ದೇಶದಲ್ಲಿ ಹೆಚ್ಚುತ್ತಿದೆ ‘ಸಕ್ಕರೆ’ ಕಹಿ: ಮಧುಮೇಹದ ಬಗ್ಗೆ ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆ ಹೇಳುವುದೇನು?

Date:

ಜನರಲ್ಲಿ ಸಮತೋಲಿತ ಆಹಾರ, ಯೋಗ, ದೈಹಿಕ ವ್ಯಾಯಾಮ ಹಾಗೂ ಮಾನಸಿಕ ಒತ್ತಡ ನಿರ್ವಹಣೆಯ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವುದು ಅಗತ್ಯ. ಏನೇ ಆದರೂ ಆರೋಗ್ಯಕರ ದೇಶ ನಿರ್ಮಾಣಕ್ಕೆ ಕೇವಲ ಚಿಕಿತ್ಸೆ ಮಾತ್ರವಲ್ಲ , ಬದಲಾಗಿ 'ಮುಂಜಾಗ್ರತೆ'ಯೇ ಏಕೈಕ ಮಂತ್ರ.  

ಮಧುಮೇಹ (ಡಯಾಬಿಟೀಸ್) ಇಂದು ಸಾಮಾನ್ಯವಾಗಿಯೇ ಕಾಣಿಸಿಕೊಳ್ಳುವ ಕಾಯಿಲೆ. ಈ ಸಕ್ಕರೆ ಕಾಯಿಲೆ ಪ್ರಮಾಣವು 2019ರ ನಂತರದ ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆಯ (NFHS) ಇತ್ತೀಚಿನ ವರದಿ ಹೇಳಿದೆ. ಸದ್ಯ ಬದಲಾಗುತ್ತಿರುವ ಜೀವನಶೈಲಿ, ಅತಿಯಾದ ಮಾನಸಿಕ ಒತ್ತಡ, ಕೂತು ಕೆಲಸ- ಮೊದಲಾದವುಗಳಿಂದಾಗಿ ಸಕ್ಕರೆ ಕಾಯಿಲೆಯು ಯುವಕರು ಮತ್ತು ಮಧ್ಯವಯಸ್ಕರನ್ನೇ ಗುರಿಯಾಗಿಸಿಕೊಳ್ಳುತ್ತಿದೆ.

- Advertisement -

ದೇಶದಲ್ಲಿ ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಕೇವಲ ಒಂದು ಆರೋಗ್ಯ ಸಮಸ್ಯೆಯಾಗಿ ಉಳಿಯದೆ, ಗಂಭೀರ ಸಾಂಕ್ರಾಮಿಕದಂತೆ ಹರಡುತ್ತಿದೆ ಎಂಬುದನ್ನು ಈ ಸಮೀಕ್ಷೆಯು ಸ್ಪಷ್ಟಪಡಿಸಿದೆ. ಆರಂಭದಲ್ಲಿ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಈ ಕಾಯಿಲೆ ಈಗ ಗ್ರಾಮೀಣ ಭಾಗಗಳಿಗೂ ಲಗ್ಗೆ ಇಟ್ಟಿದೆ. ಈ ಬೆಳವಣಿಗೆ ಒಟ್ಟಾರೆಯಾಗಿ ದೇಶದ ಆರೋಗ್ಯ ಕ್ಷೇತ್ರಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಪ್ರಾಥಮಿಕ ಹಂತದಲ್ಲೇ ಕಾಯಿಲೆ ಪತ್ತೆಹಚ್ಚಿ ಜಾಗೃತರಾಗಿರುವುದು ಎಷ್ಟು ಮುಖ್ಯ ಎಂಬುದನ್ನು ಈ ಸಮೀಕ್ಷಾ ವರದಿ ಹೇಳುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಇದನ್ನು ಓದಿದ್ದೀರಾ?

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಕೆಎಂಎಫ್‌ನಿಂದ ಹೊಸ ಹೆಜ್ಜೆ: ಮಧುಮೇಹಿಗಳಿಗಾಗಿ ‘ಸಕ್ಕರೆ ರಹಿತ ಉತ್ಪನ್ನ’ ಬಿಡುಗಡೆ; ಬೆಲೆ ಎಷ್ಟು?

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ದೇಶಾದ್ಯಂತ ನಡೆಸಲಾಗುವ ಒಂದು ಬೃಹತ್, ಬಹು ಸುತ್ತಿನ ಸಮೀಕ್ಷೆಯಾಗಿದೆ. ಜನಸಂಖ್ಯೆ, ಆರೋಗ್ಯ, ಪೋಷಣೆ ಮತ್ತು ಕುಟುಂಬ ಕಲ್ಯಾಣ ಸೂಚಕಗಳ ಕುರಿತು ವಿಶ್ವಾಸಾರ್ಹ ಡೇಟಾವನ್ನು ಈ ಸಮೀಕ್ಷೆ ಒದಗಿಸುತ್ತದೆ. ದೇಶದ ಆರೋಗ್ಯ ದತ್ತಾಂಶದ ಅತ್ಯಂತ ಸಮಗ್ರ ಮೂಲಗಳಲ್ಲಿ ಒಂದು ಈ ಸಮೀಕ್ಷೆಯಾಗಿದೆ.

ಸಮೀಕ್ಷೆಯ ವ್ಯಾಪ್ತಿ ಮತ್ತು ವಿಧಾನ

ಮಣಿಪುರ ಹೊರತುಪಡಿಸಿ, ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 715 ಜಿಲ್ಲೆಗಳಲ್ಲಿ ಸುಮಾರು 6.79 ಲಕ್ಷ ಮನೆಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಫಲವತ್ತತೆ ಮತ್ತು ಗರ್ಭನಿರೋಧಕ, ತಾಯಿ ಮತ್ತು ಮಕ್ಕಳ ಆರೋಗ್ಯ, ಪೌಷ್ಠಿಕಾಂಶ, ಲಸಿಕೆ, ಸಾಂಕ್ರಾಮಿಕವಲ್ಲದ ರೋಗಗಳು, ಕೌಟುಂಬಿಕ ಹಿಂಸಾಚಾರ, ಮಹಿಳಾ ಸಬಲೀಕರಣ, ನೈರ್ಮಲ್ಯ ವಿಚಾರಗಳ ಬಗ್ಗೆ ಸಮೀಕ್ಷೆಯನ್ನು ನಡೆಲಾಗುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು (MoHFW) ಈ ಸಮೀಕ್ಷೆಯನ್ನು ನಡೆಸುತ್ತದೆ. ಮುಂಬೈನಲ್ಲಿರುವ ‘ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸೈನ್ಸಸ್’ (IIPS) ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಸಂಶೋಧನೆಯ ಪ್ರಮುಖ ಅಂಶಗಳು
  • ತಾಯಂದಿರು ಮತ್ತು ಮಕ್ಕಳ ಆರೋಗ್ಯ

ತಾಯಿ ಮತ್ತು ಮಕ್ಕಳ ಆರೋಗ್ಯ ಸೂಚಕಗಳಲ್ಲಿ ದೇಶ ಗಮನಾರ್ಹ ಪ್ರಗತಿಯನ್ನು ದಾಖಲಿಸಿರುವುದಾಗಿ ಸಮೀಕ್ಷೆಯು ಹೇಳಿದೆ. ದೇಶದಲ್ಲಿ ಸಿಸೇರಿಯನ್ ಹೆರಿಗೆಯು (ಸಿ-ಸೆಕ್ಷನ್ ಹೆರಿಗೆಗಳು) 21.5%ರಿಂದ 27.2% ಕ್ಕೆ ತೀವ್ರವಾಗಿ ಏರಿದೆ. ಖಾಸಗಿ ಆಸ್ಪತ್ರೆಗಳಲ್ಲಿ ದರವು 47.4% ರಿಂದ 54.1% ಕ್ಕೆ ಏರಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ದರವು 14.3% ರಿಂದ 16.9% ಕ್ಕೆ ಏರಿದೆ. ನಗರ ಪ್ರದೇಶಗಳಲ್ಲಿ, ದರವು 40% ರಷ್ಟಿದ್ದು, WHO ನಿಗದಿಪಡಿಸಿದ 10-15% ರ ಮಿತಿಯನ್ನು ಮೀರಿದೆ.

ಇನ್ನು 95.9% ಗರ್ಭಿಣಿಯರಿಗೆ ಪ್ರಸವಪೂರ್ವ ಆರೈಕೆ ದೊರೆಯುತ್ತಿದೆ. ಮೊದಲ ತ್ರೈಮಾಸಿಕದಲ್ಲಿ 76.2% ಮಹಿಳೆಯರಗೆ ಆರೈಕೆ ಲಭಿಸಿದೆ. 100+ ದಿನಗಳವರೆಗೆ ಐರನ್-ಫೋಲಿಕ್ ಆಸಿಡ್ (IFA) ಪೂರಕಗಳನ್ನು ಸೇವಿಸುವ ತಾಯಂದಿರ ಸಂಖ್ಯೆ 44.1% ರಿಂದ 54.9% ಕ್ಕೆ ಏರಿದೆ. 180+ ದಿನಗಳವರೆಗೆ IFA ಪೂರಕಗಳನ್ನು ಸೇವಿಸುವವರು 26% ರಿಂದ 37.8% ಕ್ಕೆ ಏರಿದ್ದಾರೆ.

5 ವರ್ಷದೊಳಗಿನ ಮಕ್ಕಳಲ್ಲಿ ಕುಂಠಿತ ಪ್ರಮಾಣ 35.5% ರಿಂದ 29.3% ಕ್ಕೆ ಇಳಿದಿದೆ. ತೀವ್ರ ತೂಕ ನಷ್ಟವು 7.7% ರಿಂದ 5.2% ಕ್ಕೆ ಇಳಿದಿದೆ. ಕಡಿಮೆ ತೂಕವಿರುವ ಮಕ್ಕಳು 32.1% ರಿಂದ 31.8% ಕ್ಕೆ ಇಳಿದಿದ್ದಾರೆ. ಇನ್ನೊಂದೆಡೆ ತೀವ್ರ ಉಸಿರಾಟದ ಸೋಂಕಿನ ಲಕ್ಷಣಗಳು 2.8% ರಿಂದ 1.9% ಕ್ಕೆ ಇಳಿದಿದೆ. ತೀವ್ರ ಅತಿಸಾರದ ಹರಡುವಿಕೆಯು 0.5% ಕ್ಕೆ ಇಳಿದಿದೆ. ಆರು ತಿಂಗಳೊಳಗಿನ 95.6% ಶಿಶುಗಳಿಗೆ ಸಮೀಕ್ಷೆಯ ಅವಧಿಯಲ್ಲಿ ಎದೆಹಾಲುಣಿಸಲಾಗುತ್ತಿತ್ತು.

ಇದನ್ನು ಓದಿದ್ದೀರಾ? RBSK ವರದಿ | ಬಾಲ್ಯದಲ್ಲೇ ಹೆಚ್ಚಾದ ಹೈಪರ್‌ ಟೆನ್ಶನ್! ತಜ್ಞರು ಹೇಳುವುದೇನು?

ಸಾಂಕ್ರಾಮಿಕವಲ್ಲದ ರೋಗಗಳ ಹೆಚ್ಚಳ

ಸಾಂಕ್ರಾಮಿಕವಲ್ಲದ ರೋಗಗಳು ಮತ್ತು ಜೀವನಶೈಲಿ ಸಂಬಂಧಿತ ರೋಗಗಳ ಪ್ರಮಾಣ ಹೆಚ್ಚಾಗುತ್ತಿದೆ ಎಂದು NFHS ಹೇಳಿದೆ. ಬೊಜ್ಜಿನ ಸಮಸ್ಯೆ ತೀವ್ರ ಏರಿಕೆಯಾಗುತ್ತಿದೆ. 15-49 ವರ್ಷ ವಯಸ್ಸಿನ ಮಹಿಳೆಯರಲ್ಲಿ ಅಧಿಕ ತೂಕ ಅಥವಾ ಬೊಜ್ಜು ಪ್ರಮಾಣವು 24% ರಿಂದ 30.7% ಕ್ಕೆ ಏರಿದೆ. ನಗರದಲ್ಲಿ 42.8% ಮಹಿಳೆಯರು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 25.5% ಮಹಿಳೆಯರು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದಾರೆ. 15-49 ವರ್ಷ ವಯಸ್ಸಿನ ಪುರುಷರಲ್ಲಿ ಅಧಿಕ ತೂಕ ಅಥವಾ ಬೊಜ್ಜು ಪ್ರಮಾಣವು 22.9% ರಿಂದ 27.3% ಕ್ಕೆ ಏರಿದೆ. ನಗರದಲ್ಲಿ 36.3% ಪುರುಷರು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 23% ಪುರುಷರು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದಾರೆ.

sugar 1

ಮಧುಮೇಹ ಪ್ರಮಾಣ ಹೆಚ್ಚಳ

ಸಕ್ಕರೆ ಕಾಯಿಲೆ (> 140 mg/dl) ಇರುವ ಪುರುಷರ ಪ್ರಮಾಣವು 15.6% ರಿಂದ 20.9% ಕ್ಕೆ ಏರಿದೆ. ನಗರ ಪ್ರದೇಶದ ಪುರುಷರಲ್ಲಿ 23.9%, ಗ್ರಾಮೀಣ ಪ್ರದೇಶದಲ್ಲಿ ಪುರುಷರಲ್ಲಿ 19.7% ಮಧುಮೇಹ ಅಧಿಕವಾಗಿದೆ. ಅಧಿಕ ರಕ್ತದ ಸಕ್ಕರೆ ಇರುವ ಮಹಿಳೆಯರ ಪ್ರಮಾಣವು 13.5% ರಿಂದ 17.8% ಕ್ಕೆ ಏರಿದೆ. ನಗರ ಪ್ರದೇಶಗಳಲ್ಲಿ 21.9% ಮಹಿಳೆಯರು ಗ್ರಾಮೀಣ ಪ್ರದೇಶಗಳಲ್ಲಿ 16.2%. ಮಹಿಳೆಯರು ಮಧುಮೇಹ ಹೊಂದಿದ್ದಾರೆ.

ಒಟ್ಟಾರೆಯಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಅತಿಯಾದ ಸಿ-ಸೆಕ್ಷನ್ ಹೆರಿಗೆಗಳು ಅನಗತ್ಯವಾಗಿ ಆಪರೇಷನ್‌ ಮಾಡಿ ಹಣ ಪಡೆಯುವ ಹುನ್ನಾರವನ್ನು ಸಾಬೀಗುಪಡಿಸುತ್ತದೆ. ಈ ನಿಟ್ಟಿನಲ್ಲಿ ತುರ್ತಾಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ. ಹೆಚ್ಚುತ್ತಿರುವ ಬೊಜ್ಜು ಮತ್ತು ಮಧುಮೇಹವು ಆರೋಗ್ಯ ಕ್ಷೇತ್ರದಲ್ಲಿ ತುರ್ತು ಹಸ್ತಕ್ಷೇಪದ ಅಗತ್ಯವಿರುವ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ಸೂಚಿಸುತ್ತದೆ.

ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆಯ ಅಂಕಿಅಂಶಗಳನ್ನು ನಾವು ವಿಶ್ಲೀಷಿಸಿದಾಗ ದೇಶವು ಸದ್ಯ ಅಪೌಷ್ಟಿಕತೆಯ ವಿರುದ್ಧ ಹೋರಾಡುತ್ತಿರುವಾಗಲೇ, ಮತ್ತೊಂದೆಡೆ ‘ಬೊಜ್ಜು ಮತ್ತು ಮಧುಮೇಹ’ದಂತಹ ದ್ವಿಮುಖ ಸವಾಲಿದೆ. ಈ ಆತಂಕಕಾರಿ ಬೆಳವಣಿಗೆಯು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿರದೆ, ಗ್ರಾಮೀಣ ಭಾಗಗಳಿಗೂ ವೇಗವಾಗಿ ಹರಡುತ್ತಿರುವುದು ಕಳವಳಕಾರಿ. ಈ ನಿಟ್ಟಿನಲ್ಲಿ ಸರ್ಕಾರವೇ ಜನರಲ್ಲಿ ಸಮತೋಲಿತ ಆಹಾರ, ಯೋಗ, ದೈಹಿಕ ವ್ಯಾಯಾಮ ಹಾಗೂ ಮಾನಸಿಕ ಒತ್ತಡ ನಿರ್ವಹಣೆಯ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವುದು ಅಗತ್ಯ. ಏನೇ ಆದರೂ ಆರೋಗ್ಯಕರ ದೇಶ ನಿರ್ಮಾಣಕ್ಕೆ ಕೇವಲ ಚಿಕಿತ್ಸೆ ಮಾತ್ರವಲ್ಲ , ಬದಲಾಗಿ ‘ಮುಂಜಾಗ್ರತೆ’ಯೇ ಏಕೈಕ ಮಂತ್ರ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನ.28, 29ರಂದು 47ನೇ ಶರಣ ಕಮ್ಮಟ, ಅನುಭವಮಂಟಪ ಉತ್ಸವ

ವಿಶ್ವಬಸವಧರ್ಮ ಅನುಭವಮಂಟಪ, ಬಸವಕಲ್ಯಾಣ ವತಿಯಿಂದ ನವೆಂಬರ್ 28 ಮತ್ತು 29ರಂದು 47ನೇ...

ಕನ್ನಾಟ್ ಪ್ಲೇಸ್‌ನಲ್ಲಿ ಸಿಜೆಪಿ ಪ್ರತಿಭಟನೆ: ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ

ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 16ರಂದು ದೆಹಲಿಯ...

ಔರಾದ್‌ | ನೀರು, ಆರೋಗ್ಯ ಸೇವೆ ಪರಿಶೀಲನೆ; ಕಾರ್ಮಿಕರ ಸಮಸ್ಯೆ ಆಲಿಸಿದ ಸಿಇಒ

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಸೇವೆ ಹಾಗೂ ಅಭಿವೃದ್ಧಿ...