ತುಮಕೂರು | ಎಚ್‌ಡಿಕೆ ಮತ್ತೊಮ್ಮೆ ಸಿಎಂ ಆಗಬೇಕು; ಮಲೆಮಹದೇಶ್ವರಕ್ಕೆ ಜೆಡಿಎಸ್ ಕಾರ್ಯಕರ್ತರ ಪಾದಯಾತ್ರೆ

Date:

ಎಚ್.ಡಿ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂದು ಬಯಸಿರುವ ಮಧುಗಿರಿ ತಾಲೂಕಿನ ಮೂವರು ಜೆಡಿಎಸ್‌ ಕಾರ್ಯಕರ್ತರು ಮಲೈಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ.

ತಾಲ್ಲೂಕಿನ ಶ್ರಾವಂಡನಹಳ್ಳಿ ಎಸ್.ಎ ಅಶೋಕ್, ಜಗದೀಶ್ ಹಾಗೂ ಮೂರ್ತಿ ಶ್ರಾವಂಡನಹಳ್ಳಿಯಿಂದ ಮಲೈಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿರುವ ಕಾರ್ಯಕರ್ತರು. ಎಚ್‌.ಡಿ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಬೇಕು. ಮಧುಗಿರಿ ಶಾಸಕ ವೀರಭದ್ರಯ್ಯ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಬೇಕು. ಗೌರಿಬಿದನೂರಿನ ಜೆಡಿಎಸ್ ಅಭ್ಯರ್ಥಿ ನರಸಿಂಹಮೂರ್ತಿ ಗೆಲುವು ಸಾಧಿಸಬೇಕೆಂದು ಹರಕೆ ಹೊತ್ತಿರುವ ಮೂವರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

ಮಾರ್ಚ್‌ 23ರಿಂದ ಪಾದಯಾತ್ರೆ ಹೊರಟಿರುವ ಮೂವರು ಮಂಡ್ಯ ಜಿಲ್ಲೆಯ ಭಾರತೀನಗರ ತಲುಪಿಸಿದ್ದಾರೆ. ಅವರನ್ನು ಅಲ್ಲಿನ ಸ್ಥಳೀಯ ಜೆಡಿಎಸ್ ಕಾರ್ಯಕರ್ತರು ಸ್ವಾಗತಿಸಿ ಅಭಿನಂದಿಸಿ ಬೀಳ್ಕೊಟ್ಟಿದ್ದಾರೆ.

“ಯುಗಾದಿ ಹಬ್ಬದ ಮಾರನೆಯ ದಿನದಿಂದ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ದಾರಿಯುದ್ದಕ್ಕೂ ನಮ್ಮ ಪಾದಯಾತ್ರೆಗೆ ಹಲವರು ಶುಭ ಹಾರೈಸುತ್ತಿದ್ದಾರೆ. ಎಲ್ಲರ ಬೆಂಬಲ ಸಂತಸ ತಂದಿದೆ” ಎಂದು ಪಾದಯಾತ್ರೆಗಳು ಹರ್ಷ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ?: ಆಡಳಿತ ಪಕ್ಷಕ್ಕೆ ಮತ್ತೊಂದು ಶಾಕ್‌: ಕೂಡ್ಲಿಗಿ ಬಿಜೆಪಿ ಶಾಸಕ ಎನ್‌ ವೈ ಗೋಪಾಲಕೃಷ್ಣ ಕಾಂಗ್ರೆಸ್‌ ಕಡೆ ಮುಖ

“ಎಚ್.ಡಿ.ಕುಮಾರಸ್ವಾಮಿ ತಮ್ಮ ಅವಧಿಯಲ್ಲಿ ಉತ್ತಮ ಆಡಳಿತ ನೀಡಿದ್ದಾರೆ. ಇದುವರೆವಿಗೂ ಅಂತಹ ಆಡಳಿತವನ್ನು ಯಾವ ಮುಖ್ಯಮಂತ್ರಿಗಳು ನೀಡಿಲ್ಲ. ಲಾಟರಿ, ಸಾರಾಯಿ ನಿಷೇಧ, ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡುತ್ತ ಉತ್ತಮ ಆಡಳಿತ ನೀಡಿ ಜನರ ಮನಸ್ಸನ್ನು ಗೆದ್ದಿದ್ದಾರೆ. ಇವರು ಆಯ್ಕೆಗೊಂಡರೆ ರಾಜ್ಯ ಅಭಿವೃದ್ದಿಗೊಳ್ಳುತ್ತದೆ ಎಂಬ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ” ಎಂದು ಎಸ್.ಎ ಅಶೋಕ್ ತಿಳಿಸಿದರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಜನಪ್ರಿಯ

ಈ ರೀತಿಯ ಹೆಚ್ಚು
Related

ಬೆಂಗಳೂರು | ಸಚಿವ ನಾರಾಯಣಗೌಡ ಭಾವಚಿತ್ರವಿರುವ ಬ್ಯಾಗ್‌ಗಳು ವಶ; ಎಫ್‌ಐಆರ್‌ ದಾಖಲು

ಸಚಿವ ಕೆ.ಸಿ ನಾರಾಯಣಗೌಡ ಭಾವಚಿತ್ರ ಮತ್ತು ಬಿಜೆಪಿ ಚಿಹ್ನೆ ಇರುವ ಬ್ಯಾಗ್‌ಗಳು...

ಎಸ್‌ಸಿ/ಎಸ್‌ಟಿ ಗುತ್ತಿಗೆ ಮೀಸಲು ಮೊತ್ತ ₹50 ಲಕ್ಷ ದಿಂದ ₹1 ಕೋಟಿಗೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ

2023ರ ಫೆಬ್ರವರಿ 17ರಂದು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಸಿಎಂ ₹1 ಕೋಟಿ ಮೊತ್ತದ...

ಬೀದರ್‌ | 30 ಕ್ಷೇತ್ರಗಳಲ್ಲಿ ಆರ್‌ಪಿಐ ಅಭ್ಯರ್ಥಿಗಳು ಸ್ಪರ್ಧೆ: ಮಹೇಶ ಗೋರನಾಳಕರ್

ಆರ್‌ಪಿಐ ಡಾ.ಬಿ ಆರ್ ಅಂಬೇಡ್ಕರ್ ಸ್ಥಾಪನೆ ಮಾಡಿದ ಪಕ್ಷ 'ಆರ್‌ಪಿಐಗೆ ಪಕ್ಷಕ್ಕೆ ಬೆಂಬಲ...

ಬೆಂಗಳೂರು | 1.1 ಲಕ್ಷ ದಾಟಿದ ಯುವ ಮತದಾರರ ಸಂಖ್ಯೆ

ಬೆಂಗಳೂರಿನಲ್ಲಿ ಈ ಹಿಂದೆ ಯುವ ಮತದಾರರ ಸಂಖ್ಯೆ 54,000 ಇತ್ತು ಮತದಾನದ...