ಕಾರ್ಮಿಕ ಸಂಘಟನೆಗಳ ಹೋರಾಟದಿಂದಲೇ ಕೈಗಾರಿಕಾ ಬೆಳವಣಿಗೆ, ದುಡಿಯುವ ವರ್ಗಕ್ಕಿಂತ ಉಳ್ಳವರೇ ಮೇಲಾದರೆ?

Date:

ಕಾರ್ಮಿಕ ಸಂಘಟನೆಗಳನ್ನು 'ಝಂಡಾ ಯೂನಿಯನ್' ಎಂದು ಸುಪ್ರೀಂ ಕೋರ್ಟ್ ಹಳಿದಿರುವುದು ಎಷ್ಟು ಸರಿ? ದೇಶದ ಮಾತ್ರವಲ್ಲದೆ ವಿಶ್ವದ ಇತಿಹಾಸದಲ್ಲಿ ದುಡಿಯುವ ವರ್ಗದ ಹಕ್ಕಿಗಾಗಿ ಕಾರ್ಮಿಕ ಸಂಘಟನೆಗಳು ಮುನ್ನಡೆಸಿದ ದೀರ್ಘ ಹೋರಾಟಗಳನ್ನು ನಾವು ಮರೆಯಲಾದೀತೆ? ಗತದತ್ತ ತಿರುಗಿ ನೋಡಿದಾಗ ಕಾಣುವ ಯಶೋಗಾಥೆಗಳು ಎಂದಾದರೂ ಅಭಿವೃದ್ಧಿಗೆ ತೊಡಕಾಗಿತ್ತೇ?

‘ಕಾರ್ಮಿಕ ಸಂಘಟನೆಗಳು’ – ಹೆಸರೇ ಹೇಳುವಂತೆ ಕಾರ್ಮಿಕರ ಪರವಾಗಿ, ಕಾರ್ಮಿಕರ ಹಕ್ಕುಗಳಿಗಾಗಿ, ದುಡಿಯುವ ವರ್ಗದ ಜನರ ನ್ಯಾಯಕ್ಕಾಗಿ, ದುಡಿಮೆಗೆ ತಕ್ಕ ಕಾರ್ಮಿಕರಿಗೆ ವೇತನ ನೀಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಹೋರಾಟಗಳನ್ನು ಮುನ್ನಡೆಸುತ್ತಾ ಬಂದಿರುವ ಸಂಘಟನೆಗಳು. ಯಾವುದೇ ಸರ್ಕಾರವಿರಲಿ ಕಾರ್ಮಿಕರಿಗೆ ಅನ್ಯಾಯವಾದಾಗ ಧ್ವನಿ ಎತ್ತಿರುವುದು ಈ ಕಾರ್ಮಿಕ ಸಂಘಟನೆಗಳು. ಇಂದು ಕಾರ್ಮಿಕರ ಜೀವನಮಟ್ಟ ಕೊಂಚ ಸುಧಾರಣೆಯಾಗಿದೆಯೆಂದಾದರೆ ಅದಕ್ಕೆ ಕಾರ್ಮಿಕ ಸಂಘಟನೆಗಳು ದುಡಿಯುವ ವರ್ಗದ ಜನರಿಗೆ ನೀಡದ ಬೆಂಬಲ ಮತ್ತು ನಡೆಸಿದ ದೀರ್ಘ ಹೋರಾಟವೇ ಕಾರಣ. ಹೀಗಿರುವಾಗ ಕಾರ್ಮಿಕ ಸಂಘಟನೆಗಳನ್ನು ‘ಝಂಡಾ ಯೂನಿಯನ್’ ಎಂದು ಸುಪ್ರೀಂ ಕೋರ್ಟ್ ಹಳಿದಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

- Advertisement -

ದೇಶದಲ್ಲಿ ಕೈಗಾರಿಕಾ ಬೆಳವಣಿಗೆಯು ಕುಂಠಿತವಾಗಲು ಇಂತಹ ‘ಝಂಡಾ’ ಯೂನಿಯನ್‌ಗಳು ಅಂದರೆ ಟ್ರೇಡ್ ಯೂನಿಯನ್‌ಗಳ ಸಿದ್ಧಾಂತವೇ ಮುಖ್ಯ ಕಾರಣ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅಭಿಪ್ರಾಯಿಸಿದ್ದಾರೆ. ಇಲ್ಲಿ ‘ಝಂಡಾ’ ಎಂದರೆ ಧ್ವಜ ಅಥವಾ ಬಾವುಟ ಎಂದರ್ಥ. ಇಂತಹ ಸಂಘಟನೆಗಳಿಂದಾಗಿಯೇ ಅನೇಕ ಸಾಂಪ್ರಾದಾಯಿಕ ಕೈಗಾರಿಕೆಗಳನ್ನು ಮುಚ್ಚಲಾಗಿದೆ. ಈ ಸಂಘಟನೆಗಳು ಕೆಲಸಕ್ಕಿಂತ ಹೆಚ್ಚಾಗಿ ಪ್ರತಿಭಟನೆಗೆ ಒತ್ತು ನೀಡಿರುವುದರಿಂದಾಗಿ ಹಲವು ಕೈಗಾರಿಕೆಗಳಿಗೆ ಸಮಸ್ಯೆಯಾಗಿದೆ ಎಂದು ಆರೋಪಿಸಿದ್ದಾರೆ. ಈ ಹೇಳಿಕೆ ನೀಡುವಾಗ ಕಾರ್ಮಿಕರ ಹಿಂದಿನ ದುಸ್ಥಿತಿ ಮತ್ತು ಇಂದು ಕೊಂಚ ಧ್ವನಿ ಎತ್ತಬಹುದಾದ ಸ್ಥಿತಿಯತ್ತ ಮತ್ತು ಕಾರ್ಮಿಕರಲ್ಲಿ ಆ ಧೈರ್ಯ ತುಂಬಿದ ‘ಟ್ರೇಡ್ ಯೂನಿಯನ್‌’ಗಳತ್ತ ಸುಪ್ರೀಂ ಕೋರ್ಟ್ ಕೊಂಚ ಕಣ್ಣಾಯಿಸಬೇಕಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಇದನ್ನು ಓದಿದ್ದೀರಾ? ದೇಶದಲ್ಲಿ ಕೈಗಾರಿಕಾ ಬೆಳವಣಿಗೆ ತಡೆಗೆ ಟ್ರೇಡ್ ಯೂನಿಯನ್ ಸಿದ್ಧಾಂತ ಕಾರಣ: ಸುಪ್ರೀಂ ಕೋರ್ಟ್

Advertisements

ಸುಪ್ರೀಂ ಕೋರ್ಟ್ ಹೇಳಿಕೆಗೆ ಕಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಈದಿನ ಡಾಟ್‌. ಕಾಮ್‌ಗೆ ಪ್ರತಿಕ್ರಿಯಿಸಿರುವ ಸಿಐಟಿಯು ಮುಖಂಡೆ ಎಸ್‌.ವರಲಕ್ಷ್ಮಿ, “ಈ ಹೇಳಿಕೆಗಳು ಕಾರ್ಮಿಕರ ಹೋರಾಟಗಳನ್ನು ದುರ್ಬಲಗೊಳಿಸಲು ಹಾಗೂ ಸಂವಿಧಾನಾತ್ಮಕವಾಗಿ ಭದ್ರಪಡಿಸಲಾದ ಕಾರ್ಮಿಕ ಹಕ್ಕುಗಳನ್ನು ನಾಶಪಡಿಸಲು ಪ್ರಯತ್ನಿಸುವ ನವ-ಉದಾರವಾದಿ ಮನೋಭಾವದ ಪ್ರತಿಬಿಂಬ. ಕಾರ್ಮಿಕ ಸಂಘಟನೆಗಳು ಕಾರ್ಮಿಕರ ಗೌರವ, ನ್ಯಾಯಸಮ್ಮತ ವೇತನ ಮತ್ತು ಸಾಮಾಜಿಕ ಭದ್ರತೆಗಾಗಿ ಹೋರಾಡುತ್ತಾ ಬಂದಿವೆ. ಸಂಘಟಿಸುವ ಹಕ್ಕು ಸಂವಿಧಾನ ನೀಡಿರುವ ಹಕ್ಕು. ಕಾರ್ಮಿಕ ಸಂಘಗಳನ್ನು ಅಭಿವೃದ್ಧಿಗೆ ಅಡ್ಡಿಯೆಂದು ಚಿತ್ರಿಸುವುದು ಈ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಅವಮಾನಿಸಿದಂತೆ” ಎಂದು ತಿಳಿಸಿದ್ದಾರೆ.

varalaksmi2
ಸಿಐಟಿಯು ಮುಖಂಡೆ ಎಸ್‌.ವರಲಕ್ಷ್ಮಿ,

ಅಷ್ಟಕ್ಕೂ ಕಾರ್ಮಿಕ ಸಂಘಟನೆಗಳ ಇತಿಹಾಸ ಬಹಳ ರೋಚಕವಾದುದ್ದು. ಕಡಿಮೆ ವೇತನ, ಸಾಲ ಬಾಕಿ ಮರುಪಾವತಿಸಲು, ಯಾವುದೇ ಸುರಕ್ಷತೆ ಇಲ್ಲದೆ ದುಡಿಸುವ ಕಾರ್ಮಿಕರ ಗುಲಾಮಗಿರಿಯಿಂದ ಇಂದು ಕನಿಷ್ಠ ವೇತನದವರೆಗೂ, ಕಾರ್ಖಾನೆಗಳಲ್ಲಿ ಪಿಎಫ್ ಭದ್ರತೆ ಹೆಚ್ಚಳದವರೆಗೂ ಎಲ್ಲವೂ ಕಾರ್ಮಿಕ ಸಂಘಟನೆಗಳ ಹೋರಾಟದ ಫಲ. ಇಂದಿಗೂ ನಾವು ಹಿಂದೆ ತಿರುಗಿ ನೋಡಿದರೆ ಈ ಹೋರಾಟ ಹಾದಿ ನಮ್ಮ ಹುಬ್ಬೇರಿರುವಂತೆ ಮಾಡುತ್ತದೆ. ಅದೆಷ್ಟೋ ಉಪವಾಸ ಸತ್ಯಾಗ್ರಹ, ಅನಿರ್ದಿಷ್ಟಾವಧಿ ಪ್ರತಿಭಟನೆಗಳನ್ನು ಬಂಡವಾಳಶಾಹಿಗಳ ದರ್ಪದ ವಿರುದ್ಧವಾಗಿ ಸಂಘಟಿಸಿದ್ದು ಈ ಟ್ರೇಡ್ ಯೂನಿಯನ್‌ಗಳು. ಅದರ ಫಲವಾಗಿ ಇಂದು ಕಾರ್ಮಿಕರು ಕೊಂಚ ಧ್ವನಿ ಎತ್ತಲು ಸಾಧ್ಯವಾಗುತ್ತಿರುವುದು. ಕೈಗಾರಿಕಾ ಶಾಂತಿ ಮತ್ತು ಒಟ್ಟಾರೆ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿರುವುದು ಈ ಕಾರ್ಮಿಕ ಸಂಘಟನೆಗಳು. ಬಿಜೆಪಿಯ ಕಾರ್ಮಿಕ ಸಂಘಟನೆ ಭಾರತೀಯ ಮಜ್ದೂರ್ ಸಂಘ (BMS) ತಮ್ಮ ಪಕ್ಷ ಆಡಳಿತದಲ್ಲಿದ್ದ ಕಾರ್ಮಿಕ ವಿರೋಧಿ ಕಾರ್ಯಗಳು ಪ್ರತ್ಯಕ್ಷ-ಪರೋಕ್ಷವಾಗಿ ಸಮರ್ಥಿಸಿಕೊಂಡಿದೆ. ಆದರೆ ಕೆಲವೊಮ್ಮೆ ನೆಪ ಮಾತ್ರಕ್ಕಾದರೂ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೇಳಿಕೆಗಳನ್ನು ನೀಡಿದೆ.

ವಿಶ್ವದ ಅತಿ ದೊಡ್ಡ ಕಾರ್ಮಿಕ ಮುಷ್ಕರ ನಡೆದಿರುವುದು ನಮ್ಮ ಭಾರತದಲ್ಲಿ. 2020ರ ನವೆಂಬರ್ 26ರಂದು ಭಾರತದ 10 ಪ್ರಮುಖ ಕೇಂದ್ರೀಯ ಕಾರ್ಮಿಕ ಸಂಘಟನೆಗಳಾದ ಐಎನ್‌ಟಿಯುಸಿ, ಎಐಟಿಯುಸಿ, ಸಿಐಟಿಯು ಜಂಟಿಯಾಗಿ ನಡೆಸಿದ ಮುಷ್ಕರದಲ್ಲಿ ಅಂದಾಜು 25 ಕೋಟಿ ಕಾರ್ಮಿಕರು ಭಾಗಿಯಾಗಿದ್ದರು. ಸರ್ಕಾರದ ಹೊಸ ಕಾರ್ಮಿಕ ಕಾನೂನುಗಳು ಮತ್ತು ರೈತ ವಿರೋಧಿ ಎನ್ನಲಾದ ಕೃಷಿ ಕಾಯ್ದೆಗಳ ವಿರುದ್ಧ ಈ ಮುಷ್ಕರ ನಡೆಸಲಾಗಿತ್ತು. ಇಂತಹ ಸಂಘಟನೆಗಳ ಒತ್ತಡದಿಂದಾಗಿ ಕನಿಷ್ಠ ವೇತನ ಕಾಯ್ದೆ (1948), ಮಾತೃತ್ವ ಪ್ರಯೋಜನ ಕಾಯ್ದೆ (1961) ಮತ್ತು ಬೋನಸ್ ಪಾವತಿ ಕಾಯ್ದೆಗಳು ಜಾರಿಗೆ ಬಂದವು. ವಾರದ ಆರು ದಿನ ಕೆಲಸ ಒಂದು ದಿನ ವಿಶ್ರಾಂತಿ, ಎಂಟು ಗಂಟೆ ದುಡಿಮೆ – ಹೀಗೆ ಇವೆಲ್ಲವು ಕಾರ್ಮಿಕರ ಒಳಿತಿಗಾಗಿ, ಹಕ್ಕಿಗಾಗಿ ಮಾಡಿದ ಹೋರಾಟಗಳಾದರೆ ದೇಶದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಕಾರ್ಮಿಕ ಸಂಘಟನೆಗಳು ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ.

ರಾಜ್ಯದ ಬೆಂಗಳೂರು, ಮಂಗಳೂರು ಭಾಗದ ಕೈಗಾರಿಕಾ ಪ್ರದೇಶಗಳಲ್ಲಿ ಸಿಐಟಿಯು ಸಂಘಟನೆಯು ವೇತನ ಪರಿಷ್ಕರಣೆ ಮತ್ತು ಕೆಲಸದ ಅವಧಿಯ ನಿಯಂತ್ರಣಕ್ಕಾಗಿ ನಡೆಸಿದ ಹೋರಾಟಗಳು ಅಲ್ಲಿನ ಕಾರ್ಖಾನೆಗಳಲ್ಲಿ ಶಿಸ್ತು ಮತ್ತು ವ್ಯವಸ್ಥಿತವಾಗಿ ಕೆಲಸ ನಡೆಯಲು ಸಹಕಾರಿಯಾಗಿದೆ. ಹಮಾಲಿ ಕಾರ್ಮಿಕರು, ಬೀಡಿ ಕಾರ್ಮಿಕರು, ಮನೆಗೆಲಸ ಕಾರ್ಮಿಕರು, ಕಟ್ಟಡ ಕಾರ್ಮಿಕರು ಹೀಗೆ ಕಾರ್ಮಿಕರು ಮತ್ತು ಮಾಲೀಕರ ನಡುವೆ ಯಾವುದೇ ತಕರಾರು ಎದ್ದಾಗಲೂ ಮಧ್ಯಪ್ರವೇಶಿಸಿ ನ್ಯಾಯಯುತ ಸಂಧಾನ ಮಾಡುವಲ್ಲಿ ಸಿಐಟಿಯು, ಎಐಟಿಯುಸಿ ಸಂಘಟನೆಗಳು ಪ್ರಮುಖ ಪಾತ್ರವಹಿಸಿದೆ.

ಇದನ್ನು ಓದಿದ್ದೀರಾ? ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದ ಕೇಂದ್ರ ಸರ್ಕಾರ: ಸಂಘಟನೆಗಳ ವಿರೋಧವೇಕೆ?

ಇನ್ನು ಅನೇಕ ಸಂಘಟನೆಗಳು ಕಾರ್ಮಿಕರಿಗೆ ತರಬೇತಿಯನ್ನೂ ನೀಡುತ್ತಿದೆ. ಕಾರ್ಮಿಕರಿಗೆ ಸರಿಯಾದ ವಸತಿ, ಶಿಕ್ಷಣ, ವೈದ್ಯಕೀಯ ನೆರವು ಮೊದಲಾದ ಸೌಲಭ್ಯಗಳು ಲಭಿಸುವಂತೆ ಹೋರಾಟದ ಹಾದಿಯಲ್ಲಿ ಕಾರ್ಮಿಕ ಸಂಘಟನೆಗಳು ಶ್ರಮಿಸುವ ಫಲವಾಗಿಯೇ ಕಾರ್ಮಿಕರ ಉತ್ಪಾದಕತೆಯೂ ಹೆಚ್ಚಾಗಿದೆ. ರಾಜಸ್ಥಾನದ ಉದಯಪುರದ ಸರ್ಕಾರಿ ಮೀರಾ ಮಹಿಳಾ ಕಾಲೇಜು ಪ್ರಾಧ್ಯಾಪಕಿ ಭಾವ್ನಾ ಹಿಂಗರ್ ಅವರು ಚರಿತ್ರಾತ್ಮಕ ಅಭಿವೃದ್ಧಿ, ಕಾನೂನು ಚೌಕಟ್ಟುಗಳು ಮತ್ತು ಕಾರ್ಮಿಕ ಸಂಘಟನೆಗಳ ಕೊಡುಗೆ ಸಂಬಂಧ ನಡೆಸಿದ ಸಂಶೋಧನೆಯ ಪ್ರಕಾರ, “ಕಾರ್ಮಿಕ ಸಂಘಟನೆಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಸ್ಥಿರವಾದ ಕಾರ್ಮಿಕ ಬಲವನ್ನು ಬೆಳೆಸುವ ಕೀಳಿಗಳಾಗಿವೆ” ಅಂದರೆ ಕಾರ್ಮಿಕ ಸಂಘಟನೆಗಳು ಇರುವ ಕಾರಣದಿಂದಾಗಿ ಕಾರ್ಮಿಕರು ಸಂಘಟಿತರಾಗಿ, ಒಂದು ಉದ್ಯೋಗದಲ್ಲಿ ತೊಡಗಿದ್ದಾರೆ. ಸಂಘಟನೆಗಳೇ ಕಾರ್ಮಿಕರು ಉದ್ಯೋಗ ತೊರೆಯದಂತೆ ನೋಡಿಕೊಳ್ಳುತ್ತಿದೆ.

ನಮ್ಮದು ಈ ಹಿಂದಿನಿಂದಲೂ ಬಂಡವಾಳಶಾಹಿಗಳ ಪರವಾದ ಸರ್ಕಾರ. ಸದ್ಯ ಇರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರವಂತು ಬಹಿರಂಗವಾಗಿ ಕಾರ್ಪೋರೇಟ್ ದೊರೆಗಳ ಪರವಾಗಿ ನಿಂತಿದ್ದಾರೆ. ಅಂಬಾನಿ-ಅದಾನಿಯ ಕೈಗೊಂಬೆಯಾಗಿರುವ ಪ್ರಧಾನಿ ಮೋದಿ ನಿರಂತರವಾಗಿ ಕಾರ್ಮಿಕ ವಿರೋಧಿ ಕ್ರಮವನ್ನು ಕೈಗೊಳ್ಳುತ್ತಿದ್ದಾರೆ. ಇತ್ತೀಚಿನ ಕಾರ್ಮಿಕ ಸಂಹಿತೆಗಳು ಮತ್ತು ಮನರೇಗಾ ರದ್ದು ಮಾಡಿರುವುದೇ ಸಾಕ್ಷಿ. ಹೀಗಿರುವಾಗ ನಮ್ಮ ಕೊನೆಯ ಭರವಸೆ ನ್ಯಾಯಾಲಯ.

ನ್ಯಾಯಾಲಯವು ಬಂಡವಾಳದೆಡೆ ತಲೆಬಾಗಿದರೆ ದುಡಿಯುವ ವರ್ಗದ ಗತಿಯೇನು? ಬೆವರಿಗಿಂತ ಬಂಡವಾಳವೇ ಮಿಗಿಲೇ? ಸಂವಿಧಾನ ಸಮಾಜವಾದವನ್ನು ಸಾರುತ್ತದೆ. ಜನರ ಹಿತಕ್ಕಾಗಿ ಕಾರ್ಮಿಕರೇ ಉತ್ಪಾದನೆ ಮತ್ತು ವಿತರಣೆಯನ್ನು ಮಾಡುವ ವ್ಯವಸ್ಥೆಯೇ ಸಮಾಜವಾದ. ಸಮಾನ ಸಮಾಜದ ನಿರ್ಮಾಣವೇ ಇದರ ಉದ್ದೇಶ. ಆದರೆ ಸದ್ಯ ಜನರ ಹಿತವೂ ಇಲ್ಲ, ಕಾರ್ಮಿಕರ ಒಳಿತೂ ಇಲ್ಲ. ಇಂದು ಬಂಡವಾಳಶಾಹಿಗಳದ್ದೇ ಸರ್ಕಾರವಾಗಿರುವಾಗ, ಬಂಡವಾಳಶಾಹಿಗಳ ಪರವಾಗಿಯೇ ಕಾನೂನುಗಳನ್ನು ಜಾರಿಗೊಳಿಸುತ್ತಿರುವಾಗ ಸಂವಿಧಾನ ಸಾರಿದ ಸಮಾಜವಾದದ ಅರ್ಥವಾದರೂ ಜನರಿಗೆ ತಿಳಿಯುವುದು ಹೇಗೆ?

ಅಷ್ಟಕ್ಕೂ ಕಾರ್ಮಿಕ ಸಂಘಟನೆಗಳನ್ನು ‘ಝಂಡಾ ಯೂನಿಯನ್’ ಎಂದು ಸುಪ್ರೀಂ ಕೋರ್ಟ್ ಹಳಿದಿರುವುದು ಎಷ್ಟು ಸರಿ? ದೇಶದ ಮಾತ್ರವಲ್ಲದೆ ವಿಶ್ವದ ಇತಿಹಾಸದಲ್ಲಿ ದುಡಿಯುವ ವರ್ಗದ ಹಕ್ಕಿಗಾಗಿ ಕಾರ್ಮಿಕ ಸಂಘಟನೆಗಳು ಮುನ್ನಡೆಸಿದ ದೀರ್ಘ ಹೋರಾಟಗಳನ್ನು ನಾವು ಮರೆಯಲಾದೀತೆ ಅಥವಾ ಮರೆಯಬಹುದೇ? ಗತದತ್ತ ತಿರುಗಿ ನೋಡಿದಾಗ ಕಾಣುವ ಯಶೋಗಾಥೆಗಳು ಎಂದಾದರೂ ಅಭಿವೃದ್ಧಿಗೆ ತೊಡಕಾಗಿತ್ತೇ?

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು...

ಬದ್ಧವೈರಿಗಳನ್ನು ಬೆಸೆದ ಚುನಾವಣಾ ಆಯೋಗದ ವಿವಾದ: ಒಡಕು ಮರೆತು ಮತ್ತೆ ಒಂದಾಗುತ್ತಿದೆಯೇ ‘ಇಂಡಿಯಾ’ ಒಕ್ಕೂಟ?

ಚುನಾವಣಾ ಆಯೋಗದೊಳಗಿನ ಆಂತರಿಕ ಒಡಕು ಇದೀಗ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ...

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ ಅಸ್ತ್ರ!

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ...

ಬೆಳಗಾವಿ | 200 ಪ್ಲೇಟ್‌ಗೆ ಸೀಮಿತವಾದ ಇಂದಿರಾ ಕ್ಯಾಂಟಿನ್: 500ಕ್ಕೆ ಹೆಚ್ಚಿಸಲು ಆಗ್ರಹ

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು...