ಉತ್ತರ ಪ್ರದೇಶ| ಮಗುವಿನ ಲಿಂಗ ಪತ್ತೆ ಹಚ್ಚಲು ಪತ್ನಿಯ ಹೊಟ್ಟೆ ಸೀಳಿದ್ದ ಪತಿಗೆ ಜೀವಾವಧಿ ಶಿಕ್ಷೆ

Date:

ಉತ್ತರ ಪ್ರದೇಶದ ಬದೌನ್‌ನಲ್ಲಿ ಭ್ರೂಣದ ಲಿಂಗವನ್ನು ಪರೀಕ್ಷಿಸಲು ತನ್ನ ಎಂಟು ತಿಂಗಳ ಗರ್ಭಿಣಿ ಪತ್ನಿಯ ಹೊಟ್ಟೆಯನ್ನು ಸೀಳಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

- Advertisement -

ಬದೌನ್‌ನ ಸಿವಿಲ್ ಲೈನ್ಸ್‌ನ ನಿವಾಸಿಯಾಗಿರುವ ಆರೋಪಿ ಪನ್ನಾ ಲಾಲ್ ಸೆಪ್ಟೆಂಬರ್ 2020ರಲ್ಲಿ ತನ್ನ ಪತ್ನಿ ಅನಿತಾ ಮೇಲೆ ಹಲ್ಲೆ ನಡೆಸಿದ್ದ. ದಂಪತಿಗೆ ಐದು ಹೆಣ್ಣು ಮಕ್ಕಳಿದ್ದು ಗಂಡು ಮಗು ಬೇಕು ಎಂಬ ಕಾರಣಕ್ಕೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಪನ್ನಾ ಲಾಲ್ ತಮ್ಮ ಹೆಣ್ಣು ಮಕ್ಕಳಿಗೆ ನಿತ್ಯ ಕಿರುಕುಳ ನೀಡುತ್ತಿದ್ದು, ಹೆಣ್ಣು ಮಕ್ಕಳಿಗೆ ಮಾತ್ರ ಜನ್ಮ ನೀಡುತ್ತಿರುವುದೇಕೆ, ಗಂಡು ಮಗುವನ್ನು ಕೂಡಾ ಹೆರು ಎಂದು ಪತ್ನಿಗೆ ಹಿಂಸೆ ನೀಡುತ್ತಿದ್ದ ಎಂದು ಅನಿತಾ ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನು ಓದಿದ್ದೀರಾ?  ಬೀದರ್‌ | ಪತ್ನಿ ಕೊಲೆಗೈದ ಆರೋಪಿ ಪತಿಗೆ ಜೀವಾವಧಿ ಶಿಕ್ಷೆ

ಹಲವಾರು ಬಾರಿ ಅನಿತಾ ಕುಟುಂಬವು ಪನ್ನಾ ಲಾಲ್‌ ಜೊತೆ ಜಗಳವಾಡದಂತೆ ಮನವಿ ಮಾಡಿದ್ದಾರೆ. ಆದರೆ ಪನ್ನಾ ಲಾಲ್ ವಿಚ್ಛೇದನ ನೀಡುವುದಾಗಿ ಮತ್ತು ಗಂಡು ಮಗುವಿಗಾಗಿ ಬೇರೆ ಮಹಿಳೆಯನ್ನು ಮದುವೆಯಾಗುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.

ಮಗುವಿನ ಲಿಂಗದ ಬಗ್ಗೆ ದಂಪತಿಗಳ ನಡುವೆ ವಾಗ್ವಾದ ನಡೆದಿದ್ದು ಈ ಸಂದರ್ಭದಲ್ಲಿ ಪನ್ನಾ ಲಾಲ್ ಮಗು ಗಂಡೋ ಹೆಣ್ಣೋ ಎಂದು ತಾನೇ ನೋಡುವುದಾಗಿ ಹೇಳಿ ಪತ್ನಿಯ ಹೊಟ್ಟೆಯನ್ನು ಸೀಳಿದ್ದಾನೆ. ದಾಳಿಯಿಂದ ಅನಿತಾ ಕರುಳಿಗೆ ಗಾಯವಾಗಿದ್ದು, ಗರ್ಭಪಾತವಾಗಿದೆ.

ಇದನ್ನು ಓದಿದ್ದೀರಾ?  ಮಂಗಳೂರು| ರಾಜು ಕೋಟ್ಯಾನ್ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಚಿಂತಾಜನಕ ಸ್ಥಿತಿಯಲ್ಲಿದ್ದ ಅನಿತಾಳನ್ನು ಬರೇಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಸಂಬಂಧಿಕರು ಪನ್ನಾ ಲಾಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸೌರಭ್ ಸಕ್ಸೇನಾ ಅವರು ಪನ್ನಾ ಲಾಲ್‌ಗೆ ಜೀವಾವಧಿ ಶಿಕ್ಷೆ ಮತ್ತು 50,000 ರೂಪಾಯಿ ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ಯಾನೂ ವಿರುದ್ಧ ಪ್ರತಿಭಟನೆ: ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಬಂಧನ

ದೆಹಲಿಯಲ್ಲಿ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಭಾನುವಾರವೂ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿ, ಯುವತಿಯರ ಮೇಲೆ ಹಲ್ಲೆ; ನಾಲ್ವರು RSS ಗೂಂಡಾಗಳ ಬಂಧನ

ದೆಹಲಿಯಲ್ಲಿ ನಡೆದ 'ಕಾಕ್ರೋಚ್ ಜನತಾ ಪಾರ್ಟಿ' (CJP) ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು...

ದೆಹಲಿ ಈಗ ‘ಡಿಟೆನ್ಷನ್ ಸ್ಟೇಟ್’ – ಪ್ರತಿಭಟನಾಕಾರರ ಬಂಧನಕ್ಕೆ ಸಂಸದ ಸಂಜಯ್ ರಾವತ್ ಆಕ್ರೋಶ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್...