ಚೀನಾ ಶಾಕಿಂಗ್ ನಿರ್ಧಾರ; ಇಬ್ಬರು ಮಾಜಿ ರಕ್ಷಣಾ ಸಚಿವರಿಗೆ ಮರಣದಂಡನೆ?

Date:

ಚೀನಾ ಇಬ್ಬರು ಮಾಜಿ ರಕ್ಷಣಾ ಸಚಿವರನ್ನು ಏಕಕಾಲದಲ್ಲಿ ರಕ್ಷಣಾ ಇಲಾಖೆಯಿಂದ ಉಚ್ಚಾಟಿಸಿ, ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲು ಸಿದ್ಧತೆ ನಡೆಸಿದೆ. ಚೀನಾದ ಅತ್ಯಂತ ಶಕ್ತಿಶಾಲಿ ಪಡೆಯಾದ ‘ಪಿಎಲ್‌ಎ ರಾಕೆಟ್ ಫೋರ್ಸ್’ನಲ್ಲಿ ನಡೆದ ಸಾವಿರಾರು ಕೋಟಿ ರೂಪಾಯಿಗಳ ಹಣ ದುರುಪಯೋಗ ಮತ್ತು ಶಸ್ತ್ರಾಸ್ತ್ರ ಖರೀದಿ ಹಗರಣವೇ ಈ ನಿರ್ಧಾರಕ್ಕೆ ಮುಖ್ಯ ಕಾರಣ.

- Advertisement -

ಚೀನಾ ಮತ್ತೊಮ್ಮೆ ಅಧಿಕಾರ ಮತ್ತು ಮಿಲಿಟರಿ ಶಕ್ತಿಯ ಅತ್ಯುನ್ನತ ಸ್ತರಗಳಲ್ಲಿ ದೊಡ್ಡ ಕ್ರಾಂತಿಗೆ ಸಾಕ್ಷಿಯಾಗುತ್ತಿದೆ. ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ವಿರುದ್ಧ ದೊಡ್ಡ ಪಿತೂರಿ ನಡೆಯುತ್ತಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಇದಕ್ಕೆ ಕಾರಣ ಚೀನಾ ಸರ್ಕಾರವು ತನ್ನ ರಕ್ಷಣಾ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದ ಇಬ್ಬರು ಮಾಜಿ ಸಚಿವರಾದ ಲಿ ಶಾಂಗ್ಫು (Li Shangfu) ಮತ್ತು ವೇ ಫೆಂಗ್ಹೆ (Wei Fenghe) ಅವರ ಮೇಲೆ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಹೊರಿಸಿ, ಅವರನ್ನು ಕಮ್ಯುನಿಸ್ಟ್ ಪಕ್ಷದಿಂದ ಉಚ್ಛಾಟಿಸಿದೆ. ಚೀನಾದ ಇತಿಹಾಸದಲ್ಲಿ ಇಬ್ಬರು ಮಾಜಿ ರಕ್ಷಣಾ ಸಚಿವರು ಒಂದೇ ಸಮಯದಲ್ಲಿ ಇಂತಹ ಕಠಿಣ ಶಿಕ್ಷೆಗೆ ಗುರಿಯಾಗುತ್ತಿರುವುದು ಇದೇ ಮೊದಲು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...
WhatsApp Image 2026 05 08 at 5.22.38 PM

ಅವರು ಮಾಡಿದ ತಪ್ಪಾದರೂ ಏನು?

ಈ ಇಬ್ಬರು ನಾಯಕರ ಮೇಲೆ ಕೇಳಿಬಂದಿರುವ ಮುಖ್ಯ ಆರೋಪಗಳು ಹೀಗಿವೆ:-

ಇಬ್ಬರೂ ಸಚಿವರು ತಮ್ಮ ಅಧಿಕಾರವನ್ನು ಬಳಸಿಕೊಂಡು ಬೇರೆಯವರಿಂದ ಭಾರಿ ಪ್ರಮಾಣದ ಹಣ ಮತ್ತು ಉಡುಗೊರೆಗಳನ್ನು ಲಂಚವಾಗಿ ಪಡೆದಿದ್ದಾರೆ ಎಂಬುದು ತನಿಖೆಯಲ್ಲಿ ಸಾಬೀತಾಗಿದೆ. ಸೈನ್ಯದ ಒಪ್ಪಂದಗಳನ್ನು (Defence Deals) ನಿರ್ದಿಷ್ಟ ಕಂಪನಿಗಳಿಗೆ ನೀಡಲು ಇವರು ಸಹಾಯ ಮಾಡಿದ್ದರು ಎನ್ನಲಾಗಿದೆ.

ಚೀನಾದ ಕಮ್ಯುನಿಸ್ಟ್ ಪಕ್ಷದ ನಿಯಮಗಳ ಪ್ರಕಾರ, ನಾಯಕರು ಪಕ್ಷಕ್ಕೆ ಸಂಪೂರ್ಣವಾಗಿ ನಿಷ್ಠರಾಗಿರಬೇಕು. ಆದರೆ ಇವರು ವೈಯಕ್ತಿಕ ಲಾಭಕ್ಕಾಗಿ ಪಕ್ಷದ ತತ್ವಗಳನ್ನು ಗಾಳಿಗೆ ತೂರಿದ್ದಾರೆ ಎಂಬುದು ಸರ್ಕಾರದ ಮುಖ್ಯ ದೂರು. ಚೀನಾದ ಅತ್ಯಂತ ಶಕ್ತಿಶಾಲಿ ಪಡೆಯಾದ ‘ರಾಕೆಟ್ ಫೋರ್ಸ್’ಗೆ ಸಂಬಂಧಿಸಿದ ಖರೀದಿ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಹಣದ ದುರುಪಯೋಗ ನಡೆದಿದೆ. ವೇ ಫೆಂಗ್ಹೆ ಈ ಪಡೆಯ ಮುಖ್ಯಸ್ಥರಾಗಿದ್ದ ಕಾಲದಲ್ಲಿ ಭ್ರಷ್ಟಾಚಾರದ ಬೇರುಗಳು ಬೆಳೆದಿದ್ದವು ಎನ್ನಲಾಗಿದೆ. ಇಬ್ಬರೂ ನಾಯಕರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸೈನ್ಯದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಮತ್ತು ಅರ್ಹತೆಯಿಲ್ಲದವರಿಗೆ ಸ್ಥಾನ ನೀಡಿದ್ದಾರೆ ಎಂಬ ಆರೋಪವೂ ಇದೆ.

image 125

ಚೀನಾದ ಕಾನೂನು ವ್ಯವಸ್ಥೆಯು ಭ್ರಷ್ಟಾಚಾರದ ವಿಷಯದಲ್ಲಿ ಅತ್ಯಂತ ಕ್ರೂರವಾಗಿದೆ. ಅಲ್ಲಿನ ‘ಶೂನ್ಯ ಸಹಿಷ್ಣುತೆ’ (Zero Tolerance) ನೀತಿಯ ಅಡಿಯಲ್ಲಿ ಭ್ರಷ್ಟಾಚಾರವನ್ನು ದೇಶದ್ರೋಹಕ್ಕೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಭ್ರಷ್ಟಾಚಾರ ಮಾಡಿದವರು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಶಿಕ್ಷೆ ತಪ್ಪಿದ್ದಲ್ಲ ಎಂಬ ಸಂದೇಶವನ್ನು ಜನರಿಗೆ ಮತ್ತು ಇತರ ಅಧಿಕಾರಿಗಳಿಗೆ ನೀಡಲು ಚೀನಾ ಇಂತಹ ಕಠಿಣ ಕ್ರಮಕ್ಕೆ ಮುಂದಾಗುತ್ತದೆ. ರಕ್ಷಣಾ ಇಲಾಖೆಯಲ್ಲಿನ ಭ್ರಷ್ಟಾಚಾರವು ದೇಶದ ಭದ್ರತೆಯನ್ನು ಅಪಾಯಕ್ಕೆ ತಳ್ಳುತ್ತದೆ. ಕಳಪೆ ಗುಣಮಟ್ಟದ ಶಸ್ತ್ರಾಸ್ತ್ರಗಳ ಖರೀದಿ ಅಥವಾ ಗುಪ್ತ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇರುವುದರಿಂದ, ಇದನ್ನು ಗಂಭೀರ ಅಪರಾಧವೆಂದು ಪರಿಗಣಿಸಿ ಗರಿಷ್ಠ ಶಿಕ್ಷೆ ವಿಧಿಸಲಾಗುತ್ತದೆ. ಅಧ್ಯಕ್ಷ ಶೀ ಜಿನ್‌ಪಿಂಗ್ ಅವರು ಪಕ್ಷದ ಒಳಗಿರುವ ತನ್ನ ವಿರೋಧಿಗಳನ್ನು ಮಟ್ಟಹಾಕಲು ಮತ್ತು ತನ್ನ ಹಿಡಿತವನ್ನು ಬಿಗಿಗೊಳಿಸಲು ಇಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ಮಾತುಗಳೂ ಇವೆ.

