ಬಿಜೆಪಿ ನಾಯಕನ ಶೂರ್ಪನಖಿ ಹೇಳಿಕೆ; ಮಧ್ಯಪ್ರದೇಶ ಸಚಿವೆ ಸಮರ್ಥನೆ

Date:

  • ಸಂಪ್ರದಾಯ ಪಾಲಿಸದವರು ರಾಕ್ಷಸರೇ
  • ಬಿಜೆಪಿ ನಾಯಕನ ಹೇಳಿಕೆಗೆ ಕಾಂಗ್ರೆಸ್ ಟೀಕೆ

ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯಾ ಅವರ ಯುವತಿಯರ ಉಡುಪಿನ ಕುರಿತ ವಿವಾದಾತ್ಮಕ ಹೇಳಿಕೆಯನ್ನು ಮಧ್ಯಪ್ರದೇಶದ ಸಚಿವೆ ಉಷಾ ಠಾಕೂರ್ ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ, “ಅಸಭ್ಯವಾಗಿ ಬಟ್ಟೆ ಧರಿಸುವ ಹುಡುಗರು ಶೂರ್ಪನಖಿ ತರಹ ಕಾಣುತ್ತಾರೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಕೈಲಾಶ್ ವಿಜಯವರ್ಗಿಯಾ ಅವರು ಹೇಳಿಕೆ ಸಮರ್ಥಿಸಿಕೊಂಡ ಉಷಾ ಠಾಕೂರ್, “ನಮ್ಮ ವೈದಿಕ ಸನಾತಕ ಸಂಪ್ರದಾಯವನ್ನು ಅನುಸರಿಸದಿದ್ದರೆ, ಅವರನ್ನು ರಾಕ್ಷಸರು ಎಂದು ಕರೆಯುತ್ತಾರೆ” ಎಂದು ಹೇಳಿದ್ದಾರೆ.

ಕೈಲಾಶ್ ವಿಜಯವರ್ಗಿಯಾ ಹೇಳಿಕೆ

ಯುವತಿಯರ ಇತ್ತೀಚಿನ ಉಡುಪುಗಳನ್ನು ಪರೋಕ್ಷವಾಗಿ ಉಲ್ಲೇಖಿಸಿದ ಕೈಲಾಶ್ ವಿಜಯವರ್ಗಿಯ, “ಈಗಿನ ಕಾಲದ ಹುಡುಗಿಯರು ಅಸಭ್ಯ ಬಟ್ಟೆಗಳನ್ನು ಹಾಕಿಕೊಂಡರೆ, ರಾಮಾಯಣದಲ್ಲಿ ಬರುವ ಶೂರ್ಪನಖಿಯಂತೆ ಕಾಣುತ್ತಾರೆ” ಎಂದು ಹೇಳಿಕೆ ನೀಡಿದ್ದಾರೆ.

ಹನುಮಾನ್ ಮತ್ತು ಮಹಾವೀರ ಜಯಂತಿಯಂದು ಇಂದೋರ್‌ನಲ್ಲಿ ಮಾತನಾಡಿದ ಬಿಜೆಪಿ ನಾಯಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

“ನಾನು ರಾತ್ರಿ ಹೊತ್ತು ಹೊರಗೆ ಬಂದಾಗ ಯುವ ಜನತೆ ಕುಡಿಯುವುದನ್ನು ನೋಡುತ್ತೇನೆ. ತಕ್ಷಣಕ್ಕೆ ಅವರ ಕಪಾಳಕ್ಕೆ ಎರಡು ಬಿಡಬೇಕು ಎನಿಸುತ್ತದೆ” ಎಂದಿದ್ದಾರೆ.

“ಮಹಿಳೆಯನ್ನು ನಾವು ದೇವತೆ ಎಂದು ಭಾವಿಸುತ್ತೇವೆ. ಆದರೆ, ಈಗಿನ ಕಾಲದ ಹುಡುಗಿಯರಲ್ಲಿ ಮಹಿಳೆಯರು ಎನ್ನುವ ಯಾವ ಲಕ್ಷಣವೂ ಇಲ್ಲ. ಕೆಟ್ಟ ಬಟ್ಟೆ ಧರಿಸಿ ಥೇಟ್‌ ಶೂರ್ಪನಖಿಯಂತೆ ಕಾಣುತ್ತಾರೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೆಟ್ಟ ಬಟ್ಟೆ ಧರಿಸುವ ಹುಡುಗಿಯರು ಶೂರ್ಪನಖಿಯಂತೆ ಕಾಣುತ್ತಾರೆ : ಬಿಜೆಪಿ ನಾಯಕ ಕೈಲಾಶ್

ಕಾಂಗ್ರೆಸ್ ವಕ್ತಾರೆ ಟೀಕೆ

ಈ ಕುರಿತು ಪ್ರತಿಕ್ರಿಯಿಸಿರುವ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಭಾ ಪಟೇಲ್, “ಅಧಿಕಾರದ ಅಹಂಕಾರದಲ್ಲಿರುವ ಬಿಜೆಪಿ ತನ್ನ ಘನತೆ ಮರೆಯುತ್ತಿದೆ. ಅಸಭ್ಯ ಪದಗಳನ್ನು ಬಳಸಿರುವ ವಿಜಯವರ್ಗಿಯ ತಮ್ಮನ್ನು ತಾವು ಶ್ರೇಷ್ಠ ನಾಯಕ ಎಂದು ಭಾವಿಸಿಕೊಂಡಿದ್ದಾರೆ” ಎಂದು ಟೀಕಿಸಿದ್ದಾರೆ.

“ವಿಜಯವರ್ಗಿಯ ಅವರು ಯಾವ ಕಾಲದಲ್ಲಿ ಬದುಕುತ್ತಿದ್ದಾರೆ, ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದಾರೆ. ಮಹಿಳೆಯರಿಗೆ ತಮ್ಮ ಆಯ್ಕೆಯ ಪ್ರಕಾರ ಬಟ್ಟೆ ಧರಿಸಲು, ತಿನ್ನಲು ಮತ್ತು ಕುಡಿಯಲು ಹಕ್ಕಿದೆ. ಮಹಿಳೆಯರು ತಮ್ಮ ಸ್ವಾತಂತ್ರ್ಯವನ್ನು ಬಳಸುತ್ತಿದ್ದರೆ, ಖಂಡಿತವಾಗಿಯೂ ಅದರಲ್ಲಿ ಅಲಂಕಾರ ಇರಬೇಕು. ಆದರೆ, ನಾಯಕರು ಯಾವುದೇ ಕಾಮೆಂಟ್ ಮಾಡುವ ಮೊದಲು ತಮ್ಮ ಘನತೆಯ ಬಗ್ಗೆ ಕಾಳಜಿ ವಹಿಸಬೇಕು” ಎಂದು ಹೇಳಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಿಜೋರಾಂ | ಝೆಡ್‌ಪಿಎಂಗೆ ಬಹುಮತ: ಇಂದಿರಾ ಭದ್ರತಾ ಉಸ್ತುವಾರಿಯಾಗಿದ್ದವ ನೂತನ ಸಿಎಂ !

ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬಹುತೇಕ ಮುಕ್ತಾಯವಾಗಿದ್ದು, ಒಟ್ಟು 40...

ಎಚ್‌ ಡಿ ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ

ಸಾಮಾಜಿಕ ಹೋರಾಟಗಾರ ಸಿ ಎಸ್ ​ಸಿದ್ದರಾಜು ಅವರಿಂದ ದೂರು ಚುನಾವಣಾ...

2022 ರಲ್ಲಿ ದೇಶದಲ್ಲಿ 28,522 ಕೊಲೆ ಪ್ರಕರಣಗಳು ದಾಖಲು: ಉತ್ತರ ಪ್ರದೇಶ ಹೆಚ್ಚು

ದೇಶದಲ್ಲಿ 2022ರಲ್ಲಿ ಒಟ್ಟು 28,522 ಕೊಲೆಗಳ ಎಫ್ಐಆರ್‌ಗಳು ದಾಖಲಾಗಿವೆ ಎಂದು ರಾಷ್ಟ್ರೀಯ...