ಮತದಾನದ ಹಿಂದೆ ಮುಂದೆ ಇವಿಎಂಗಳ ಪಯಣ ಹೇಗಿರುತ್ತದೆ ಬಲ್ಲಿರಾ?

Date:

ಇವಿಎಂ ಚುನಾವಣಾ ಪ್ರಕ್ರಿಯೆಯನ್ನು ವೇಗಗೊಳಿಸಿದೆ. ಆದರೆ 'ಪಾರದರ್ಶಕತೆ'ಯ ವಿಷಯದಲ್ಲಿ ಇಂದಿಗೂ ಹಲವು ಗಂಭೀರ ಪ್ರಶ್ನೆಗಳು ಮತ್ತು ಆತಂಕಗಳು ಉಳಿದುಕೊಂಡಿವೆ. ಜರ್ಮನಿ ಮತ್ತು ನೆದರ್‌ಲ್ಯಾಂಡ್ ಮೊದಲಾದ ದೇಶಗಳಲ್ಲಿ ಪಾರದರ್ಶಕತೆ ಕೊರತೆ ಇದೆ ಎಂಬ ಕಾರಣಕ್ಕೆ ಇವಿಎಂಗಳನ್ನು ನಿಷೇಧಿಸಿ ಮತ್ತೆ ಪೇಪರ್ ಬ್ಯಾಲೆಟ್‌ ಬಳಸಲಾಗುತ್ತಿದೆ.

ದೇಶದಲ್ಲಿ ಬ್ಯಾಲೆಟ್ ಪೇಪರ್‌ನಿಂದ ಆರಂಭವಾದ ಮತದಾನ ಪ್ರಕ್ರಿಯೆಯು ಇಂದು ಇವಿಎಂ ಅಥವಾ ವಿದ್ಯುನ್ಮಾನ ಮತಯಂತ್ರಗಳತ್ತ ತಲುಪಿದೆ. 2004ರಿಂದ ದೇಶದಲ್ಲಿ ಸಂಪೂರ್ಣವಾಗಿ ಇವಿಎಂ ಬಳಸಲು ಪ್ರಾರಂಭಿಸಲಾಗಿದೆ. ಅಲ್ಲಿಯವರೆಗೆ ಬ್ಯಾಲೆಟ್ ಪೇಪರ್ ಅಥವಾ ಮತಪತ್ರಗಳ ಮೂಲಕವೇ ಚುನಾವಣೆಗಳು ನಡೆಯುತ್ತಿದ್ದವು. ಮತದಾನ ಪ್ರಕ್ರಿಯೆ ಪಾರದರ್ಶಕಗೊಳಿಸಲು ಮತ್ತು ಲಕ್ಷಾಂತರ ಟನ್ ಕಾಗದವನ್ನು ಉಳಿಸುವ ನಿಟ್ಟಿನಲ್ಲಿ ಇವಿಎಂಗಳ ಬಳಕೆಯತ್ತ ಮುಖ ಮಾಡಲಾಯಿತು.

- Advertisement -

1951-1957ರವರೆಗೆ ಮೊದಲ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾರರು ಪ್ರತಿ ಅಭ್ಯರ್ಥಿಗೆ ಮೀಸಲಿಟ್ಟ ಪ್ರತ್ಯೇಕ ಪೆಟ್ಟಿಗೆಗಳಿಗೆ ಖಾಲಿ ಬ್ಯಾಲೆಟ್ ಪೇಪರ್‌ಗಳನ್ನು ಹಾಕುವ ಪದ್ಧತಿ ಇತ್ತು. ಆದರೆ 1960ರ ದಶಕದಲ್ಲಿ ನಡೆದ ಮೂರನೇ ಸಾರ್ವತ್ರಿಕ ಚುನಾವಣೆಯಿಂದ ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆ ಇರುವ ಸಾಂಪ್ರದಾಯಿಕ ಮತಪತ್ರಗಳನ್ನು ಪರಿಚಯಿಸಲಾಯಿತು. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯ ಮುಂದೆ ಮುದ್ರೆ ಒತ್ತುವ ಮೂಲಕ ಮತದಾನ ಮಾಡುತ್ತಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಟಾಟಾ ಸನ್ಸ್ ಬೋರ್ಡ್ ರೂಮ್ ಕಲಹದ ಆಳ ಅಗಲವೇನು...

ಭಾರತದ ಭಾರೀ ಉದ್ಯಮ ಬ್ರ್ಯಾಂಡ್‌ಗಳಲ್ಲಿ ಒಂದು ಟಾಟಾ. ಉಪ್ಪಿನಿಂದ ಹಿಡಿದು ಉಕ್ಕು, ಕಾರು, ಐಟಿ, ಹೋಟೆಲ್, ವಿಮಾನಯಾನ, ಎಲೆಕ್ಟ್ರಿಕ್ ವಾಹನ, ಈಗ ಸೆಮಿಕಂಡಕ್ಟರ್‌ವರೆಗೆ ಟಾಟಾ ಸಾಮ್ರಾಜ್ಯ ವ್ಯಾಪಿಸಿದೆ. ಆದರೆ, ಈಗ ಇದೇ ಟಾಟಾ ಸಾಮ್ರಾಜ್ಯದ...

ESA ತೂಗುಗತ್ತಿ: ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ...

“ಗ್ರಾಮದ ಕನಿಷ್ಠ 20 ಪ್ರತಿಶತದಷ್ಟು ಪ್ರದೇಶವು ‘ಪರಿಸರ ಸೂಕ್ಷ್ಮ ಪ್ರದೇಶ’ (ESA) ಎಂದು ಕಂಡುಬಂದರೆ, ಉಳಿದ 80% ಪ್ರದೇಶ ನಗರೀಕರಣಗೊಂಡಿದ್ದರೂ ಇಡೀ ಗ್ರಾಮವನ್ನು ESA ಎಂದು ಪರಿಗಣಿಸುವ ನೀತಿಯನ್ನು ಕಸ್ತೂರಿ ರಂಗನ್ ವರದಿ...

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10...

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ ಅದು ಆಗಿಲ್ಲ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಇನ್ನೂ ಅವಕಾಶವಿದೆ" ಎಂದು ಕೃಷಿ ಅಧಿಕಾರಿಗಳು ಹೇಳಿದರು. ಮುಂಗಾರು ಆರಂಭದಲ್ಲಿ ಉತ್ತಮ...

ಇದನ್ನು ಓದಿದ್ದೀರಾ? ಬಂಗಾಳದಲ್ಲಿ ಚುನಾವಣಾ ಹೈಡ್ರಾಮಾ: ಸ್ಟ್ರಾಂಗ್ ರೂಮ್‌ನಲ್ಲಿ ನಡುರಾತ್ರಿ ನಡೆದಿದ್ದೇನು?

1982ರಲ್ಲಿ ಕೇರಳದ ಪಾರವೂರು ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ EVM ಪ್ರಾಯೋಗಿಕವಾಗಿ ಬಳಸಲಾಯಿತು. 2001ರ ವೇಳೆಗೆ ತಮಿಳುನಾಡು, ಕೇರಳ, ಪುದುಚೆರಿ ಮತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗಳಲ್ಲಿ ಇವಿಎಂ ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಬಂದವು. 2004ರ ಲೋಕಸಭಾ ಚುನಾವಣೆಯಿಂದ ದೇಶಾದ್ಯಂತ ಎಲ್ಲ ಮತಗಟ್ಟೆಗಳಲ್ಲೂ ಬ್ಯಾಲೆಟ್ ಪೇಪರ್ ಬದಲಿಗೆ EVM ಬಳಸಲಾಗುತ್ತಿದೆ.

ಮತದಾನಕ್ಕೆ ಮುನ್ನ ಇವಿಎಂ

ಚುನಾವಣೆಗೆ ಕೆಲವು ತಿಂಗಳುಗಳ ಮೊದಲೇ BEL ಅಥವಾ ECIL ಇಂಜಿನಿಯರ್‌ಗಳು ಇವಿಎಂಗಳ ತಾಂತ್ರಿಕ ಕಾರ್ಯಕ್ಷಮತೆಯನ್ನು ಪರಿಶೀಲಿಸುತ್ತಾರೆ. ಈ ಪ್ರಕ್ರಿಯೆಯು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಯುತ್ತದೆ. ಅದಾದ ಬಳಿಕ ಯಾವ ಇವಿಎಂ ಯಾವ ಕ್ಷೇತ್ರಕ್ಕೆ ಹೋಗಬೇಕು ಮತ್ತು ಯಾವ ಮತಗಟ್ಟೆಗೆ ಹೋಗಬೇಕು ಎಂಬುದನ್ನು ಸಾಫ್ಟ್‌ವೇರ್ ಮೂಲಕ ಯಾದೃಚ್ಛಿಕವಾಗಿ ನಿರ್ಧರಿಸಲಾಗುತ್ತದೆ. ಈ ಹಂತದಲ್ಲಿ ಇವಿಎಂಗಳನ್ನು ಬಿಗಿ ಭದ್ರತೆಯಿರುವ ‘ಸ್ಟ್ರಾಂಗ್ ರೂಮ್’ಗಳಲ್ಲಿ ಇರಿಸಲಾಗುತ್ತದೆ. ಈ ಕೊಠಡಿಗಳಿಗೆ ಬೀಗ ಹಾಕಿ ಸೀಲ್ ಮಾಡಲಾಗಿರುತ್ತದೆ.

ಮತದಾನದ ದಿನ ಇವಿಎಂ

ಮತದಾನ ಆರಂಭವಾಗುವ ಮುನ್ನ ಅಂದರೆ ಬೆಳಿಗ್ಗೆ 5:30 ಅಥವಾ 6 ಗಂಟೆಗೆ ಅಭ್ಯರ್ಥಿಗಳ ಏಜೆಂಟ್‌ಗಳ ಸಮ್ಮುಖದಲ್ಲಿ ಕನಿಷ್ಠ 50 ಮತಗಳನ್ನು ಹಾಕಿ ಇವಿಎಂ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಪರೀಕ್ಷಿಸಲಾಗುತ್ತದೆ. ಇದನ್ನು ಮಾಕ್ ಪೋಲ್ (Mock Poll) ಎಂದು ಕರೆಯಲಾಗುತ್ತದೆ. ನಂತರ ಆ ಮತಗಳನ್ನು ಅಳಿಸಿ, ಯಂತ್ರವನ್ನು ಸೀಲ್ ಮಾಡಲಾಗುತ್ತದೆ. ಯಂತ್ರವನ್ನು ಸೀಲ್ ಮಾಡುವಾಗ ಅದರ ಮೇಲೆ ಅಭ್ಯರ್ಥಿಗಳ ಏಜೆಂಟರು ಸಹಿ ಮಾಡುತ್ತಾರೆ. ಆ ಸೀಲ್ ಸಂಖ್ಯೆಯನ್ನು ದಾಖಲಿಸಿಕೊಳ್ಳಲಾಗುತ್ತದೆ.

ಮತದಾನದ ನಂತರ ಇವಿಎಂ

ಮತದಾನ ಮುಗಿದ ತಕ್ಷಣ ಮತಗಟ್ಟೆ ಅಧಿಕಾರಿ ‘Close’ ಬಟನ್ ಒತ್ತುತ್ತಾರೆ. ಇದರ ನಂತರ ಯಂತ್ರವು ಯಾವುದೇ ಮತವನ್ನು ಸ್ವೀಕರಿಸಲ್ಲ. ಆ ದಿನ ಚಲಾಯಿಸಲಾದ ಒಟ್ಟು ಮತಗಳ ಸಂಖ್ಯೆಯನ್ನು ಅಧಿಕಾರಿಗಳು Form 17Cಯಲ್ಲಿ ನಮೂದಿಸಿ, ಏಜೆಂಟರಿಗೆ ಅದರ ಪ್ರತಿಯನ್ನು ನೀಡುತ್ತಾರೆ. ಇದು ಎಣಿಕೆಯ ದಿನ ಮತಗಳ ಸಂಖ್ಯೆಯನ್ನು ತಾಳೆ ನೋಡಲು ಸಹಕಾರಿಯಾಗುತ್ತದೆ. ಅದಾದ ಬಳಿಕ ಮತಯಂತ್ರಗಳನ್ನು ಅವುಗಳ ಮೂಲ ಬಾಕ್ಸ್‌ಗಳಲ್ಲಿ ಇಟ್ಟು ಸೀಲ್ ಮಾಡಿ, ಸಶಸ್ತ್ರ ಪೊಲೀಸ್ ಭದ್ರತೆಯಲ್ಲಿ ಜಿಲ್ಲಾ ಕೇಂದ್ರದ ಸ್ಟ್ರಾಂಗ್ ರೂಮ್‌ಗಳಿಗೆ ತರಲಾಗುತ್ತದೆ.

ಸ್ಟ್ರಾಂಗ್ ರೂಮ್ ಭದ್ರತೆಯಲ್ಲಿ ಇವಿಎಂ

ಕೇಂದ್ರ ಮೀಸಲು ಪೊಲೀಸ್ ಪಡೆ, ರಾಜ್ಯ ಸಶಸ್ತ್ರ ಪಡೆ ಮತ್ತು ಸ್ಥಳೀಯ ಪೊಲೀಸ್ – ಹೀಗೆ ಸ್ಟ್ರಾಂಗ್ ರೂಮ್‌ಗಳಿಗೆ ಮೂರು ಹಂತದ ಭದ್ರತೆ ಇರುತ್ತದೆ. ಇಡೀ ಆವರಣವು ದಿನದ 24 ಗಂಟೆಯೂ ಸಿಸಿಟಿವಿ ಕಣ್ಗಾವಲಿನಲ್ಲಿರುತ್ತದೆ. ಸ್ಟ್ರಾಂಗ್ ರೂಮ್ ಹೊರಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕೂಡ ಮೊಕ್ಕಾಂ ಹೂಡಿ ಕಾವಲು ಕಾಯಲು ಅವಕಾಶವಿರುತ್ತದೆ.

ಇದನ್ನು ಓದಿದ್ದೀರಾ? ಇವಿಎಂ ಅಕ್ರಮ ಆರೋಪ: ‘ಸಾವು ಬದುಕಿನ ಹೋರಾಟ’ – ಸ್ಟ್ರಾಂಗ್‌ ರೂಮ್‌ ಬಳಿ ಮಮತಾ ಬ್ಯಾನರ್ಜಿ

ಮತ ಎಣಿಕೆ ಮತ್ತು ಅದರ ನಂತರ

ಎಣಿಕೆಯ ದಿನ ಇವಿಎಂಗಳನ್ನು ಹೊರತೆಗೆಯುವಾಗ, ಅವುಗಳ ಸೀಲ್ ಸರಿಯಾಗಿದೆಯೇ ಎಂಬುದನ್ನು ಎಲ್ಲ ಪಕ್ಷದ ಏಜೆಂಟರಿಗೆ ತೋರಿಸಲಾಗುತ್ತದೆ. ಅಭ್ಯರ್ಥಿಗಳ ಕೌಂಟಿಂಗ್ ಏಜೆಂಟ್‌ಗಳು ಈ ಹಂತದಲ್ಲಿಯೇ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಮೊಹರುಗಳನ್ನು ಒಡೆಯಲಾಗಿದೆಯೇ ಎಂಬುದನ್ನು ಕಣ್ಣಲ್ಲಿ ಕಣ್ಣಿಟ್ಟು ಗಮನಿಸಬೇಕಾಗುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರದ ಐದು ಯಾದೃಚ್ಛಿಕ ಮತಗಟ್ಟೆಗಳ ವಿವಿಪ್ಯಾಟ್ ಸ್ಲಿಪ್‌ಗಳನ್ನು ಎಣಿಸಿ ಇವಿಎಂ ಫಲಿತಾಂಶದೊಂದಿಗೆ ತಾಳೆ ನೋಡಲಾಗುತ್ತದೆ. ಈ ವೇಳೆಯೂ ತಾಳೆಯಾಗುತ್ತದೆಯೇ ಎಂದು ಏಜೆಂಟ್ ಗಮನಿಸಬೇಕಾಗುತ್ತದೆ. ಒಂದು ವೇಳೆ ಕಂಟ್ರೋಲ್ ಯೂನಿಟ್ ಫಲಿತಾಂಶವನ್ನು ತೋರಿಸದಿದ್ದರೆ ಬ್ಯಾಟರಿ ಪರಿಶೀಲಿಸಲಾಗುತ್ತದೆ. ಆಗಲೂ ಕೆಲಸ ಮಾಡದಿದ್ದರೆ ಯೂನಿಟ್ ಅನ್ನು ಬಂದ್ ಮಾಡಿ ಚುನಾವಣಾಧಿಕಾರಿಯ ವಶಕ್ಕೆ ನೀಡಲಾಗುತ್ತದೆ. ಹೀಗೆ ತೊಂದರೆ ಎದುರಿಸುವ ಕಂಟ್ರೋಲ್ ಯೂನಿಟ್‌ಗಳು ಚುನಾವಣಾಧಿಕಾರಿಯ ವಶದಲ್ಲಿರುತ್ತವೆ. ಗೆಲುವಿನ ಅಂತರವು ತೊಂದರೆಗೊಳಗಾಗಿ ತೆರೆಯದೆ ಇರುವ ಕಂಟ್ರೋಲ್ ಯೂನಿಟ್‌ಗಳಲ್ಲಿರುವ ಮತಗಳಿಗಿಂತ ಹೆಚ್ಚಿದ್ದರೆ, ಈ ಯಂತ್ರಗಳಲ್ಲಿನ ಮತಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಅಂತಿಮ ಫಲಿತಾಂಶವನ್ನು ಘೋಷಿಸಲಾಗುತ್ತದೆ. ಅಂತರ ಕಡಿಮೆ ಇದ್ದರೆ ತೊಂದರೆಗೀಡಾದ ಕಂಟ್ರೋಲ್ ಯೂನಿಟ್‌ಗಳಿಗೆ ಸಂಬಂಧಿಸಿದ ವಿವಿಪ್ಯಾಟ್‌ಗಳಲ್ಲಿನ ಮತಗಳನ್ನು ಎಣಿಕೆ ಮಾಡಲಾಗುತ್ತದೆ.

ಫಲಿತಾಂಶ ಘೋಷಣೆಯಾದ ನಂತರ, ಇವಿಎಂಗಳನ್ನು ಮತ್ತೆ ಸೀಲ್ ಮಾಡಿ ಕನಿಷ್ಠ 45 ದಿನಗಳವರೆಗೆ ಸುರಕ್ಷಿತವಾಗಿ ಇಡಲಾಗುತ್ತದೆ. ಯಾರಾದರೂ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರೆ ತನಿಖೆಗೆ ಇವು ಅಗತ್ಯವಿರುತ್ತವೆ. ಅರ್ಜಿ ಸಲ್ಲಿಕೆಯಾಗದಿದ್ದರೆ, ಚುನಾವಣಾ ಆಯೋಗದ ಅನುಮತಿಯೊಂದಿಗೆ ಮುಂದಿನ ಚುನಾವಣೆಗೆ ಬಳಸಲು ತಯಾರಿ ನಡೆಸಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಯ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ.

ಪಾರದರ್ಶಕತೆ ಎಂಬುದು ಇಂದಿಗೂ ಮರೀಚಿಕೆ

ಹೀಗೆ ಇವಿಎಂ ಪಯಣ ಸಾಗುತ್ತದೆ. ಆದರೆ ಮತದಾನ ಪ್ರಕ್ರಿಯೆ ಪಾರದರ್ಶಕಗೊಳಿಸಲೆಂದು ಇವಿಎಂಗಳ ಬಳಕೆ ಶುರು ಮಾಡಿದ್ದರೂ ಪಾರದರ್ಶಕತೆ ಎಂಬುದು ಇಂದಿಗೂ ಮರೀಚಿಕೆ. ಇವಿಎಂ ಚುನಾವಣಾ ಪ್ರಕ್ರಿಯೆಯನ್ನು ವೇಗಗೊಳಿಸಿದೆ. ಆದರೆ ‘ಪಾರದರ್ಶಕತೆ’ಯ ವಿಷಯದಲ್ಲಿ ಇಂದಿಗೂ ಹಲವು ಗಂಭೀರ ಪ್ರಶ್ನೆಗಳು ಮತ್ತು ಆತಂಕಗಳು ಉಳಿದುಕೊಂಡಿವೆ.

EVMಗಳು ಹೇಗೆ ಕೆಲಸ ಮಾಡುತ್ತವೆ ಎಂಬ ‘ಸೋರ್ಸ್ ಕೋಡ್’ ಅನ್ನು ಚುನಾವಣಾ ಆಯೋಗವು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಇದರಿಂದಾಗಿ ಒಬ್ಬ ಮತದಾರ ಬಟನ್ ಒತ್ತಿದಾಗ ಸಾಫ್ಟ್‌ವೇರ್ ನಿಜವಾಗಿಯೂ ಯಾವ ಅಭ್ಯರ್ಥಿಗೆ ಮತ ದಾಖಲಿಸುತ್ತಿದೆ ಎಂಬುದನ್ನು ಪರಿಶೀಲಿಸಲು ಮತದಾರನಿಗಾಗಲಿ ಅಥವಾ ತಾಂತ್ರಿಕ ತಜ್ಞರಿಗಾಗಲಿ ಅವಕಾಶವಿಲ್ಲ. ಇದನ್ನು ಕೇವಲ ತಯಾರಕ ಕಂಪನಿಗಳು (BEL ಮತ್ತು ECIL) ಮಾತ್ರ ತಿಳಿದಿರುತ್ತವೆ.

ಈ ಪಾರದರ್ಶಕತೆ ಕೊರತೆ ಆರೋಪಗಳ ನಡುವೆ VVPAT (Voter Verifiable Paper Audit Trail) ವ್ಯವಸ್ಥೆಯು ಕೇವಲ ಒಮ್ಮೆಗೆ ಖಾತರಿ ನೀಡುತ್ತದೆಯಾದರೂ, ಇದು ಪೂರ್ಣ ಪ್ರಮಾಣದ ಲೆಕ್ಕಪರಿಶೋಧನೆಯಲ್ಲ. ಪ್ರಸ್ತುತ ನಿಯಮದಂತೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ 5 ಯಾದೃಚ್ಛಿಕ ಮತಗಟ್ಟೆಗಳ VVPAT ಚೀಟಿಗಳನ್ನು ಮಾತ್ರ ಎಣಿಕೆ ಮಾಡಲಾಗುತ್ತದೆ. ಅಂದರೆ ಉಳಿದ 95%ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಇವಿಎಂ ತೋರಿಸುವ ಅಂಕಿಅಂಶಗಳನ್ನೇ ಅಂತಿಮ ಎಂದು ನಂಬಲಾಗುತ್ತದೆ. ಒಂದು ವೇಳೆ EVM ಮತ್ತು VVPAT ನಡುವೆ ವ್ಯತ್ಯಾಸ ಕಂಡುಬಂದರೂ, ಅದನ್ನು ಸರಿಪಡಿಸುವ ಸ್ಪಷ್ಟ ಮಾರ್ಗಸೂಚಿಗಳ ಬಗ್ಗೆ ಗೊಂದಲವಿದೆ.

ವಿವಿಪ್ಯಾಟ್‌ನಂತಹ ಸಾಧನವು ಹೆಚ್ಚುವರಿ ಪ್ರೋಗ್ರ್ಯಾಮ್ ಮೆಮರಿ ಹೊಂದಿರುತ್ತದೆ. ನುಸುಳಿಸಲಾಗುವ ಮ್ಯಾಲ್ವೇರ್ ಈ ಹೆಚ್ಚುವರಿ ಮೆಮೊರಿಯಲ್ಲಿ ಕುಳಿತು ಯಂತ್ರವನ್ನು ದುರ್ವರ್ತಿಸಿ ಬರ್ನ್ಟ್ ಮೆಮರಿ ಅಥವಾ ಮೈಕ್ರೋಕಂಟ್ರೋಲರ್‌ಗೆ ಯಾವ ತೊಂದರೆಯೂ ಆಗದಂತೆ ನಿರ್ಗಮಿಸಬಹುದಾಗಿದೆ. ಎರಡನೆಯದಾಗಿ ಇವಿಎಂಗಳನ್ನು ತಯಾರಿಸುವ ಕಂಪನಿಗಳು (ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್) ಕೇಂದ್ರ ಸರ್ಕಾರದ ಒಡೆತನಕ್ಕೆ ಒಳಪಟ್ಟಂತಹವು.

ಚುನಾವಣಾ ಆಯೋಗವು ಬಿಡುಗಡೆ ಮಾಡುವ ‘ದಾಖಲಾದ ಮತಗಳು’ ಮತ್ತು ‘ಎಣಿಕೆಯಾದ ಮತಗಳ’ ನಡುವೆ ಹಲವು ಬಾರಿ ಸಣ್ಣ ಪ್ರಮಾಣದ ವ್ಯತ್ಯಾಸಗಳು ಕಂಡುಬಂದಿವೆ. ಉದಾಹರಣೆಗೆ 2019ರ ಲೋಕಸಭಾ ಚುನಾವಣೆಯ ನಂತರ, ಕೆಲವು ಕ್ಷೇತ್ರಗಳಲ್ಲಿ ಚಲಾವಣೆಯಾದ ಒಟ್ಟು ಮತಗಳಿಗಿಂತ ಎಣಿಕೆಯಾದ ಮತಗಳ ಸಂಖ್ಯೆ ಹೆಚ್ಚಿರುವುದು ಅಥವಾ ಕಡಿಮೆಯಿರುವುದು ವರದಿಯಾಗಿತ್ತು. ಆದರೆ ಈವರೆಗೂ ಇಂತಹ ವ್ಯತ್ಯಾಸಗಳು ಏಕೆ ಆಗಿದೆ ಎಂಬ ಬಗ್ಗೆ ತಾಂತ್ರಿಕವಾಗಿ ಪಾರದರ್ಶಕ ವಿವರಣೆಗಳು ಚುನಾವಣಾ ಆಯೋಗ ಸಾರ್ವಜನಿಕರಿಗೆ ನೀಡಿಲ್ಲ.

ಇದನ್ನು ಓದಿದ್ದೀರಾ?ಇವಿಎಂ ಹ್ಯಾಕ್ ಮಾಡಬಹುದೇ?; ಚುನಾವಣಾ ಪ್ರಕ್ರಿಯೆಯ ನಿಜವಾದ ಸಮಸ್ಯೆಯೇನು?

ಇವಿಎಂಗಳು ಇಂಟರ್ನೆಟ್‌ಗೆ ಸಂಪರ್ಕ ಹೊಂದಿಲ್ಲದ ಕಾರಣ ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆಯಾದರೂ, ಹಾರ್ಡ್‌ವೇರ್ ಮಟ್ಟದಲ್ಲಿ ಬದಲಾವಣೆ ಮಾಡುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಜರ್ಮನಿ ಮತ್ತು ನೆದರ್‌ಲ್ಯಾಂಡ್ ಮೊದಲಾದ ದೇಶಗಳಲ್ಲಿ ಪಾರದರ್ಶಕತೆ ಕೊರತೆ ಇದೆ ಎಂಬ ಕಾರಣಕ್ಕೆ ಇವಿಎಂಗಳನ್ನು ನಿಷೇಧಿಸಿ ಮತ್ತೆ ಪೇಪರ್ ಬ್ಯಾಲೆಟ್‌ ಬಳಸಲಾಗುತ್ತಿದೆ. ಭಾರತದಲ್ಲಿ ಚಿಪ್‌ಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವುದರಿಂದ, ಪೂರೈಕೆ ಸರಪಳಿಯ ಸಮಯದಲ್ಲಿ ಹಸ್ತಕ್ಷೇಪ ನಡೆಯುವುದಿಲ್ಲ ಎಂದು ಖಚಿತವಾಗಿ ಹೇಳಲಾಗದು.

ಇವೆಲ್ಲವುದಕ್ಕೂ ಮುಖ್ಯವಾಗಿ ಸ್ಟ್ರಾಂಗ್‌ ರೂಮ್‌ಗಳಲ್ಲಿ ಇವಿಎಂ ಸುರಕ್ಷಿತವೇ? ಇತ್ತೀಚಿಗಷ್ಟೇ ಪಶ್ಚಿಮ ಬಂಗಾಳದಲ್ಲಿ ಸ್ಟ್ರಾಂಗ್ ರೂಮ್‌ಗಳ ಸೀಲ್ ತೆಗೆದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇನ್ನು 2021ರಲ್ಲಿ ಅಸ್ಸಾಂ ಚುನಾವಣೆಯ ಸಂದರ್ಭದಲ್ಲಿ, ಬಿಜೆಪಿ ಅಭ್ಯರ್ಥಿಯೊಬ್ಬರಿಗೆ ಸೇರಿದ ವಾಹನದಲ್ಲಿ ಇವಿಎಂ ಪತ್ತೆಯಾದಾಗ ದೊಡ್ಡ ವಿವಾದವಾಗಿತ್ತು. ನಂತರ ಚುನಾವಣಾ ಆಯೋಗವು ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆ ಮತಗಟ್ಟೆಯಲ್ಲಿ ಮರುಮತದಾನಕ್ಕೆ ಆದೇಶಿಸಿತ್ತು. ಆದರೆ ಇದು ಬೆಳಕಿಗೆ ಬಂದ ಘಟನೆಯಾದರೆ ಅದೆಷ್ಟೋ ಅಕ್ರಮ ತೆರೆಮರೆಯಲ್ಲೇ ನಡೆದಿರಬಹುದಲ್ಲವೇ?

ಉತ್ತರ ಪ್ರದೇಶದ ಒಂದು ಎಣಿಕೆ ಕೇಂದ್ರದ ಬಳಿ ಕಸದ ಗಾಡಿಯಲ್ಲಿ ಇವಿಎಂ ಬಾಕ್ಸ್‌ಗಳು ಪತ್ತೆಯಾದಾಗ ದೊಡ್ಡ ಗದ್ದಲವಾಗಿತ್ತು. ಅಧಿಕಾರಿಗಳು ಅವುಗಳನ್ನು ಖಾಲಿ ಬಾಕ್ಸ್‌ಗಳೆಂದು ಹೇಳಿದರೂ, ಕಾರ್ಯವಿಧಾನದ ಪ್ರಕಾರ ಅವುಗಳನ್ನು ಆ ರೀತಿ ಎಸೆಯುವಂತಿಲ್ಲ. ಮಧ್ಯಪ್ರದೇಶದಲ್ಲಿ 2018ರ ಚುನಾವಣೆಯ ಸಮಯದಲ್ಲಿ, ಸಾಗರ್ ಜಿಲ್ಲೆಯಲ್ಲಿ ಸ್ಟ್ರಾಂಗ್ ರೂಮ್‌ಗೆ ತಡವಾಗಿ ಇವಿಎಂಗಳನ್ನು ತಂದ ಆರೋಪ ಕೇಳಿಬಂದಿತ್ತು. ಅಲ್ಲದೆ, ಸುಮಾರು ಒಂದೂವರೆ ಗಂಟೆಗಳ ಕಾಲ ಸಿಸಿಟಿವಿ ಕ್ಯಾಮೆರಾಗಳು ಬಂದ್ ಆಗಿದ್ದವು. ಇದು “ವಿದ್ಯುತ್ ವ್ಯತ್ಯಯ” ಎಂದು ಅಧಿಕಾರಿಗಳು ಸಮರ್ಥಿಸಿಕೊಂಡರೂ, ಅಭ್ಯರ್ಥಿಗಳು ಇದನ್ನು ಅಕ್ರಮ ಎಂದು ಪ್ರತಿಭಟಿಸಿದ್ದರು.

ಕಳವು ಮಾಡಲಾದ ಇವಿಎಂಗಳಿಂದ ಆಬ್ಜೆಕ್ಟ್ ಕೋಡ್‌ನ್ನು ರಿವರ್ಸ್ ಕಂಪೈಲ್ ಮಾಡಿ ಇವಿಎಂ ದುರ್ವರ್ತಿಸುವಂತೆ ಮಾಡುವುದು ನುರಿತ ಹ್ಯಾಕರ್‌ಗೆ ಅಸಾಧ್ಯವೇನೂ ಅಲ್ಲ. ಇಸಿಐ, ಬಿಇಎಲ್ ಹಾಗು ಇಸಿಐಎಲ್‌ನಿಂದ ಸುಮಾರು 19 ಲಕ್ಷ ಇವಿಎಂಗಳು ನಾಪತ್ತೆಯಾಗಿವೆ ಎಂಬ ಉತ್ತರವನ್ನು ಆರ್‌ಟಿಐ ಪ್ರಶ್ನೆಯೊಂದಕ್ಕೆ ಒದಗಿಸಲಾಗಿದೆ. ಕ್ಷೇತ್ರ, ವೋಟುಗಳನ್ನು ಯಾವ ಪಕ್ಷದಿಂದ ಕದಿಯಬೇಕು, ಯಾವ ಪಕ್ಷವನ್ನು ಅನುಗ್ರಹಿಸಬೇಕು, ದಿನಾಂಕ, ಸಮಯ, ಮತದಾನ ದರ ಮುಂತಾದ ಹಲವು ಅಂಶಗಳನ್ನು ಮ್ಯಾಲ್ವೇರ್‌ನಿಂದ ಮಾಡಿಸಬಹುದು. ಹೀಗಾಗಿ ಪ್ರೋಗ್ರ್ಯಾಮ್ ಲಾಜಿಕ್ ಮತ್ತು ಬಳಸಲಾದ ಪ್ಯಾರಮೀಟರ್‌ಗಳ ಅರಿವಿಲ್ಲದೆ ಇವಿಎಂ ದುರ್ವರ್ತನೆಯನ್ನು ಮುಂದಾಗಿಯೇ ಗ್ರಹಿಸುವುದು ಸಾಧ್ಯವಿಲ್ಲ.

ಇನ್ನೊಂದೆಡೆ ಇವಿಎಂಗಳ ಕಾರ್ಯಕ್ಷಮತೆಯನ್ನು ಸ್ವತಂತ್ರ ಸಂಸ್ಥೆಗಳು ಅಥವಾ ವಿರೋಧ ಪಕ್ಷದ ತಾಂತ್ರಿಕ ತಂಡಗಳು ಮುಕ್ತವಾಗಿ ಪರೀಕ್ಷಿಸಲು ಚುನಾವಣಾ ಆಯೋಗವು ಪೂರ್ಣ ಅವಕಾಶ ನೀಡುತ್ತಿಲ್ಲ. ‘ಇವಿಎಂ ಹ್ಯಾಕ್ ಚಾಲೆಂಜ್’ನಂತಹ ಸಂದರ್ಭಗಳಲ್ಲಿ ಕಠಿಣ ನಿಯಮಗಳನ್ನು ಹೇರಲಾಗುತ್ತದೆ. ಆದರೆ ಇದು ನಿಜವಾದ ಪಾರದರ್ಶಕತೆಗೆ ಅಡ್ಡಿಯಾಗುತ್ತದೆ ಅಲ್ಲವೇ?

ಈ ಸಂದರ್ಭದಲ್ಲಿ ಆಂಧ್ರಪ್ರದೇಶದಲ್ಲಿ ಆರು ಸೆಕೆಂಡುಗಳಿಗೊಂದು ಮತದಾನ ನಡೆದಿದೆ ಎಂಬ ಖ್ಯಾತ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಬಿಚ್ಚಿಟ್ಟ ಮಾಹಿತಿಯನ್ನೂ ನೆನೆಪಿಸಿಕೊಳ್ಳೋಣ. “ಇವಿಎಂ ಯಂತ್ರವೊಂದು ಮರುಹೊಂದಾಣಿಕೆ ಆಗುವುದಕ್ಕೆ ಕನಿಷ್ಠ 14 ಸೆಕೆಂಡ್ ಬೇಕಾಗುತ್ತದೆ. ಹಾಗಿರುವಾಗ ಕೇವಲ 6 ರಿಂದ 20 ಸೆಕೆಂಡುಗಳ ಅಂತರದಲ್ಲಿ ಒಂದು ಮತ ಚಲಾಯಿಸಲು ಹೇಗೆ ಸಾಧ್ಯ” ಎಂದು ಪ್ರಭಾಕರ್ ಎತ್ತಿದ್ದ ಪ್ರಶ್ನೆಯನ್ನು ನಾವೂ ಪದೇ ಪದೇ ಎತ್ತುವ ಅವಶ್ಯಕತೆಯಿದೆ. ಒಬ್ಬ ಮತದಾರ ಮತಗಟ್ಟೆಯೊಳಗೆ ಹೋಗಿ ಅಲ್ಲಿ ತಮ್ಮ ಗುರುತಿನ ಚೀಟಿ ತೋರಿಸಿ ಅಧಿಕಾರಿಗಳು ತಿಳಿಸಿದ್ದಲ್ಲಿ ಸಹಿ ಮಾಡಿ, ಮತದಾನ ಮಾಡಿದ ಸಂಕೇತವಾಗಿ ಬೆರಳಿಗೆ ಗುರುತು ಹಾಕಿಸಿ, ಗುಂಡಿ ಒತ್ತಿ ಹೊರಬರಲು ಬರೀ ಆರು ಸೆಕೆಂಡು ಸಾಕಾಗುತ್ತದೆಯೇ?

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೂರಜ್ ರೇವಣ್ಣಗೆ ಬಿಗ್ ರಿಲೀಫ್! 2 ಪ್ರಕರಣಗಳ ಬಿ-ರಿಪೋರ್ಟ್ ಸಲ್ಲಿಸಿದ ಸಿಐಡಿ

ಜೆಡಿಎಸ್ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ದಾಖಲಾಗಿದ್ದ ಅಸಹಜ ಲೈಂಗಿಕ...

ಟಿಎಂಸಿ ಚಿಹ್ನೆ ಮುಟ್ಟುಗೋಲು: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಟಿಎಂಸಿ ಪಕ್ಷದ ಆಂತರಿಕ ಭಿನ್ನಮತ ಮತ್ತು ಬಂಡಾಯದ ಬಳಿಕ ಚುನಾವಣಾ ಆಯೋಗವು...

ಟಾಟಾ ಸನ್ಸ್ ಬೋರ್ಡ್ ರೂಮ್ ಕಲಹದ ಆಳ ಅಗಲವೇನು ಬಲ್ಲಿರಾ?

ಭಾರತದ ಭಾರೀ ಉದ್ಯಮ ಬ್ರ್ಯಾಂಡ್‌ಗಳಲ್ಲಿ ಒಂದು ಟಾಟಾ. ಉಪ್ಪಿನಿಂದ ಹಿಡಿದು ಉಕ್ಕು,...

ಬಿಆರ್‌ಎಸ್ ಶಾಸಕ ಅನರ್ಹ; ಸ್ಪೀಕರ್ ಆದೇಶ ರದ್ದುಗೊಳಿಸಿದ ತೆಲಂಗಾಣ ಹೈಕೋರ್ಟ್

ಬಿಆರ್‌ಎಸ್ (BRS) ಟಿಕೆಟ್‌ನಡಿ 2023ರ ವಿಧಾನಸಭಾ ಚುನಾವಣೆಯಲ್ಲಿ ಖೈರತಾಬಾದ್ ಕ್ಷೇತ್ರದಿಂದ ಗೆದ್ದು,...