇವ ಆಸ್ಪತ್ರೆಗಳ ಶಾಖೆಗಳ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ...