ಮಧ್ಯಪ್ರಾಚ್ಯ ಬಿಕ್ಕಟ್ಟು | ನ್ಯಾಟೋ ಒಕ್ಕೂಟದಿಂದ ಹೊರನಡೆಯುತ್ತಾ ಅಮೆರಿಕ?

Date:

ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್‌ ಮೇಲೆ ದಾಳಿ ಮಾಡಿ ಒಂದು ತಿಂಗಳು ಕಳೆದಿದೆ. ಇನ್ನೂ ಯುದ್ಧ ಮುಂದುವರಿಯುತ್ತಿದೆ. ಈ ಯುದ್ಧದ ಪರಿಣಾಮ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದೆ. ಯುದ್ಧದ ಪರಿಣಾಮಗಳ ಕುರಿತು ಜಾಗತಿಕ ಮಟ್ಟದಲ್ಲಿ ಭಾರೀ ಆಕ್ರೋಶ ಮತ್ತು ಯುದ್ಧದ ಕುರಿತು ಸ್ವತಃ ಅಮೆರಿಕನ್ನರಿಂದಲೇ  ವಿರೋಧ ವ್ಯಕ್ತವಾಗಿರುವ ಹೊತ್ತಿನಲ್ಲೇ ಟ್ರಂಪ್ ಈಗ ಅಕ್ಷರಶಃ ಏಕಾಂಗಿಯಾಗಿದ್ದಾರೆ.

- Advertisement -

ಈ ಯುದ್ಧ ಆರಂಭವಾದಾಗಲಿಂದ ನ್ಯಾಟೋ ಒಕ್ಕೂಟದ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸದಾ ಆರೋಪಿಸುತ್ತಲೇ ಬಂದಿದ್ದರು. ಅಮೆರಿಕದ ಏಕಪಕ್ಷೀಯ ನೀತಿಯನ್ನು ನ್ಯಾಟೋ ಒಕ್ಕೂಟದ ಸದಸ್ಯ ರಾಷ್ಟ್ರಗಳು ಕೂಡ ಖಂಡಿಸುತ್ತಲೇ ಬಂದಿವೆ. ಈಗ ಟ್ರಂಪ್ ಏಕಾಂಗಿಯಾದ ಬಳಿಕ ಯುದ್ಧ ನಿಲ್ಲಿಸುವ ಮಾತುಗಳನ್ನು ಆಡುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಮುಂದಿನ 2-3 ವಾರಗಳಲ್ಲಿ ಇರಾನ್ ವಿರುದ್ಧ ಇನ್ನಷ್ಟು ಕಠಿಣ ದಾಳಿ ನಡೆಯಲಿದೆ. ಯಾವುದೇ ಒಪ್ಪಂದವಾಗದಿದ್ದರೆ ಇರಾನ್ ದೇಶದಲ್ಲಿರುವ ವಿದ್ಯುತ್ ಉತ್ಪಾದನಾ ಸ್ಥಾವರಗಳ ಮೇಲೂ ದಾಳಿ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಒಂದೆಡೆ ಟ್ರಂಪ್ ಏಕಾಂಗಿಯಾಗಿ ಯುದ್ಧ ನಿಲ್ಲಿಸುವ ಮಾತಾಡುತ್ತಿದ್ದರೆ, ಇನ್ನೊಂದೆಡೆ ಇರಾನ್‌ಗೆ ದಾಳಿಯ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ. ಇದು ಟ್ರಂಪ್ ಹತಾಶರಾಗಿರುವುದನ್ನು ಎತ್ತಿ ತೋರಿಸುತ್ತಿದೆ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಾಗುತ್ತಿವೆ.

ನ್ಯಾಟೋ ಒಕ್ಕೂಟದ ಉದ್ದೇಶ ಮತ್ತು ಗುರಿ ಏನು ?

ನ್ಯಾಟೋ ಒಕ್ಕೂಟವನ್ನು ಏಪ್ರಿಲ್ 4, 1949 ರಂದು ಸ್ಥಾಪಿಸಲಾಯಿತು. ಎರಡನೇ ಮಹಾಯುದ್ಧದ ನಂತರ ಸೋವಿಯತ್ ಒಕ್ಕೂಟ(ಈಗಿನ ರಷ್ಯಾ)ವನ್ನು ಎದುರಿಸಲು ಅಮೆರಿಕ, ಕೆನಡಾ ಮತ್ತು ಕೆಲವು ಯುರೋಪಿಯನ್ ರಾಷ್ಟ್ರಗಳು ಸೇರಿ ಈ ಒಕ್ಕೂಟವನ್ನು ರಚಿಸಿಕೊಂಡವು. ಆರಂಭದಲ್ಲಿ 12 ರಾಷ್ಟ್ರಗಳಿದ್ದವು. ಪ್ರಸ್ತುತ ಈ ಒಕ್ಕೂಟದಲ್ಲಿ 32 ಸದಸ್ಯ ರಾಷ್ಟ್ರಗಳಿವೆ. ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ 2023ರಲ್ಲಿ ಫಿನ್ಲ್ಯಾಂಡ್ ಮತ್ತು 2024ರಲ್ಲಿ ಸ್ವೀಡನ್‌ ರಾಷ್ಟ್ರಗಳು ನ್ಯಾಟೋ ಒಕ್ಕೂಟದ ಸದಸ್ಯತ್ವವನ್ನು ಪಡೆದುಕೊಂಡಿವೆ. 

ನ್ಯಾಟೋದ ಮೂಲ ಉದ್ದೇಶ Collective Defense ಅಥವಾ ಸಾಮೂಹಿಕವಾಗಿ ರಕ್ಷಣೆ ಮಾಡಿಕೊಳ್ಳುವುದಾಗಿದೆ. ಒಕ್ಕೂಟ ರಚನೆ ಆಗುವ ಸಂದರ್ಭದಲ್ಲಿ ಎಲ್ಲಾ ದೇಶಗಳು ಒಪ್ಪಂದ ಮಾಡಿಕೊಂಡಿದ್ದು, ಕಲಂ 5ರ ಅನ್ವಯ ಒಕ್ಕೂಟದ ಯಾವುದೇ ಒಂದು ಸದಸ್ಯ ರಾಷ್ಟ್ರದ ಮೇಲೆ ಶತ್ರು ದೇಶ ದಾಳಿ ಮಾಡಿದರೆ, ಅದನ್ನು ಎಲ್ಲಾ 32 ರಾಷ್ಟ್ರಗಳ ಮೇಲಿನ ದಾಳಿ ಎಂದು ಪರಿಗಣಿಸಿ, ಒಟ್ಟಾಗಿ ಆ ಶತ್ರು ದೇಶದ ವಿರುದ್ಧ ಯುದ್ಧಕ್ಕೆ ಇಳಿಯಬೇಕು. ಯುರೋಪಿನಲ್ಲಿ ರಷ್ಯಾದ ಮಿಲಿಟರಿ ಪ್ರಭಾವ ಹೆಚ್ಚಾಗದಂತೆ ತಡೆಯುವುದು ಇದರ ಪ್ರಮುಖ ರಾಜತಾಂತ್ರಿಕ ಗುರಿ. ಆದರೇ, ಅಮೆರಿಕ ಮತ್ತು ಇಸ್ರೇಲ್‌ ಜೊತೆಗೂಡಿ ಇರಾನ್‌ ಮೇಲೆ ಮಾಡಿದ ದಾಳಿಯನ್ನು ಒಕ್ಕೂಟದ ಇತರೆ ರಾಷ್ಟ್ರಗಳು, ಈ ಯುದ್ದವನ್ನು ಅಮೆರಿಕದ ಏಕಪಕ್ಷೀಯ ನಿರ್ಧಾರ ಎಂದು ಖಂಡಿಸಿ, ಅಮೆರಿಕದೊಂದಿಗೆ ಕೈ ಜೋಡಿಸದೆ ಉಳಿದಿದ್ದು, ಅಮೆರಿಕವನ್ನು ಒಂಟಿಯಾಗಿಸಿವೆ. ಇದೇ ಕಾರಣಕ್ಕೆ ಅಮೆರಿಕ ನ್ಯಾಟೋ ಒಕ್ಕೂಟದಿಂದ ಹೊರ ಬರುವುದಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಹಾಸನ ಮಣ್ಣಿನ ಹೆಣ್ಣು ಬೇರುಗಳು | ಸಾಹಿತ್ಯ ಕ್ಷೇತ್ರದಲ್ಲಿ ಜಿಲ್ಲೆಯ ಮಹಿಳೆಯರು

ಸದಸ್ಯ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ಮತ್ತು ಶಾಂತಿಯನ್ನು ಕಾಪಾಡುವುದು ಒಕ್ಕೂಟದ ಮೂಲ ಉದ್ದೇಶ ಎಂದು ಉಳಿದ ರಾಷ್ಟ್ರಗಳು ಈಗ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಿರುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ.

ನ್ಯಾಟೋದಲ್ಲಿ ಅಮೆರಿಕದ ಅಧಿಪತ್ಯ ಎಷ್ಟು?

ನ್ಯಾಟೋ ಎಂದರೆ ಅಲ್ಲಿ ಅಮೆರಿಕವೇ ಸರ್ವೋಚ್ಚ ಎಂಬ ಮಾತು ಸುಳ್ಳಲ್ಲ. ನ್ಯಾಟೋದ ಒಟ್ಟು ರಕ್ಷಣಾ ವೆಚ್ಚದಲ್ಲಿ ಸುಮಾರು  ಶೇ.65 ರಿಂದ ಶೇ. 70ರಷ್ಟು ವೆಚ್ಚವನ್ನು ಅಮೆರಿಕ ಒಂದೇ ಭರಿಸುತ್ತದೆ. ಉಳಿದ ಶೇ.30 ರಷ್ಟನ್ನು ಮಿಕ್ಕ 30 ರಾಷ್ಟ್ರಗಳು ಹಂಚಿಕೊಳ್ಳುತ್ತವೆ.

ಪ್ರತಿ ಸದಸ್ಯ ರಾಷ್ಟ್ರವು ತನ್ನ ದೇಶದ ಜಿಡಿಪಿಯ (GDP) ಕನಿಷ್ಠ ಶೇ.2ರಷ್ಟನ್ನು ರಕ್ಷಣಾ ಬಜೆಟ್ ಗೆ ಮೀಸಲಿಡಬೇಕು ಎಂದು ಒಕ್ಕೂಟದಲ್ಲಿ ನಿಯಮವಿದೆ. ಆದರೆ, ಅಮೆರಿಕ ತನ್ನ ಒಟ್ಟು ಜಿಡಿಪಿಯ ಸುಮಾರು  ಶೇ.3.5ರಷ್ಟು ನೀಡುತ್ತಿದೆ. ಆದರೆ ಅನೇಕ ಯುರೋಪಿಯನ್ ರಾಷ್ಟ್ರಗಳು ಇನ್ನೂ ಶೇ.2ರಷ್ಟು ಪಾಲನ್ನು ನೀಡುವುದಕ್ಕೆ ಹೆಣಗಾಡುತ್ತಿವೆ ಎನ್ನುವ ವರದಿಗಳಿವೆ.

ಮಿಲಿಟರಿ ಸಾಮರ್ಥ್ಯ: ನ್ಯಾಟೋ ಹೊಂದಿರುವ ಒಟ್ಟು ಪರಮಾಣು ಶಸ್ತ್ರಾಸ್ತ್ರಗಳು, ಅತ್ಯಾಧುನಿಕ ಯುದ್ಧ ವಿಮಾನಗಳು ಮತ್ತು ಉಪಗ್ರಹ ತಂತ್ರಜ್ಞಾನದಲ್ಲಿ ಅಮೆರಿಕ ಸಿಂಹಪಾಲನ್ನು ಹೊಂದಿದೆ.  ತಾಂತ್ರಿಕವಾಗಿ ಎಲ್ಲ ರಾಷ್ಟ್ರಗಳು ಸಮಾನವಾಗಿದ್ದರೂ, ನ್ಯಾಟೋದ ಮಿಲಿಟರಿ ಕಾರ್ಯಾಚರಣೆಗಳ ನೇತೃತ್ವವನ್ನು ಎಂದಿಗೂ ಅಮೆರಿಕವೇ ವಹಿಸುತ್ತದೆ ಎನ್ನುವುದು ಇಲ್ಲಿ ಉಲ್ಲೇಖನೀಯ.

ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ನಂತರ ನ್ಯಾಟೋ ಮತ್ತೆ ಮುನ್ನೆಲೆಗೆ ಬಂದಿತ್ತು. ಉಕ್ರೇನ್ ನ್ಯಾಟೋ ಸೇರಲು ಬಯಸಿದ್ದೇ ಈ ಯುದ್ಧಕ್ಕೆ ಒಂದು ಪ್ರಮುಖ ಕಾರಣವಾಯಿತು. ರಷ್ಯಾದ ಗಡಿಯವರೆಗೆ ನ್ಯಾಟೋ ವಿಸ್ತರಣೆಯಾಗುವುದನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತೀವ್ರವಾಗಿ ವಿರೋಧಿಸುತ್ತಿದ್ದಾರೆ.

ನ್ಯಾಟೋ ಎನ್ನುವುದು ಅಮೆರಿಕದ ನೇತೃತ್ವದಲ್ಲಿ ಪಾಶ್ಚಿಮಾತ್ಯ ದೇಶಗಳು ನಿರ್ಮಿಸಿಕೊಂಡಿರುವ ಒಂದು ‘ಮಿಲಿಟರಿ ಶಕ್ತಿ’. ಇದರ ಶಕ್ತಿ ಇರುವುದೇ ಅಮೆರಿಕದ ಸೈನ್ಯ ಮತ್ತು ಹಣಕಾಸಿನ ಬಲದಲ್ಲಿ ಎನ್ನುವುದು ಕೂಡ ಇಲ್ಲಿ ಪ್ರಮುಖಾಂಶ.

ನ್ಯಾಟೋ ಒಕ್ಕೂಟದಿಂದ ಅಮೆರಿಕ ಹೊರಕ್ಕೆ?

ಮಧ್ಯ ಪ್ರಾಚ್ಯದ ಯುದ್ದದಲ್ಲಿ ತಮ್ಮೊಂದಿಗೆ ಕೈಜೋಡಿಸದ ನ್ಯಾಟೋ ದೇಶಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ಅದರಿಂದ ಹೊರಬರುವ ಕುರಿತು ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ನನಗೆ ನ್ಯಾಟೋ ವಿಶ್ವಾಸಾರ್ಹತೆ ಬಗ್ಗೆ ಹಿಂದಿನಿಂದಲೂ ಅನುಮಾನ ಇತ್ತು ಎಂದು ಹೇಳಿದ್ದಾರೆ. ನ್ಯಾಟೋದ ಶೇ.65 ರಿಂದ ಶೇ.70ರಷ್ಟು ವೆಚ್ಚವನ್ನು ಅಮೆರಿಕವೇ ಭರಿಸುತ್ತದೆ ಎನ್ನುವುದು ಇಲ್ಲಿ ಗಮನಾರ್ಹ ವಿಷಯವಾಗಿದೆ. ಒಂದು ವೇಳೆ ಅಮೆರಿಕ ನ್ಯಾಟೋ ಒಕ್ಕೂಟದಿಂದ ಹೊರಬಂದರೆ, ನ್ಯಾಟೋ ಭವಿಷ್ಯವೇನು ಎನ್ನುವ ಪ್ರಶ್ನೆ ಕೂಡ ಸೃಷ್ಟಿಯಾಗಿದೆ.

IMG 20260316 WA0002
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ಸತ್ಯ ಹೇಳದೇ ಸಹಿ ಪಡೆದರು; ಎಫ್‌ಐಆರ್ ದಾಖಲಾಗುತ್ತಿದ್ದಂತೆ ತಮ್ಮ ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ (ಡಿಲಿಷನ್) ಪ್ರಕ್ರಿಯೆ...

ಶರತ್ತುಗಳು ಈಡೇರುವವರೆಗೆ ಹಾರ್ಮುಜ್ ಜಲಸಂಧಿ ತೆರೆಯುವುದಿಲ್ಲ: ಇರಾನ್ ಸ್ಪಷ್ಟನೆ

ತನ್ನ ಎಲ್ಲ ಶರತ್ತುಗಳು ಸಂಪೂರ್ಣವಾಗಿ ಈಡೇರುವವರೆಗೆ ಜಾಗತಿಕ ತೈಲ ಮತ್ತು ಅನಿಲ...

ಗಣೇಶ ವಿಸರ್ಜನೆ ಮುಗಿಯಿತು, ಇನ್ನು ಸಿಇಸಿ ಗ್ಯಾನೇಶ್ ಕುಮಾರ್ ವಿಸರ್ಜನೆ ಬಾಕಿ: ನಟ ಪ್ರಕಾಶ್ ರಾಜ್

ದೇಶಾದ್ಯಂತ ಗಣೇಶ ವಿಸರ್ಜನೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈಗ ಮುಖ್ಯ ಚುನಾವಣಾ ಆಯುಕ್ತ...

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ ಕಡೇ ದಿನಗಳು’

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ...