ವೇದಗಳೊಳಗಿನ ಜೀವ ವಿರೋಧಿ ಸಿದ್ಧಾಂತವಾಗಲಿ, ವಚನಗಳೊಳಗಿನ ವೇದ ವಿರೋಧಿ ಗಟ್ಟಿ ಧ್ವನಿಯಾಗಲಿ ಎರಡನ್ನೂ ಅರಿಯದ ಬಾಡಿಗೆ ಕಾವಿ ಗುಲಾಮರನ್ನು ಮುಂದೆ ಬಿಟ್ಟು ಬ್ರಾಹ್ಮಣವಾದಿ ತಾಲಿಬಾನಿಗಳು ʼಬಸವಾದಿ ಶರಣರ ಹಿಂದೂ ಸಮಾವೇಶʼ ಮಾಡುತ್ತಿರುವುದು ಬಸವ ತತ್ವದ ತೀವ್ರ ಪ್ರಸಾರ ಹುಟ್ಟಿಸಿದ ನಡುಕದ ಪ್ರತಿಕ್ರಿಯೆಯಾಗಿದೆ.
ಸಾಂಪ್ರದಾಯಸ್ಥ ಬ್ರಾಹ್ಮಣವಾದಿಗಳು ಮತ್ತು ಅವರ ಅತ್ಯಂತ ವಿಶ್ವಾಸಿಕ ಗುಲಾಮರು ಬಸವಣ್ಣನವರ ಲಿಂಗಾಯತ ಧರ್ಮದ ಅನುಯಾಯಿಗಳನ್ನು “ಬಸವ ತಾಲಿಬಾನಿಗಳು” ಎಂದು ವಿಕೃತವಾಗಿ ಕರೆಯುತ್ತಿದ್ದಾರೆ. ಭಾರತದಲ್ಲಿರುವ ಪ್ರತಿಯೊಬ್ಬರು ತಾವು ಹೇಳಿದಂತೆ ಕೇಳಬೇಕು, ಎಲ್ಲಾ ಧರ್ಮಗಳ ಮೂಲ ತಮ್ಮ ಬ್ರಾಹ್ಮಣ ಧರ್ಮ ಎಂದು ವಾದಿಸುವ ಮನಸ್ಥಿತಿಯನ್ನು ಮೂಲತಃ ತಾಲಿಬಾನಿ ಮನಸ್ಥಿತಿ ಎಂದು ಗುರುತಿಸಲಾಗುತ್ತದೆ. ರಾಜಕೀಯ ಪ್ರಣೀತ ಹಿಂದುತ್ವದ ಹೆಸರಿನಲ್ಲಿ ಹಿಂದೂ ಧರ್ಮವನ್ನು ಗುತ್ತಿಗೆ ಪಡೆದಿರುವ ಬ್ರಾಹ್ಮಣವಾದಿಗಳು ಭಾರತದ ಅಸಲಿ ತಾಲಿಬಾನಿಗಳು. ಅಫ್ಘಾನ್ ದೇಶದ ತಾಲಿಬಾನಿಗಳ ಸಿದ್ಧಾಂತ ಹಾಗೂ ಭಾರತದ ಬ್ರಾಹ್ಮಣವಾದಿ ತಾಲಿಬಾನಿಗಳ ಸಿದ್ಧಾಂತದಲ್ಲಿ ಹೆಚ್ಚಿನ ಸಾಮ್ಯತೆ ಕಾಣುತ್ತದೆ. ಈರ್ವರು ಸಾಮಾಜಿಕ ಸಮಾನತೆ, ಶೈಕ್ಷಣಿಕ ಸಮಾನತೆ, ಸಾಂಸ್ಕೃತಿಕ ಅಸ್ಮಿತೆ, ಧಾರ್ಮಿಕ ಸಮಾನತೆ, ಸ್ತ್ರೀ-ಪುರುಷ ಸಮಾನತೆ ಹಾಗು ರಾಜಕೀಯ ಸಮಾನತೆಗಳ ಕಡು ವೈರಿಗಳು, ಸಂವಿಧಾನ, ಜನತಂತ್ರ, ಸಂಸದೀಯ ವ್ಯವಸ್ಥೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಮಾನವ ಘನತೆ ಮತ್ತು ಮಾನವ ಹಕ್ಕುಗಳ ಪರಮ ವಿರೋಧಿಗಳು. ಎಲ್ಲಕ್ಕಿಂತ ಹೆಚ್ಚಾಗಿ, ಈ ದೇಶದ ಸರ್ವಾಂಗೀಣ ಅಭಿವೃದ್ಧಿಯ ಪ್ರಧಾನ ಶತ್ರುಗಳು. ವ್ಯತ್ಯಾಸವೆಂದರೆ ಅಫ್ಘಾನ್ ತಾಲಿಬಾನಿಗಳು ನೇರಾನೇರ ಮುಸ್ಲಿಮ್ ಧರ್ಮದ ಹೆಸರಿನಲ್ಲಿ ಮೂಲಭೂತವಾದಿಳಾದರೆ ಭಾರತೀಯ ಬ್ರಾಹ್ಮಣವಾದಿ ತಾಲಿಬಾನಿಗಳು ಹಿಂದುತ್ವ ಮುಖವಾಡದಲ್ಲಿ ಉಳಿದ ಅಸಲಿ ಬಹುಜನರನ್ನು ಗುಲಾಮರಾಗಿರಿಸಿಕೊಳ್ಳಲು ದೇಶಭಕ್ತಿಯ ಮುಖವಾಡ ಧರಿಸಿದವರು.
ಮಧ್ಯಪ್ರಾಚ್ಯದ ಮರಳುಗಾಡಿನ ಸುತ್ತಮುತ್ತಲಿನ ಪರಿಸರದಲ್ಲಿ ಹುಟ್ಟಿದ ಪ್ರಾಚೀನ ಬ್ರಾಹ್ಮಣ ಧರ್ಮದ ಅನುಯಾಯಿಗಳು ಬಹು ಶತಮಾನಗಳ ಹಿಂದೆ ಭಾರತಕ್ಕೆ ವಲಸೆ ಬಂದಿದ್ದರೂ ಅವರಿಗೆ ಭಾರತ ಇಂದಿಗೂ ಮಾತೃಭೂಮಿಯೇ ಹೊರತು ಅವರ ಪಿತೃ ಭೂಮಿ ಅಲ್ಲ. ಬ್ರಾಹ್ಮಣವಾದಿಗಳು ಇಡೀ ಭಾರತದಲ್ಲಿರುವ ಎಲ್ಲಾ ಧರ್ಮಗಳು, ಸಂಸ್ಕೃತಿಗಳ ಮೇಲೆ ತಮ್ಮ ಹಕ್ಕುಸ್ವಾಮ್ಯ ಸಾಧಿಸುವುದು ಬಿಟ್ಟಿಲ್ಲ, ಆದರೂ ಅವರು ಭಾರತವನ್ನು ತಮ್ಮ ದೇಶವೆಂದು ಮನಸ್ಸು ಪೂರ್ವಕವಾಗಿ ಒಪ್ಪಿಕೊಂಡಿಲ್ಲ. ಭಾರತವು ಆರ್ಯರ ಆಗಮನ ಪೂರ್ವದಲ್ಲಿ ಹೇಗಿತ್ತೊ ಹಾಗೆಯೇ ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ. ಇಲ್ಲಿರುವ ಆರ್ಯ ಪೂರ್ವದ ಎಲ್ಲಾ ಸಂಸ್ಕೃತಿಗಳ ನಾಶ ಅವರ ಪರಮಗುರಿಯಾಗಿದೆ. ಆರ್ಯ ಶ್ರೇಷ್ಠತೆ, ಎಲ್ಲವೂ ತಮಗೆ ಸೇರಿದ್ದು ಎನ್ನುವ ಹಪಾಹಪಿತನ, ಹಾಗು ಭಾರತವು ಹೇಗಿತ್ತು, ಮತ್ತು ಹೇಗಿದೆಯೊ ಹಾಗೆಯೇ ಸ್ವೀಕರಿಸಲಾಗದ ಸಂಕುಚಿತ ಮನಸ್ಥಿತಿಯೆ ಬ್ರಾಹ್ಮಣವಾದಿಗಳನ್ನು ಅಫ್ಘಾನ ತಾಲಿಬಾನಿಗಳ ಸಮೂಹಕ್ಕೆ ಸೇರಿಸಿ ಬಿಡುತ್ತದೆ. ಭಾರತದ ಬಹುಜನರ ಮೇಲೆ ನಿಯಂತ್ರಣ ಸಾಧಿಸಲು ಜರ್ಮನಿಯ ನಾಜಿ ಮಾದರಿಯ ಸಂಘಟನೆ ಕಟ್ಟಿಕೊಂಡಿರುವ ಭಾರತೀಯ ಬ್ರಾಹ್ಮಣವಾದಿ ತಾಲಿಬಾನಿಗಳು ಇಲ್ಲಿನ ಅಧುನಿಕ ಅರ್ಬನ್ ಹಾಗು ಅಗ್ರಹಾರದ ನಾಜಿಗಳು. ಭಾರತೀಯ ಪ್ರಾಯೋಗಿಕ ನೆಲೆಗಟ್ಟಿನ ಜನಪದೀಯ ಜ್ಞಾನ ಪರಂಪರೆಯನ್ನು ಒಪ್ಪಿಕೊಳ್ಳದೆ ಮಧ್ಯಪ್ರಾಚ್ಯದಿಂದ ಎರವಲು ಪಡೆದ, ಮನುಷ್ಯನ ದೈನಂದಿನ ಬದುಕಿಗೆ ಯಾವ ಬಗೆಯಲ್ಲೂ ಅನ್ವಯವಾಗದ ಗ್ರಾಂಥಿಕ ವೇದ, ಶಾಸ್ತ್ರ, ಆಗಮ, ಪುರಾಣಗಳನ್ನು ಭಾರತೀಯ ಜ್ಞಾನ ಪರಂಪರೆ ಎನ್ನುವ ಭ್ರಮೆಯನ್ನು ಸೃಷ್ಟಿಸಿದವರು ಬ್ರಾಹ್ಮಣವಾದಿ ತಾಲಿಬಾನಿಗಳು.
ತಮ್ಮ ಪರಾವಲಂಬಿ ಬದುಕು ಹಾಗು ಸ್ವಹಿತಾಸಕ್ತಿಗೆ ಅಪಾಯ ಒದಗಿದಾಗ ದೇಶಭಕ್ತರ ವೇಷದಲ್ಲಿ ಭಾರತೀಯ ಬಹುಜನರ ಮೇಲೆ ತಾಲಿಬಾನಿಗಳಂತೆ ಆಕ್ರಮಣ ಮಾಡುವುದು ಆರ್ಯ ಬ್ರಾಹ್ಮಣವಾದಿಗಳ ವಿಶೇಷ ಗುಣ ಸ್ವಭಾವ. ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಹಾಗು ಅವೈದಿಕ ಬಸವ ತತ್ವದ ತೀವ್ರಗತಿಯ ಪ್ರಸಾರವು ಬ್ರಾಹ್ಮಣವಾದಿ ತಾಲಿಬಾನಿಗಳಲ್ಲಿ ಗಂಭೀರವಾದ ಭಯ ಹುಟ್ಟಿಸಿದೆ. ಕರ್ನಾಟಕ ಸರ್ಕಾರ ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ನಂತರ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ನಾಡಿನಲ್ಲಿ ಕಳೆದ ವರ್ಷ ನಡೆಸಿದ ಬಸವ ಸಂಸ್ಕೃತಿ ಅಭಿಯಾನ ಐದು ಸಾವಿರ ವರ್ಷಗಳಷ್ಟು ಹಳೆಯ ಬ್ರಾಹ್ಮಣವಾದಿ ತಾಲಿಬಾನಿಗಳ ರೋಗಗ್ರಸ್ಥ ಬೇರುಗಳನ್ನು ಇನ್ನಿಲ್ಲದಂತೆ ಅಲುಗಾಡಿಸಿದೆ. ಅದರ ನಂತರದ ದಿನಗಳಲ್ಲಿ ಮರಳುಗಾಡಿನ ಉಪಪಾಂಡವರ ಪೀಳಿಗೆಯಾದ ಪೇಳು ಜನಮೇಜಯರು ಕಕ್ಕಾಬಿಕ್ಕಿಯಾಗಿ ಯದ್ವಾತದ್ವಾ ಯಾರೂ ಓದದ ನಿಯತಕಾಲಿಕೆಯಲ್ಲಿ ವಿಷ ಕಕ್ಕುತ್ತಿರುವುದನ್ನು ನಾವು ಗಮನಿಸಬೇಕಿದೆ. ಆ ಕಾರಣದಿಂದ ತನ್ನ ಉಡಾಳ ಕಾವಿ ಗುಲಾಮರನ್ನು ಮುಂದೆ ಬಿಟ್ಟು ಬಸವಾದಿ ಶರಣರ ಹಿಂದೂ ಸಮಾವೇಶ ಮಾಡಿಸುತ್ತಿದ್ದಾರೆ. ಈ ಬೆಳವಣಿಗೆ ಬ್ರಾಹ್ಮಣವಾದಿ ತಾಲಿಬಾನಿಗಳ ಹತಾಶೆಯ ತೀವ್ರತೆಯನ್ನು ಎತ್ತಿ ತೋರಿಸುತ್ತದೆ. ಬಸವಾನುಯಾಯಿಗಳನ್ನು ವಿಪ್ರರು ಬಸವ ತಾಲಿಬಾನಿಗಳು ಎಂದು ಮೊದಲಿಸಲು ಬಾಡಿಗೆ ಗುಲಾಮ ಕಾಲಾಳುಗಳನ್ನು ಮುಂದೆ ಬಿಟ್ಟಿರುವುದಕ್ಕೆ ಮುಖ್ಯ ಕಾರಣ ಶರಣರ ವಚನಗಳಲ್ಲಿನ ಬ್ರಾಹ್ಮಣ ವಿರೋಧಿ ತತ್ವ ಸಿದ್ಧಾಂತಗಳು.
ಅದಕ್ಕೆ ಉದಾಹರಣೆಯಾಗಿ ಶರಣರ ಸಾವಿರಾರು ವಚನಗಳ ಪೈಕಿ ನಾನು ಇಲ್ಲಿ ಒಂದೆರಡು ವಚನಗಳನ್ನು ಉಲ್ಲೇಖಿಸಿದ್ದೇನೆ:
“ವಿಪ್ರರು ಕೀಳು ಜಗವೆಲ್ಲರಿಯಲು,
ಶ್ವಪಚನ ಕೈಯ ಕೂಳ ಮುಕ್ತಿ ಕೊಂಡಾತ ಶ್ರೇಷ್ಠ.
ವಿಪ್ರ ಜ್ಞಾನವಿಲ್ಲದೆ ಕರಗಿ ಹೋದ,
ನಮ್ಮ ಕೂಡಲಸಂಗಮದೇವನ ನಂಬಿದ ಕಕ್ಕಯ್ಯನೇ ಶ್ರೇಷ್ಠ.”
“ಬ್ರಹ್ಮಸಭೆ ನೆರೆದಲ್ಲಿ ಬ್ರಹ್ಮವಿತ್ತುಗಳು
ಬ್ರಹ್ಮತತ್ವವಡೆದು, ತಮ್ಮ ವಚನ ಬ್ರಹ್ಮರೆನಿಸಿಕೊಂಡು
ನೆಮ್ಮುವರು ವಿಷ್ಣುವನು,
ತಮ್ಮ ದೈವವ ಬಿಡುವುದಾವುದುಚಿತ?
ವಿಷ್ಣು ಶಿವಭಕ್ತನಾಗಿ ನಿಷ್ಠೆಯಿಂದ ಕಣ್ಣನಿತ್ತು
ಹಡೆದನು ಶಿವಭಕ್ತಿಯಿಂದ!
ಕಷ್ಟಜಾತಿ ಜೀವಿಗಳಿಗೆ ಮಟ್ಟಿಯೆಂತು ಬಂದಿತ್ತೊ?
ಮುಟ್ಟರೊಂದುವನು ಮೂವಿಧಿಬಟ್ಟರೂ!
‘ಹುಸಿವನೆ ಹೊಲೆಯನೆಂದುʼ ವಚನವುಂಟು ಲೋಕದಲ್ಲಿ:
ಹುಸಿದ ಜನ ಶಿರ ಹೋಯಿತ್ತಾದಿಯಲ್ಲಿ!
ಎಸವೋದ ಕಿರು ಪಶುವನುಸುರಲೀಯದೆ
ವಿಧಾನಿಸಿ ತಿಂಬ ಜನ್ನ ಅದಾವ ಫಲವೋ?
ದಕ್ಷ ಯಾಗವ ಮಾಡಿ ನಿಕ್ಷೇತ್ರನೆರೆದುದಕಟಕಟಾ,
ಕೇಳಿಯೂ ಏಕೆ ಮಾಣರೋ?
ಮಮಕರ್ತ ಕೂಡಲಸಂಗನ ಶರಣರು ಅಕ್ಷಯರಧಿಕರು.”
ವೇದಗಳೊಳಗಿನ ಜೀವ ವಿರೋಧಿ ಸಿದ್ಧಾಂತವಾಗಲಿ, ವಚನಗಳೊಳಗಿನ ವೇದ ವಿರೋಧಿ ಗಟ್ಟಿ ಧ್ವನಿಯಾಗಲಿ ಎರಡನ್ನು ಅರಿಯದ ಬಾಡಿಗೆ ಕಾವಿ ಗುಲಾಮರನ್ನು ಮುಂದೆ ಬಿಟ್ಟು ಬ್ರಾಹ್ಮಣವಾದಿ ತಾಲಿಬಾನಿಗಳು ಬಸವಾದಿ ಶರಣರ ಹಿಂದೂ ಸಮಾವೇಶ ಮಾಡುತ್ತಿರುವುದು ಬಸವ ತತ್ವದ ತೀವ್ರ ಪ್ರಸಾರಕ್ಕೆ ಈ ತಾಲಿಬಾನಿಗಳ ಎದೆಯಲ್ಲಿ ಹುಟ್ಟಿಸಿದ ನಡುಕದ ಪ್ರತಿಕ್ರಿಯೆಯಾಗಿದೆ. ಕೆಲವು ಆಯ್ದ ವಚನಗಳನ್ನು ಬರೆದು ಕೊಟ್ಟರೂ ಬ್ರಾಹ್ಮಣವಾದಿ ತಾಲಿಬಾನಿಗಳ ಕಾವಿ ಗುಲಾಮರಿಗೆ ಸರಿಯಾಗಿ ವಚನ ಓದಲು ಬರುತ್ತಿಲ್ಲ ಎನ್ನುವುದು ನೀವೆಲ್ಲ ಗಮನಿಸಿರುತ್ತೀರಿ. ಸಾಮಾನ್ಯವಾಗಿ ತಮಗೆ ಸಂಬಂಧವೇ ಇಲ್ಲದ ವಿಷಯದಲ್ಲಿ ಮೂಗು ತೂರಿಸುವುದು ಬ್ರಾಹ್ಮಣವಾದಿ ತಾಲಿಬಾನಿಗಳ ಪ್ರಾಚೀನ ಚಾಳಿ. ಅವರ ಈ ವಿಷಮ ಚಾಳಿಯು ಅಧರ್ಮದ ಹೆಚ್ಚಳದ ಸಂಕೇತ. ಹೀಗೆ ಈ ತಾಲಿಬಾನಿಗಳ ಅಧರ್ಮದ ಕೃತ್ಯಗಳು ಮಿತಿ ಮೀರಿದಾಗ ಬುದ್ಧ, ಮಹಾವೀರ, ಚಾರ್ವಾಕ, ಬಸವಣ್ಣ ಮುಂತಾದ ಧರ್ಮ ಸ್ಥಾಪಕರು ಇತಿಹಾಸದಲ್ಲಿ ಅವತಾರ ತಾಳಿ ಬ್ರಾಹ್ಮಣವಾದಿ ತಾಲಿಬಾನಿಗಳಿಗೆ ಬಲವಾದ ಪೆಟ್ಟು ಕೊಟ್ಟಿದ್ದನ್ನು ನಾವು ಜ್ಞಾಪಿಸಿಕೊಳ್ಳಬೇಕು. ಅಫ್ಘಾನ್ ತಾಲಿಬಾನಿಗಳು ಅಫ್ಘಾನಿಸ್ತಾನದ ಅಧಿಕಾರ ಚುಕ್ಕಾಣಿ ಹಿಡಿದ ಮೇಲೆ ಭಾರತೀಯ ಬ್ರಾಹ್ಮಣವಾದಿ ತಾಲಿಬಾನಿಗಳಿಗೆ ತುಂಬಾ ಹತ್ತಿರವಾಗಿದ್ದಾರೆ. ಅಫ್ಘಾನ್ ಮತ್ತು ಭಾರತೀಯ ಬ್ರಾಹ್ಮಣವಾದಿ ತಾಲಿಬಾನಿಗಳು ಸೈದ್ಧಾಂತಿಕವಾಗಿ ಒಂದೇ ಆಗಿರುವುದು ಅವರು ಪರಸ್ಪರ ಹತ್ತಿರವಾಗಲು ಸಹಕರಿಸಿದೆ. ಭಾರತೀಯ ತಾಲಿಬಾನಿಗಳು ನಿಯಂತ್ರಿಸುವ ಸರ್ಕಾರ ಮತ್ತು ಅಫ್ಘಾನ್ ತಾಲಿಬಾನಿ ಸರ್ಕಾರಗಳ ನಡುವಿವ ಪರಸ್ಪರ ಒಡಂಬಡಿಕೆಯನ್ನು ಈ ಕೆಳಗೆ ವಿವರಿಸಿದ್ದೇನೆ.
ಇಂದಿನ ಭಾರತ ಸರ್ಕಾರವು ಅಫ್ಘಾನ್ ತಾಲಿಬಾನ್ ಸರಕಾರದ ಜೊತೆಗೆ ವ್ಯಾವಹಾರಿಕ ಮಾತುಕತೆಗಳನ್ನು (Pragmatic Engagement) ಪ್ರಾರಂಭಿಸಿದೆ ಮತ್ತು ಕೆಲವು ಪ್ರಮುಖ ಒಪ್ಪಂದಗಳು ಹಾಗೂ ಸಾಮರಸ್ಯಗಳೊಂದಿಗೆ ಮುನ್ನಡೆಯುತ್ತಿದೆ. ಆದರೆ, ಇಲ್ಲಿ ಒಂದು ಪ್ರಮುಖ ವಿಷಯವನ್ನು ನೆನಪಿನಲ್ಲಿಡಬೇಕು: ಭಾರತ ಸರ್ಕಾರವು ಇದುವರೆಗೆ ತಾಲಿಬಾನ್ ಆಡಳಿತಕ್ಕೆ ಯಾವುದೇ ಅಧಿಕೃತ (ಕಾನೂನಾತ್ಮಕ) ಮಾನ್ಯತೆಯನ್ನು ನೀಡಿಲ್ಲ. “ಮಾನ್ಯತೆ ನೀಡದೆಯೇ ಮಾತುಕತೆ ಮುಂದುವರಿಸುವುದು” ಭಾರತದ ಪ್ರಸ್ತುತ ಅರ್ಥವಿಲ್ಲದ ವಿದೇಶಿ ನೀತಿಯಾಗಿದೆ.
ಇತ್ತೀಚಿನ ದಿನಗಳಲ್ಲಿ (ವಿಶೇಷವಾಗಿ 2025 ಮತ್ತು 2026 ರಲ್ಲಿ) ಉಭಯ ದೇಶಗಳ ನಡುವೆ ನಡೆದಿರುವ ಪ್ರಮುಖ ಒಪ್ಪಂದಗಳು ಮತ್ತು ಒಡಂಬಡಿಕೆಗಳು ಈ ಕೆಳಗಿನಂತಿವೆ:
೧. ಭದ್ರತೆ ಮತ್ತು ಸಾರ್ವಭೌಮತ್ವದ ಕುರಿತು ಒಪ್ಪಂದ : ಮಾತುಕತೆಗಳ ಸಮಯದಲ್ಲಿ, ಅಫ್ಘಾನಿಸ್ತಾನದ ನೆಲವನ್ನು ಭಾರತದ ವಿರುದ್ಧ ಯಾವುದೇ ಭಯೋತ್ಪಾದಕ ಚಟುವಟಿಕೆಗಳಿಗೆ ಅಥವಾ ಸಂಘಟನೆಗಳಿಗೆ (ಉದಾಹರಣೆಗೆ ಜೈಷ್-ಎ-ಮೊಹಮ್ಮದ್ ಅಥವಾ ಲಷ್ಕರ್-ಎ-ತೊಯ್ಬಾ) ಬಳಸಲು ಬಿಡುವುದಿಲ್ಲ ಎಂದು ತಾಲಿಬಾನ್ ಭಾರತಕ್ಕೆ ಭರವಸೆ ನೀಡಿದೆ. ಸ್ವತಃ ತಾಲಿಬಾನ್ ವ್ಯವಸ್ಥೆಯೇ ಅರಾಜಕತೆಯಿಂದ ಕೂಡಿರುವಾಗ ಇದನ್ನು ಭಾರತ ನಂಬಿದ್ದು ವಿಪರ್ಯಾಸ.
೨. ಅಭಿವೃದ್ಧಿ ಮತ್ತು ಮೂಲಸೌಕರ್ಯ ಯೋಜನೆಗಳು (Development Cooperation): ಆರಂಭದಲ್ಲಿ ಭಾರತವು ಅಫ್ಘಾನಿಸ್ತಾನಕ್ಕೆ ಕೇವಲ ಮಾನವೀಯ ನೆರವನ್ನು (ಗೋಧಿ ಮತ್ತು ಔಷಧಗಳು) ಮಾತ್ರ ನೀಡುತ್ತಿತ್ತು. ಆದರೆ ಈಗ ಉಭಯ ಪಕ್ಷಗಳ ನಡುವೆ ಹೊಸ ಅಭಿವೃದ್ಧಿ ಕಾಮಗಾರಿಗಳ ಕುರಿತು ಒಪ್ಪಂದಗಳು ಏರ್ಪಟ್ಟಿವೆ. ಅವು ಯಾವುವೆಂದರೆ:
A. ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳು: ಕಾಬೂಲ್ನಲ್ಲಿರುವ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಹೀಟಿಂಗ್ ಸಿಸ್ಟಮ್ (ಕಾಯಿಸುವ ವ್ಯವಸ್ಥೆ) ಬದಲಾಯಿಸುವುದು, ಥಲಸ್ಸೀಮಿಯಾ ಕೇಂದ್ರ, ಡಯಾಗ್ನೋಸ್ಟಿಕ್ ಕೇಂದ್ರ ಮತ್ತು ಬಗ್ರಾಮಿ ಜಿಲ್ಲೆಯಲ್ಲಿ ೩೦ ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸುವುದು ಇದರಲ್ಲಿ ಸೇರಿದೆ. ಇದರೊಂದಿಗೆ ವಿವಿಧ ಪ್ರಾಂತ್ಯಗಳಲ್ಲಿ ಹೆರಿಗೆ ಆಸ್ಪತ್ರೆಗಳನ್ನೂ ನಿರ್ಮಿಸಲಾಗುತ್ತಿದೆ.
B. ಸಲ್ಮಾ ಅಣೆಕಟ್ಟು (ಭಾರತ-ಅಫ್ಘಾನಿಸ್ತಾನ ಮೈತ್ರಿ ಅಣೆಕಟ್ಟು): ಹೆರಾತ್ನಲ್ಲಿ ನಿರ್ಮಿಸಲಾದ ಈ ಅಣೆಕಟ್ಟಿನ ನಿರ್ವಹಣೆ ಮತ್ತು ನೀರಿನ ನಿರ್ವಹಣೆಗೆ ಸಂಬಂಧಿಸಿದಂತೆಯೂ ಒಪ್ಪಂದ ನಡೆದಿದೆ.
C. ವ್ಯಾಪಾರ ಮತ್ತು ಚಾಬಹಾರ್ ಬಂದರಿನ ಬಳಕೆ ಮತ್ತು ಏರ್ ಫ್ರೈಟ್ ಕಾರಿಡಾರ್ (ವಾಯು ಸರಕು ಸಾಗಣೆ ಕಾರಿಡಾರ್): ಎರಡು ದೇಶಗಳ ನಡುವೆ ನೇರ ವ್ಯಾಪಾರವನ್ನು ಉತ್ತೇಜಿಸಲು ‘ಭಾರತ-ಅಫ್ಘಾನಿಸ್ತಾನ ಏರ್ ಫ್ರೈಟ್ ಕಾರಿಡಾರ್’ ಅನ್ನು ಪುನರಾರಂಭಿಸಲು ಒಪ್ಪಿಗೆ ನೀಡಲಾಗಿದೆ.
D. ಚಾಬಹಾರ್ ಬಂದರು: ಅಫ್ಘಾನಿಸ್ತಾನಕ್ಕೆ ವ್ಯಾಪಾರ ಸಾಮಗ್ರಿಗಳನ್ನು ಮತ್ತು ಮಾನವೀಯ ನೆರವನ್ನು ತಲುಪಿಸಲು ಇರಾನ್ನ ಚಾಬಹಾರ್ ಬಂದರನ್ನು (Chabahar Port) ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಭಾರತ ಮತ್ತು ತಾಲಿಬಾನ್ ಎರಡೂ ಒಪ್ಪಿಕೊಂಡಿವೆ. ಇದರ ಜೊತೆಗೆ, ಅಫ್ಘಾನಿಸ್ತಾನದ ಗಣಿಗಾರಿಕೆ (Mining) ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ತಾಲಿಬಾನ್ ಭಾರತೀಯ ಕಂಪನಿಗಳಿಗೆ ಆಹ್ವಾನ ನೀಡಿದೆ.
E. ರಾಜತಾಂತ್ರಿಕ ಉಪಸ್ಥಿತಿ (Diplomatic Presence): ಉಭಯ ದೇಶಗಳ ನಡುವಿನ ಅಧಿಕೃತ ಮಾತುಕತೆ ಮತ್ತು ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಭಾರತವು ಕಾಬೂಲ್ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಮೇಲ್ದರ್ಜೆಗೆ ಏರಿಸಿದೆ. ಇದಕ್ಕೆ ಪ್ರತಿಯಾಗಿ, ಮುಂಬೈ ಮತ್ತು ನವದೆಹಲಿಯಲ್ಲಿ ರಾಜತಾಂತ್ರಿಕ ಹಾಗೂ ವಾಣಿಜ್ಯ (Consular) ಜವಾಬ್ದಾರಿಗಳನ್ನು ನಿಭಾಯಿಸಲು ತಾಲಿಬಾನ್ ಪ್ರತಿನಿಧಿಗಳಿಗೆ ಭಾರತ ಅನುಮತಿ ನೀಡಿದೆ.
F. ಶಿಕ್ಷಣ ಮತ್ತು ವಿದ್ಯಾರ್ಥಿವೇತನ
‘e-ICCR’ ಯೋಜನೆಯಡಿಯಲ್ಲಿ ಅಫ್ಘಾನ್ ವಿದ್ಯಾರ್ಥಿಗಳಿಗೆ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಪಂಗ ಮಾಡಲು ವಿದ್ಯಾರ್ಥಿವೇತನವನ್ನು (Scholarships) ಮುಂದುವರಿಸಲು ಭಾರತ ಸರ್ಕಾರ ಒಪ್ಪಿಕೊಂಡಿದೆ.
ಪ್ರಮುಖ ಅಂಶ: ಭಾರತ ಸರ್ಕಾರದ ಈ ಕ್ರಮವು ತಾಲಿಬಾನ್ನ ಮೂಲಭೂತವಾದಿ ವಿದ್ವಂಸಕ ಸಿದ್ಧಾಂತವನ್ನು ಬೆಂಬಲಿಸುವುದೇ ಆಗಿದೆ.
ಹೀಗೆ ಅಫ್ಘಾನ್ ತಾಲಿಬಾನಿ ಸರ್ಕಾರದೊಂದಿಗೆ ಇಲ್ಲಿನ ಬ್ರಾಹ್ಮಣವಾದಿ ತಾಲಿಬಾನಿ ನಿಯಂತ್ರಿತ ಸರ್ಕಾರ ಒಡಂಬಡಿಕೆ ಮಾಡಿಕೊಂಡಿರುವುದರ ಕುರಿತು ಕನಿಷ್ಠ ಪ್ರಜ್ಞೆ ಇಲ್ಲದ ಬ್ರಾಹ್ಮಣವಾದಿ ತಾಲಿಬಾನಿಗಳ ಉಡಾಳ ಕಾವಿ ಗುಲಾಮರು ಬಸವಣ್ಣನವರ ಅನುಯಾಯಿಗಳನ್ನು ಬಸವ ತಾಲಿಬಾನಿಗಳೆಂದು ಕರೆಯುವ ಮೂಲಕ ತಮ್ಮ ತಾಲಿಬಾನಿ ಮನಸ್ಥಿತಿಯ ವಿಕೃತಿಯನ್ನು ಮೆರೆಯುತ್ತಿದ್ದಾರೆ. ತಾಲಿಬಾನಿ ಎನ್ನುವ ಮುಸ್ಲಿಂ ಉಗ್ರವಾದಿ ರಾಜಕೀಯ ಸಂಘಟನೆ ಮತ್ತು ರಾಷ್ಟೀಯ ಸ್ವಯಂಸೇವಕ ಸಂಘ ಎರಡೂ ಆಯಾ ಧರ್ಮದ ಉಗ್ರ ಪ್ರತಿಪಾದಕ ಸಂಘಟನೆಗಳು. ಅಂತಹ ರಾಷ್ಟೀಯ ಸ್ವಯಂಸೇವಕ ಸಂಘಕ್ಕೆ ಸೇರಿದ ಕೇಸರಿ ತಾಲಿಬಾನಿಗಳು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಬಸವವಾದಿಗಳನ್ನು ಬಸವ ತಾಲಿಬಾನಿಗಳೆಂದು ಕರೆದಿರುವುದು ಅವುಗಳ ಬೌದ್ದಿಕ ದಿವಾಳಿತನ ಹಾಗೂ ಧಾರ್ಮಿಕ ಕರ್ಮಠತನವನ್ನು ಪ್ರತಿನಿಧಿಸುತ್ತದೆ.

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ



