ಬುಲ್ಡೋಜರ್‌ ರಾಜಕಾರಣಕ್ಕೆ ವಿದ್ಯಾರ್ಥಿಗಳ ಭವಿಷ್ಯ ಬಲಿ; ಜೌಹರ್‌ ವಿವಿಯಲ್ಲಿ ಆತಂಕದ ಕರಿ ನೆರಳು

Date:

ಜೌಹರ್ ವಿಶ್ವವಿದ್ಯಾಲಯವನ್ನು ರಕ್ಷಿಸುವುದೆಂದರೆ  ಮುಸ್ಲಿಮರ ಉನ್ನತ ಶಿಕ್ಷಣದ ಹಕ್ಕನ್ನು ರಕ್ಷಿಸುವ ಪ್ರಶ್ನೆಯಾಗಿದೆ. ಅದನ್ನು ಯಾವ ಕಾರಣಕ್ಕೂ ರಾಜಕೀಯಗೊಳಸಬಾರದು. ಕಟ್ಟಡವನ್ನು ಬೀಳಿಸುವ ಬದಲು ಬೇರೆ ಉಪಾಯಗಳನ್ನು ಯೋಚಿಸಬಹುದಲ್ಲವೇ?  ಒಂದೆರಡಲ್ಲ 38 ಕಟ್ಟಡಗಳನ್ನು ಬೀಳಿಸುವುದೆಂದರೆ ರಾಜಕೀಯ ಕುತಂತ್ರ, ಸೇಡು , ಮತ್ಸರ, ನೀಚತನವಲ್ಲದೇ ಮತ್ತೇನಿಲ್ಲ.   

- Advertisement -

ಇದೀಗ ಯುವ Gen Z ವಿದ್ಯಾರ್ಥಿಗಳ ಆಂದೋಲನಕ್ಕೆ ತಾತ್ಪೂರ್ತಿಕ ತೆರೆಬಿದ್ದಿದೆ. ಇದು ಆಂದೋಲನದ ಅಂತ್ಯವಲ್ಲ. ಹನ್ನೆರಡು ವರ್ಷಗಳಿಂದ ನನ್ನ ತಲೆಮಾರು ಕಾಯುತ್ತಿದ್ದ ಹಾಗೂ ಇದುವರೆಗೂ ಇದ್ದ ಫ್ಯಾಸಿಸ್ಟರ ಭಯದ ಗೋಡೆಯನ್ನು ಮುರಿದು ನಮ್ಮ ಯುವಪೀಳಿಗೆ ಹೊಸ ದಾರಿಯನ್ನು ನಮಗೆ ಕಾಣಿಸಿದ್ದಾರೆ. ಅದಕ್ಕಾಗಿ ಈ ಯುವಶಕ್ತಿಗೆ ಧನ್ಯವಾದಗಳನ್ನು ಹೇಳಲೇಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10...

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ ಅದು ಆಗಿಲ್ಲ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಇನ್ನೂ ಅವಕಾಶವಿದೆ" ಎಂದು ಕೃಷಿ ಅಧಿಕಾರಿಗಳು ಹೇಳಿದರು. ಮುಂಗಾರು ಆರಂಭದಲ್ಲಿ ಉತ್ತಮ...

ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ...

ಹಿಮಾಲಯವು ಕೇವಲ ಮಂಜಿನ ಬೆಟ್ಟಗಳ ಸಮೂಹವಲ್ಲ; ಅದು ಭಾರತದ ಆರ್ಥಿಕ ಸ್ಥಿರತೆ, ಆಹಾರ ಭದ್ರತೆ ಮತ್ತು ಶಕ್ತಿ ಭದ್ರತೆಯ ತಾಣ. ಇಂದಿನ ಜಾಗತಿಕ ತಾಪಮಾನ ಏರಿಕೆಯ ಸವಾಲನ್ನು ಭಾರತವು ಕೇವಲ ಪರಿಸರ ಸಮಸ್ಯೆಯಾಗಿ...

ಈ ದಿನ ಕವಿತೆ | ಇಸ್ರೇಲಿನ ವಾಯುದಾಳಿಯ ರಾತ್ರಿಯಲಿ...

ಈ ಬಾರಿ ಪ್ಯಾಲೆಸ್ತೀನ್‌ನ ಕವಿ ಮೊಸಾಬ್ ಅಬು ತೋಹಾ ಅವರ ಕವನವನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ತಂದಿದ್ದಾರೆ ಸಿ ಎಚ್‌ ಭಾಗ್ಯ ಅವಳು ತನ್ನ ಹಾಸಿಗೆಯ ಸುತ್ತಾ ಇರುವ ಮಕ್ಕಳನ್ನು ಒಟ್ಟೈಸುವಳು.ಹೊಟೇಲ್ ಬಿಡುವ...

ಅಗರ್ ಸಡಕೇಂ ಖಾಮೋಶ್ ಹೋ ಜಾಯೇ ತೋ ಸಂಸದ್ ಆವಾರಾ ಹೋ ಜಾತೀ ಹೈ – ರಸ್ತೆಗಳು ಮೌನವಾದರೆ  ಸಂಸತ್ತು ನಿರಂಕುಶವಾಗುತ್ತದೆ, ಅಂಕೆಯಿಲ್ಲದ ಗೂಳಿಯಂತಾಗುತ್ತದೆ.” ಎಂದಿದ್ದರು ಲೋಹಿಯಾ. ರಕ್ತವಿದೆ ಬೀದಿಯಲ್ಲಿ, ಬನ್ನಿ ನೋಡಿ ಬೀದಿಯಲ್ಲಿ ರಕ್ತವಿದೆ … ಎಂದಿದ್ದ ಚಿಲಿಯ ಪ್ರಸಿದ್ಧ ಕವಿ ಪ್ಯಾಬ್ಲೊ ನೆರುಡಾ. ಕವಿಯು ಯುದ್ಧದಿಂದ ನಾಶವಾದ ತನ್ನ ನಗರದ ಚಿತ್ರಣವನ್ನು ನೀಡುತ್ತಾನೆ.

ಹೂವುಗಳು ಹಾಗೂ ಮನೆಯ ನೆಮ್ಮದಿಯ ಬಗ್ಗೆ ಹಾಡುತ್ತಿದ್ದ ತನ್ನ ಕಾವ್ಯ ಈಗ ಬೀದಿಗಳಲ್ಲಿ ಹರಿದ ರಕ್ತ, ಬಾಂಬ್ ದಾಳಿಗಳು ಮತ್ತು ನಿರಪರಾಧಿಗಳ ಸಾವಿಗೆ ಸಾಕ್ಷಿಯಾಗಿದೆ ಎನ್ನುತ್ತಾನೆ. ಬನ್ನಿ ರಕ್ತವಿದೆ ಬೀದಿಯಲ್ಲಿ ನೋಡ ಬನ್ನಿ ಎಂದು ಜನರು ಹೊರಗೆ ಬಂದು ತಮ್ಮ ಕಣ್ಣುಗಳಿಂದಲೇ ಕ್ರೌರ್ಯವನ್ನು ನೋಡಬೇಕೆಂದು ಕರೆ ನೀಡುತ್ತಾನೆ. ದಿಲ್ಲಿಯ ಜಂತರ್ ಮಂತರ್ ಆಂದೋಲನ ಮತ್ತು ಜುಲೈ 20 ರ “ಸಂಸತ್ ಚಲೋ” ದಲ್ಲಿ ನಿರಾಯುಧರಾದ ಯುವಕರ ಮೇಲೆ ನಡೆದ ಮೊಳೆಯ ಲಾಠಿಯ ಬಳಕೆ, ಪೆಲೆಟ್ ದಾಳಿ ವ್ಯವಸ್ಥೆಯ ಸೋಲು ಮತ್ತು ಪೊಲೀಸರ ಕ್ರೌರ್ಯವನ್ನು ಇತಿಹಾಸದಲ್ಲಿ ದಾಖಲಿಸಿತು. ಜುಲೈ 20 ಈ ದೇಶದಲ್ಲಿ ಪ್ರಜಾಪ್ರಭುತ್ವ ಸತ್ತಿಲ್ಲ, ಜೀವಂತವಾಗಿದೆ ಎಂದು ತೋರಿಸಿಕೊಟ್ಟ ದಿನವಾಗಿ ಇತಿಹಾಸ ನೆನಪಿಟ್ಟುಕೊಳ್ಳುತ್ತದೆ.        

ಇದರ ಬೆನ್ನಲ್ಲೇ ಬಿಹಾರದಲ್ಲಿ ವಿದ್ಯಾರ್ಥಿಗಳ ಆಂದೋಲನ ತೀವ್ರಗೊಂಡಿತು. ಅಲ್ಲಿನ ಪ್ರತಿಭಟನೆಯಲ್ಲಿ ಗೂಂಡಾಗಳು ನುಸುಳಿ ದೊಂಬಿ  ಎಬ್ಬಿಸಿದ್ದಾರೆ. ಕಲ್ಲೆಸೆತ, ಸಾರ್ವಜನಿಕ ವಸ್ತುಗಳನ್ನು ಒಡೆಯುವ, ನಾಶಗೊಳಿಸುವುದರ ಮೂಲಕ ಆಂದೋಲನಕ್ಕೆ ಮಸಿಬಳಿಯುವ ಕೃತ್ಯದಲ್ಲಿ ತೊಡಗಿದ್ದರೆ ಒಬ್ಬ ಪೋಲೀಸ್ ವಿದ್ಯಾರ್ಥಿಗಳ ಮೇಲೆ  AK-47 ಬಳಿಸಿದ್ದಾನೆ.  ಮೂವರು ಯುವಕರು ಗಾಯಗೊಂಡಿದ್ದಾರೆ. ಸಿವಾನ್, ಸೀತಾಮಡ್ದಿ, ಪಟ್ನಾ, ಛಪ್ರಾ ಮುಂತಾದೆಡೆಗಳಲ್ಲಿ  ಐನೂರಕ್ಕೂ ಹೆಚ್ಚು ಯುವಕರನ್ನು ಬಂಧಿಸಿದರು. ಹಾಸ್ಟೆಲ್‌ಗಳಿಗೆ ನುಗ್ಗಿ ವಿದ್ಯಾರ್ಥಿಗಳನ್ನು ಎಳೆದೊಯ್ಯಲಾಯ್ತು. ವಿದ್ಯಾರ್ಥಿಗಳನ್ನು ಆತಂಕವಾದಿಗಳಂತೆ, ಅಪರಾಧಿಗಳಂತೆ  ನಡೆಸಿಕೊಳ್ಳುತ್ತಿರುವ ಸರಕಾರದ ನೀತಿಗೆ ಧಿಕ್ಕಾರವಿದೆ. ಸರಕಾರಿ ಆದೇಶವಿಲ್ಲದೇ ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ, ಬಂಧನ ನಡೆಸಲಾಗುತ್ತದೆಯೇ? ಈ ಎಕೆ 47 ಅಲ್ಲಿ ಬಂತಾದರೂ ಹೇಗೆ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಪ್ರಭುತ್ವವೇ ಕೊಡಬೇಕು.

ಇನ್ನು ಉತ್ತರ ಪ್ರದೇಶದಲ್ಲಿನ ರಾಂಪುರ್ ಜಿಲ್ಲೆಯಲ್ಲಿನ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಮುಖ್ಯದ್ವಾರದ ಎದುರು ಅನಿರ್ದಿಷ್ಟಾವಧಿಯ ಧರಣಿ ಆರಂಭಿಸಿದ್ದಾರೆ. ಅಲ್ಲಿಯೂ ಆಂದೋಲನ ನಡೆಯುತ್ತಿದೆ. ಅಲ್ಲಿಯೂ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟ ಆಡಲಾಗುತ್ತಿದೆ. ಸುಮಾರು 3000 ಸಾವಿರ ವಿದ್ಯಾರ್ಥಿಗಳು ಓದುತ್ತಿರುವ ವಿಶ್ವವಿದ್ಯಾಲಯದ 38 ಕಟ್ಟಡಗಳನ್ನು ಕೆಡವುದೆಂದರೇನು ಆಟವೇ? ಈ ಕೆಡುವುವ ಆದೇಶವನ್ನು ಹಿಂಪಡೆಯಬೇಕು ಹಾಗೂ ಜಿಲ್ಲಾ ಆಡಳಿತವು ವಿಶ್ವವಿದ್ಯಾಲಯದ ಹೊರಗೆ ಸ್ಥಾಪಿಸಿರುವ ಕೌನ್ಸೆಲಿಂಗ್ ಕೇಂದ್ರವನ್ನು ತೆರವುಗೊಳಿಸಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.  

Javhar vv

ಕೆಲವೇ ದಿನಗಳ ಹಿಂದೆ ರಾಂಪುರ್ ಅಭಿವೃದ್ಧಿ ಪ್ರಾಧಿಕಾರ (RDA), ಅಗತ್ಯ ಅನುಮತಿಗಳಿಲ್ಲದೆ ನಿರ್ಮಿಸಲಾಗಿದೆ ಎಂಬ ಆರೋಪದ ಮೇರೆಗೆ ವಿಶ್ವವಿದ್ಯಾಲಯದ 40 ಕಟ್ಟಡಗಳಲ್ಲಿ 38 ಕಟ್ಟಡಗಳನ್ನು ಕೆಡವಲು ಆದೇಶ ಹೊರಡಿಸಿದ್ದು ಆ ಕಟ್ಟಡಗಳನ್ನು ತೆರವುಗೊಳಿಸಲು ಆಗಸ್ಟ್ 5ರವರೆಗೆ ಸಮಯ ನೀಡಿತ್ತು. ಇದೀಗ ಬಂದ ಸುದ್ದಿಯ ಪ್ರಕಾರ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ 38 ಕಟ್ಟಡಗಳನ್ನು ಕೆಡವಲು ಹೊರಡಿಸಿದ್ದ ಆದೇಶದ ವಿರುದ್ಧ ಮೊರಾದಾಬಾದ್ ವಿಭಾಗೀಯ ಆಯುಕ್ತರು ಮಧ್ಯಂತರ ತಡೆ ನೀಡಿದ್ದಾರೆ. ಹಾಗೆಂದು ಸಮಸ್ಯೆ ಪರಿಹಾರವಾಯಿತು ಎಂದಲ್ಲ. 

ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿರುವ ವಿದ್ಯಾರ್ಥಿಗಳು “ಈ ಹೋರಾಟ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಉಳಿಸುವುದಕ್ಕಾಗಿ, ನಮ್ಮ ಶಿಕ್ಷಣ ಮತ್ತು ಭವಿಷ್ಯ ಅಪಾಯದಲ್ಲಿದೆ. ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂಬ ಕಾರಣಕ್ಕೆ ನಾವು ಧರಣಿ ಆರಂಭಿಸಿದ್ದೇವೆ. ಬೇರೆ ಕಾಲೇಜುಗಳಿಗೆ, ವಿಶೇಷವಾಗಿ ದೂರದ ಕಾಲೇಜುಗಳಿಗೆ ಹೋಗಿ ಓದುವುದು ನಮಗೆ ಸಾಧ್ಯವಿಲ್ಲ” ಎನ್ನುವುದು ನ್ಯಾಯಯುತವಾಗಿದೆ. 

“ಇದು ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟ. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಿದು. ಮೊದಲನೆಯದಾಗಿ ಯಾವುದೇ ಕಟ್ಟಡವನ್ನು ಕೆಡವಬಾರದು. ವಿದ್ಯಾರ್ಥಿಗಳನ್ನು ಬೇರೆಡೆ ಸೇರಿಸಲು ಆಡಳಿತವು ವಿಶ್ವವಿದ್ಯಾಲಯದ ಹೊರಗೆ ಕೌನ್ಸೆಲಿಂಗ್ ಕೇಂದ್ರವನ್ನು ಸ್ಥಾಪಿಸಿದೆ. ಅದನ್ನೂ ತೆರವುಗೊಳಿಸಬೇಕು. ನಾವು ಈ ವಿಶ್ವವಿದ್ಯಾಲಯವನ್ನು ತೊರೆಯಲು ಬಯಸುವುದಿಲ್ಲ. ಯಾಕೆಂದರೆ “ಇಲ್ಲಿ ನಮಗೆ ಶುಲ್ಕದಲ್ಲಿ ವಿಶೇಷ ರಿಯಾಯಿತಿಗಳಿವೆ. ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಶೇಕಡಾ 50 ರಷ್ಟು ಶುಲ್ಕ ವಿನಾಯಿತಿ ಸಿಗುತ್ತದೆ. ತಂದೆ-ತಾಯಿಯನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೂ ರಿಯಾಯಿತಿಗಳಿವೆ. ಬಿ.ಫಾರ್ಮಾ, ಡಿ.ಫಾರ್ಮಾ ಮುಂತಾದ ವೃತ್ತಿಪರ ಕೋರ್ಸ್‌ಗಳನ್ನು ನಾವು ಬೇರೆಡೆ ಓದುವುದು ಬಹುತೇಕರಿಗೆ ಸಾಧ್ಯವಿಲ್ಲ” ಎಂಬುದು ಅಲ್ಲಿನ ವಿದ್ಯಾರ್ಥಿಗಳ ಅಳಲು.  

ಒಂದು ವಿಡಿಯೋದಲ್ಲಿ ಒಬ್ಬ ಯುವತಿಯಂತೂ –“ವಿಶ್ವವಿದ್ಯಾಲಯವನ್ನು ಬೀಳಿಸಿದರೆ ತನ್ನ ವಿದ್ಯಾಭ್ಯಾಸ ನಿಂತುಹೋಗುತ್ತದೆ, ಮನೆಯವರು ಮದುವೆ ಮಾಡಿಬಿಡುತ್ತಾರೆ” ಎಂದು ರೋಧಿಸುತ್ತಿದ್ದುದನ್ನು ನೋಡಿ ಮನಕಲಕುತ್ತದೆ. 

ಮುಹಮ್ಮದ ಅಲಿ ಜೌಹರ್ ವಿಶ್ವವಿದ್ಯಾಲಯದ 38 ಕಟ್ಟಡಗಳನ್ನು ಬೀಳಿಸುವುದೆಂದರೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಬುಲ್ಡೋಜರ್ ನಡೆಸಿದಂತೆಯೇ.  ವಿದ್ಯಾರ್ಥಿಗಳನ್ನು ಬೇರೆಡೆ ಸ್ಥಳಾಂತರಿಸುತ್ತೇವೆ ಎನ್ನುವುದು ಕೂಡ  ಕಣ್ಣೀರು ಒರೆಸುವ ತಂತ್ರ. ಒಟ್ಟಿನಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಮುಸ್ಲಿಮರು ವಿದ್ಯಾವಂತರಾಗುವುದನ್ನು ಬಯಸುವುದಿಲ್ಲ” ಎಂಬುದನ್ನು ಸಾಬೀತಾಗುತ್ತಿದೆ. ಜೌಹರ್ ವಿಶ್ವವಿದ್ಯಾಲಯವನ್ನು ರಕ್ಷಿಸುವುದೆಂದರೆ  ಮುಸ್ಲಿಮರ ಉನ್ನತ ಶಿಕ್ಷಣದ ಹಕ್ಕನ್ನು ರಕ್ಷಿಸುವ ಪ್ರಶ್ನೆಯಾಗಿದೆ. ಅದನ್ನು ಯಾವ ಕಾರಣಕ್ಕೂ ರಾಜಕೀಯಗೊಳಸಬಾರದು. ಕಟ್ಟಡವನ್ನು ಬೀಳಿಸುವ ಬದಲು ಬೇರೆ ಉಪಾಯಗಳನ್ನು ಯೋಚಿಸಬಹುದಲ್ಲವೇ?  ಒಂದೆರಡಲ್ಲ 38 ಕಟ್ಟಡಗಳನ್ನು ಬೀಳಿಸುವುದೆಂದರೆ ಮೂರ್ಖತನವಲ್ಲದೇ , ರಾಜಕೀಯ ಕುತಂತ್ರ, ಸೇಡು, ಮತ್ಸರ, ನೀಚತನವಲ್ಲದೇ ಮತ್ತೇನಿಲ್ಲ.   

ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸ್ಪಂದಿಸದ ವಿದ್ಯಾರ್ಥಿಗಳ ಭವಿಷ್ಯವನ್ನು ಸುರಕ್ಷಿತವಾಗಿಡದ ಆಡಳಿತ ಯಾವುದಾಗಿದ್ದರೇನು ನಿಷ್ಪ್ರಯೋಜಕವೇ. ಇಲ್ಲಿ ಪ್ರಶ್ನೆ ಇರುವುದು ಈ ಆದೇಶವನ್ನು ಕೇವಲ ಕಟ್ಟಡ ನಿಯಮ ಉಲ್ಲಂಘನೆ  ಎಂದು ಮಾತ್ರ ನೋಡಬೇಕೆ ಎಂಬುದು.  ಹಾಗೆ ಓದಿದರೆ, ಅದರ ಸಾಮಾಜಿಕ ಮತ್ತು ರಾಜಕೀಯ ಆಯಾಮಗಳು ಮರೆಮಾಚಲ್ಪಡುತ್ತವೆ. ಕೆಲವರು ಮತ್ತು ಸ್ಥಳೀಯರು ಹೇಳುವಂತೆ ಇದು ರಾಜಕೀಯ ಪ್ರೇರಣೆಯಾಗಿದೆ ಎನ್ನುತ್ತಾರೆ. ಆಜಂ ಖಾನ್ ಅವರ ಮೇಲಿನ ಸೇಡಿನ ರಾಜಕೀಯ ಎನ್ನುತ್ತಾರೆ.

ಆಜಂ ಖಾನ್  ಕಾಲದಲ್ಲಿ ಸ್ಥಾಪಿಸಲಾದ ಈ ವಿಶ್ವವಿದ್ಯಾಲಯದ ನಿರ್ಮಾಣದಲ್ಲಿನ ಲೋಪದೋಷಗಳನ್ನು ಈಗ ಕೆದಕಿ ವಿದ್ಯಾರ್ಥಿಗಳ ಭವಿಷ್ಯದ ಬುಡಕ್ಕೆ ಕೊಡಲಿಯೇಟನ್ನು ಹಾಕಲು ಹೊರಟಿದೆ ಬುಲ್ಡೋಜರ್ ಖ್ಯಾತಿಯ ಯೋಗಿ ಸರ್ಕಾರ.  ಮತ್ತೊಂದೆಡೆ, ಯಾವುದೇ ನ್ಯಾಯಾಂಗ ಪರಿಶೀಲನೆಗೂ ಮುನ್ನ ಇದನ್ನು ಸಂಪೂರ್ಣವಾಗಿ ರಾಜಕೀಯ ಪ್ರತೀಕಾರ ಎಂದು ಘೋಷಿಸುವುದೂ ಸೂಕ್ತವಲ್ಲ. ಲಭ್ಯವಿರುವ ಮಾಹಿತಿಯ ಪ್ರಕಾರ, ಸರ್ಕಾರ ಕಟ್ಟಡಗಳಿಗೆ ಅಗತ್ಯ ಅನುಮೋದನೆಗಳಿರಲಿಲ್ಲ ಎಂದು ಹೇಳುತ್ತಿದ್ದರೆ, ವಿರೋಧ ಪಕ್ಷಗಳು ಮತ್ತು ವಿಶ್ವವಿದ್ಯಾಲಯದ ಬೆಂಬಲಿಗರು ಇದನ್ನು ರಾಜಕೀಯ ಉದ್ದೇಶದಿಂದ ಪ್ರೇರಿತ ಕ್ರಮ ಎಂದು ಆರೋಪಿಸುತ್ತಿದ್ದಾರೆ.

ಕೇವಲ ಇದು ಅಜಂ ಖಾನ್ ಅವರ ವಿಚಾರವಲ್ಲ. ಈ ಘಟನೆಯನ್ನು ಜಮ್ಮು-ಕಾಶ್ಮೀರದ ಶ್ರೀ ಮಾತಾ ವೈಷ್ಣೋದೇವಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಕ್ಸಲೆನ್ಸ್ (SMVDIME) ವಿವಾದದ ಹಿನ್ನೆಲೆಯಲ್ಲಿ ನೋಡಬಹುದು. NEET ಪರೀಕ್ಷೆಯ ಮೆರಿಟ್ ಆಧಾರದ ಮೇಲೆ ಆಯ್ಕೆಯಾದ ಮೊದಲ ತಂಡದ 50 MBBS ವಿದ್ಯಾರ್ಥಿಗಳಲ್ಲಿ 42 ಮುಸ್ಲಿಂ ವಿದ್ಯಾರ್ಥಿಗಳು, 7 ಹಿಂದೂ ಹಾಗೂ 1 ಸಿಖ್ ವಿದ್ಯಾರ್ಥಿ ಪ್ರವೇಶಾತಿ ಪಡೆದಿದ್ದರು. ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಸೀಟು ಸಿಕ್ಕಿರುವುದನ್ನು ವಿರೋಧಿಸಿ ಕೆಲವು ಸ್ಥಳೀಯ ಸಂಘಟನೆಗಳು ಹಾಗೂ ಬಲಪಂಥೀಯ ಗುಂಪುಗಳು ಧರಣಿ ನಡೆಸಿ ಕಾಲೇಜನ್ನು ಮುಚ್ಚುವಂತೆ ಆಗ್ರಹಿಸಿದ್ದವು.  

ಬಳಿಕ ರಾಷ್ಟ್ರೀಯ ವೈದ್ಯಕೀಯ ಆಯೋಗ ಮೂಲಸೌಕರ್ಯ ಮತ್ತು ನಿಯಂತ್ರಣ ಸಂಬಂಧಿತ ಕಾರಣಗಳನ್ನು ಉಲ್ಲೇಖಿಸಿ ಮಾನ್ಯತೆಯನ್ನು ಹಿಂತೆಗೆದುಕೊಂಡಿತು. ಧರ್ಮ ಎಂಬುದು ಅಫೀಮಿನಂತೆ ಎನ್ನುತ್ತಾರೆ. ಧರ್ಮಾಂಧರಾದ ಜನರಿಗೆ ಮಕ್ಕಳ ಭವಿಷ್ಯದ ಯಾವ ಚಿಂತೆಯೂ ಇಲ್ಲ. ಈ ಎಲ್ಲಾ ಪ್ರಕರಣಗಳು ಕಾನೂನಾತ್ಮಕವಾಗಿ ಭಿನ್ನವಾಗಿರಬಹುದು, ಆದರೆ ಎಲ್ಲಾ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯವೇ ಬಲಿಯಾಗುತ್ತಲಿದೆ.

“ಸಮಾಜವಾದಿ ಪಕ್ಷದ ಸರ್ಕಾರಕ್ಕೆ ವಿಶ್ವವಿದ್ಯಾಲಯವನ್ನು ಉಳಿಸುವ ಉದ್ದೇಶ ಇದ್ದಿದ್ದರೆ, ಭೂಮಿಯನ್ನು ಕಾನೂನುಬದ್ಧವಾಗಿ ವರ್ಗಾಯಿಸಬೇಕಿತ್ತು. ಹಾಗೆ ಮಾಡದೇ ವಿಶ್ವವಿದ್ಯಾಲಯ ಮುಂದುವರಿಯಲು ಅವಕಾಶ ನೀಡಿದ ಪರಿಣಾಮ, ಇಂದು ಅಜಂ ಖಾನ್ ಅದರ ಪರಿಣಾಮವನ್ನು ಅನುಭವಿಸುತ್ತಿದ್ದಾರೆ” ಎನ್ನುತ್ತವೆ ವರದಿಗಳು. ಉತ್ತರ ಪ್ರದೇಶ ನಗರ ಯೋಜನೆ ಮತ್ತು ಅಭಿವೃದ್ಧಿ ಕಾಯ್ದೆ–1973ರ ಸೆಕ್ಷನ್ 27ರಡಿ ಹೊರಡಿಸಲಾದ ಆದೇಶದಲ್ಲಿ, ವಿಶ್ವವಿದ್ಯಾಲಯವು 15 ದಿನಗಳೊಳಗೆ ಅನಧಿಕೃತ ಎಂದು ಗುರುತಿಸಲಾದ ಕಟ್ಟಡಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಅಭಿವೃದ್ಧಿ ಪ್ರಾಧಿಕಾರವೇ ಅವುಗಳನ್ನು ಕೆಡವುದಾಗಿ ಎಚ್ಚರಿಕೆ ನೀಡಿದೆ.

azam khan 2

ಮೊಹಮ್ಮದ್ ಅಲಿ ಜೌಹರ್ ಟ್ರಸ್ಟ್ ನಡೆಸುತ್ತಿರುವ ಈ ವಿಶ್ವವಿದ್ಯಾಲಯದ ಅಧ್ಯಕ್ಷ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್, ಪ್ರಸ್ತುತ ಜೈಲಿನಲ್ಲಿದ್ದಾರೆ. ಸಮಾಜವಾದಿ ಪಕ್ಷವು ಈ ಕೆಡವುವ ಕ್ರಮವನ್ನು ರಾಜಕೀಯ ಪ್ರತೀಕಾರದಿಂದ ಪ್ರೇರಿತವಾಗಿದೆ ಎಂದು ಆರೋಪಿಸಿದೆ. ಆದರೆ ಯೋಗಿ ಆಡಳಿತವು, ಇದು ನಗರ ಯೋಜನಾ ನಿಯಮಗಳ ಉಲ್ಲಂಘನೆಯ ಆಧಾರದ ಮೇಲೆ ಕೈಗೊಂಡ ಕಾನೂನು ಕ್ರಮ ಎಂದು ಸಮರ್ಥಿಸಿಕೊಂಡಿದೆ.

ಒಟ್ಟಾರೆ ಈ ಘಟನೆಯನ್ನು ವಿಶಾಲ ಸಾಮಾಜಿಕ-ರಾಜಕೀಯ ಹಿನ್ನೆಲೆಯಲ್ಲಿ ನೋಡಿದರೆ, ಒಂದು ಪ್ರಶ್ನೆ ಕಾಡುತ್ತದೆ: ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಉನ್ನತ ಶಿಕ್ಷಣ ಸಂಸ್ಥೆಗಳ ಭವಿಷ್ಯ ಎಷ್ಟು ಸುರಕ್ಷಿತವಾಗಿದೆ?  ಒಬ್ಬ ರಾಜಕಾರಣಿ ಅಥವಾ ಟ್ರಸ್ಟ್ ವಿರುದ್ಧ ಸರ್ಕಾರಕ್ಕೆ ಕ್ರಮ ಕೈಗೊಳ್ಳುವ ಅಧಿಕಾರವಿದ್ದರೆ, ಅದರ ಪರಿಣಾಮ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಏಕೆ ಬೀಳಬೇಕು?

ಒಂದು ವೇಳೆ ನಿರ್ಮಾಣದಲ್ಲಿ ಕಾನೂನು ಉಲ್ಲಂಘನೆಯಿದ್ದರೆ ಅದರ ವಿರುದ್ಧ ಕ್ರಮ ಅಗತ್ಯವಾಗಿ ತೆಗೆದುಕೊಳ್ಳಿ. ಆದರೆ 38 ಕಟ್ಟಡಗಳನ್ನು ಕೆಡವುವುದು ಎಲ್ಲಿಯ ನ್ಯಾಯ? ಕಾನೂನಿನ ಲೋಪವಿದ್ದರೆ ಸಂಬಂಧಪಟ್ತವರಿಗೆ ದಂಡ ಹಾಕಿ, ಇತರ ಕಾನೂನು ಪರಿಹಾರಗಳನ್ನು ಶೋಧಿಸಿ. ಆದರೆ ಕಟ್ಟಡವನ್ನು ಕೆಡವಿ ಮಕ್ಕಳ ಭವಿಷ್ಯವನ್ನು ಹೊಸಕುವುದು ನೈತಿಕವಾಗಿಯೂ ಸರಿಯಲ್ಲ.

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಕೇವಲ ಕಟ್ಟಡಗಳಲ್ಲ. ಅವು ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ ಮತ್ತು ಗೌರವಯುತ ಬದುಕಿನ ಬಾಗಿಲುಗಳಾಗಿವೆ. ಬಡ ಮುಸ್ಲಿಂ ಕುಟುಂಬಗಳಿಗೆ, ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಿಗೆ, ಶುಲ್ಕ ರಿಯಾಯಿತಿಗಳಿಂದ ಓದುತ್ತಿರುವವರಿಗೆ ಇಂತಹ ಸಂಸ್ಥೆಗಳು ಪರ್ಯಾಯವಿಲ್ಲದ ಅವಕಾಶಗಳನ್ನು ಒದಗಿಸುತ್ತವೆ.

ಇಲ್ಲಿ ಮೂಲ ಪ್ರಶ್ನೆ ಸಂವಿಧಾನದ 30ನೇ ವಿಧಿಯ ಆತ್ಮಕ್ಕೆ ಸಂಬಂಧಿಸಿದೆ. ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ನಿರ್ವಹಿಸುವ ಹಕ್ಕನ್ನು ಸಂವಿಧಾನ ಏಕೆ ನೀಡಿತು? ಏಕೆಂದರೆ ಶಿಕ್ಷಣವಿಲ್ಲದ ಸಮುದಾಯ ರಾಜಕೀಯವಾಗಿಯೂ, ಆರ್ಥಿಕವಾಗಿಯೂ ದುರ್ಬಲವಾಗುತ್ತದೆ. ಒಂದುವೇಳೆ ಬ್ರಿಟಿಷರು ಮಿಷನರಿಗಳನ್ನು ಸ್ಥಾಪಿಸದೇ ಹೋಗಿದ್ದರೆ ಅಂದು ಆರ್ಥಿಕವಾಗಿ ದುರ್ಬಲರಾಗಿದ್ದವರಿಗೆ, ಸಮಾಜದಲ್ಲಿ ಅಂಚಿಗೆ ದೂಡಲ್ಪಟ್ಟಿದ್ದ ತಳಸಮುದಾಯದವರಿಗೆ ಗಗನಕುಸುಮವಾಗಿದ್ದ ಶಿಕ್ಷಣ ಅವರಿಗೆ ಲಭಿಸುತ್ತಿತ್ತೇ? ಇಂತಹ ಸುಮನಸ್ಸು ನಮ್ಮ ಜನಗಳಿಗಿದೆಯೇ ?  

ಈ ಪ್ರಕರಣದ ಅಂತಿಮ ತೀರ್ಪು ನ್ಯಾಯಾಲಯ ಅಥವಾ ಸಂಬಂಧಿತ ಪ್ರಾಧಿಕಾರಗಳ ಕೈಯಲ್ಲಿದೆ. ಆದರೆ ಒಂದು ಪ್ರಜಾಪ್ರಭುತ್ವದಲ್ಲಿ ಶಿಕ್ಷಣ ಸಂಸ್ಥೆಗಳ ಕುರಿತು ತೆಗೆದುಕೊಳ್ಳುವ ಯಾವುದೇ ಕ್ರಮದಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿ ಮೊದಲ ಆದ್ಯತೆಯಾಗಬೇಕು. ಏಕೆಂದರೆ ಒಂದು ವಿಶ್ವವಿದ್ಯಾಲಯವನ್ನು ದುರ್ಬಲಗೊಳಿಸುವುದು ಕೇವಲ ಒಂದು ಕಟ್ಟಡವನ್ನು ಕಳೆದುಕೊಳ್ಳುವುದಲ್ಲ; ಒಂದು ಸಮುದಾಯದ ಮುಂದಿನ ಪೀಳಿಗೆಯ ಅವಕಾಶಗಳನ್ನು ಸೀಮಿತಗೊಳಿಸುವ ಅಪಾಯವೂ ಆಗಬಹುದು.

ಇದನ್ನೂ ಓದಿ ಈ ದಿನ ಸಂಪಾದಕೀಯ | ಬಾಂಕಿಪುರದಲ್ಲಿ ಬಿಜೆಪಿ ಸೋಲು, ಮುಂಬರುವ ದಿನಗಳ ಮುನ್ಸೂಚಿ?

ಸದ್ಯಕ್ಕೆ ನೆಲಸಮ ಆದೇಶಕ್ಕೆ ತಡೆಯೇನೋ ಬಂದಿದೆ, ಆದರೆ ಆಜಂ ಖಾನ್ ವಿರುದ್ಧದ ರಾಜಕೀಯದ ಬೆಲೆ ವಿದ್ಯಾರ್ಥಿಗಳೇಕೆ  ತೆರಬೇಕು?

ಆಜಂ ಖಾನ್ ತಪ್ಪಿತಸ್ಥರೇ ಅಥವಾ ಅಲ್ಲವೇ ಎಂಬುದನ್ನು ನ್ಯಾಯಾಲಯಗಳು ನಿರ್ಧರಿಸುತ್ತವೆ. ಆದರೆ ಒಂದು ವಿಷಯ ಸ್ಪಷ್ಟ: ವಿದ್ಯಾರ್ಥಿಗಳು ಆರೋಪಿಗಳಲ್ಲ. ಅವರ ಕನಸುಗಳು, ಪರಿಶ್ರಮ ಮತ್ತು ಭವಿಷ್ಯ ಯಾವುದೇ ರಾಜಕೀಯ ಸಂಘರ್ಷದ ಬಲಿಪಶುವಾಗಬಾರದು.

ಒಂದು ಸಂವೇದನಾಶೀಲ ಜವಾಬ್ದಾರಿಯುವ ಸರ್ಕಾರದ ಗುರಿ ಕಟ್ಟಡಗಳನ್ನು ಕೆಡವುವುದಲ್ಲ; ಭವಿಷ್ಯಗಳನ್ನು ಕಟ್ಟುವುದಾಗಿರಬೇಕು. ಕಾನೂನು ತನ್ನ ಕೆಲಸ ಮಾಡಲಿ. ಆದರೆ ನ್ಯಾಯವು ವಿದ್ಯಾರ್ಥಿಗಳ ಶಿಕ್ಷಣವನ್ನು ರಕ್ಷಿಸುವ ಮೂಲಕವೇ ಪೂರ್ಣವಾಗುತ್ತದೆ.

WhatsApp Image 2025 11 17 at 5.18.15 PM
ರೇಣುಕಾ ನಿಡಗುಂದಿ
+ posts

ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‌ಮೈಸೂರು ವಿವಿ ಸಂಜೆ ಕಾಲೇಜು: ಸಾಂಸ್ಕೃತಿಕ ಹಾಗೂ NSS ಚಟುವಟಿಕೆಗಳಿಗೆ ಚಾಲನೆ

ಮೈಸೂರು ವಿವಿ ಸಂಜೆ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಿತಿಯಿಂದ 2026-27ನೇ ಶೈಕ್ಷಣಿಕ...

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10 ದಿನಗಳಲ್ಲಿ ಘೋಷಣೆ – ಶಾಸಕ ಅಶೋಕ ಪಟ್ಟಣ

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ...

ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ ಭವಿಷ್ಯ!

ಹಿಮಾಲಯವು ಕೇವಲ ಮಂಜಿನ ಬೆಟ್ಟಗಳ ಸಮೂಹವಲ್ಲ; ಅದು ಭಾರತದ ಆರ್ಥಿಕ ಸ್ಥಿರತೆ,...

ಮಂಗಳೂರಿನಲ್ಲಿ ಕಿದ್ವಾಯಿ, ಜಯದೇವ ಆಸ್ಪತ್ರೆಗಳ ಶಾಖೆ ನಿರ್ಮಾಣಕ್ಕೆ ಸರ್ಕಾರ ಅಸ್ತು

"ಮಂಗಳೂರಿನಲ್ಲಿ ಕಿದ್ವಾಯಿ, ಜಯದೇವ ಆಸ್ಪತ್ರೆಗಳ ಶಾಖೆಗಳ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ...