ಭಾರತದಲ್ಲಿ ಅತಿ ಹೆಚ್ಚು ಕಳ್ಳತನವಾಗುತ್ತಿರುವ ಕಾರು-ಬೈಕ್‌ ಯಾವುದು ಗೊತ್ತಾ?

Date:

  • ಭಾರತದಲ್ಲಿ ಅತಿಹೆಚ್ಚು ಕಳ್ಳತನವಾಗುತ್ತಿರುವ ಕಾರು-ಬೈಕ್‌ ಪಟ್ಟಿ
  • ಸ್ಪ್ಲೆಂಡರ್‌ ಬೈಕ್‌, ವ್ಯಾಗನರ್‌, ಸ್ವಿಫ್ಟ್‌ ಕಾರುಕಳ್ಳರ ʻಮೊದಲ ಆಯ್ಕೆʼ

ನಾವು ಕಷ್ಟಪಟ್ಟು ದುಡಿದ ದುಡ್ಡಲ್ಲಿ ಇಷ್ಟಪಟ್ಟು ಖರೀದಿಸುವ ವಾಹನಗಳು ಹಠಾತ್ ಆಗಿ ಕಳ್ಳತನವಾಗಿಬಿಡುತ್ತವೆ. ಬೆಂಗಳೂರಿನಂತಹ ನಗರಗಳಲ್ಲಿ ರಾತ್ರಿ ನಿಲ್ಲಿಸಿದ ವಾಹನಗಳು ಬೆಳಗ್ಗಿನ ಹೊತ್ತು ಇರುತ್ತವೆ ಎಂಬುದಕ್ಕೆ ಯಾವುದೇ ಗ್ಯಾರೆಂಟಿ ಇಲ್ಲ. ಇದೀಗ ಭಾರತದಲ್ಲಿ ಅತಿಹೆಚ್ಚು ಕಳ್ಳತನವಾಗುತ್ತಿರುವ ಕಾರು-ಬೈಕ್‌ ಪಟ್ಟಿಯನ್ನು ಮಾಧ್ಯಮಗಳು ಪ್ರಕಟಿಸಿವೆ.

ಹೀರೋ ಹೋಂಡಾ ಕಂಪನಿಯ ಸ್ಪ್ಲೆಂಡರ್‌ ಬೈಕ್‌, ಮಾರುತಿ ಕಂಪನಿಯ ವ್ಯಾಗನರ್‌ ಮತ್ತು ಸ್ವಿಫ್ಟ್‌ ಕಾರುಗಳು ಭಾರತದಲ್ಲಿ ಕಳ್ಳರ ಪಾಲಿಗೆ ಸುಲಭದಲ್ಲಿ ʻಕೈಗೆಟಕುತ್ತಿರುವʼ ಕಾರು-ಬೈಕ್‌ ಪಟ್ಟಿಯಲ್ಲಿ ಸೇರಿವೆ.

ದೇಶದಲ್ಲಿ ಅತಿಹೆಚ್ಚು ವಾಹನಗಳು ಕಳ್ಳತನವಾಗುತ್ತಿರುವ ಕುಖ್ಯಾತಿ ರಾಜಧಾನಿ ದೆಹಲಿಗಿದೆ. ದೇಶದಲ್ಲಿ ಕಳ್ಳತನವಾಗುತ್ತಿರುವ ಒಟ್ಟು ವಾಹನಗಳ ಪೈಕಿ ಶೇ. 56ರಷ್ಟು ಪ್ರಕರಣಗಳು ಕೇವಲ ದೆಹಲಿಯೊಂದರಲ್ಲೇ ವರದಿಯಾಗುತ್ತಿವೆ.

ನಮ್ಮ ರಾಜ್ಯ ರಾಜಧಾನಿ, ಉದ್ಯಾನ ನಗರಿ ಬೆಂಗಳೂರು ವಾಹನ ಕಳ್ಳತನ ಪ್ರಕರಣಗಳಲ್ಲಿ ಎರಡನೇ ಸ್ಥಾನದಲ್ಲಿದ್ದು (ಶೇ.9) ಪಕ್ಕದ ಚೆನ್ನೈ (ಶೇ.5) ಮೂರನೇ ಸ್ಥಾನದಲ್ಲಿದೆ.

ಕೆಲವೊಂದು ವರದಿಗಳ ಪ್ರಕಾರ, ಭಾರತದಲ್ಲಿ ವರ್ಷದಲ್ಲಿ ಒಂದು ಸಾವಿರ ಕಾರುಗಳು ಕಳ್ಳತನವಾಗುತ್ತಿವೆ. ಅಂದರೆ ದೇಶದಲ್ಲಿ ಸರಾಸರಿ ಐದು ನಿಮಿಷಕ್ಕೆ ಒಂದು ಕಾರು ಕಳ್ಳರ ಪಾಲಾಗುತ್ತಿದೆ. ಇದಲ್ಲದೆ ಕಾರುಗಳ ಪೈಕಿ ಬಿಳಿ ಬಣ್ಣ ಕಳ್ಳರ ʻನೆಚ್ಚಿನ ಬಣ್ಣʼ!

ಕಳ್ಳರ ಕೈಗೆ ಸುಲಭ ತುತ್ತಾಗುತ್ತಿರುವ ಕಾರು-ಬೈಕ್ ಪಟ್ಟಿ

ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುತ್ತಿರುವ ಮಾರುತಿ-ಸುಝುಕಿ ಕಂಪನಿಯ ಜನಪ್ರಿಯ ಮಾಡೆಲ್‌ಗಳಾದ ಸ್ವಿಫ್ಟ್‌ ಮತ್ತು ವ್ಯಾಗನರ್‌ ಕಾರುಗಳು ದೇಶದಲ್ಲಿ ಅತ್ಯಂತ ಹೆಚ್ಚು ಕಳ್ಳತನವಾಗುತ್ತಿರುವ ಕಾರುಗಳ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನದಲ್ಲಿವೆ.

ದೇಶದ ಕಾರು ಮಾರುಕಟ್ಟೆಯಲ್ಲಿ ಮಾರುತಿ-ಸುಝುಕಿ ಕಂಪನಿಯ ಬಳಿಕ ಅತಿಹೆಚ್ಚು ಗ್ರಾಹಕರನ್ನು ಹೊಂದಿರುವುದು ದಕ್ಷಿಣ ಕೊರಿಯ ಮೂಲದ ಹ್ಯೂಂಡೈ. ಸಣ್ಣ ಎಸ್‌ಯುವಿ ವಿಭಾಗದಲ್ಲಿಅತಿಹೆಚ್ಚು ಮಾರಾಟವಾಗುತ್ತಿರುವ ಮಾಡೆಲ್‌ ಕ್ರೆಟಾ. ಆದರೆ, ಭಾರತದಲ್ಲಿ ಕಳ್ಳತನವಾಗುತ್ತಿರುವ ಕಾರುಗಳ ಪಟ್ಟಿಯಲ್ಲಿ ಕ್ರೆಟಾ ಎರಡನೇ ಸ್ಥಾನದಲ್ಲಿದೆ.

  

ಇದೇ ಕಂಪನಿಯ ಹಳೇಯ ಮಾಡೆಲ್‌ ಸ್ಯಾಂಟ್ರೋ, ಕಳ್ಳತನವಾಗುತ್ತಿರುವ ಕಾರುಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ʻಸಭ್ಯರ ಕಾರುʼ ಎಂದೇ ಕರೆಯಲ್ಪಡುವ ಹೋಂಡಾ ಸಿಟಿ ನಾಲ್ಕನೇ ಸ್ಥಾನ, ಮತ್ತು ಹ್ಯೂಂಡೈ i10 ಐದನೇ ಸ್ಥಾನದಲ್ಲಿದೆ.

ಜನಸಾಮಾನ್ಯರ ದಿನಿತ್ಯದ ಸಂಗಾತಿ ದ್ವಿಚಕ್ರ ವಾಹನಗಳ ವಿಚಾರಕ್ಕೆ ಬರುವುದಾದರೆ, ದೇಶದಲ್ಲಿ ಅತಿಹೆಚ್ಚು ಮಾರಾಟವಾಗುತ್ತಿರುವ ಮತ್ತು ಅತಿಹೆಚ್ಚು ಕಳ್ಳತನವಾಗುತ್ತಿರುವ ಬೈಕ್‌ ಒಂದೇ! ಅದುವೇ ಹೀರೋ ಕಂಪನಿಯ ಸ್ಪ್ಲೆಂಡರ್‌ ಬೈಕ್‌.

ಮಹಿಳೆಯರ ಪಾಲಿಗೆ ನೆಚ್ಚಿನ ಸಂಗಾತಿ ಮತ್ತು ಇತ್ತೀಚಿನ ದಿನಗಳಲ್ಲಿ ಪುರುಷರೂ ಸಹ ಹೆಚ್ಚಾಗಿ ಬಳಸುವ ಹೋಂಡಾ ಕಂಪನಿಯ ಆಕ್ಟಿವಾ ಸ್ಕೂಟರ್‌, ಕಳ್ಳರ ನೆಚ್ಚಿನ ದ್ವಿಚಕ್ರ ವಾಹನಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಯುವಕರ ಹಾಟ್‌ ಫೇವರಿಟ್‌ ಬಜಾಜ್‌ ಪಲ್ಸರ್‌ ಬೈಕ್‌ ಮತ್ತು ʻರಸ್ತೆ ಮೇಲಿನ ರಾಜʼ ಖ್ಯಾತಿಯ ರಾಯಲ್‌ ಎನ್‌ಫೀಲ್ಡ್‌ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ. ಟಿವಿಎಸ್‌ ಅಪಾಚೆ 5ನೇ ಸ್ಥಾನದಲ್ಲಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅ.4ರಿಂದ ಮತ್ತೆ ಚುನಾವಣಾ ಬಾಂಡ್: ‘ಬಿಜೆಪಿಗೆ ಚಿನ್ನದ ಫಸಲು’ ಎಂದ ಪಿ ಚಿದಂಬರಂ

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿವಾದಾತ್ಮಕ ಚುನಾವಣಾ ಬಾಂಡ್‌ಗಳನ್ನು ವಿತರಣೆ...

ಸಾರ್ವಜನಿಕ ಕಾರ್ಯಕ್ರಮದಲ್ಲಿ ಶಾಸಕಿಯ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ ಬಿಜೆಪಿ ಸಂಸದ ಸತೀಶ್ ಗೌತಮ್

ಉತ್ತರ ಪ್ರದೇಶದ ಬಿಜೆಪಿ ಸಂಸದ ಸತೀಶ್ ಗೌತಮ್ ಸಾರ್ವಜನಿಕ ಕಾರ್ಯಕ್ರಮವೊಂದರ ವೇದಿಕೆಯಲ್ಲೇ...

ದೆಹಲಿ | ಆಝಾದ್‌ಪುರ ಮಂಡಿಯಲ್ಲಿ ಭೀಕರ ಬೆಂಕಿ ಅವಘಡ

ಟೊಮ್ಯಾಟೋ ಬೆಲೆ ಏರಿಕೆ ಸಂದರ್ಭದಲ್ಲಿ ತರಕಾರಿ ಕೊಂಡುಕೊಳ್ಳಲಾಗದೆ ವ್ಯಾಪಾರಿ ರಾಮೇಶ್ವರ್‌ ಅವರ...

ಪಿಟಿಐ ಅಧ್ಯಕ್ಷರಾಗಿ ‘ಪ್ರಜಾವಾಣಿ’ಯ ನಿರ್ದೇಶಕ ಕೆ ಎನ್ ಶಾಂತಕುಮಾರ್ ಆಯ್ಕೆ

ದೇಶದ ಖ್ಯಾತ ಸುದ್ದಿ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ(ಪಿಟಿಐ)ದ...