ಪಂಚಮಸಾಲಿ ಪೀಠಗಳ ಗೊಂದಲ- ಭಾಗ 2 | ಪಂಚಮಸಾಲಿಗಳ ಪ್ರತ್ಯೇಕ ಪೀಠಕ್ಕೆ ಮೂಲ ಪ್ರೇರಣೆ ಲಿಂಗೈಕ್ಯ ಡಾ. ಕಲಬುರ್ಗಿ

Date:

ಬಹುಸಂಖ್ಯಾತ ಪಂಚಮಸಾಲಿ ಸಮುದಾಯ ಪ್ರತ್ಯೇಕ ಪೀಠ ಮಾಡುವ ಕಾರ್ಯಕ್ಕೆ ಮೂಲ ಪ್ರೇರಣೆ ಲಿಂಗೈಕ್ಯ ಡಾ. ಎಂ. ಎಂ. ಕಲಬುರ್ಗಿಯವರು ಎನ್ನುವ ವಿಷಯ ಬಹಳ ಜನಕ್ಕೆ ತಿಳಿದಿಲ್ಲ. ಸಾದರ, ನೇಕಾರ‌ ಮುಂತಾದ ಪೀಠಗಳಿಗಿಂತ ಪಂಚಮಸಾಲಿ ಪೀಠ ಮಾಡಿದರೆ ವೀರಶೈವ ಪಂಚಪೀಠಗಳ ನಡು ಮುರಿದಂತೆ ಎನ್ನುವ ಸಂಗತಿ ಡಾ. ಕಲಬುರ್ಗಿಯವರಿಗೆ ತಿಳಿದಿತ್ತು. ತಮ್ಮ ಪಂಚಮಸಾಲಿ ಶಿಷ್ಯರ ಮೂಲಕ ಈ ಯೋಜನೆಯನ್ನು ಅವರು ಮುನ್ನೆಲೆಗೆ ತಂದರು. ಇದು ವೀರಶೈವ ಪಂಚಪೀಠಗಳು ಕಲಬುರ್ಗಿ ಅವರನ್ನು ದ್ವೇಷಿಸಲು ಮೂಲ ಕಾರಣವಾಯ್ತು.

- Advertisement -

ಲಿಂಗಾಯತ ಮಠಗಳ ಮೇಲಿನ ಜಾತಿ ಜಂಗಮರ ಯಜಮಾನಿಕೆ ಸಡಿಲಗೊಳ್ಳುವ ಪ್ರಕ್ರಿಯೆ ಆರಂಭಗೊಂಡ ನಂತರ ಪಂಚಮಸಾಲಿಗಳು ತಮಗೂ ಒಂದು ಪೀಠ ಬೇಕು ಎಂದು ಆಶಿಸಿದರು. ತಮ್ಮ ಉಪವರ್ಗಕ್ಕೆ ಪ್ರತ್ಯೇಕ ಪೀಠ ಏಕೆ ಬೇಕು ಎನ್ನುವ ಸ್ಪಷ್ಟ ತಿಳಿವಳಿಕೆ, ಮುಂದಾಲೋಚನೆ ಹಾಗು ದೂರದೃಷ್ಟಿ ಆ ವರ್ಗಕ್ಕೆ ಇಲ್ಲದೆ ಹೋದರೆ ಏನಾಗಬಹುದು ಎನ್ನುವುದಕ್ಕೆ ಇಂದಿನ ಪಂಚಮಸಾಲಿ ಪೀಠಗಳ ರಾದ್ದಾಂತವು ಒಂದು ಸೂಕ್ತ ಉದಾಹರಣೆಯಾಗಬಲ್ಲದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಲಿಂಗಾಯತರಲ್ಲಿ ಇನ್ನೂ ಅನೇಕ ಉಪವರ್ಗಗಳು ತಮ್ಮದೆಯಾದ ಪ್ರತ್ಯೇಕ ಪೀಠವಿಲ್ಲದೆ ನೆಮ್ಮದಿಯಾಗಿ, ಮರ್ಯಾದೆಯಿಂದ ಬಾಳುತ್ತಿವೆ. ಅಷ್ಟಕ್ಕೂ ಈ ಮಠಗಳು ಹಗರಣಗಳನ್ನು ನೋಡಿ ಅನೇಕ ಲಿಂಗಾಯತರು ನಮಗೆ ಪೀಠಗಳು ಏತಕ್ಕೆ ಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಆದಾಗ್ಯೂ ಒಂದು ಉಪವರ್ಗ ತನ್ನದೆ ಆದ ಪೀಠ ಇರಬೇಕೆಂದು ಬಯಸಿದರೆ ಅದಕ್ಕೆ ಸಿರಿಗೆರೆಯ ಸಾಧು ಸದ್ಧರ್ಮ ಪೀಠ ಮಾದರಿಯಾಗಬೇಕು. ಶರಣ ಮರುಳಸಿದ್ಧನನ್ನು ಮರುಳಾರಾಧ್ಯ ಎಂದು ವಂಚಿಸಿ ವೀರಶೈವ ಪಂಚಪೀಠಗಳು ಉಜ್ಜಯನಿ ಪೀಠ ಹೊಡೆದುಕೊಂಡಾಗ ಸಾದರು ಕೈಕಟ್ಟಿ ಕೂಡದೆ ಒಂದು ಕಡೆ ಕಾನೂನು ಹೋರಾಟ ನಡೆಸಿದರೆ, ಮತ್ತೊಂದು ಕಡೆ ಸಿರಿಗೆರೆಯ ಸಾಧು ಸದ್ಧರ್ಮ ಪೀಠ ಸ್ಥಾಪಿಸಿದರು. ಇಂದು ಮಧ್ಯ ಕರ್ನಾಟಕದ ಬಹುತೇಕ ಸಾದರಿಗೆ ಸಿರಿಗೆರೆ ಪೀಠ ಒಂದು ಏಕೈಕ ಶ್ರದ್ಧಾ ಕೇಂದ್ರವಾಗಿದೆ. ಅದಕ್ಕೆ ಒಂದಿಷ್ಟು ಶಾಖಾ ಮಠಗಳೂ ಇದ್ದು ಅವುಗಳಲ್ಲಿ ಸಾಣೇಹಳ್ಳಿಯ ಮಠ ನಾಡಿನಲ್ಲಿ ತನ್ನದೇ ಆದ ಹೆಸರನ್ನು ಹೊಂದಿದೆ. ಸಿರಿಗೆರೆಯ ಹಿಂದಿನ ಜಗದ್ಗುರುಗಳಾಗಿದ್ದ ಶಿವಕುಮಾರ ಸ್ವಾಮಿಗಳಿಗೆ ಲಿಂಗಾಯತ ಧರ್ಮ ಸಿದ್ಧಾಂತ ಮತ್ತು ತತ್ವದ ಸ್ಪಷ್ಟ ತಿಳಿವಳಿಕೆ ಇತ್ತು ಮತ್ತು ಸಾದರ ಉಪವರ್ಗವನ್ನು ಎಲ್ಲಾ ರೀತಿಯಲ್ಲಿ ಹೇಗೆ ಮೇಲೆತ್ತಬೇಕು ಎನ್ನುವ ನಿಖರ ಉಪಾಯಗಳು ಅವರಿಗೆ ಗೊತ್ತಿದ್ದವು.

ಬಯಲು ಸೀಮೆಯ ಮಧ್ಯ ಕರ್ನಾಟಕದ ಸಾದರ ಸಮುದಾಯವನ್ನು ಆರ್ಥಿಕವಾಗಿ ಸಬಲಗೊಳಿಸಲು ಸಿರಿಗೆರೆಯ ಲಿಂಗೈಕ್ಯ ಶಿವಕುಮಾರ ಸ್ವಾಮಿಗಳು ಮಲೆನಾಡಿನ ಅಡಿಕೆ ಬೇಸಾಯವನ್ನು ಛಲಬಿಡದೆ ಬಯಲುಸೀಮೆಗೆ ಪರಿಚಯಿಸಿದರು. ಸರ್ಕಾರಗಳು ಹಾಗು ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುವ ಮೂಲಕ ಆ ಭಾಗದಲ್ಲಿ ಕೆರೆ ತುಂಬಿಸುವ ಮುಂತಾದ ನೀರಾವರಿ ಯೋಜನೆಗಳು ಅನುಷ್ಠಾನ ಆಗುವಂತೆ ಮಾಡಿದರು. ಪಂಚಮಸಾಲಿ ಮಠಾಧೀಶರಂತೆ ರಾಜಕೀಯ ಪುಢಾರಿಗಳ ಬಾಲಂಗೋಚಿ ಆಗದೆ ಸಮುದಾಯದ ರಾಜಕಾರಣಿಗಳನ್ನು ಅಕ್ಷರಶಃ ನಿಯಂತ್ರಿಸುತ್ತಿದ್ದರು, ಆ ಸಂಪ್ರದಾಯ ಸಿರಿಗೆರೆ ಮಠಾಧೀಶರಲ್ಲಿ ಇಂದಿಗೂ ಮುಂದುವರೆದಿದೆ. ಭಕ್ತರೆಲ್ಲ ಸಾದರ ಪೀಠ ಮೆಡಿಕಲ್ ಕಾಲೇಜು ಆರಂಭಿಸಬೇಕೆಂದು ಒತ್ತಾಯಿಸಿದಾಗ ಪೂಜ್ಯರು ಅದನ್ನು ನಿರಾಕರಿಸಿ, ಸಾದರ ಸಮುದಾಯ ದಟ್ಟವಾಗಿರುವ ನೂರಾರು ಹಳ್ಳಿಗಳಲ್ಲಿ ಹೈಸ್ಕೂಲ್ ವರೆಗೆ ಶಾಲೆಗಳನ್ನು ತೆರೆದರು. ಒಬ್ಬ ಉಪ ವರ್ಗದ ಮಠಾಧೀಶ ತನ್ನ ಸಮುದಾಯದ ರಾಜಕಾರಣಿಗಳನ್ನು ಹಿಡಿತದಲ್ಲಿಟ್ಟುಕೊಂಡು ಇಡೀ ಸಮುದಾಯದ ಹಿತಾಸಕ್ತಿಗಾಗಿ ಕಾರ್ಯ ಮಾಡಿದ ಏಕೈಕ ಉದಾಹರಣೆ ಎಂದರೆ ಸಿರಿಗೆರೆಯ ಶಿವಕುಮಾರ ಸ್ವಾಮಿಗಳು ಮತ್ತು ಸಾದರ ಪೀಠ. ಇದರ ಜೊತೆಗೆ ಅವರು ಬಸವ ತತ್ವ ಪ್ರಚಾರ ಮತ್ತು ಅಕ್ಕನ ಬಳಗ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಗ್ರಾಮಗಳಲ್ಲಿ ಲಿಂಗಾಯತ ಧರ್ಮದ ಧಾರ್ಮಿಕ ಕಾರ್ಯಗಳು ನಡೆಸಲು ಜಾತಿ ಜಂಗಮರ ಮೇಲೆ ಅವಲಂಬಿತರಾಗದಂತೆ ಹಳ್ಳಿಗೊಂದು ತಮ್ಮದೆ ಸಾದರ ಕುಟುಂಬಕ್ಕೆ ಜಂಗಮ ದೀಕ್ಷೆ ನೀಡುವ ಕ್ರಾಂತಿಕಾರಿ ಹೆಜ್ಜೆಯನಿಟ್ಟರು.

ಈ ಎಲ್ಲಾ ಬೆಳವಣಿಗೆಗಳಿಂದ ವೀರಶೈವ ಪಂಚಪೀಠಗಳ ಪ್ರಭಾವ ಕುಗ್ಗತೊಡಗಿತು. ಎರಡು ಮೂರು ಶತಮಾನಗಳಿಂದ ಲಿಂಗಾಯತರನ್ನು ಮನಸೊ ಇಚ್ಛೆ ಸುಲಿದ ವೀರಶೈವ ಪಂಚಪೀಠಗಳು ತಮ್ಮ ಮಠದ ಆಯಕಟ್ಟಿನ ಜಾಗಗಳನ್ನು ಜಾತಿ ಜಂಗಮರಿಗೆ, ಅದರಲ್ಲೂ ತಮ್ಮ ಪೂರ್ವಾಶ್ರಮದ ಸಂಬಂಧಿಗಳಿಗೆ ಮೀಸಲಿಟ್ಟರು. ಬಹುಸಂಖ್ಯಾತ ಪಂಚಮಸಾಲಿ ಸಮುದಾಯ ಪ್ರತ್ಯೇಕ ಪೀಠ ಮಾಡುವ ಕಾರ್ಯಕ್ಕೆ ಮೂಲ ಪ್ರೇರಣೆ ಲಿಂಗೈಕ್ಯ ಡಾ. ಎಂ. ಎಂ. ಕಲಬುರ್ಗಿಯವರು ಎನ್ನುವ ವಿಷಯ ಬಹಳ ಜನಕ್ಕೆ ತಿಳಿದಿಲ್ಲ. ಸಾದರ, ನೇಕಾರ‌ ಮುಂತಾದ ಪೀಠಗಳಿಗಿಂತ ಪಂಚಮಸಾಲಿ ಪೀಠ ಮಾಡಿದರೆ ವೀರಶೈವ ಪಂಚಪೀಠಗಳ ನಡು ಮುರಿದಂತೆ ಎನ್ನುವ ಸಂಗತಿ ಡಾ. ಕಲಬುರ್ಗಿಯವರಿಗೆ ತಿಳಿದಿತ್ತು. ತಮ್ಮ ಪಂಚಮಸಾಲಿ ಶಿಷ್ಯರ ಮೂಲಕ ಈ ಯೋಜನೆಯನ್ನು ಅವರು ಮುನ್ನೆಲೆಗೆ ತಂದರು. ಇದು ವೀರಶೈವ ಪಂಚಪೀಠಗಳು ಕಲಬುರಗಿ ಅವರನ್ನು ದ್ವೇಷಿಸಲು ಮೂಲ ಕಾರಣವಾದರೆ, ವೀರಶೈವರು ಆಂಧ್ರ ಮೂಲದ ಆರಾಧ್ಯ ಬ್ರಾಹ್ಮಣರು ಎಂಬ ಅವರ ಸಂಶೋಧನೆ ಪಂಚಪೀಠಗಳ ಅಸಮಾಧಾನಕ್ಕೆ ಇನ್ನಷ್ಟು ಕಾರಣವಾಯಿತು. ಕಲಬುರಗಿಯವರ ಪ್ರೇರಣೆಯಿಂದ ಪಂಚಮಸಾಲಿ ಪುಢಾರಿಗಳು ಪ್ರತ್ಯೇಕ ಪೀಠ ಸ್ಥಾಪಿಸುವ ಮೊದಲು ವೀರಶೈವ ಪಂಚಪೀಠಗಳೊಂದಿಗೆ ಸಮಾಲೋಚಿಸಿ ಪಂಚಪೀಠಗಳಲ್ಲಿ ಒಂದು ಪೀಠ ಪಂಚಮಸಾಲಿಗಳಿಗೆ ಬಿಟ್ಟುಕೊಡಲು ಆಗ್ರಹಿಸಿದರು.

ಇದಕ್ಕೆ ಪಂಚಪೀಠಗಳು ಒಪ್ಪಲಿಲ್ಲ, ಬದಲಾಗಿ ಅದು ಗುರು ಪೀಠ ಆಗಿರಲಿ, ವಿರಕ್ತ ಪೀಠವಾಗಲಿ ಜಂಗಮರು ಮಾತ್ರ ಲಿಂಗಾಯತ ಮಠಗಳಿಗೆ ಗುರು ಆಗಲು ಅರ್ಹರು, ಲಿಂಗಾಯತರು ಏನಿದ್ದರೂ ದೇಣಿಗೆ ಕೊಡಲು, ಪಲ್ಲಕ್ಕಿ ಹೊರಲು ಮಾತ್ರ ಅರ್ಹರು ಎನ್ನುವುದು ವೀರಶೈವ ಪಂಚಪೀಠಗಳ ಧೃಡ ನಿಲುವಾಗಿತ್ತು. ದಾವಣಗೆರೆಯಲ್ಲಿ ಪಂಚಮಸಾಲಿ ಮುಖಂಡರು ಹಾಗು ಪಂಚಪೀಠಗಳ ನಡುವೆ ಈ ಕುರಿತು ನಡೆದ ಚರ್ಚೆ ವಾಗ್ವಾದ, ರಂಪಾಟದಲ್ಲಿ ಹಾಗು ಅಂತಿಮವಾಗಿ ಕೈಕೈ ಮಿಲಾಯಿಸುವಲ್ಲಿ ಕೊನೆಗೊಂಡಿತು. ಕೊನೆಗೆ ಪಂಚಮಸಾಲಿ ಸಮುದಾಯ ತಮ್ಮದೆ ಪ್ರತ್ಯೇಕ ಪೀಠ ಸ್ಥಾಪಿಸಲು ನಿರ್ಧರಿಸಿತು. ಆದರೆ, ಪೀಠ ಏತಕ್ಕಾಗಿ ಬೇಕು, ಸ್ಥಾಪನೆಯಾದ ಮೇಲೆ ಅದರ ಉದ್ದೇಶಗಳು ಹೇಗೆ ಈಡೇರಿಸಿಕೊಳ್ಳಬೇಕು ಎನ್ನುವ ನೀಲಿ ನಕ್ಷೆಯ ಕಡೆಗೆ ಗಮನ ಕೊಡಲಿಲ್ಲ. ಪೀಠ ಸ್ಥಾಪನೆಗೆ ಮೊದಲೇ ಪಂಚಮಸಾಲಿ ಸಮುದಾಯದಲ್ಲಿ ಭಿನ್ನಾಭಿಪ್ರಾಯ ಹಾಗು ಗೊಂದಲ ಹುಟ್ಟುಹಾಕುವಲ್ಲಿ ಪಂಚಪೀಠಗಳು ಯಶಸ್ವಿಯಾದವು. ಉಳಿದ ಲಿಂಗಾಯತ ಉಪವರ್ಗಗಳಂತೆ ಪಂಚಮಸಾಲಿಗಳು ಜಾಣರಲ್ಲ, ಅತೀ ಮುಗ್ಧರು ಹಾಗು ಅವಕಾಶವಾದಿಗಳು. ಆ ಕಾರಣದಿಂದಲೇ ಪಂಚಮಸಾಲಿ ಸಮುದಾಯ ನಿರಂತರವಾಗಿ ಜಂಗಮರು ಹಾಗು ಬಣಜಿಗರಿಂದ ಹೆಚ್ಚು ಬಳಸಲ್ಪಟ್ಟಿತು. ಜೈನ ಮೂಲದಿಂದ ಲಿಂಗಾಯತರಾದ ಶೀಲವಂತ ಬಣಜಿಗರು ಹುಟ್ಟು ವ್ಯಾಪಾರಿಗಳು ಹಾಗು ವ್ಯವಹಾರ ಚತುರರು, ಮತ್ತು ಲಿಂಗಾಯತ ಸಮುದಾಯದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವವರು.

ಇದನ್ನೂ ಓದಿ ಪಂಚಮಸಾಲಿ ಪೀಠಗಳ ಗೊಂದಲ- ಭಾಗ 1 | ಪಂಚಮಸಾಲಿಗರೇ ಪಂಚಪೀಠಗಳ ಆರ್ಥಿಕ ಮೂಲವಾಗಿದ್ದರು

ಹಳ್ಳಿಗಳಲ್ಲಿ ಬಣಜಿಗರ ವ್ಯಾಪಾರ, ವ್ಯವಹಾರ ನಡೆಯಲು ಬಹುಸಂಖ್ಯಾತ, ಮುಗ್ಧ ಹಾಗು ಭೂ ಹಿಡುವಳಿದಾರ ಪಂಚಮಸಾಲಿಗಳ ಅಗತ್ಯ ಬಣಜಿಗರಿಗಿತ್ತು. ಶೈವ ಮೂಲದಿಂದ ಲಿಂಗಾಯತರಾದ ಆದಿಬಣಜಿಗರು ಜೈನ ಮೂಲದ ಶೀಲವಂತ ಬಣಜಿಗರಿಂದ ಸುರಕ್ಷಿತ ಅಂತರ ಕಾಯ್ದುಕೊಂಡಿದ್ದರು. ಕಾರಣ, ಕಲ್ಯಾಣ ಸಾಮ್ರಾಜ್ಯದಲ್ಲಿ ಬಸವಣ್ಣನವರ ಕಾಲದಲ್ಲಿದ್ದ ಜೈನ ಮತ್ತು ಶೈವರ ನಡುವಿನ ಸಂಘರ್ಷದ ಕಹಿ ಅನುಭವ ಈ ಎರಡೂ ಬಣಜಿಗರನ್ನು ಹತ್ತಿರಕ್ಕೆ ತರಲು ಬಿಡಲಿಲ್ಲ. ಆದಿ ಬಣಜಿಗರು ಶೀಲವಂತ ಬಣಜಿಗರಂತೆ ವ್ಯಾಪಾರವನ್ನು ಮಾತ್ರ ನೆಚ್ಚಿಕೊಳ್ಳದೆ ಕೃಷಿಯಲ್ಲಿ ತೊಡಗಿದ್ದರು. ತಮ್ಮ ವ್ಯಾಪಾರದ ಅನುಕೂಲಕ್ಕಾಗಿ ಶೀಲವಂತ ಬಣಜಿಗರು ಪಂಚಮಸಾಲಿಗಳನ್ನು ಓಲೈಸಲೇಬೇಕಾಯಿತು.

ಪಂಚಮಸಾಲಿ ಹಾಗು ಬಣಜಿಗರು ಒಂದೇ ತಂದೆಯ ಮಕ್ಕಳು, ಒಬ್ಬ ಕೃಷಿ ಮಾಡಿ ಪಂಚಮಸಾಲಿ ಆದ, ಇನ್ನೊಬ್ಬ ವ್ಯಾಪಾರ ಮಾಡಿ ಬಣಜಿಗ ಎನ್ನಿಸಿಕೊಂಡ ಎನ್ನುವ ಅನುಕೂಲಸಿಂಧು ಪರಿಕಲ್ಪನೆ ತೇಲಿ ಬಿಡಲಾಯಿತು. ಆ ಮೂಲಕ ನೂರು-ಇನ್ನೂರು ವರ್ಷಗಳ ಹಿಂದೆ ದೂರ ಇಡಲ್ಪಟ್ಟಿದ್ದ ಶ್ರೀಮಂತ, ಬಲಾಢ್ಯ ಪಂಚಮಸಾಲಿ ಹುಡುಗರಿಗೆ ಶೀಲವಂತ ಬಣಜಿಗರು ಹೆಣ್ಣು ಕೊಟ್ಟು ಸಂಬಂಧ ಬೆಳೆಸಲು ಆರಂಭಿಸಿದರು. ಪಂಚಮಸಾಲಿಗಳ ಆಶ್ರಯದಲ್ಲಿ ಬಣಜಿಗರ ವ್ಯಾಪಾರ ವ್ಯವಹಾರಗಳು ಸುರಕ್ಷಿತವಾಗಿ ಅಭಿವೃದ್ಧಿ ಹೊಂದಿದವು.

ಮುಂದುವರೆಯುವುದು…

WhatsApp Image 2025 11 17 at 3.54.12 PM
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂಡಗೋಡ | ಮದ್ಯದ ಅಮಲಿನಲ್ಲಿ ಪತ್ನಿಯ ಹೊಟ್ಟೆಗೆ ಡಬ್ಬಣದಿಂದ ಚುಚ್ಚಿದ ಪತಿ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಮದ್ಯ ಸೇವಿಸಿ ಮನೆಗೆ ಬಂದ ಪತಿ,...

ಬೀದರ್‌ | ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ ಅತ್ಯಗತ್ಯ : ವೀರಣ್ಣ ದಂಡೆ

ಹಳೆಗನ್ನಡ ಸಾಹಿತ್ಯ, ಶಾಸನಗಳು ಹಾಗೂ ಹಸ್ತಪ್ರತಿಗಳು ನಮ್ಮ ಜ್ಞಾನ ಪರಂಪರೆಯ ಮೂಲ...

ಪಶ್ಚಿಮ ಏಷ್ಯಾ ಸಂಘರ್ಷ: 14 ನಾವಿಕರು ಸೇರಿ 22 ಭಾರತೀಯರ ಸಾವು: ಕೇಂದ್ರ ಮಾಹಿತಿ

​ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ 14 ನಾವಿಕರು ಸೇರಿದಂತೆ 22 ಜನ...

ದೆಹಲಿ SIR:​’ಹಳೆಯ’ ಮತದಾರರಿಗೆ ‘ಹೊಸ’ ಫಾರ್ಮ್ ಏಕೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ತರಾಟೆ

ದೆಹಲಿಯಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಹಿಂದಿನ ಮತದಾರರ...