ಪಶ್ಚಿಮ ಬಂಗಾಳ | ಮುಸ್ಲಿಮರೇ ಅಧಿಕವಾಗಿರುವ ಬೂತ್‌ನ 97% ಮತಗಳು ಬಿಜೆಪಿ ಪಾಲು!

Date:

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಇವೆಲ್ಲವುದಕ್ಕೂ ಕಾರಣ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬ ಆರೋಪವನ್ನು ವಿಪಕ್ಷಗಳು ನಿರಂತರವಾಗಿ ಮಾಡುತ್ತಲೇ ಬಂದಿದೆ. ಈ ಎಲ್ಲ ಆರೋಪಗಳ ನಡುವೆ ಬಿಜೆಪಿಗೆ ಈವರೆಗೆ ಸಿಗದ ಮತಗಳು ಈ ಬಾರಿ ಬಿಜೆಪಿ ಪಾಳಾಗಿರುವುದು ತೀವ್ರ ಅನುಮಾನವನ್ನು ಹುಟ್ಟಿಸಿದೆ.

- Advertisement -

ಸುಮಾರು 20 ಕ್ಷೇತ್ರಗಳಲ್ಲಿ ಐದು ಸಾವಿರಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ ಬಿಜೆಪಿ ಪೈಪೋಟಿ ನಡೆಸಿದೆ. ಆದರೆ ರಾಜರ್ಹತ್ ನ್ಯೂ ಟೌನ್ ಕ್ಷೇತ್ರದ ಚುನಾವಣೆಯಲ್ಲಿ ಮುಸ್ಲಿಮರೇ ಅಧಿಕವಾಗಿರುವ ಬೂತ್‌ನಲ್ಲಿ ಬಿಜೆಪಿಯೇ ಶೇ.97ರಷ್ಟು ಮತಗಳನ್ನು ಪಡೆದಿರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳದ ಸುಂದರಬನಗಳ ‘ವ್ಯಾಘ್ರ ವಿಧವೆ’ಯರ ನೆರಳು ಚುನಾವಣೆ ಮೇಲೆ ಚಾಚಿತೇ?

ತೀವ್ರ ಪೈಪೋಟಿ ಬಳಿಕ ಬಿಜೆಪಿಯ ಪಿಯೂಷ್ ಕನೋಡಿಯಾ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ತಪಶ್ ಚಟರ್ಜಿ ವಿರುದ್ಧ 316 ಮತಗಳ ಅತಿ ಕಡಿಮೆ ಅಂತರದಿಂದ ಗೆದ್ದಿದ್ದಾರೆ. ಒಟ್ಟಾರೆಯಾಗಿ, ಬಿಜೆಪಿ 207 ಸ್ಥಾನಗಳನ್ನು ಗೆದ್ದಿತು. ರಾಜರ್ಹತ್‌ನಲ್ಲಿ ಬಿಜೆಪಿ ಗೆದ್ದಿರುವುದು ಆಶ್ಚರ್ಯ ಹುಟ್ಟಿಸಿದೆ. ಯಾಕೆಂದರೆ ಅದು ಮುಸ್ಲಿಮರೇ ಅಧಿಕವಾಗಿರುವ ಬೂತ್. ಟಿಎಂಸಿ ರಾಜ್ಯಸಭಾ ಸಂಸದೆ ಸಾಗರಿಕಾ ಘೋಷ್ ಬಿಜೆಪಿ ಮತಗಳ್ಳತನ ಮಾಡಿದೆ ಎಂದು ಆರೋಪಿಸಿದ್ದಾರೆ.

“ಚುನಾವಣಾ ಆಯೋಗ, ವನೀಶ್ ಕುಮಾರ್ ಮತ್ತು ಸುಪ್ರೀಂ ಕೋರ್ಟ್ ಎಲ್ಲಿದೆ? ಅಂತಿಮ ಸುತ್ತಿನಲ್ಲಿ ಬಹುಪಾಲು ಮುಸ್ಲಿಂ ಮತಗಟ್ಟೆಯನ್ನು ಎಣಿಕೆ ಮಾಡಿದ ಬಳಿಕ 97% ಮತಗಳು ಬಿಜೆಪಿಗೆ ಹೋಗಿರುವುದು ಖಚಿತವಾಗಿದೆ. ರಾಜರ್ಹತ್ ನ್ಯೂ ಟೌನ್‌ನಲ್ಲಿ ಟಿಎಂಸಿಯೇ ಗೆಲ್ಲುತ್ತಿತ್ತು” ಎಂದು ಹೇಳಿದ್ದಾರೆ. (ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ಟೀಕಿಸಲು ವನೀಶ್ ಕುಮಾರ್ ಎಂದು ಹೇಳಲಾಗುತ್ತದೆ)

ಇನ್ನು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಕೂಡ ಇವಿಎಂ ದುರ್ಬಳಕೆಯ ಅನುಮಾನ ವ್ಯಕ್ತಪಡಿಸಿದ್ದಾರೆ. “ಮುಸ್ಲಿಂ ಬಹುಮತದ ಬೂತ್ ಬಿಜೆಪಿಗೆ 97% ಮತಗಳನ್ನು ನೀಡುತ್ತವೆ ಎಂಬುದು ಇವಿಎಂನಲ್ಲಿ ಎಡವಟ್ಟು ಮಾಡಿರುವ ಅಥವಾ ಇಸಿಐನ ರಿಟರ್ನಿಂಗ್ ಅಧಿಕಾರಿ ಇವಿಎಂ ದಾಖಲಿಸಿದ್ದಕ್ಕಿಂತ ಸಂಪೂರ್ಣವಾಗಿ ಭಿನ್ನವಾದ ಮತವನ್ನು ಘೋಷಿಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ” ಎಂದು ಭೂಷಣ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಏಪ್ರಿಲ್ 29ರಂದು ಎರಡನೇ ಹಂತದಲ್ಲಿ ಮತದಾನ ನಡೆದ ಉತ್ತರ ಕೋಲ್ಕತ್ತಾದ ರಾಜರಹತ್ ನ್ಯೂ ಟೌನ್‌ನಲ್ಲಿರುವ ಮುಸಲ್ಮಾನ್ ಪಾರಾದಲ್ಲಿರುವ ಬೂತ್ ಸಂಖ್ಯೆ 164 ವಿವಾದದ ಕೇಂದ್ರಬಿಂದುವಾಗಿದೆ. ಬೂತ್ ಸಂಖ್ಯೆ 165 ಕೂಡ ಈ ಪ್ರದೇಶದ ಭಾಗವಾಗಿದೆ. ಹೆಸರೇ ಸೂಚಿಸುವಂತೆ, ಮುಸಲ್ಮಾನ್ ಪಾರಾದಲ್ಲಿರುವ ಹೆಚ್ಚಿನ ಜನಸಂಖ್ಯೆ ಮುಸ್ಲಿಮರು. ಮುಸಲ್ಮಾನ್ ಪಾರಾದಲ್ಲಿರುವ ಎರಡು ಬೂತ್‌ಗಳ ಮತದಾರರು ಒಂದೇ ಮತದಾನ ಕೇಂದ್ರದಲ್ಲಿ (ಜಗದೀಶ್‌ಪುರ ಶಾಲೆ) ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಮೇ 4ರಂದು ಮತಗಳ ಎಣಿಕೆಯ ಸಮಯದಲ್ಲಿ, 9ನೇ ಸುತ್ತಿನ ಎಣಿಕೆಯ ಸಮಯದಲ್ಲಿ ಬೂತ್ ಸಂಖ್ಯೆ 164 ಅನ್ನು ಬಿಟ್ಟುಬಿಡಲಾಗಿದೆ ಎಂಬ ಆರೋಪವಿದೆ. ಈ ಬೂತ್‌ನ ಮತಗಳನ್ನು ಮರುದಿನ (ಮೇ 5) 18 ನೇ ಮತ್ತು ಅಂತಿಮ ಸುತ್ತಿನಲ್ಲಿ ಪ್ರತ್ಯೇಕವಾಗಿ ಎಣಿಸಲಾಗಿದೆ.

ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ ಚುನಾವಣೆ | ಓವೈಸಿಯೊಂದಿಗೆ ಕೈಜೋಡಿಸಿದ ಮಾಜಿ ಟಿಎಂಸಿ ನಾಯಕ

ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ಮತಗಟ್ಟೆ ಸಂಖ್ಯೆ 164 ರಲ್ಲಿ 656 ಮತಗಳು ಚಲಾವಣೆಯಾದವು. ಆಶ್ಚರ್ಯಕರವಾಗಿ, ಬಿಜೆಪಿ 637 ಮತಗಳನ್ನು ಮತ್ತು ಟಿಎಂಸಿ ಕೇವಲ ಐದು ಮತಗಳಷ್ಟೇ ಸಿಕ್ಕಿದೆ. ಅಂದರೆ ಈ ಬೂತ್‌ನಲ್ಲಿ ಚಲಾವಣೆಯಾದ ಮತಗಳಲ್ಲಿ ಬಿಜೆಪಿ 97% ಅನ್ನು ಪಡೆದುಕೊಂಡಿದೆ. 637ರಲ್ಲಿ 558 ಮತಗಳು ಮುಸ್ಲಿಮರದ್ದಾಗಿದ್ದವು. ಇದರರ್ಥ ಬೂತ್ 164 ರಲ್ಲಿ ಸುಮಾರು 88% ಮುಸ್ಲಿಮರು ಬಿಜೆಪಿಗೆ ಮತ ಹಾಕಿದ್ದರು ಎಂದಾಗುತ್ತದೆ. ಆದರೆ ವಿಪಕ್ಷಗಳು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.

ಬಿಜೆಪಿ ಐತಿಹಾಸಿಕವಾಗಿ ಮುಸ್ಲಿಂ ಮತಗಳನ್ನು ಪಡೆಯಲು ಹೆಣಗಾಡಿದೆ ಎಂಬುದು ರಹಸ್ಯವಲ್ಲ, ಅದರಲ್ಲೂ ವಿಶೇಷವಾಗಿ ಬಂಗಾಳದಲ್ಲಿ. ಹಿಂದಿನ ಮಾದರಿಯನ್ನು ನೋಡಿದಾಗ ಬಿಜೆಪಿ ರಾಜ್ಯದ ಮುಸ್ಲಿಂ ಮತಗಳಲ್ಲಿ ಕೇವಲ 4-7% ಮಾತ್ರ ಪಡೆದುಕೊಂಡಿದೆ. ತೃಣಮೂಲ ಪಕ್ಷವು ಸುಮಾರು 70-75% ಮತಗಳನ್ನು ಪಡೆದುಕೊಂಡಿದೆ. 2011ರಲ್ಲಿ ಟಿಎಂಸಿ ಅಧಿಕಾರಕ್ಕೆ ಬಂದಾಗಿನಿಂದ ಇದೇ ರೀತಿ ನಡೆಯುತ್ತಿದೆ. ಆದರೆ 2026ರ ಚುನಾವಣೆಯಲ್ಲಿ ನಡೆದಿದ್ದೇ ಬೇರೆ.

ಒಂದು ವಿಶ್ಲೇಷಣೆಯ ಪ್ರಕಾರ, ಮುಸ್ಲಿಂ ಬಹುಸಂಖ್ಯಾತರಿರುವ 142 ಸ್ಥಾನಗಳಲ್ಲಿ ಬಿಜೆಪಿ 72 ಮತ್ತು ತೃಣಮೂಲ ಕಾಂಗ್ರೆಸ್ 64 ಸ್ಥಾನಗಳನ್ನು ಗೆದ್ದಿದೆ. ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಸೋಲಿಗೆ ಇದು ಪ್ರಮುಖ ಅಂಶವಾಗಿತ್ತು. ಆದರೆ ರಾಜರ್ಹತ್ ನ್ಯೂ ಟೌನ್ ಕ್ಷೇತ್ರದಲ್ಲಿನ ಒಂದು ಮತಗಟ್ಟೆ ಬಗ್ಗೆ ಚರ್ಚೆ ಹೆಚ್ಚಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಕೆ-ಸೆಟ್ ಪರೀಕ್ಷೆ ಪಾರದರ್ಶಕತೆಗೆ ಕಟ್ಟುನಿಟ್ಟಿನ ಕ್ರಮ: ಡಾ. ಔದ್ರಾಮ

ಅ. 11ರಂದು ನಡೆಯಲಿರುವ ಕೆ-ಸೆಟ್ ಪರೀಕ್ಷೆಯನ್ನು ಪಾರದರ್ಶಕ ಹಾಗೂ ಅಚ್ಚುಕಟ್ಟಾಗಿ ನಡೆಸಲು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು ಸಾಧ್ಯವಲ್ಲವೇ?

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ...

ಕ್ಯಾನ್ಸರ್ ರೋಗಿಗಳಿಗೆ ಗುಡ್‌ನ್ಯೂಸ್‌; ದುಬಾರಿ ಔಷಧಗಳ ಬೆಲೆ ಶೇ.70ರವರೆಗೆ ಇಳಿಕೆ?

ದೇಶದಲ್ಲಿ ದುಬಾರಿಯಾಗಿರುವ ಕೆಲವು ಕ್ಯಾನ್ಸರ್ ಔಷಧಗಳ ಬೆಲೆ ಶೀಘ್ರದಲ್ಲೇ ಭಾರಿ ಪ್ರಮಾಣದಲ್ಲಿ...