30 ವಾರಗಳ ಗರ್ಭ; ಹೆಣ್ಣಿನ ಆಯ್ಕೆ ಮುಖ್ಯ ಎಂದ ಸುಪ್ರೀಂ ಕೋರ್ಟ್!

Date:

ಇದು ಕೇವಲ ಕಾನೂನಿನ ಪ್ರಶ್ನೆಯಲ್ಲ. ಇದು ಉಭಯಸಂಕಟದ ಪ್ರಶ್ನೆ. ಇನ್ನೂ ಜನ್ಮ ತಾಳದ, ತಾಯಿಗೆ ಬೇಡವಾದ, ಸಮಾಜದ ದೃಷ್ಟಿಯಲ್ಲಿ “ಅಕ್ರಮ” ಎನಿಸುವ ಒಂದು ಜೀವದ ಹಕ್ಕು, ಅಥವಾ ತನ್ನ ದೇಹದ ಮೇಲೆ ಪೂರ್ಣ ಸ್ವಾಯತ್ತತೆ ಹೊಂದಿರುವ ತಾಯಿಯ ಬದುಕು – ಯಾವುದು ಮೊದಲ ಆದ್ಯತೆ ಆಗಬೇಕು?- ಜಸ್ಟಿಸ್ ನಾಗರತ್ನ

- Advertisement -

ಸುಪ್ರೀಂ ಕೋರ್ಟ್ ಮುಂದೆ ಬಂದ ಈ ಪ್ರಕರಣವು ಕೇವಲ ವೈದ್ಯಕೀಯ ಅಥವಾ ಕಾನೂನು ವಿಚಾರವಾಗಿರಲಿಲ್ಲ. ಅದು ಸಮಾಜದ ನೈತಿಕತೆ, ಸಂವಿಧಾನದ ಆತ್ಮ, ಹೆಣ್ಣಿನ ದೇಹದ ಮೇಲೆ ಅವಳ ಹಕ್ಕು – ಇವನ್ನೆಲ್ಲ ಒಟ್ಟಿಗೆ ನಿಂತು ಪ್ರಶ್ನಿಸಿದ ಪ್ರಕರಣವಾಗಿತ್ತು. ಫೆಬ್ರವರಿ 6, ರಂದು ಸುಪ್ರೀಂ ಕೋರ್ಟ್‌ನಲ್ಲಿ ಅತ್ಯಂತ ಸೂಕ್ಷ್ಮವಾದ ನ್ಯಾಯಿಕ ಕ್ಷಣ ನಡೆಯಿತು. ಹದಿನೇಳು ವರ್ಷದ ಯುವತಿಯೊಬ್ಬಳು  ತಾನು ಮೈನರ್ ಆಗಿದ್ದಾಗ ಒಂದು ಸಂಬಂಧದಿಂದ ಗರ್ಭಧರಿಸಿದ್ದಳು. ತನ್ನ 30 ವಾರಗಳ ಗರ್ಭವನ್ನು ಕಾನೂನುಬದ್ಧವಾಗಿ ತೆಗೆದುಹಾಕಲು ಅನುಮತಿ ಕೋರಿದ್ದಳು. ಬಾಂಬೆ ಹೈಕೋರ್ಟ್ ಅದನ್ನು ನಿರಾಕರಿಸಿ, ಮಗುವನ್ನು ಹುಟ್ಟಿಸಿ ದತ್ತು ಕೊಡುವ ಸಲಹೆ ನೀಡಿತ್ತು. ಆದರೆ ಸುಪ್ರೀಂ ಕೋರ್ಟ್‌ನ ಜಸ್ಟಿಸ್ ಬಿ.ವಿ. ನಾಗರತ್ನ ಮತ್ತು ಜಸ್ಟಿಸ್ ಉಜ್ಜಲ್ ಭುಯಾನ್ ಅವರ ದ್ವಿಸದಸ್ಯ ಪೀಠ ಆ ನಿರ್ಣಯವನ್ನು ರದ್ದುಗೊಳಿಸಿ, ಯುವತಿಗೆ ಅನುಮತಿ ನೀಡಿದೆ. ಈ ತೀರ್ಪು ಕೇವಲ ಕಾನೂನಿನ ನಿರ್ಧಾರವಲ್ಲ, ಅದು ಮಾನವೀಯತೆಯನ್ನೂ ಮೆರೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಜಸ್ಟಿಸ್ ನಾಗರತ್ನ ಅವರು ನ್ಯಾಯಾಲಯದ ಪೀಠದಲ್ಲಿ ಹೇಳಿದ ಮಾತುಗಳು ಪ್ರತಿಧ್ವನಿಸುತ್ತವೆ. “ನಮಗೂ ಇದು ಕಷ್ಟವೇ. ಆದರೆ ಏನು ಮಾಡುವುದು? ನಾವು ಆಕೆಗೆ ಮಗುವನ್ನು ಹುಟ್ಟಿಸಲು ಒತ್ತಾಯಿಸಬೇಕೇ? ಹುಟ್ಟುವ ಮಗುವೂ ಒಂದು ಜೀವವೇ. ಆಕೆ ಮಗುವನ್ನು ಹುಟ್ಟಿಸಲು ಬಯಸುವುದಿಲ್ಲ. ಆಕೆ 24 ವಾರಗಳಲ್ಲಿ ತೆಗೆಸಬಹುದಾದರೆ, 30 ವಾರಗಳಲ್ಲಿ ಏಕೆ ಇಲ್ಲ? ಎಂದು ಪ್ರಶ್ನಿಸಿದೆ. 

justice nagaratna 1

ಇದು ಕೇವಲ ಕಾನೂನಿನ ಪ್ರಶ್ನೆಯಲ್ಲ. ಇದು ಉಭಯಸಂಕಟದ ಪ್ರಶ್ನೆ. ಇನ್ನೂ ಜನ್ಮ ತಾಳದ, ತಾಯಿಗೆ ಬೇಡವಾದ, ಸಮಾಜದ ದೃಷ್ಟಿಯಲ್ಲಿ “ಅಕ್ರಮ” ಎನಿಸುವ ಒಂದು ಜೀವದ ಹಕ್ಕು, ಅಥವಾ ತನ್ನ ದೇಹದ ಮೇಲೆ ಪೂರ್ಣ ಸ್ವಾಯತ್ತತೆ ಹೊಂದಿರುವ ತಾಯಿಯ ಬದುಕು – ಯಾವುದು ಮೊದಲ ಆದ್ಯತೆ ಆಗಬೇಕು?

ಹದಿವಯಸ್ಸಿನ ಬಾಲೆ, ಅವಳ ದೇಹ ಇನ್ನೂ ಸಂಪೂರ್ಣ ಬೆಳೆದಿಲ್ಲ. ಅವಳ ಮನಸ್ಸು ಈ ಹೊಣೆ ಹೊರುವ ಸ್ಥಿತಿಯಲ್ಲಿ ಇಲ್ಲ. ಅವಳ ಮುಂದೆ ಒಂದು ದೀರ್ಘ ಜೀವನವಿದೆ. ಈ ಗರ್ಭವನ್ನು ಮುಂದುವರಿಸುವುದರಿಂದ ಅವಳ ಮೇಲೆ ಬೀಳುವ ದೈಹಿಕ, ಮಾನಸಿಕ, ಸಾಮಾಜಿಕ ಗಾಯಗಳು ಯಾವತ್ತೂ ಕಾನೂನು ಪುಸ್ತಕಗಳಲ್ಲಿ ದಾಖಲಾಗುವುದಿಲ್ಲ. ಆದರೆ, ಅವು ಅವಳ ಬದುಕನ್ನೇ ಮುರಿಯಬಹುದು. ಈ ತೀರ್ಪಿನ ಅಂತರಾಳದಲ್ಲಿರುವ ಅಂಶ ಅಂದರೆ ಹೆಣ್ಣಿನ ದೇಹದ ಮೇಲೆ ನಿರ್ಣಯ ಮಾಡುವ ಹಕ್ಕು ಯಾರಿಗೆ? ರಾಜ್ಯಕ್ಕೆ? ಸಮಾಜಕ್ಕೆ? ಕಾನೂನಿಗೆ? ಅಥವಾ ಹೆಣ್ಣಿಗೇ? ಸುಪ್ರೀಮ್ ಕೋರ್ಟ್ ಸ್ಪಷ್ಟವಾಗಿ ಒಪ್ಪಿಕೊಂಡಿದೆ, ಹೆಣ್ಣಿನ ದೇಹದ ಮೇಲಿನ ಸ್ವಾಯತ್ತತೆ ಸಂವಿಧಾನದ Article 21 ಅಡಿಯಲ್ಲಿ ರಕ್ಷಿತವಾಗಿದೆ ಎಂದು. 

ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ, “ಗರ್ಭವು ಅಕ್ರಮವಾಗಿದೆ, ಏಕೆಂದರೆ ಆಕೆ ಮೈನರ್ ಆಗಿರುವುದರಿಂದ ಇಂತಹ ಪರಿಸ್ಥಿತಿಗೆ ತುತ್ತಾಗಿದ್ದಾಳೆ. ಕೊನೆಗೆ ಆ ಮಗುವು ಅಕ್ರಮವಾಗುತ್ತದೆ ಮತ್ತು ತಾಯಿಯೂ ಆ ಮಗುವನ್ನು ಸಲಹುವುದಿಲ್ಲ. ತಾಯಿಯ ಹಿತವನ್ನು ಗಣನೆಗೆ ತೆಗೆದುಕೊಂಡರೆ, ಆಕೆಯ ಸಂತಾನೋತ್ಪತ್ತಿ ಸ್ವಾಯತ್ತತೆಗೆ ಸಾಕಷ್ಟು ಒತ್ತು ನೀಡಬೇಕು. ನ್ಯಾಯಾಲಯವು ಯಾವುದೇ ಮಹಿಳೆಯನ್ನು – ಅದು ಮೈನರ್ ಆಗಿರಲಿ – ತನ್ನ ಇಚ್ಛೆಯ ವಿರುದ್ಧ ಗರ್ಭವನ್ನು ಮುಂದುವರಿಸಲು ಒತ್ತಾಯಿಸಲು ಸಾಧ್ಯವಿಲ್ಲ” ಎಂದು ಹೇಳಿದೆ. 

photo 6068964990741318955 y

ಈ ಮಾತುಗಳಲ್ಲಿ ಯಾವುದೇ ಆಕ್ರೋಶವಿಲ್ಲ, ಯಾವುದೇ ಘೋಷಣೆಯಿಲ್ಲ. ಕೇವಲ ಒಂದು ಆಳವಾದ ಮಾನವೀಯತೆ ಇತ್ತು. ನ್ಯಾಯಾಲಯವು ತಾಯಿಯ ಸ್ವಾಯತ್ತತೆಯನ್ನು ಆದ್ಯತೆಗೊಳಿಸಿದೆ. ಏಕೆಂದರೆ ಆಕೆಗೆ ಗರ್ಭವನ್ನು ಮುಂದುವರಿಸುವ ಇಚ್ಛೆ ಇಲ್ಲವಾದರೆ, ಆಕೆಯನ್ನು ಒತ್ತಾಯಿಸುವುದು ಅವಳ ದೇಹದ ಮೇಲಿನ ಹಕ್ಕನ್ನು ಕಸಿದುಕೊಂಡಂತೆ.

ಇದು ಭಾರತದಲ್ಲಿ ಮಹಿಳಾ ಹಕ್ಕುಗಳ ಇತಿಹಾಸದಲ್ಲಿ ಒಂದು ಮೈಲುಗಲ್ಲು. ಮೆಡಿಕಲ್ ಟರ್ಮಿನೇಶನ್ ಆಫ್ ಪ್ರೆಗ್ನೆನ್ಸಿ ಆಕ್ಟ್ 24 ವಾರಗಳ ನಂತರ ಸಾಮಾನ್ಯವಾಗಿ ಅನುಮತಿ ನೀಡುವುದಿಲ್ಲ. ಆದರೆ ಈ ಕೇಸ್‌ನಲ್ಲಿ ನ್ಯಾಯಾಲಯವು ಹೇಳಿದೆ – ಕಾನೂನು ಕೂಡ ಮಾನವೀಯತೆಯ ಜೊತೆ ನಿಲ್ಲುತ್ತದೆ. ತಾಯಿಯ ಮನಸ್ಸು, ಆಕೆಯ ಭವಿಷ್ಯ, ಆಕೆಯ ದೇಹ – ಇವುಗಳನ್ನು ಒಂದು ಸಂಖ್ಯೆಯ ಆಧಾರದ ಮೇಲೆ ತೂಗಲು ಸಾಧ್ಯವಿಲ್ಲ.

ಈ ತೀರ್ಪು “ಜೀವದ ಹಕ್ಕು ಮಹತ್ವದ್ದು. ಆದರೆ ಜೀವವನ್ನು ತನ್ನ ಇಚ್ಛೆಯ ವಿರುದ್ಧ ಹೊರುವುದು ಕೂಡ ಒಂದು ರೀತಿಯ ಹಕ್ಕಿನ ನಾಶ ಆಗಬಹುದು” ಎಂಬುವುದನ್ನ ಸಾರುತ್ತದೆ. ಈ ಎರಡು ಹಕ್ಕುಗಳ ನಡುವೆ ನ್ಯಾಯ ತೂಗುವುದು ನ್ಯಾಯಾಲಯಕ್ಕೆ ಮಾತ್ರವಲ್ಲ, ನಮಗೆಲ್ಲರಿಗೂ ಉಳಿದಿರುವ ಒಂದು ಸೂಕ್ಷ್ಮ ಕರ್ತವ್ಯ.

ಈ ಪ್ರಕರಣದಲ್ಲಿ ಗೆದ್ದವರು ಯಾರು? ಸೋತವರು ಯಾರು? ಅದು ಸ್ಪಷ್ಟವಿಲ್ಲ. ಆದರೆ ಒಂದು ವಿಷಯ ಮಾತ್ರ ಸ್ಪಷ್ಟ, ಸುಪ್ರೀಮ್ ಕೋರ್ಟ್ ಇಂದು ಹೆಣ್ಣನ್ನು ಕೇವಲ ಗರ್ಭವಾಹಿನಿಯಂತೆ ನೋಡಲಿಲ್ಲ. ಅವಳನ್ನು ಸಂಪೂರ್ಣ ಮಾನವನಂತೆ ನೋಡಿತು. ಇದು ಕೇವಲ ಒಂದು ತೀರ್ಪಲ್ಲ. ಇದು ಸಮಾಜಕ್ಕೆ ಹಾಕಿದ ಪ್ರಶ್ನೆ. ನಾವು ಹೆಣ್ಣಿನ ದೇಹದ ಮೇಲೆ ಅವಳಿಗಿಂತ ಹೆಚ್ಚು ಹಕ್ಕು ಹೊಂದಿದ್ದೇವೆ ಎಂದು ಭಾವಿಸುವುದನ್ನು ಯಾವಾಗ ನಿಲ್ಲಿಸುತ್ತೇವೆ?

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ ಕಂಗಾಲಾದ ಬಡ ಕಾರ್ಮಿಕರು

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶೂನ್ಯ ಜನವಸತಿ!

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ...