ರಾಜ್ಯದಲ್ಲಿ ರಚನೆಯಾಗಲಿರುವ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಭಾಲ್ಕಿ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ದೊರೆಯಲಿ ಎಂದು ಅವರ ಅಭಿಮಾನಿಗಳು ಹಾಗೂ ಹಿತೈಷಿಗಳು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಭಾಲ್ಕಿ ನಗರದ ಆಂಜನೇಯ ದೇವಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಖಂಡ್ರೆ ಅವರ ಭಾವಚಿತ್ರದೊಂದಿಗೆ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಮುಖಂಡರು, ಈಶ್ವರ ಖಂಡ್ರೆ ಅವರು ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿ ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ಅವರು ರಾಜ್ಯಾದ್ಯಂತ ಕೋಟ್ಯಂತರ ಸಸಿಗಳನ್ನು ನೆಡುವ ಮೂಲಕ ಹಸಿರು ಕ್ರಾಂತಿಗೆ ಕಾರಣರಾಗಿದ್ದಾರೆ. ಅವರ ಸೇವೆ, ಪಕ್ಷನಿಷ್ಠೆ ಹಾಗೂ ಹಿರಿತನವನ್ನು ಪರಿಗಣಿಸಿ ಕಾಂಗ್ರೆಸ್ ಹೈಕಮಾಂಡ್ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾಶೆಟ್ಟೆ, ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ (ಟಿಂಕು) ರಾಜಭವನ, ಅನಿಲ ಲೋಖಂಡೆ, ಕಪಿಲ ಕಲ್ಯಾಣೆ, ಸಂಗಮೇಶ ವಾಲೆ, ಚಂದ್ರಶೇಖರ ವಂಕೆ, ಲೋಕೇಶ ಭೂರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಮ್ಮ ಕರ್ನಾಟಕ ಸೇನೆಯಿಂದ ವಿಶೇಷ ಪೂಜೆ
ಇದೇ ವೇಳೆ, ಶಾಸಕ ಈಶ್ವರ ಖಂಡ್ರೆ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ದೊರೆಯಲಿ ಎಂದು ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ತಾಲೂಕಿನ ಚಳಕಾಪುರ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಗಣೇಶ ಪಾಟೀಲ್ ಜ್ಯಾಂತಿ ಅವರ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ರಾಜಕುಮಾರ ಪಾಟೀಲ್, ಯುವ ಘಟಕದ ಅಧ್ಯಕ್ಷ ಸುದೀಪ ತುಗಾವೆ, ತಾಲೂಕು ಅಧ್ಯಕ್ಷ ಬಸವರಾಜ ಕಾರಬಾರಿ, ಗೌರವಾಧ್ಯಕ್ಷ ಪ್ರಶಾಂತ ಹಣಮಶೆಟ್ಟಿ, ಉಪಾಧ್ಯಕ್ಷ ಮಹೇಶ ರಾಚೋಟೆ, ಅನಿಲ ಪಾಟೀಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಔರಾದ್ನಲ್ಲಿ ಅಮರೇಶ್ವರ ಮಂದಿರದಲ್ಲಿ ವಿಶೇಷ ಪೂಜೆ
ಕಲ್ಯಾಣ ಕರ್ನಾಟಕದ ಪ್ರಭಾವಿ ನಾಯಕ ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಅವರಿಗೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಾರ್ಥಿಸಿ ಪಟ್ಟಣದ ಉದ್ಭವಲಿಂಗ ಶ್ರೀ ಅಮರೇಶ್ವರ ಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.
ಯುವ ಮುಖಂಡ ಸುನೀಲಕುಮಾರ ದೇಶಮುಖ ಅವರು ಮಾತನಾಡಿ, ʼಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಅವರು ಈ ಭಾಗದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದಾರೆ, ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಜಯಭೇರಿಗೆ ಖಂಡ್ರೆಯವರ ಪಾತ್ರ ಮಹತ್ವದ್ದು, ಐದು ವರ್ಷಗಳ ಕಾಲ ಕೆಪಿಸಿಸಿ ಕಾರ್ಯ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಎಲ್ಲ ಜಾತಿ ಸಮುದಾಯದವರನ್ನು ಜೊತೆಯಾಗಿ ತೆಗೆದುಕೊಂಡು ಹೋಗುವ ನಾಯಕತ್ವ ಅವರಲ್ಲಿದೆ. ದೇಶಕ್ಕೆ ಸ್ವತಂತ್ರ ಬಂದಾಗಿನಿಂದ ಅವರ ಪರಿವಾರ ಕಾಂಗ್ರೆಸ್ ಪಕ್ಷದೊಂದಿಗೆ ಗುರ್ತಿಸಿಕೊಂಡು ಪಕ್ಷ ನಿಷ್ಠೆ ಮೆರೆದಿದೆ. ಅವರ ತಂದೆ ಲೋಕನಾಯಕ ಭೀಮಣ್ಣ ಖಂಡ್ರೆ ಅವರು ಸಹ ಪಕ್ಷಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಹೀಗಾಗಿ ಅವರಿಗೆ ನೂತನ ಸರ್ಕಾರದಲ್ಲಿ ಅವರಿಗೆ ಉಪಮುಖ್ಯಮಂತ್ರಿ ಮಾಡಬೇಕುʼ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ನೆಹರು ಪಾಟೀಲ, ಶರಣಪ್ಪ ಪಾಟೀಲ, ಜಗನ್ನಾಥ ನಿರ್ಮಳೆ, ಶಿವಶಂಕರ ಎಕಲಾರ, ಪ್ರಶಾಂತ ಫುಲಾರಿ, ಡಾ.ಮಹೇಶ ಫುಲಾರಿ, ಲಕ್ಷ್ಮಣ ಎಸ್. ದೇವಕತೆ, ಸುಧಾಕರ ಕೊಳ್ಳೂರ, ಆನಂದ ಗಲಗಲೆ, ವೈಜಿನಾಥ ವಡಿಯಾರ, ಸುನೀಲ ಮಿತ್ರಾ, ಸೂರ್ಯಕಾಂತ, ಆನಂದ ಕಾಂಬಳೆ, ಶಿವು ಹಳೆಂಬುರೆ ಸೇರಿದಂತೆ ಅನೇಕರಿದ್ದರು.

ಅಭಿಮಾನಿಗಳಿಂದ ಮಲ್ಲಣ್ಣ ದೇವರಿಗೆ ವಿಶೇಷ ಪೂಜೆ
ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರಿಗೆ ರಾಜ್ಯದಲ್ಲಿ ರಚನೆ ಆಗಲಿರುವ ಹೊಸ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಸಿಗಲೆಂದು ಪ್ರಾರ್ಥಿಸಿ ಅವರ ಅಭಿಮಾನಿಗಳು ಭಾಲ್ಕಿ ತಾಲ್ಲೂಕಿನ ಖಾನಾಪುರದ ಮೈಲಾರ ಮಲ್ಲಣ್ಣ ದೇವರಿಗೆ ಶನಿವಾರ ವಿಶೇಷ ಪೂಜೆ ಸಲ್ಲಿಸಿದರು.
ಯುವ ಮುಖಂಡ ಪಪ್ಪು ಪಾಟೀಲ ಖಾನಾಪುರ ಅವರ ನೇತೃತ್ವದಲ್ಲಿ ಬೆಳಿಗ್ಗೆ ದೇಗುಲಕ್ಕೆ ಬಂದ ಅಭಿಮಾನಿಗಳು ಮಲ್ಲಣ್ಣ ದೇವರ ಮೂರ್ತಿಗೆ ಪೂಜೆ, ಅಭಿಷೇಕ ಮಾಡಿ, ಪ್ರಾರ್ಥನೆಗೈದರು. ಕೈಯಲ್ಲಿ ಈಶ್ವರ ಖಂಡ್ರೆ ಅವರ ಭಾವಚಿತ್ರ ಇರುವ ಫಲಕಗಳನ್ನು ಹಿಡಿದು ಏಳ್ ಕೋಟ್ ಏಳ್ ಕೋಟ್ ಘೇ ಎಂದು ಘೋಷಣೆ ಕೂಗಿದರು.

ಈಶ್ವರ ಖಂಡ್ರೆ ಅವರು ವಿಧಾನಸಭೆಯಲ್ಲಿ ಭಾಲ್ಕಿ ವಿಧಾನಸಭಾ ಕ್ಷೇತ್ರವನ್ನು ನಾಲ್ಕನೇ ಸಲ ಪ್ರತಿನಿಧಿಸುತ್ತಿದ್ದಾರೆ. ಪೌರಾಡಳಿತ, ಅರಣ್ಯ, ಪರಿಸರ ಮತ್ತು ಜೀವ ಶಾಸ್ತ್ರ ಸಚಿವರಾಗಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ತಮಗೆ ಅವಕಾಶ ಸಿಕ್ಕಾಗಲೆಲ್ಲ ಜನರ ಕಲ್ಯಾಣಕ್ಕೆ ಶ್ರಮಿಸಿದ್ದಾರೆ. ರಾಜ್ಯದ ಜನಪ್ರಿಯ ನಾಯಕರಲ್ಲಿ ಒಬ್ಬರಾಗಿದ್ದಾರೆ. ರಾಜ್ಯವನ್ನು ಅಭಿವೃದ್ಧಿಯಲ್ಲಿ ಇನ್ನಷ್ಟು ಉತ್ತುಂಗಕ್ಕೆ ಒಯ್ಯಲು ಈಶ್ವರ ಖಂಡ್ರೆ ಅವರಂಥ ನಾಯಕರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವುದು ಬಹಳ ಜರೂರಿಯಾಗಿದೆ ಎಂದು ಪಪ್ಪು ಪಾಟೀಲ ಖಾನಾಪುರ ಹೇಳಿದರು. ತಿಳಿಸಿದರು.
ʼಈಶ್ವರ ಖಂಡ್ರೆ ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದಾರೆ. ಹೀಗಾಗಿ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಿದರೆ ಮುಂದಿನ ಚುನಾವಣೆಯಲ್ಲಿ ಪಕ್ಷ ರಾಜ್ಯದಲ್ಲಿ ಮತ್ತೆ ಜಯಭೇರಿ ಬಾರಿಸಲು ಅನುಕೂಲವಾಗಲಿದೆ. ಕಾರಣ, ಪಕ್ಷದ ವರಿಷ್ಠರು ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕುʼ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಈಶ್ವರ ಖಂಡ್ರೆಯವರಿಗೆ ಡಿಸಿಎಂ ಸ್ಥಾನ ನೀಡಿ : ಮಠಾಧೀಶರ ಒತ್ತಾಯ
ಪ್ರಮುಖರಾದ ಪ್ರಭು ತರನಳ್ಳಿ, ಪ್ರಶಾಂತ ಲದ್ದೆ, ಶಿವಾನಂದ ಪಾಟೀಲ, ಮಹಾದೇವ ಲದ್ದೆ, ಮಾಣಿಕ ಮೇತ್ರೆ, ಉದಯ ನಾಯಕ್, ಉಮೇಶ್, ಆನಂದ ಗೌಡ, ನಿತೀಶ್ ಪಾಟೀಲ, ಸಿದ್ದು ಮಮದಾಪುರೆ, ಬಸು ಬುಯ್ಯಾ, ಸೋಮು, ಸುನೀಲ್, ಸಂಜು ಹೂಗಾರ್ ಮತ್ತಿತರರು ಇದ್ದರು.