WhatsApp Image 2026 05 08 at 5.22.58 PM

ಇನ್ನು ಚೀನಾದಲ್ಲಿ ಉನ್ನತ ಮಟ್ಟದ ಅಧಿಕಾರಿಗಳಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ನೀಡುವುದು ಹೊಸದೇನಲ್ಲ. ಇದಕ್ಕೆ ಕೆಲವು ಪ್ರಮುಖ ಉದಾಹರಣೆಗಳಿವೆ. 

ಲೈ ಶಿಯಾವೊಮಿನ್ (Lai Xiaomin): 2021ರಲ್ಲಿ ಚೀನಾದ ಅತಿದೊಡ್ಡ ಆಸ್ತಿ ನಿರ್ವಹಣಾ ಕಂಪನಿಯ ಮಾಜಿ ಮುಖ್ಯಸ್ಥನಿಗೆ ಭ್ರಷ್ಟಾಚಾರ ಮತ್ತು ಬಹುಪತ್ನಿತ್ವದ ಆರೋಪದ ಮೇಲೆ ಮರಣದಂಡನೆ ವಿಧಿಸಿ, ಅದನ್ನು ಜಾರಿಗೆ ತರಲಾಯಿತು.

ಜೌ ಯೋಂಗ್‌ಕಾಂಗ್ (Zhou Yongkang): ಇವರು ಚೀನಾದ ಭದ್ರತಾ ವಿಭಾಗದ ಅತ್ಯಂತ ಪ್ರಭಾವಿ ನಾಯಕರಾಗಿದ್ದರು. ಇವರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ಇವರು ಅಧ್ಯಕ್ಷ ಶೀ ಜಿನ್‌ಪಿಂಗ್ ವಿರುದ್ಧವೇ ಸಂಚು ರೂಪಿಸಿದ್ದರು ಎಂಬ ವದಂತಿ ಇತ್ತು.

ಕ್ಸು ಸೈಹೌ ಮತ್ತು ಗುವೋ ಬೋಕ್ಸಿಯಾಂಗ್: ಇವರು ಚೀನಾದ ಸೇನೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಜನರಲ್‌ಗಳು. ಇವರ ವಿರುದ್ಧವೂ ಭ್ರಷ್ಟಾಚಾರದ ತನಿಖೆ ನಡೆಸಿ, ಅಧಿಕಾರದಿಂದ ತೆಗೆದುಹಾಕಲಾಗಿತ್ತು. ಇವರಲ್ಲಿ ಒಬ್ಬರು ವಿಚಾರಣೆಯ ಹಂತದಲ್ಲೇ ಕ್ಯಾನ್ಸರ್‌ನಿಂದ ಸಾವನ್ನಪ್ಪಿದರೆ, ಮತ್ತೊಬ್ಬರಿಗೆ ಜೀವಾವಧಿ ಶಿಕ್ಷೆಯಾಗಿದೆ.

ಚೀನಾದ ಈ ನಿರ್ಧಾರವು ಇಡೀ ಜಗತ್ತಿನ ಗಮನ ಸೆಳೆದಿದೆ. ವಿಶೇಷವಾಗಿ ಅಮೆರಿಕದಂತಹ ರಾಷ್ಟ್ರಗಳು ಚೀನಾದ ಸೈನ್ಯದ ಒಳಗಿರುವ ಅಸ್ಥಿರತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ರಕ್ಷಣಾ ಸಚಿವರೇ ಭ್ರಷ್ಟಾಚಾರದಲ್ಲಿ ತೊಡಗಿದ್ದರೆ, ಆ ದೇಶದ ಯುದ್ಧ ಸಿದ್ಧತೆ ಮತ್ತು ಶಸ್ತ್ರಾಸ್ತ್ರಗಳ ಗುಣಮಟ್ಟದ ಮೇಲೆ ಸಂಶಯ ಮೂಡುವುದು ಸಹಜ. ಚೀನಾದಲ್ಲಿ ಮರಣದಂಡನೆ ವಿಧಿಸಿದರೂ, ಅದನ್ನು ತಕ್ಷಣ ಜಾರಿಗೆ ತರದೆ “ಅಮಾನತುಗೊಳಿಸಿದ ಮರಣದಂಡನೆ” (Death Sentence with Reprieve) ಆಗಿ ನೀಡುವ ಪದ್ಧತಿಯೂ ಇದೆ. ಅಂದರೆ, ಎರಡು ವರ್ಷಗಳ ಕಾಲ ಜೈಲಿನಲ್ಲಿ ಅವರ ನಡವಳಿಕೆ ಹೇಗಿದೆ ಅನ್ನೋದರ ಮೇಲೆ ಅದನ್ನು ಜೀವಾವಧಿ ಶಿಕ್ಷೆಯಾಗಿ ಬದಲಾಯಿಸಲಾಗುತ್ತದೆ. ಆದರೆ, ಆರೋಪ ಅತ್ಯಂತ ಗಂಭೀರವಾಗಿದ್ದರೆ ಮಾತ್ರ ಗಲ್ಲಿಗೇರಿಸುವ ಅಥವಾ ಗುಂಡಿಕ್ಕಿ ಕೊಲ್ಲುವ ಶಿಕ್ಷೆಯನ್ನು ಜಾರಿಗೊಳಿಸಲಾಗುತ್ತದೆ.

11 25

ವಾಸ್ತವವಾಗಿ, ಕಳೆದ ವರ್ಷ ಅಕ್ಟೋಬರ್‌ನಿಂದ, ಚೀನಾದ ಮಿಲಿಟರಿಯ ಕನಿಷ್ಠ 11 ಉನ್ನತ ಕಮಾಂಡರ್‌ಗಳನ್ನು ತೆಗೆದುಹಾಕಲಾಗಿದೆ. ಈ ಅಧಿಕಾರಿಗಳಲ್ಲಿ ಹಲವರು ವೆಸ್ಟರ್ನ್ ಥಿಯೇಟರ್ ಕಮಾಂಡ್ (ಡಬ್ಲ್ಯೂಟಿಸಿ) ಯೊಂದಿಗೆ ನೇರವಾಗಿ ಸಂಬಂಧ ಹೊಂದಿದ್ದಾರೆ. ಆದ್ದರಿಂದ, ಈ ಕ್ರಮವನ್ನು ಆಂತರಿಕ ಶುದ್ಧೀಕರಣವಾಗಿ ಮಾತ್ರವಲ್ಲದೆ, ಕಾರ್ಯತಂತ್ರದ ಮತ್ತು ರಾಜಕೀಯ ಸಂದೇಶವಾಗಿಯೂ ನೋಡಲಾಗುತ್ತಿದೆ. 2012ರಲ್ಲಿ ಕ್ಸಿ ಜಿನ್‌ಪಿಂಗ್ ಅಧಿಕಾರಕ್ಕೆ ಬಂದ ನಂತರ ಪ್ರಾರಂಭಿಸಲಾದ ಭ್ರಷ್ಟಾಚಾರ ವಿರೋಧಿ ಅಭಿಯಾನದಲ್ಲಿ ಇಬ್ಬರು ಮಾಜಿ ರಕ್ಷಣಾ ಮಂತ್ರಿಗಳು ಸೇರಿದಂತೆ ಡಜನ್‌ಗಟ್ಟಲೆ ಹಿರಿಯ ಪಿಎಲ್‌ಎ ಅಧಿಕಾರಿಗಳ ಮೇಲೆ ಮೊಕದ್ದಮೆ ಹೂಡಲಾಗಿದೆ ಎಂಬುದು ಗಮನಾರ್ಹ. ಸರ್ಕಾರಿ ಅಂಕಿಅಂಶಗಳ ಪ್ರಕಾರ, ಈ ಅಭಿಯಾನದಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಅಧಿಕಾರಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಈ ಅಭಿಯಾನವು ಭ್ರಷ್ಟಾಚಾರವನ್ನು ನಿಗ್ರಹಿಸುವುದಾಗಿ ಹೇಳಿಕೊಂಡರೂ, ಪಕ್ಷ ಮತ್ತು ಮಿಲಿಟರಿಯ ಮೇಲಿನ ಕ್ಸಿ ಜಿನ್‌ಪಿಂಗ್ ಅವರ ಹಿಡಿತವನ್ನು ಸ್ಥಿರವಾಗಿ ಬಲಪಡಿಸಿದೆ ಎಂದು ವಿಮರ್ಶಕರು ಹೇಳುತ್ತಾರೆ. 

ಇನ್ನು ಭಾರತದಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟದ ನೈಜ ಸ್ಥಿತಿಯನ್ನು ವಿಶ್ಲೇಷಿಸಿದರೆ, ಕಾನೂನಿಗಿಂತ ರಾಜಕೀಯ ಲಾಭ-ನಷ್ಟಗಳೇ ಮೇಲುಗೈ ಸಾಧಿಸುತ್ತಿರುವುದು ಕಂಡುಬರುತ್ತದೆ. ಚೀನಾದಲ್ಲಿ ಭ್ರಷ್ಟರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುವ ವ್ಯವಸ್ಥೆಯಿದ್ದರೆ, ಭಾರತದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತ ನಾಯಕರೇ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಡಂಬನೆಯ ಸನ್ನಿವೇಶವಿದೆ. ಪ್ರಧಾನಿ ಮೋದಿ ಅವರು ‘ನಾ ಖಾವುಂಗಾ, ನಾ ಖಾನೇ ದೂಂಗಾ’ (ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ) ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದರೂ, ವಾಸ್ತವದಲ್ಲಿ ‘ಆಪರೇಷನ್ ಕಮಲ’ದಂತಹ ತಂತ್ರಗಳ ಮೂಲಕ ಇತರ ಪಕ್ಷಗಳ ಭ್ರಷ್ಟ ಆರೋಪಿಗಳನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವುದು ಸಾರ್ವಜನಿಕ ಚರ್ಚೆಯ ವಿಷಯವಾಗಿದೆ. ಇದನ್ನು ವಿರೋಧ ಪಕ್ಷಗಳು ‘ಬಿಜೆಪಿ ವಾಷಿಂಗ್ ಮಷೀನ್’ ಎಂದು ವ್ಯಂಗ್ಯವಾಡುತ್ತಿವೆ; ಅಂದರೆ, ತನಿಖಾ ಸಂಸ್ಥೆಗಳಾದ ಇಡಿ (ED) ಅಥವಾ ಸಿಬಿಐ (CBI) ಕಪಿಮುಷ್ಠಿಯಲ್ಲಿದ್ದ ನಾಯಕರು ಒಮ್ಮೆ ಆಡಳಿತ ಪಕ್ಷಕ್ಕೆ ಸೇರಿದ ಕೂಡಲೇ ಅವರ ಮೇಲಿನ ಕೇಸ್‌ಗಳು ಖುಲಾಸೆಯಾಗುವುದು ಅಥವಾ ಅವರು ‘ಶುದ್ಧಹಸ್ತ’ರಾಗಿ ಹೊರಬರುವುದು ಇಲ್ಲಿನ ದೊಡ್ಡ ವಿಪರ್ಯಾಸ. ಇದರಿಂದಾಗಿ, ಭಾರತದಲ್ಲಿ ಭ್ರಷ್ಟಾಚಾರದ ವಿರುದ್ಧದ ಕಾನೂನುಗಳು ಕೇವಲ ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಬಳಕೆಯಾಗುವ ಅಸ್ತ್ರಗಳಾಗಿವೆಯೇ ಹೊರತು, ಭ್ರಷ್ಟಾಚಾರ ನಿರ್ಮೂಲನೆ ಮಾಡುವ ನೈಜ ಇಚ್ಛಾಶಕ್ತಿ ಇಲ್ಲಿ ಕಾಣಿಸುತ್ತಿಲ್ಲ. ಅಂತಿಮವಾಗಿ, ಕಡು ಭ್ರಷ್ಟರು ಜೈಲಿಗೆ ಹೋಗುವ ಬದಲು ಅಧಿಕಾರದ ಪಟ್ಟದಲ್ಲಿ ರಾಜಾರೋಷವಾಗಿ ಮೆರೆಯುತ್ತಿರುವುದು ಭಾರತೀಯ ಪ್ರಜಾಪ್ರಭುತ್ವದ ದುರಂತವಾಗಿದೆ. 

10 14

ಸೋ ಒಟ್ಟಾರೆಯಾಗಿ ಹೇಳುವುದಾದರೆ, ಲಿ ಶಾಂಗ್ಫು ಮತ್ತು ವೇ ಫೆಂಗ್ಹೆ ಅವರ ಪ್ರಕರಣವು ಚೀನಾದ ರಾಜಕೀಯದಲ್ಲಿ ಒಂದು ದೊಡ್ಡ ಸಂಚಲನ ಮೂಡಿಸಿದೆ. ಇದು ಕೇವಲ ಭ್ರಷ್ಟಾಚಾರದ ವಿರುದ್ಧದ ಹೋರಾಟವೋ ಅಥವಾ ಅಧಿಕಾರದ ಹಿಡಿತ ಸಾಧಿಸುವ ತಂತ್ರವೋ ಎಂಬುದು ಚರ್ಚೆಯ ವಿಷಯವಾದರೂ, ಚೀನಾ ಸರ್ಕಾರವು ತನ್ನ ಸೈನ್ಯದ ಗೌಪ್ಯತೆಗೆ ಆದ್ಯತೆ ನೀಡುತ್ತಿದೆ ಎಂಬುದು ಮಾತ್ರ ಸ್ಪಷ್ಟ. ಭ್ರಷ್ಟಾಚಾರದ ಪಿಡುಗು ದೇಶದ ಬೆನ್ನೆಲುಬಾದ ಸೈನ್ಯವನ್ನೇ ಕೊರೆಯುತ್ತಿರುವುದು ಚೀನಾಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಇಬ್ಬರು ನಾಯಕರ ಭವಿಷ್ಯವು ಈಗ ಚೀನಾದ ನ್ಯಾಯಾಲಯಗಳ ಕೈಯಲ್ಲಿದ್ದು, ಅಲ್ಲಿನ ಕಠಿಣ ಕಾನೂನುಗಳು ಅವರಿಗೆ ಗರಿಷ್ಠ ಶಿಕ್ಷೆ ನೀಡುವ ಸಾಧ್ಯತೆಗಳೇ ಹೆಚ್ಚಾಗಿವೆ.

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...