ಕೆಲಸದ ಅವಧಿ ಬಳಿಕ ಕರೆಗಳು, ಇಮೇಲ್‌ಗಳಿಗೆ ಉತ್ತರಿಸಬೇಕಾಗಿಲ್ಲ: ಸಂಪರ್ಕ ಕಡಿತ ಹಕ್ಕು ಮಸೂದೆ ಹೇಳುವುದೇನು?

Date:

ಅಧಿಕೃತ ಕೆಲಸದ ಅವಧಿಯ ಬಳಿಕ ಕೆಲಸಕ್ಕೆ ಸಂಬಂಧಿಸಿದ ಕರೆಗಳು, ಇಮೇಲ್‌ಗಳಿಗೆ ಉತ್ತರಿಸದಿರಲು ಅವಕಾಶ ನೀಡುವ ಸಂಪರ್ಕ ಕಡಿತ ಹಕ್ಕು ಮಸೂದೆಯನ್ನು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಲೆ ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಿದ್ದಾರೆ.

- Advertisement -

12 ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಬಗ್ಗೆ ಚರ್ಚೆಗೆ ಆಗ್ರಹಿಸಿ ಗದ್ದಲದ ನಡುವೆಯೂ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಲಾಗಿದೆ. ಈ ಕಾಯ್ದೆಯು ಅಧಿಕೃತ ಕೆಲಸದ ಸಮಯದ ಬಳಿಕ ಮತ್ತು ರಜಾದಿನಗಳಲ್ಲಿ ಕೆಲಸಕ್ಕೆ ಸಂಬಂಧಿಸಿದ ಕರೆಗಳು, ಸಂದೇಶಗಳು ಮತ್ತು ಇಮೇಲ್‌ಗಳನ್ನು ನಿರಾಕರಿಸುವ ಕಾನೂನುಬದ್ಧ ಹಕ್ಕನ್ನು ನೀಡುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಿವೀಸ್ ಕೋಟೆಯಲ್ಲಿ ಇತಿಹಾಸ ಬರೆಯುವತ್ತ ಶುಭಮನ್ ಗಿಲ್ ಪಡೆ:...

ನವೆಂಬರ್ 13 ಮತ್ತು 15ರಂದು ನಡೆಯಲಿರುವ ಕಿವೀಸ್ ವಿರುದ್ಧದ ನಾಲ್ಕು ಹಾಗೂ ಐದನೇ ಏಕದಿನ ಪಂದ್ಯಗಳಲ್ಲಿ ನಾಯಕ ಶುಭಮನ್ ಗಿಲ್ ಅವರ ನಾಯಕತ್ವದ ಕೌಶಲ ಮತ್ತೊಮ್ಮೆ ಒರೆಗಲ್ಲಿಗೆ ಹಚ್ಚಲ್ಪಡಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ...

ತುರ್ತುಪರಿಸ್ಥಿತಿ ಸರಿಯೇ- ತಪ್ಪೇ? ಸೋನಿಯಾ ತಮ್ಮ ಆತ್ಮಕಥೆಯಲ್ಲಿ ಏನಂತಾರೆ?

The Guardian ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತುರ್ತುಪರಿಸ್ಥಿತಿ ಘೋಷಣೆಯೇ ತಪ್ಪು ನಿರ್ಧಾರವಾಗಿತ್ತು ಎಂದು ಸೋನಿಯಾ ಅಭಿಪ್ರಾಯಪಟ್ಟಿದ್ದಾರೆ. ರಾಜೀವ್ ಗಾಂಧಿ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಮುಂದಿನ ಚುನಾವಣೆಯವರೆಗೆ ಕಾಯುವಂತೆ ಇಂದಿರಾ ಗಾಂಧಿಯವರಿಗೆ ಸಲಹೆ...

GMPL ಘಟಕದಿಂದ ಪರಿಸರಕ್ಕೆ ಕುತ್ತು: ಜನವಸತಿ ಪ್ರದೇಶದಲ್ಲಿ ವಿಷ...

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಬಜ್ಪೆ ಶಾಂತಿಗುಡ್ಡೆ ಪರಿಸರದ ಜನರು ಕೆಲವು ದಿನಗಳಿಂದ ಆತಂಕದಿಂದಲೇ ಬದುಕನ್ನು ಸಾಗಿಸುವಂತಾಗಿದೆ. ತಮ್ಮ ಪರಿಸರ ವಿಶೇಷ ಆರ್ಥಿಕ ವಲಯವಾಗಿದ್ದರೂ, ಪರಿಸರದ ಮನೆಗಳ ಅಂಗಳ, ಬಾವಿಗಳ ನೀರಿಗೂ...

ಇದನ್ನು ಓದಿದ್ದೀರಾ? ಸಾಮಾಜಿಕ – ಶೈಕ್ಷಣಿಕ ಸಮೀಕ್ಷೆಯ ಅವಧಿ ವಿಸ್ತರಣೆ; ಶಾಲಾ ಸಮಯಯೂ ಬದಲಾವಣೆ

ಏನಿದು ಸಂಪರ್ಕ ಕಡಿತ ಹಕ್ಕು ಮಸೂದೆ?

ಪ್ರಸ್ತುತ ಹಲವು ಸಂಸ್ಥೆಗಳಲ್ಲಿ ಕೆಲಸದ ಸಮಯದ ನಂತರ ಅಥವಾ ರಜಾದಿನಗಳಲ್ಲಿ ಕೆಲಸಕ್ಕೆ ಸಂಬಂಧಿಸಿಕ ಕರೆಗಳು, ಇಮೇಲ್‌ಗಳಿಗೆ ಪ್ರತಿಕ್ರಿಯಿಸುವುದು ಕಡ್ಡಾಯವಾಗಿದೆ. ಆದರೆ ಈ ರೀತಿ ಪ್ರತಿಕ್ರಿಯಿಸಲು ಒತ್ತಾಯಿಸಬಾರದು ಎಂದು ಈ ಮಸೂದೆ ಹೇಳುತ್ತದೆ. ಕರೆಗಳನ್ನು ನಿರಾಕರಿಸುವ ಹಕ್ಕನ್ನು ಈ ಮಸೂದೆ ನೀಡುತ್ತದೆ

  • ಕೆಲಸದ ಅವಧಿ ಬಳಿಕ ಕರೆಗಳು, ಇಮೇಲ್‌ಗಳು ಅಥವಾ ಸಂದೇಶಗಳಿಗೆ ಉದ್ಯೋಗಿಗಳು ಉತ್ತರಿಸಬೇಕಾಗಿಲ್ಲ.
  • ಪ್ರತಿಕ್ರಿಯಿಸಲು ನಿರಾಕರಿಸಿದರೆ ಯಾವುದೇ ಉದ್ಯೋಗಿ ಶಿಸ್ತು ಕ್ರಮವನ್ನು ಆ ಉದ್ಯೋಗಿಯ ಮೇಲೆ ಕೈಗೊಳ್ಳುವಂತಿಲ್ಲ.
  • ಅಗತ್ಯವಿದ್ದರೆ, ಉದ್ಯೋಗದಾತರು ಮತ್ತು ಉದ್ಯೋಗಿಗಳು ತುರ್ತು ಸಂಪರ್ಕ ನಿಯಮಗಳ ಬಗ್ಗೆ ಪರಸ್ಪರ ಒಪ್ಪಿಗೆ ಮಾಡಿಕೊಳ್ಳಬಹುದು.
  • ಈ ಹಕ್ಕನ್ನು ಉಲ್ಲಂಘಿಸುವ ಸಂಸ್ಥೆಗಳಿಗೆ ಒಟ್ಟು ಉದ್ಯೋಗಿ ಸಂಭಾವನೆಯ ಶೇಕಡ 1ರಷ್ಟು ದಂಡ ವಿಧಿಸಲು ಕಾಯ್ದೆ ಅವಕಾಶ ನೀಡುತ್ತದೆ.

ತುರ್ತು ಸಂಪರ್ಕ ನಿಯಮಗಳು ಏನು ಹೇಳುತ್ತದೆ?

ಉದ್ಯೋಗಿಗಳ ವೈಯಕ್ತಿಕ ಸಮಯವನ್ನು ರಕ್ಷಿಸುವ ಮಸೂದೆಯು ನಿಜವಾದ ತುರ್ತು ಪರಿಸ್ಥಿತಿಗಳನ್ನು ಪರಿಹರಿಸಲು ಒಂದು ಕಾರ್ಯವಿಧಾನವನ್ನು ಸಹ ಪ್ರಸ್ತಾಪಿಸುತ್ತದೆ. ಕೆಲಸದ ಸಮಯದ ಬಳಿಕ ಉದ್ಯೋಗಿಗಳನ್ನು ಸಂಪರ್ಕಿಸಲು ಪರಸ್ಪರ ಒಪ್ಪಂದ ಮಾಡಿದ ನಿಯಮಗಳನ್ನು ರೂಪಿಸಲು ಸಮಿತಿಯನ್ನು ರಚಿಸಲು ಈ ಮಸೂದೆ ಅವಕಾಶ ನೀಡುತ್ತದೆ. ಸಾಮಾನ್ಯ ಉದ್ಯೋಗ ಅವಧಿಗಿಂತ ಹೆಚ್ಚುವರಿ ಕೆಲಸ ಮಾಡಿದರೆ ಅಧಿಕಾವಧಿ ವೇತನಕ್ಕೆ ಅರ್ಹರಾಗಿರಬೇಕು ಎಂದು ಮಸೂದೆಯು ಹೇಳುತ್ತದೆ.

ಪ್ರಸ್ತುತ ಉದ್ಯೋಗದ ಒತ್ತಡದಿಂದಾಗಿ ಹಲವು ಮಂದಿ ನಿದ್ರಾಹೀನತೆ, ಒತ್ತಡ, ಮಾನಸಿಕ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಜನರ ಆರೋಗ್ಯದ ಮೇಲೆಯೂ ಪ್ರಭಾವ ಬೀರುತ್ತಿದೆ. ಈ ನಿಟ್ಟಿನಲ್ಲಿ ಮಸೂದೆ ಅತ್ಯಗತ್ಯ ಎಂದು ಸುಪ್ರಿಯಾ ಸುಲೆ ಹೇಳಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಚಹಾ ಸವಿದಿದ್ದ ಅಯೋಧ್ಯೆಯ ಮೀರಾ ಮಾಂಝಿ ಕುಟುಂಬವೀಗ ಸಾಲದ ಸುಳಿಯಲ್ಲಿ; ಬ್ಯಾಂಕ್‌ನಿಂದ ನೋಟಿಸ್‌

2023ರ ಡಿಸೆಂಬರ್ 30ರಂದು ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 'ಉಜ್ವಲ ಯೋಜನೆ'ಯ...

ಯುಎಪಿಎ ಅಡಿ 6 ವರ್ಷ ಜೈಲುವಾಸ; ಇಬ್ಬರು ಯುವಕರನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಿದ ಜೆ-ಕೆ ಕೋರ್ಟ್‌

ಜಮ್ಮು ಮತ್ತು ಕಾಶ್ಮೀರದಲ್ಲಿ ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ’ (ಯುಎಪಿಎ) ಅಡಿಯಲ್ಲಿ...

‘ದಾಂಪತ್ಯವು ಮೌಲ್ಯ, ಭಾವನೆ, ವೈಫಲ್ಯಗಳ ಸಮ್ಮಿಶ್ರಣ’: ಪತಿಯ ವಿಚ್ಛೇದನ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ದಾಂಪತ್ಯ ಸಂಬಂಧಗಳು ಮಾನವೀಯ ಮೌಲ್ಯಗಳು, ಭಾವನೆಗಳು ಹಾಗೂ ವ್ಯಕ್ತಿಗತ ವೈಫಲ್ಯಗಳ ಸಂಕೀರ್ಣ...