ಪಂಚಮಸಾಲಿ ಪೀಠಗಳ ಗೊಂದಲ ಭಾಗ-3 |ಪಂಚಮಸಾಲಿಗಳು ಪಂಚಪೀಠಗಳ ಜಾತಿ ಜಂಗಮರ ಅಡ್ಡ ಪಲ್ಲಕ್ಕಿ ಹೊರುವುದು ನಿಲ್ಲಿಸಿದರೆ?

Date:

ಒಂದಲ್ಲ ಎರಡು ಪಂಚಮಸಾಲಿ ಪೀಠಗಳು ಸ್ಥಾಪನೆಯಾದವಲ್ಲ, ಆಮೇಲೆ ಏನಾಯಿತು? ಪಂಚಮಸಾಲಿಗಳು ಪಂಚಪೀಠಕ್ಕೆ ನಡೆದುಕೊಳ್ಳುವುದು ಬಿಟ್ಟರೆ? ಸಿರಿಗೆರೆ ಪೀಠದ ಜಗದ್ಗುರುಗಳಂತೆ ಪಂಚಮಸಾಲಿ ಜಗದ್ಗುರುಗಳು ಬಸವ ತತ್ವವನ್ನು ಸಮುದಾಯಕ್ಕೆ ಪರಿಣಾಮಕಾರಿಯಾಗಿ ಬೋಧಿಸಿದರೆ? ಪಂಚಮಸಾಲಿಗಳು ಪಂಚಪೀಠಗಳ ಜಾತಿ ಜಂಗಮರ ಅಡ್ಡ ಪಲ್ಲಕ್ಕಿ ಹೊರುವುದು ನಿಲ್ಲಿಸಿದರೆ? ಈ ಪ್ರಶ್ನೆಗಳ ಕುರಿತು ಪಂಚಮಸಾಲಿ ಸಮಾಜದ ಪ್ರಮುಖ ಮುಖಂಡರು ಒಮ್ಮೆಯೂ ಆತ್ಮಾವಲೋಕನ ಅಥವಾ ಸ್ವವಿಮರ್ಶೆ ಮಾಡಿಕೊಳ್ಳಲಿಲ್ಲ.

- Advertisement -

ಪಂಚಮಸಾಲಿಗರು ಪ್ರತ್ಯೇಕ ಪೀಠ ಸ್ಥಾಪಿಸಲು ಮುಂದಡಿ ಇಟ್ಟಾಗ ಆ ಸಮುದಾಯದ ಪ್ರಮುಖ ರಾಜಕಾರಣಿಗಳು, ಪುಢಾರಿಗಳು, ಮುಖಂಡರು ಸಮಾಲೋಚನೆಯಲ್ಲಿ ತೊಡಗಿದರು. ಪೀಠ ಸ್ಥಾಪನೆಗೆ ಸಿರಿಗೆರೆಯ ಪೀಠ ಇವರಿಗೆ ಮಾದರಿಯಾಗಲಿಲ್ಲ. ಪೀಠಕ್ಕೆ ಲಿಂಗಾಯತ ಪಂಚಮಸಾಲಿ ಎಂದು ಕರೆಯಬೇಕೊ ಅಥವಾ ವೀರಶೈವ ಪಂಚಮಸಾಲಿ ಪೀಠ ಎಂದು ಕರೆಯಬೇಕೊ ಎನ್ನುವಲ್ಲಿ ಗೊಂದಲಕ್ಕೊಳಗಾದರು. ಮೊದಲನೆಯದಾಗಿ ಪೀಠ ಸ್ಥಾಪಿಸುವ ಉದ್ದೇಶ ವೀರಶೈವ ಪಂಚಪೀಠಗಳು ಹಾಗು ಜಾತಿ ಜಂಗಮರ ಹಿಡಿತದಿಂದ ಸಮುದಾಯವನ್ನು ವಿಮೋಚನೆ ಗೊಳಿಸುವುದು ಆಗಿತ್ತು ಎನ್ನುವ ಸ್ಪಷ್ಟತೆ ಪಂಚಮಸಾಲಿ ಸಮುದಾಯದ ಮುಖಂಡರಲ್ಲಿ ಇರಲಿಲ್ಲ. ವೀರಶೈವ ಜಂಗಮರಿಂದ ಪಂಚಮಸಾಲಿ ಜನರನ್ನು ಬಿಡುಗಡೆ ಮಾಡಲು ಪೀಠ ಸ್ಥಾಪಿಸುವುದಾದಲ್ಲಿ, ವೀರಶೈವ ಪಂಚಮಸಾಲಿ ಪೀಠ ಎಂದು ಹೆಸರಿಡಬೇಕು ಎನ್ನುವ ಚರ್ಚೆ ನಡೆದಿದ್ದು ಪಂಚಮಸಾಲಿಗಳು ಎಡವಿದ್ದರ ಸಂಕೇತ. ವೀರಶೈವರ ನೆರಳಿನಿಂದ ಹೊರಬರಬೇಕು ಎನ್ನುವ ಕನಿಷ್ಠ ಪ್ರಜ್ಞೆ ಅಲ್ಲಿರುವ ಪುಢಾರಿಡಳಲ್ಲಿ ಇರಲಿಲ್ಲ ಎನ್ನುವುದೇ ಮುಂದಿನ ಯಡವಟ್ಟಿಗೆ ಹಾದಿ ಮಾಡಿತು. ಈ ವಿಷಯದ ಮೇಲೆ ಪಂಚಮಸಾಲಿ ಸಮುದಾಯ ಆರಂಭದಲ್ಲಿಯೆ ಒಡೆದು ಎರಡು ಹೋಳಾಯಿತು. ಕೊನೆಗೆ ಪಂಚಮಸಾಲಿ ಸಮುದಾಯದಲ್ಲಿ ಒಮ್ಮತ ಮೂಡದ ಕಾರಣ ಎರಡು ಪೀಠಗಳು ಮಾಡುವಲ್ಲಿಗೆ ಸಮಾಜ ಉದ್ದಕ್ಕೆ ಸೀಳಿ ವಿಘಟನೆ ಆಯಿತು. ಅಲ್ಲಿಗೆ ಆರಂಭದಲ್ಲಿಯೇ ಪಂಚಮಸಾಲಿಗಳು ವೀರಶೈವ ಪಂಚಪೀಠಗಳ ಎದುರಿಗೆ ಸೋತು ಹೋದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

ಮುಂದೆ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ “ವೀರಶೈವ ಪಂಚಮಸಾಲಿ ಪೀಠ” ಮತ್ತು ಕೂಡಲಸಂಗಮದಲ್ಲಿ ಲಿಂಗಾಯತ ಪಂಚಮಸಾಲಿ ಪೀಠ” ಎರಡು ಪೀಠಗಳು ಮತ್ತು ಅವನ್ನು ನಿಯಂತ್ರಿಸಲು ಅದೇ ಮಾದರಿ ಹೆಸರಿನ ಎರಡು ಟ್ರಸ್ಟ್ ಗಳು ಅಸ್ತಿತ್ವಕ್ಕೆ ಬಂದವು. ಪೀಠ ಹಾಗು ಟ್ರಸ್ಟ್ ಸ್ಥಾಪಿಸುವಾಗ ಸಮಾಜದ ಬುದ್ದಿಜೀವಿಗಳು ಹಾಗು ವಿದ್ವಾಂಸರನ್ನು ಈ ಪುಡಾರಿಗಳು ಗಣನೆಗೆ ತೆಗೆದುಕೊಳ್ಳಲಿಲ್ಲ. ಅಷ್ಟಕ್ಕೂ ಪಂಚಮಸಾಲಿ ಸಮುದಾಯ ಹೆಸರಾಂತ ವಿದ್ವಾಂಸರನ್ನು ಹುಟ್ಟುಹಾಕುವಲ್ಲಿ ಯಶಸ್ಸು ಕಂಡಿಲ್ಲ. ನಮಗೆ ಪ್ರತ್ಯೇಕ ಪೀಠ ಬೇಕು ಎಂದು ವೀರಶೈವ ಪಂಚಪೀಠಗಳ ಜೊತೆ ಜಗಳವಾಡಿ ಕೊನೆಗೆ ಅದೇ ವೀರಶೈವ ಹೆಸರಿನಲ್ಲಿ ಟ್ರಸ್ಟ್ ಹಾಗು ಪೀಠ ಮಾಡಿದ್ದು ನೋಡಿ ವೀರಶೈವ ಪಂಚಪೀಠದ ಜಾತಿ ಜಂಗಮರು ಒಳಗೊಳಗೆ ಮುಸಿಮುಸಿ ನಕ್ಕರು. ಪಂಚಮಸಾಲಿಗಳು ಅತ್ಯಂತ ಮುಗ್ಧರು, ಗುಂಪುಗಾರಿಕೆ ಮಾಡುವವರು, ದೊಡ್ಡ ಶಬ್ದ ಮಾಡುತ್ತಾರೆ, ಆದರೆ ಸಮಾಜದ ಒಳಿತಿಗಾಗಿ ಸಂಘಟಿತರಾಗುವುದಿಲ್ಲ, ಇವರು ಸಮಾಜದ ಪುಡಾರಿಗಳನ್ನು ಚುನಾವಣೆಯಲ್ಲಿ ಗೆಲ್ಲಿಸಲು ಸಂಘಟಿತರಾಗುತ್ತಾರೆ, ಒಂದು ರೀತಿಯಲ್ಲಿ “ಸವತಿಯ ಗಂಡ ಸಾಯಲಿ” ಎನ್ನುವ ಸ್ವಭಾವದವರು. ಆದ್ದರಿಂದ ಪಂಚಮಸಾಲಿ ಸಮುದಾಯವನ್ನು ಅದೇ ಸಮುದಾಯದ ಪುಡಾರಿಗಳು ಹಾಗು ಮಠಾಧೀಶರು ಸುಲಭವಾಗಿ ವಂಚಿಸುತ್ತಿದ್ದಾರೆ ಮತ್ತು ಈಡೇರದ ಆಮೀಷಗಳಿಂದ ಶೋಷಿಸುತ್ತಿದ್ದಾರೆ. ಹೀಗಾಗಿ, ಅತ್ಯಂತ ಹೆಚ್ಚು ಸಂಖ್ಯೆಯಲ್ಲಿದ್ದರೂ ಪಂಚಮಸಾಲಿಗಳು ನಾಡಿನ ಮುಖ್ಯಮಂತ್ರಿ ಸ್ಥಾನಕ್ಕೆ ಏರಲಿಲ್ಲ. ಆದರೆ, ಪಂಚಮಸಾಲಿಗಳ ಸಂಬಂಧ ಬೆಳೆಸಿ, ಅವರ ಸಹಾಯ ಪಡೆದು ಅಲ್ಪಸಂಖ್ಯಾತರಾದ ಉಳಿದ ಲಿಂಗಾಯತರು ಹೆಚ್ಚು ಮುಖ್ಯಮಂತ್ರಿಗಳಾಗಿದ್ದಾರೆ.

ಹೋಗಲಿ, ಒಂದಲ್ಲ ಎರಡು ಪಂಚಮಸಾಲಿ ಪೀಠಗಳು ಸ್ಥಾಪನೆಯಾದವಲ್ಲ, ಆಮೇಲೆ ಏನಾಯಿತು? ಪಂಚಮಸಾಲಿಗಳು ಪಂಚಪೀಠಕ್ಕೆ ನಡೆದುಕೊಳ್ಳುವುದು ಬಿಟ್ಟರೆ? ಸಿರಿಗೆರೆ ಪೀಠದ ಜಗದ್ಗುರುಗಳಂತೆ ಪಂಚಮಸಾಲಿ ಜಗದ್ಗುರುಗಳು ಬಸವ ತತ್ವವನ್ನು ಸಮುದಾಯಕ್ಕೆ ಪರಿಣಾಮಕಾರಿಯಾಗಿ ಭೋದಿಸಿದರೆ? ಪಂಚಮಸಾಲಿಗಳು ಪಂಚಪೀಠಗಳ ಜಾತಿ ಜಂಗಮರ ಅಡ್ಡ ಪಲ್ಲಕ್ಕಿ ಹೊರುವುದು ನಿಲ್ಲಿಸಿದರೆ? ಸಾದರು ವೀರಶೈವ ಪಂಚಪೀಠಗಳ ಎದುರು ಸಡ್ಡು ಹೊಡೆದು ಗೆದ್ದಂತೆ ಪಂಚಮಸಾಲಿಗಳು ಗೆದ್ದರೆ? ಈ ಪ್ರಶ್ನೆಗಳ ಕುರಿತು ಪಂಚಮಸಾಲಿ ಸಮಾಜದ ಪ್ರಮುಖ ಮುಖಂಡರು ಒಮ್ಮೆಯೂ ಆತ್ಮಾವಲೋಕನ ಅಥವಾ ಸ್ವವಿಮರ್ಶೆ ಮಾಡಿಕೊಳ್ಳಲಿಲ್ಲ. ಪ್ರತ್ಯೇಕ ಪೀಠ ಸ್ಥಾಪನೆಯಾಗಿ ಅದು ಉದ್ದೇಶಿದ್ದ ಕಾರ್ಯಗಳ ಈಡೇರಿಕೆಗೆ ಯಾವ ಸಕಾರಾತ್ಮಕ ಪ್ರಯತ್ನಗಳೂ ನಡೆಯಲಿಲ್ಲ. ನಿಮಗೆ ಆಶ್ಚರ್ಯವಾಗಬಹುದು, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಲಿಂಗೈಕ್ಯ ಎಸ್. ಆರ್. ಕಾಶಪ್ಪನವರ್ ಅವರು ಪಂಚಮಸಾಲಿ ಪೀಠ ಸ್ಥಾಪನೆಯಾದ ನಂತರವೂ ಹುನಗುಂದದಲ್ಲಿ ನಿಯಮಿತವಾಗಿ ವೀರಶೈವ ಪಂಚಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ಆಯೋಜಿಸುತ್ತಿದ್ದರು. ಹಾಗಾದರೆ, ಸಾಮಾನ್ಯ ಪಂಚಮಸಾಲಿಗಳ ಸ್ಥಿತಿ ಏನಾಗಬೇಕು ಎಂದು ಯೋಚಿಸಿ. ಸಮಾಧಾನದ ಸಂಗತಿ ಎಂದರೆ, ಅವರ ಮಗ ಈಗಿನ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಮಾತ್ರ ಇತ್ತೀಚೆಗೆ ಬಸವ ತತ್ವ ಮತ್ತು ಲಿಂಗಾಯತ ಧರ್ಮದ ಪರವಾಗಿ ಗಟ್ಟಿಯಾಗಿ ಮಾತನಾಡುತ್ತಿದ್ದಾರೆ. ಹರಿಹರ ವೀರಶೈವ ಟ್ರಸ್ಟ್ ಗೆ ಹೋಲಿಸಿದರೆ ಕೂಡಲಸಂಗಮ ಪೀಠವನ್ನು ನಿಯಂತ್ರಿಸುವ ಲಿಂಗಾಯತ ಪಂಚಮಸಾಲಿ ಟ್ರಸ್ಟಿನಲ್ಲಿ ಹೆಚ್ಚಿನವರು ಬಸವವಾದಿಗಳಾಗಿದ್ದಾರೆ ಎನ್ನುವುದು ಸಮಾಧಾನದ ಸಂಗತಿ.

Advertisements

ಇನ್ನು ಹರಿಹರದ ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್ ಇಂದಿಗೂ ಪಂಚಪೀಠದ ಪರಮಭಕ್ತರು, ತನ್ನೂರಿನಲ್ಲಿ ಕೋಟಿ ರೂಪಾಯಿ ಖರ್ಚು ಮಾಡಿ ವೀರಭದ್ರನ ಗುಡಿ ಕಟ್ಟಿಸಿದ್ದಾರೆ, ಬಸವ ತತ್ವ ಮತ್ತು ಲಿಂಗಾಯತ ಸಿದ್ಧಾಂತಗಳು ಏನೆಂದು ಇವರಿಗೆ ಪರಿಚಯವೇ ಇಲ್ಲ. ಆರಂಭದಿಂದ ಪಂಚಮಸಾಲಿ ಪೀಠಗಳು, ಆ ಪೀಠಗಳ ಮೇಲೆ ಕುಳಿದ ಮಠಾಧೀಶರು ಮತ್ತು ಪೀಠಗಳನ್ನು ನಿಯಂತ್ರಿಸುವ ಟ್ರಸ್ಟ್ ಗಳು ಧರ್ಮ ಪ್ರಚಾರ, ಜನರಿಗೆ ಸಂಸ್ಕಾರಗಳು ಕಲಿಸುವುದು, ಸಮಾಜದ ಬಡ ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ, ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಯೋಜನೆಗಳ ಅನುಷ್ಠಾನದ ಕುರಿತು ಒಮ್ಮೆಯೂ ಚಿಂತಿಸಲಿಲ್ಲ. ಚಿಂತಿಸಿದರೂ ಅಂತಹ ಕಣ್ಣಿಗೆ ಕಾಣುವ ಯಾವುದೇ ಯೋಜನೆಗಳು ದೊಡ್ಡಮಟ್ಟದಲ್ಲಿ ಕಾರ್ಯರೂಪಕ್ಕೆ ಬರಲಿಲ್ಲ. ಆದರೆ, ಆರಂಭದಿಂದ ಉಭಯ ಪೀಠಗಳು ಹಾಗು ಟ್ರಸ್ಟ್ ಗಳು ರಾಜಕಾರಣ ಮಾಡುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿ ಕಾಣಿಸಿಕೊಂಡಿವೆ. ಹರಿಹರ ವೀರಶೈವ ಪಂಚಮಸಾಲಿ ಪೀಠ ನಿಯಂತ್ರಿಸುವ ಟ್ರಸ್ಟ್ ಅಪಾರ ಪ್ರಮಾಣದ ಸಂಪತ್ತು ಕ್ರೂಢೀಕರಿಸಿ ಒಂದಿಷ್ಟು ಮಕ್ಕಳಿಗೆ ಸಹಾಯ ಮಾಡುತ್ತಿದೆ, ಆದರೆ ಹಣಕಾಸಿನ ವ್ಯವಹಾರಗಳು ಪಾರದರ್ಶಕವಾಗಿಲ್ಲ ಎನ್ನುವುದು ಅಲ್ಲಿ ಈಗ ನಡೆಯುತ್ತಿರುವ ಪರಸ್ಪರ ಆರೋಪ, ಪ್ರತ್ಯಾರೋಪಗಳು ಸ್ಪಷ್ಟವಾಗಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿವೆ. ಆ ಪೀಠ, ಟ್ರಸ್ಟ್ ಮತ್ತು ಭಕ್ತರಲ್ಲಿ ವಿಪರೀತ ಪ್ರಮಾಣದ ಗುಂಪುಗಾರಿಕೆ ಇದೆ ಎನ್ನುವುದನ್ನು ಇತ್ತೀಚಿನ ಬೆಳವಣಿಗೆಗಳು ದೃಢೀಕರಿಸುತ್ತಿವೆ.

ಇದನ್ನೂ ಓದಿ ಪಂಚಮಸಾಲಿ ಪೀಠಗಳ ಗೊಂದಲ- ಭಾಗ 1 | ಪಂಚಮಸಾಲಿಗರೇ ಪಂಚಪೀಠಗಳ ಆರ್ಥಿಕ ಮೂಲವಾಗಿದ್ದರು
ಇದನ್ನೂ ಓದಿ ಪಂಚಮಸಾಲಿ ಪೀಠಗಳ ಗೊಂದಲ- ಭಾಗ 2 | ಪಂಚಮಸಾಲಿಗಳ ಪ್ರತ್ಯೇಕ ಪೀಠಕ್ಕೆ ಮೂಲ ಪ್ರೇರಣೆ…

ಒಂದು ಸಮಾಜಕ್ಕೆ ಪೀಠದ ಅಗತ್ಯ ಬೀಳುವುದು ಆ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ಕೊಡುವುದು, ಆ ಸಮಾಜದ ಸಾಮಾನ್ಯ ಜನರಲ್ಲಿ ಅವರ ಧರ್ಮದ ತತ್ವ ಸಿದ್ದಾಂತಗಳ ಕುರಿತು ಜಾಗೃತೆ ಮೂಡಿಸುವುದು, ಧರ್ಮದ ನಿಜಾಚರಣೆಗಳನ್ನು ಸಮುದಾಯದಲ್ಲಿ ಅನುಷ್ಠಾನಕ್ಕೆ ತರುವುದು ಮತ್ತು ಕೊನೆಯದಾಗಿ ಪಕ್ಷಾತೀತವಾಗಿ ಸಮುದಾಯದ ರಾಜಕೀಯ ಹಿತಾಸಕ್ತಿಯನ್ನು ರಕ್ಷಿಸುವುದು. ಈ ದಿಸೆಯಲ್ಲಿ ಬ್ರಾಹ್ಮಣರ ಮಠಗಳು ಹೇಗೆ ಕಾರ್ಯ ಮಾಡುತ್ತವೆ ಗಮನಿಸಬೇಕು. ಅಷ್ಟಕ್ಕೂ ಲಿಂಗಾಯತ ಧರ್ಮದಲ್ಲಿ ಮಠ-ಪೀಠಗಳ ಪದ್ಧತಿ ಬಸವೋತ್ತರ ಕಾಲದಲ್ಲಿನ ಬೆಳವಣಿಗೆ, ಅದೂ ಕೇವಲ ಧರ್ಮ ಪ್ರಚಾರಾರ್ಥ. ಆದರೆ, ದುರಂತ ಎನ್ನುವಂತೆ ಲಿಂಗಾಯತ ಮಠಗಳು ಧರ್ಮ ಪ್ರಚಾರ ಒಂದನ್ನು ಬಿಟ್ಟು ಉಳಿದೆಲ್ಲವನ್ನು ಮಾಡುತ್ತಿವೆ. ಪಂಚಮಸಾಲಿ ಸಮುದಾಯಕ್ಕೆ ಸೇರಿಯೂ ಆ ಸಿಮಿತ ಚೌಕಟ್ಟನ್ನು ದಾಟಿ ಲಿಂಗೈಕ್ಯ ಲಿಂಗಾನಂದ ಮಹಾಸ್ವಾಮಿಗಳು ಲಿಂಗಾಯತ ಮಹಾಮಾರ್ಗವನ್ನು ರಾಜಾರೋಷದಿಂದ ಯಾವ ಅಳುಕೂ ಇಲ್ಲದೆ ಆಯ್ಕೆ ಮಾಡಿಕೊಂಡರು. ಆ ಮಾರ್ಗದಲ್ಲಿ ಬಸವ ಧರ್ಮದ ತತ್ವ ಸಿದ್ಧಾಂತಗಳನ್ನು ಜಾತ್ಯತೀತವಾಗಿ ಮನೆಮನೆಗೆ ಯಶಸ್ವಿಯಾಗಿ ಮುಟ್ಟಿಸಿದರು. ಅವರಿಗೆ ಪಂಚಮಸಾಲಿ ಸಮುದಾಯ ಯಾವ ಪೀಠವನ್ನೂ ಕಟ್ಟಿಸಿಕೊಡಲಿಲ್ಲ, ಆದರೂ ಅವರು ತಮ್ಮ ಸ್ವಂತ ಶ್ರಮದಿಂದ ರಾಜ್ಯಾದ್ಯಂತ ಲಿಂಗಾಯತರ ಶಕ್ತಿಶಾಲಿ ಸಂಘಟನೆ ಕಟ್ಟಿದರು. ಪಂಚಪೀಠಗಳ ಜಾತಿ ಜಂಗಮರು ಲಿಂಗಾನಂದ ಶ್ರೀಗಳಿಗೆ ಸಾಕಷ್ಟು ಕಾಟ ಕೊಟ್ಟರು. ಆದರೆ, ಅದಕ್ಕೆಲ್ಲಾ ಅವರು ಯಾವತ್ತೂ ಜಗ್ಗಲಿಲ್ಲ.

ಮುಂದುವರೆಯುವುದು…

WhatsApp Image 2025 11 17 at 3.54.12 PM
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತಕ್ಕೆ ಅಮೆರಿಕದ ಶೇ.100ರಷ್ಟು ಸುಂಕದ ಬೆದರಿಕೆ

ರಷ್ಯಾ ವಿರುದ್ಧದ ನಿರ್ಬಂಧಗಳ ಮಸೂದೆಗೆ ತಿದ್ದುಪಡಿ ತಂದು, ಭಾರತ ಸೇರಿದಂತೆ ಹಲವು...

ಸಂಜೆ ಮಳೆಗೆ ಬೆಂಗಳೂರು ತತ್ತರ: ಟ್ರಾಫಿಕ್‌ನಲ್ಲಿ ಸಿಲುಕಿದ ಜನರು, 11 ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ

ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ದಿಢೀರನೆ ಶುರುವಾದ ಭಾರೀ ಮಳೆಯಿಂದಾಗಿ ಸಿಲಿಕಾನ್ ಸಿಟಿಯ ಜನಜೀವನ...

ಪತಂಜಲಿ ಪ್ರಕರಣ: ಕಣ್ಣುಮುಚ್ಚಿಕೊಂಡು ಆದೇಶ ಹೊರಡಿಸಿದ ‘ಐಟಿಎಟಿ’ಗೆ ದೆಹಲಿ ಹೈಕೋರ್ಟ್ ತರಾಟೆ, 7 ಆದೇಶಗಳು ರದ್ದು

ಪತಂಜಲಿ ಆಯುರ್ವೇದ ಲಿಮಿಟೆಡ್‌ಗೆ ಸಂಬಂಧಿಸಿದಂತೆ 'ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣ' (ITAT)...

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ ವಿಮಾನಗಳ ವಿಳಂಬ: ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರತಿಭಟನೆ

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ನ ಎರಡು ವಿಮಾನಗಳು ಪದೇಪದೇ ವಿಳಂಬಗೊಂಡ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ...