‘ಮೊಹಮ್ಮದ್ ದೀಪಕ್’ ಜಿಮ್ ಸದಸ್ಯತ್ವ 15ಕ್ಕೆ ಇಳಿಕೆ: ಕೋಮು ಸೌಹಾರ್ದತೆಯ ಬೆಲೆ ಬಲು ದುಬಾರಿ!

Date:

ಬಜರಂಗದಳ ಸದಸ್ಯರಿಂದ ಕಿರುಕುಳಕ್ಕೆ ಒಳಗಾಗುತ್ತಿದ್ದ ಸುಮಾರು 70 ವರ್ಷದ ಮುಸ್ಲಿಂ ವ್ಯಕ್ತಿಯ ಪರವಾಗಿ ನಿಂತು, ತನ್ನ ಹೆಸರು ‘ಮೊಹಮ್ಮದ್ ದೀಪಕ್’ ಎಂದು ಹೇಳಿಕೊಂಡ ಜಿಮ್ ಟ್ರೇನರ್‌ ದೀಪಕ್ ಕುಮಾರ್‌ಗೆ ಕೋಮು ಸೌಹಾರ್ದತೆಯ ಬೆಲೆ ಬಲು ದುಬಾರಿಯಾಗಿದೆ! ಈ ಬೆಳವಣಿಗೆ ಬಳಿಕ ದೀಪಕ್ ಅನೇಕ ಜಿಮ್ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಈ ಹಿಂದೆ 150 ಆಗಿದ್ದ ಜಿಮ್ ಸದಸ್ಯರ ಸಂಖ್ಯೆ ಈಗ 15ಕ್ಕೆ ಬಂದು ಇಳಿದಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

- Advertisement -

ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದ, ದೀಪಕ್ ಕೋಮು ಸೌಹಾರ್ದತೆಯನ್ನು ಎತ್ತಿಹಿಡಿದಿದ್ದ ಘಟನೆ ನಡೆದಿದ್ದು ಜನವರಿ 26ರಂದು. ಉತ್ತರಾಖಂಡದ ಪೌರಿ ಜಿಲ್ಲೆಯ ಕೋಟ್ದ್ವಾರ ಪಟ್ಟಣದಲ್ಲಿ ಮುಸ್ಲಿಂ ವ್ಯಾಪಾರಿ ವಕೀಲ್ ಅಹ್ಮದ್ ಅವರ ಅಂಗಡಿಯ ಹೆಸರು ಬದಲಾಯಿಸುವಂತೆ ಬಜರಂಗದಳ ಸದಸ್ಯರು ಒತ್ತಡ ಹೇರಿದ್ದರು. ಮುಸ್ಲಿಂ ವ್ಯಕ್ತಿ ಬಾಬಾ ಕಲೆಕ್ಷನ್ ಎಂಬ ಬಟ್ಟೆ ಅಂಗಡಿಯನ್ನು ಹೊಂದಿದ್ದು, 30 ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದಾರೆ. ಆದರೆ ಬಜರಂಗದಳದವರು ‘ಬಾಬಾ’ ಎಂಬ ಪದವನ್ನು ಫಲಕದಿಂದ ತೆಗೆದುಹಾಕುವಂತೆ ಒತ್ತಡ ಹೇರಿದ್ದರು. ಈ ವೇಳೆ ಹಿಂದೂ ಯುವಕ 38 ವರ್ಷದ ದೀಪಕ್ ಆ ವೃದ್ಧ ವ್ಯಕ್ತಿ ಪರವಾಗಿ ನಿಂತಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಇದನ್ನು ಓದಿದ್ದೀರಾ? ‘ಮೊಹಮ್ಮದ್ ದೀಪಕ್ ಕುಮಾರ್’ -ಮುಸ್ಲಿಂ ವ್ಯಾಪಾರಿಯನ್ನು ಬೆಂಬಲಿಸಿದ್ದಕ್ಕೆ ಯುವಕನ ವಿರುದ್ಧ ಸಂಘಪರಿವಾರ ಪ್ರತಿಭಟನೆ!

ಜಿಮ್ ತರಬೇತುದಾರರಾಗಿ ಕಾರ್ಯನಿರ್ವಹಿಸುವ ದೀಪಕ್ ಕುಮಾರ್ ಕಶ್ಯಪ್ ಸಂಘಪರಿವಾರದವರು ನಿನ್ನ ಹೆಸರೇನು ಎಂದು ಕೇಳಿದಾಗ ದೀಪಕ್, “ಮೊಹಮ್ಮದ್ ದೀಪಕ್ ಕುಮಾರ್” ಎಂದು ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅದಾದ ಬಳಿಕ ಬಜರಂಗದಳದ ಹಲವಾರು ಸದಸ್ಯರು ದೀಪಕ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ದಾಳಿಯ ಹೊಂಚೂ ಹಾಕಿದ್ದರು. ಈ ವೇಳೆ ಪೊಲೀಸರು ಅವರನ್ನು ತಡೆದಿದ್ದರು.

ಇವಿಷ್ಟು ನಡೆಯುತ್ತಿದ್ದಂತೆ ಪಟ್ಟಣವೇ ಎರಡು ಭಾಗಗಳಾಗಿ ವಿಂಗಡಿಸಲ್ಪಟ್ಟಿದೆ. ಕೋಮು ಸೌಹಾರ್ದತೆಯ ಪರವಾಗಿ ನಿಲ್ಲುವವರದ್ದು ಒಂದು ಗುಂಪು ಮತ್ತು ಬಿಜೆಪಿಯ ಕೋಮುದ್ವೇಷ ತಂತ್ರಕ್ಕೆ ಬಲಿಯಾದವರದ್ದು ಇನ್ನೊಂದು ಗುಂಪು. ದೀಪಕ್‌ಗೆ ಯತೇಚ್ಚವಾಗಿ ಬೆಂಬಲವೇನೋ ವ್ಯಕ್ತವಾಗಿದೆ. ಆದರೆ ಅವರ ದುಡಿಮೆಗೆ ತೊಡಕು ಉಂಟಾಗಿದೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ದೀಪಕ್, “ಪಟ್ಟಣದ ಅರ್ಧದಷ್ಟು ಜನರು ನನ್ನನ್ನು ಬೆಂಬಲಿಸುತ್ತಾರೆ. ಆದರೆ ನೀವು ಒಳ್ಳೆಯ ಕಾರ್ಯಗಳನ್ನು ಮಾಡಿದಾಗ ಜನರು ಚಪ್ಪಾಳೆ ತಟ್ಟುವುದಿಲ್ಲ. ಪ್ರಾಮಾಣಿಕತೆಗೆ ಬೆಲೆ ತೆರಬೇಕಾಗುತ್ತದೆ” ಎಂದು ಹೇಳುತ್ತಾರೆ.

“ಈಗ ನನ್ನ ಸದಸ್ಯರ ಸಂಖ್ಯೆ 150ರಿಂದ 15ಕ್ಕೆ ಇಳಿದಿದೆ. ಜನರು ಭಯಭೀತರಾಗಿದ್ದಾರೆ. ನನಗೆ ಅದು ಅರ್ಥವಾಗುತ್ತದೆ. ನನ್ನ ಜಿಮ್‌ ಇರುವ ಕಟ್ಟಡಕ್ಕೆ ನಾನು 40 ಸಾವಿರ ರೂಪಾಯಿ ಬಾಡಿಗೆ ನೀಡಬೇಕು. ನಮ್ಮ ಕುಟುಂಬಕ್ಕೆ ಇದೊಂದೇ ಆದಾಯ. ನಾನು ಇತ್ತೀಚೆಗೆ ಮನೆ ಕಟ್ಟಿಸಿದ್ದೇನೆ. ಅದಕ್ಕಾಗಿ ಮಾಸಿಕವಾಗಿ 16 ಸಾವಿರ ರೂಪಾಯಿ ಸಾಲ ಮರುಪಾವತಿ ಮಾಡಬೇಕು. ಆದರೆ ಈಗ ಜಿಮ್‌ನ ಸದಸ್ಯರ ಸಂಖ್ಯೆ ಕಡಿಮೆಯಾಗಿದೆ. ನೀವು ಸದಸ್ಯರನ್ನು ಕಳೆದುಕೊಂಡರೆ, ಮರಳಿ ಪಡೆಯುವುದು ಕಷ್ಟ” ಎಂದು ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ? ನಿಜವಾದ ದೇಶಭಕ್ತ ‘ಮೊಹಮ್ಮದ್ ದೀಪಕ್’!

ಈ ಎಲ್ಲಾ ಬೆಳವಣಿಗೆ ನಡುವೆ ರಾಜ್ಯಸಭೆಯಲ್ಲಿ ಸಿಪಿಐ(ಎಂ)ನ ನಾಯಕ, ಸಂಸತ್ ಸದಸ್ಯ ಜಾನ್ ಬ್ರಿಟ್ಟಾಸ್, ಬಾಬಾ ಡ್ರೆಸ್‌ನ ಮಾಲೀಕ ವಕೀಲ್ ಅಹ್ಮದ್ ಮತ್ತು ಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ಟ್ವೀಮ್ ಮಾಡಿದ್ದು, “ಜಿಮ್ ಈಗ ಕೋಮುವಾದಿಗಳ ಬೆದರಿಕೆಯಿಂದಾಗಿ ನಿರ್ಜನವಾಗಿದ್ದರಿಂದ ಜಿಮ್‌ಗೆ ಭೇಟಿ ನೀಡಿ ಸದಸ್ಯತ್ವವನ್ನು ಪಡೆಯಲಾಗಿದೆ” ಎಂದು ಹೇಳಿದ್ದಾರೆ.

ಇನ್ನು ಗಲಭೆಕೋರರನ್ನು ರಕ್ಷಿಸಿರುವ ಕೋಟ್‌ದ್ವಾರ ಪೊಲೀಸ್ ಠಾಣೆ ಪೊಲೀಸರು ದೀಪಕ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಈ ಕ್ರಮದ ವಿರುದ್ಧವೂ ಬ್ರಿಟ್ಟಾಸ್ ತಮ್ಮ ಬಲವಾದ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ಫ್ಯಾಸಿಸ್ಟ್ ಗೂಂಡಾಗಳ ವಿರುದ್ಧ ನಿರ್ಭಯವಾಗಿ ನಿಲುವು ತೆಗೆದುಕೊಂಡಿದ್ದಕ್ಕಾಗಿ ಮೊಹಮ್ಮದ್ ದೀಪಕ್‌ ಅವರನ್ನು ಅಭಿನಂದಿಸಿದ್ದಾರೆ. “ಅವರಂತಹ ಜನರು ದೇಶದ ನಿಜವಾದ ಭರವಸೆ ಮತ್ತು ಶಕ್ತಿ” ಎಂದೂ ಪೋಸ್ಟ್ ಮಾಡಿದ್ದಾರೆ. ಈ ನಡುವೆ ಪೊಲೀಸರು ಕುಮಾರ್‌ಗೆ ರಕ್ಷಣೆ ಒದಗಿಸಿದ್ದಾರೆ ಮತ್ತು ಪಟ್ಟಣದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲೇನೋ ದೀಪಕ್‌ಗೆ ಬೆಂಬಲ ವ್ಯಕ್ತವಾಗಿದೆ. ಆದರೆ ದೀಪಕ್ ದುಡಿಮೆಗೆ ಕತ್ತರಿ ಬಿದ್ದಿದೆ. ಜಾನ್ ಬ್ರಿಟ್ಟಾಸ್ ಜಿಮ್ ಸದಸ್ಯತ್ವ ಪಡೆದಿರುವುದಾಗಿ ಹೇಳುತ್ತಿರುವಂತೆ ನೆಟ್ಟಿಗರೊಬ್ಬರು, “ನನಗೂ ಜಿಮ್ ಸದಸ್ಯತ್ವ ಪಡೆಯಬೇಕು ಅಥವಾ ಜಿಮ್‌ಗಾಗಿ ದೇಣಿಗೆ ನೀಡಬೇಕು, ದೀಪಕ್ ಅವರನ್ನು ಹೇಗೆ ಸಂಪರ್ಕಿಸುವುದು” ಎಂದು ಕೇಳಿದ್ದಾರೆ. ಇನ್ನೂ ಕೆಲವರು ದೇಣಿಗೆ ನೀಡಲು ಬಯಸುವುದಾಗಿ ಕಾಮೆಂಟ್ ಮಾಡಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಗೆ ಬಿಜೆಪಿ‌ ಸೇರುವಂತೆ ಗ್ಯಾನೇಶ್ ಕುಮಾರ್ ಆಹ್ವಾನಿಸಿದ್ದರು: ನಿವೃತ್ತ ಐಎಎಸ್ ಜಿಜಿ ಥಾಮ್ಸನ್

ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರು 2016ರಲ್ಲಿ ಸರ್ಕಾರಿ ಸೇವೆಯಲ್ಲಿದ್ದಾಗ...

ಏಕಪಕ್ಷೀಯ ನಿರ್ಧಾರ ವಿವಾದದ ಬೆನ್ನಲ್ಲೇ ಸಭೆ: ಸರ್ವಮತದಿಂದ ತೀಮಾರ್ನಗಳ ತಗೆದುಕೊಂಡಿದ್ದು ಎಂದ ಇಸಿಐ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...