ಎಲ್ ನಿನೋ ಪರಿಣಾಮ ಹೆಚ್ಚುತ್ತಿರುವ ನಡುವೆಯೂ, ಭಾರತದ ಮುಂಗಾರು ಜುಲೈ ತಿಂಗಳಲ್ಲಿ ನಿರೀಕ್ಷೆಗೂ ಮೀರಿದ ಚೇತರಿಕೆ ಕಂಡಿದೆ. ತಿಂಗಳ ಅಂತ್ಯದ ವೇಳೆಗೆ ಸಾಧಾರಣ ಮಟ್ಟದ ಮಳೆಯೂ ದಾಖಲಾಗಿದೆ. ಆದಾಗ್ಯೂ, ಆಗಸ್ಟ್ ತಿಂಗಳಿನಲ್ಲಿ ವಾಡಿಕೆಗಿಂತ ತೀರಾ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶುಕ್ರವಾರ, ಇಲಾಖೆಯು ಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ಆಗಸ್ಟ್‌ನಲ್ಲಿ ದೇಶಾದ್ಯಂತ ಸರಾಸರಿ ಮಳೆಯು ದೀರ್ಘಾವಧಿಯ ಸರಾಸರಿಯ (LPA) 94%ಕ್ಕಿಂತ ಕಡಿಮೆಯಾಗುವ ಸಾಧ್ಯತೆಯಿದೆ” ಎಂದು ಹೇಳಿದೆ.
ಜುಲೈನಲ್ಲಿ ಸರಾಸರಿಯ 94%ಗಿಂತ ಕಡಿಮೆ ಮಳೆಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದಾಗ್ಯೂ, ಜುಲೈ 30 ರ ವೇಳೆಗೆ, ಭಾರತದಲ್ಲಿ 270.1 ಮಿ.ಮೀ ಮಳೆ ದಾಖಲಾಗಿದೆ. ಇದು 271.9 ಮಿ.ಮೀ ನ ದೀರ್ಘಾವಧಿಯ ಸರಾಸರಿಗೆ ಸರಿಸಮವಾಗಿದೆ ಎಂದು ಇಲಾಖೆ ಹೇಳಿದೆ.



