ನಾಲ್ಕು ವರ್ಷ ನಾಪತ್ತೆಯಾಗಿದ್ದ ಅನಂತಕುಮಾರ್‌ ಹೆಗಡೆ ಈಗ ಬುಸುಗುಟ್ಟುತ್ತಿರುವುದೇಕೆ?

Date:

ಅನಂತಕುಮಾರ ಹೆಗಡೆ ಎಂಬ ಮನುಷ್ಯ ವಿರೋಧಿ ವ್ಯಕ್ತಿ, ಸಿದ್ದರಾಮಯ್ಯನವರಿಗೆ ‘ಮಗನೇ’ ಎಂಬ ಅವಾಚ್ಯ ಶಬ್ದ ಬಳಸಿರುವುದು ಅತ್ಯಂತ ಹೇಯ ಕೃತ್ಯ

ಭಾರತದ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಮತ್ತೊಂದು ಚುನಾವಣೆ ಬಂದಿದೆ. ಈ ಸಂದರ್ಭದಲ್ಲಿ ಅಧಿಕಾರ ದಾಹಿಗಳು ಏನಾದರೂ ಮಾಡಿ ಮತ್ತೊಮ್ಮೆ ಅಧಿಕಾರ ಹಿಡಿಯಲೇಬೇಕೆಂದು ಅಸಂಬದ್ಧ, ಜನಹಿತವಲ್ಲದ, ಜನರಲ್ಲಿ ದ್ವೇಷ, ಅಸೂಹೆ ಹುಟ್ಟು ಹಾಕುವ, ದೇಶದ ಸಂವಿಧಾನದ ಆಶಯದ ವಿರುದ್ದ ಯುವಕರಲ್ಲಿ ದ್ವೇಷ ಭಾವನೆ ಉಂಟು ಮಾಡುವಂತಹ ಹೇಳಿಕೆಗಳನ್ನು ನೀಡಲು ತಾಮುಂದು, ನಾಮುಂದು ಎಂದು ಮುಗಿಬಿದ್ದಿದ್ದಾರೆ.

ಕರ್ನಾಟಕದಲ್ಲಿ ಮತೀಯ ಭಾವನೆ ಕೆರಳಿಸುವಂತಹ ಹೇಳಿಕೆಗಳ ಮೂಲಕವೇ ಮನೆ ಮಾತಾಗಿರುವ ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ, ಸುನೀಲ್ ಕುಮಾರ, ಅನಂತಕುಮಾರ ಹೆಗಡೆ, ಬಸನಗೌಡ ಪಾಟೀಲ್ ಯತ್ನಾಳರಂತಹ ಮುಖಂಡರು ದಿನನಿತ್ಯ ಒಂದು ಸಮುದಾಯದ ವಿರುದ್ದ ನಿರಂತರ ಹೇಳಿಕೆಗಳನ್ನು ನೀಡುತ್ತ, ಕಾಂಗ್ರೆಸ್ ಪಕ್ಷವನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಏನೆಲ್ಲ ಸಾಧ್ಯವೋ ಅದೆಲ್ಲವನ್ನೂ ಮಾಡುತ್ತಿದ್ದಾರೆ. ಅದರ ಮೂಲಕ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅನಂತಕುಮಾರ ಹೆಗಡೆ ಕಳೆದ ನಾಲ್ಕು ವರ್ಷಗಳಲ್ಲಿ ಒಮ್ಮೆಯೂ ಜನರ ಕಣ್ಣಿಗೆ ಕಾಣದ ವ್ಯಕ್ತಿ. ಚುನಾವಣೆ ಬಂದಿರುವ ಕಾರಣವೋ ಏನೋ ಕಳೆದ ಒಂದು ವಾರದಲ್ಲಿ ರಾಜ್ಯ ಸರಕಾರ ಮತ್ತು ಮುಸ್ಲಿಮರ ವಿರುದ್ದ ಹೇಳಿಕೆಗಳ ಮೂಲಕ ದಾಳಿ ಮಾಡುತ್ತಿದ್ದಾರೆ. ಒಬ್ಬ ಜನಪ್ರತಿನಿಧಿ ಜನರ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಅದು ಬಿಟ್ಟು ಒಂದು ಸಮುದಾಯದ ವಿರುದ್ಧ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ರಾಜ್ಯದ ಪ್ರಜ್ಞಾವಂತರು ವಿಚಾರ ಮಾಡದ ಹೊರತು ಇಂಥವರನ್ನು ಕಟ್ಟಿಹಾಕಲು ಸಾಧ್ಯವಿಲ್ಲವೇನೋ ಎನ್ನುವಂತಹ ವಾತಾವರಣ ನಿರ್ಮಾಣ ಮಾಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಂತಹ ಕೆಟ್ಟ ವಿಚಾರವುಳ್ಳ ಸಾಕಷ್ಟು ಜನ ಬಿಜೆಪಿ ನಾಯಕರು ಹಾಗೂ ಇಡೀ ಸರಕಾರ ಸೋತು ಸುಣ್ಣವಾಗಿದ್ದಲ್ಲದೇ, ರಾಜ್ಯದ ಜನತೆ ಕೋಮು ರಾಜಕಾರಣದ ವಿರುದ್ಧ ತಮ್ಮ ಅಭಿಪ್ರಾಯವನ್ನು ಮತದಾನದ ಮೂಲಕ ತಿಳಿಸಿದ್ದಾರೆ.

ನಿನ್ನೆ ಸಂಸದ ಅನಂತಕುಮಾರ ಹೆಗಡೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತನಾಡುತ್ತ, ಬಾಬರಿ ಮಸೀದಿ ದ್ವಂಸಗೊಳಿಸಿದ ಹಾಗೆ ರಾಜ್ಯದಲ್ಲಿರುವ ಕೆಲವು ಮಸೀದಿಗಳನ್ನು ದ್ವಂಸ ಮಾಡುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡಿದ್ದಲ್ಲದೆ, ಹಿಂದೂ ಸಮಾಜ ಸಾವಿರ ವರ್ಷಗಳ ದ್ವೇಷ ತೀರಿಸಿಕೊಂಡೇ ತೀರುತ್ತದೆ, ಇದು ಹಿಂದೂ ರಕ್ತ… ಹಾಗೇ ಹೀಗೆ ಎಂದು ಅಸಂಬದ್ದವಾಗಿ ಹೇಳಿದ್ದಾರೆ. ಅನಂತ ಕುಮಾರ ಹೆಗಡೆ ಎಂಬ ಮನುಷ್ಯ ವಿರೋಧಿ ವ್ಯಕ್ತಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಏಕ ವಚನದಲ್ಲೇ ಸಂಬೋಧಿಸಿ, ಮಗನೇ ಎಂಬ ಅವಾಚ್ಯ ಶಬ್ದ ಬಳಸಿರುವುದು ಅತ್ಯಂತ ಹೇಯ ಕೃತ್ಯ. ಇಂತಹ ಹೇಳಿಕೆಗಳಿಗೆ ಚಪ್ಪಾಳೆ ಹೊಡೆಯುವ ಜನ ಅಲ್ಲಿದ್ದರು ಎನ್ನುವದು ಇನ್ನೂ ಆಶ್ಚರ್ಯಕರವಾದದ್ದು.

ಕಳೆದ ನಾಲ್ಕು ವರ್ಷಗಳಿಂದ ಜನರ ಯಾವ ಸಮಸ್ಯೆಗೂ ಸ್ಪಂದಿಸದೇ, ಅಜ್ಞಾತವಾಸದಲ್ಲಿ ಇದ್ದಂತಹ ವ್ಯಕ್ತಿ ಏಕಾಏಕೀ ಬಂದು ಸಿದ್ದರಾಯ್ಯನವರ ವಿರುದ್ದ, ಮುಸ್ಲಿಮರ ವಿರುದ್ದ ಘಂಟಾಘೋಷವಾಗಿ ಮಾತನಾಡುತ್ತಿದ್ದಾನೆ ಎಂದರೆ ಅಲ್ಲಿಯ ಜನತೆ ಇಂಥವನನ್ನು ಮನೆಗೆ ಕಳುಹಿಸಬೇಕು ಇಲ್ಲ ಸರಕಾರವೇ ಜೈಲಿಗೆ ಕಳುಹಿಸಬೇಕು. ಇಂತಹ ವ್ಯಕ್ತಿಗೆ ಜೈಲೇ ಗತಿಯಾಗಬೇಕು. ಇತನ ವಿರುದ್ದ ರಾಜ್ಯದ ಮೂಲೆ ಮೂಲೆಗಳಲ್ಲಿ ದೂರುಗಳನ್ನು ದಾಖಲಿಸಬೇಕು. ನ್ಯಾಯಾಲಯದಲ್ಲಿ ತಂದು ನಿಲ್ಲಿಸುವ ಕೆಲಸ ಮಾಡಬೇಕಿದೆ.

ಇತ್ತೀಚಿಗೆ ಕೆ.ಎಸ್.ಈಶ್ವರಪ್ಪನವರು ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮಥುರಾ ಹಾಗೂ ಇನ್ನಿತರ ಮಸೀದಿಗಳನ್ನು ಮುಸ್ಲಿಮರು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸದೇ ಇದ್ದರೆ, ಎಷ್ಟು ಮಂದಿಯನ್ನು ಕೊಲ್ಲಲಾಗುತ್ತೆ, ಏನಾಗಬಹುದು ಎಂಬುದೂ ಸೇರಿದಂತೆ ಪರಿಣಾಮಗಳು ನಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಇವರ ಹೇಳಿಕೆಗಳು ಹೆಚ್ಚಾಗುತ್ತಿರುವುದಕ್ಕೆ ಮೂಲ ಕಾರಣ- ಇವರ ಮೇಲೆ ಕಾನೂನು ಕ್ರಮವಾಗುತ್ತಿಲ್ಲ ಎನ್ನುವುದು ಬಹಳ ಸ್ಪಷ್ಟವಾಗಿದೆ. ಈತನ ವಿರುದ್ದವೂ ಕೋಮುದ್ವೇಷಕ್ಕೆ ಪ್ರಚೋದನೆ ಕ್ರಮವಾಗಿ ಕೇಸ್‌ಗಳನ್ನು ದಾಖಲಿಸಬೇಕು.

ಅಲ್ಲದೇ, ಕಲ್ಲಡ್ಕ ಪ್ರಭಾಕರ್ ಭಟ್ಟ ಎನ್ನುವವನು ಮುಸ್ಲಿಂ ಮಹಿಳೆಯರ ಬಗ್ಗೆ ತುಚ್ಛವಾಗಿ ಮಾತನಾಡಿದ್ದನು. ನ್ಯಾಯಾಲಯದಲ್ಲಿ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗದೆ, ವಯಸ್ಸು, ಆರೋಗ್ಯ, ಹೃದಯ ಸಂಬಂಧಿ ಕಾಯಲೆ ಎಂಬ ನೆಪ ಇಟ್ಟು ಬಚಾವಾಗಲು ಪ್ರಯತ್ನ ಮಾಡುತ್ತಿದ್ದಾನೆ ಆ ಭಟ್ಟ. ಕಳೆದ ಒಂದು ಎರಡು ತಿಂಗಳಲ್ಲಿ ಇಂತಹ ಹತ್ತು ಹಲವು ಹೇಳಿಕೆಗಳು ಜನರ ಮುಂದೆ ಬಂದಿವೆ. ಇಂತಹ ಹೇಳಿಕೆಗಳನ್ನು ನೀಡುವಾಗ ಉದ್ದೇಶಪೂರ್ವಕವಾಗಿಯೇ ಕಾಂಗ್ರೆಸ್ ಪಕ್ಷವನ್ನು ಎಳೆದು ತಂದು, ಕಾಂಗ್ರೆಸ್ ಪಕ್ಷ ಹಿಂದೂಗಳ ವಿರುದ್ದವಿದೆ ಎಂದು ತೋರಿಸಲು ಪ್ರಯತ್ನ ಮಾಡಲಾಗುತ್ತಿದೆ. ಇದೆಲ್ಲವೂ ಲೋಕಸಭಾ ಚುನಾವಣೆ ಮುಗಿಯುವವರೆಗೂ ಇರುತ್ತದೆ ಎಂದರೂ, ಇಂತಹ ಹೇಳಿಕೆಗಳು ಸಮಾಜದಲ್ಲಿ ಅಶಾಂತಿ ಮೂಡಿಸುತ್ತವೆ, ದ್ವೇಷ ಭಾವನೆ ಬಿತ್ತುತ್ತವೆ, ಸಮಾಜದಲ್ಲಿ ಅಪನಂಬಿಕೆ ಹೆಚ್ಚಾಗುತ್ತವೆ. ಹಿಂದೂ ಮುಸ್ಲಿಂ ಎಂದು ಹೇಳಿ ಹೇಳಿಯೇ ಹಿಂದಿನ ಬಿಜೆಪಿ ಸರಕಾರ ಕರ್ನಾಟಕದಲ್ಲಿ 66 ಸೀಟಿಗೆ ಬಂದು ನಿಂತಿದೆ. ಕೇಂದ್ರದ ಬಹುತೇಕ ನಾಯಕರು ತಮ್ಮ ಸರಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಮತ್ತು ಜನರ ಗಮನವನ್ನು ನೈಜ ಸಮಸ್ಯೆಗಳಿಂದ ದೂರ ಸರಿಸುವ ಪ್ರಯತ್ನ ಇದಾಗಿದೆ.

ಇಷ್ಟೆಲ್ಲ ಆಗುತ್ತಿದ್ದರೂ ಮುಸ್ಲಿಂ ಸಮುದಾಯ ಒಂದು ಪ್ರತಿಭಟನೆ ಮಾಡದೇ ಇರುವುದು ಆಶ್ಚರ್ಯಕರವಾಗಿದೆ ಎಂದು ಕೆಲವರ ಆಕ್ಷೇಪಣೆಗಳಾಗಿವೆ. ಬಿಜೆಪಿ ನಾಯಕರು ಉದ್ದೇಶಪೂರ್ವಕವಾಗಿಯೇ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆಂಬುದು ಮುಸ್ಲಿಂ ಸಮುದಾಯಕ್ಕೆ ತಿಳಿದಿದೆ. ಮುಸ್ಲಿಮರು ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕು, ಅದರಲ್ಲಿ ಗೊಂದಲ ಸೃಷ್ಠಿಯಾಗಬೇಕು, ಅಲ್ಲಿಯೂ ಯಾರಾದರೂ ದ್ವೇಷಪೂರಿತ ಹೇಳಿಕೆಗಳನ್ನು ನೀಡಬೇಕು, ಅದನ್ನು ಬಳಸಿಕೊಂಡು ರಾಜಕಾರಣ ಮಾಡಬೇಕೆಂಬುದೇ ಬಿಜೆಪಿ ಉದ್ದೇಶ. ಇದನ್ನು ಅರಿತುಕೊಂಡಿರುವ ಮುಸ್ಲಿಂ ಸಮುದಾಯ ಎಲ್ಲಿಯೂ ದೊಡ್ಡಮಟ್ಟದಲ್ಲಿ ಈ ಮತಾಂಧ ನಾಯಕರ ವಿರುದ್ಧ ಪ್ರತಿಭಟನೆ ಮಾಡುತ್ತಿಲ್ಲ. ಹಿಂದಿನ ಸರಕಾರದಲ್ಲಿ ಶೇ. 4 ಮೀಸಲಾತಿ ತೆಗೆದು ಹಾಕಿದಾಗಲೂ ಬಿಜೆಪಿ ಬಯಸಿದ್ದು ಇದನ್ನೇ. ಅಂದೂ ಕೂಡ ಮುಸ್ಲಿಂ ಸಮುದಾಯ ಮೌನಕ್ಕೆ ಜಾರಿತ್ತು. ಆದರೆ, ಅಂದು ಒಕ್ಕಲಿಗ ಸಮಾಜದ ಸ್ವಾಮಿಗಳು, ಹಿರಿಯರು, ಲಿಂಗಾಯತ ಸಮುದಾಯದ ಸ್ವಾಮಿಗಳು ಪ್ರತಿಕ್ರಿಯಿಸಿ, “ನಮಗೆ ಇತರರಿಂದ ಕಸಿದುಕೊಂಡ ಮೀಸಲಾತಿ ಬೇಡ” ಎಂದು ಬಹಿರಂಗವಾಗಿ ಖಂಡಾತುಂಡವಾಗಿ ಹೇಳುವುದರ ಮೂಲಕ ಬಿಜೆಪಿ ಆಸೆಗೆ ತಣ್ಣೀರೆರಚಿ ದೊಡ್ಡ ಸ್ಥಾನದಲ್ಲಿ ನಿಂತಿದ್ದು ಜನರ ಮನಸ್ಸಿನಲ್ಲಿದೆ. ಕೇವಲ ಮುಸ್ಲಿಮರ ವಿರುದ್ದ ದ್ವೇಷ ಮಾಡುವುದರಿಂದ ಒಂದೋ ಎರಡೋ ಚುನಾವಣೆ ಗೆಲ್ಲಬಹುದು. ಆದರೆ ಪ್ರತಿ ಚುನಾವಣೆಯನ್ನು ಮುಸ್ಲಿಂ ದ್ವೇಷದಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ಕಳೆದ ಚುನಾವಣೆಯಲ್ಲಿ ರಾಜ್ಯದ ಜನತೆ ತೋರಿಸಿಕೊಟ್ಟಿದ್ದಾರೆ.

ಅದೇ ರೀತಿ ರಾಜ್ಯದ ಜನತೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಜನರ ನೈಜ ಸಮಸ್ಯೆಗಳನ್ನು ಮಾತನಾಡುವ ವ್ಯಕ್ತಿಗಳನ್ನು, ಪಕ್ಷಗಳನ್ನು ಆಯ್ಕೆಮಾಡುವುದರ ಮೂಲಕ ಇಂಥವರಿಗೆ ತಕ್ಕ ಪಾಠಕಲಿಸಬೇಕಿದೆ.

ಡಾ ರಝಾಕ್‌ ಉಸ್ತಾದ್‌
+ posts

ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಯಚೂರು

ಪೋಸ್ಟ್ ಹಂಚಿಕೊಳ್ಳಿ:

ಡಾ ರಝಾಕ್‌ ಉಸ್ತಾದ್‌
ಡಾ ರಝಾಕ್‌ ಉಸ್ತಾದ್‌
ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಯಚೂರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೌರಿ ಲಂಕೇಶ್‌ ಹತ್ಯೆಯಾಗಿ ಏಳು ವರ್ಷ: ಕುಂಟುತ್ತ ಸಾಗಿದೆ ಆರೋಪಿಗಳ ವಿಚಾರಣೆ

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಾಗಿ ಇಂದಿಗೆ (ಸೆ. 5) ಏಳು ವರ್ಷಗಳಾಗಿವೆ....

ಕಾಮುಕರನ್ನು ಸಾಕುತ್ತಿದೆ ಬಿಜೆಪಿ; ಇನ್ನೆಲ್ಲಿ ಮಹಿಳೆಯರ ರಕ್ಷಣೆ?

ದೇಶದಲ್ಲಿ ಭ್ರೂಣ ಹತ್ಯೆಯನ್ನ ಸಂಪೂರ್ಣವಾಗಿ ತಡೆದು, ಸಮಾಜದಲ್ಲಿರುವ ಲಿಂಗ ತಾರತಮ್ಯ ಮನೋಭಾವ...

ಕೋವಿಡ್ ಹಗರಣ | 2,200 ಕೋಟಿ ಭ್ರಷ್ಟಾಚಾರ ತನಿಖಾ ಆಯೋಗದ ವರದಿಯಲ್ಲಿ ಸಾಬೀತಾಗುವುದೇ?

ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ನೇತೃತ್ವದ ವಿಚಾರಣಾ ಆಯೋಗವು...