ಗ್ರಾಮೀಣ ಜೀವನಾಡಿ ಮನರೇಗಾ ಕೊಲೆ: ಬಿಜೆಪಿಯ ವಿಬಿ ಜಿ ರಾಮ್ ಜಿಯಡಿ ಕೆಲಸವಿಲ್ಲದೆ ಮತ್ತೆ ಗುಳೆ

Date:

ಜಿ ರಾಮ್ ಜಿ ಇನ್ನೂ ಆರಂಭವಾಗದಿದ್ದರೂ, ಹಳೆಯ ಯೋಜನೆಯ ಕೆಲಸಗಳು ನಿಂತಿರುವುದು ಸಾವಿರಾರು ಕುಟುಂಬಗಳನ್ನು ಹಸಿವಿನ ಅಂಚಿಗೆ ತಳ್ಳಿದೆ. ಮೋದಿ ಸರ್ಕಾರ 'ವಿಕಸಿತ ಭಾರತ' ಎಂದು ಹೇಳುತ್ತಿದ್ದರೂ, ಗ್ರಾಮೀಣ ಕೂಲಿಕಾರ್ಮಿಕರ ಕೈಯಲ್ಲಿದ್ದ ಖಾತರಿಯನ್ನು ಕಿತ್ತುಕೊಂಡು ಅವರನ್ನು ನಗರಗಳ ಸಸ್ತಾ ಶ್ರಮಕ್ಕೆ ತಳ್ಳಿದೆ. ರಾಜಕೀಯ ನಿರ್ಧಾರಗಳು ಬಡವರ ಬದುಕನ್ನು ಮೂರಾಬಟ್ಟೆ ಮಾಡಿವೆ. 

ಮನರೇಗಾ(ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ)ವನ್ನೇ ರದ್ದುಪಡಿಸಿ 2025ರ ಡಿಸೆಂಬರ್‌ನಲ್ಲಿ ಬದಲಾಯಿಸಿದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್(ಗ್ರಾಮೀಣ) ಅಥವಾ ವಿಬಿ ಜಿ ರಾಮ್ ಜಿ(VB-G RAM G) ಮಸೂದೆ 2026 ಏಪ್ರಿಲ್‌ನಿಂದ ಅನುಷ್ಠಾನಗೊಳ್ಳುತ್ತದೆ ಎಂದು ಹೇಳಲಾಗಿತ್ತಾದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ. ಈ ಕಾಯ್ದೆಯಿಂದ ಗ್ರಾಮೀಣ ಭಾಗಗಳ ಮನರೇಗಾ ಕೆಲಸಗಳು ಸ್ಥಗಿತಗೊಂಡಿವೆ. ಕೆಲಸವಿಲ್ಲದ ಗ್ರಾಮೀಣ ಕೂಲಿಕಾರ್ಮಿಕರ ಬದುಕು ದುಸ್ತರವಾಗಿದೆ. ಉದ್ಯೋಗ ಹುಡುಕಿ ನಗರಗಳತ್ತ ಗುಳೆ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ.

- Advertisement -

ಮನರೇಗಾವನ್ನು ಯುಪಿಎ ಸರ್ಕಾರ 2005ರಲ್ಲಿ ಜಾರಿಗೊಳಿಸಿದ್ದು, ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ ಕನಿಷ್ಠ 100 ದಿನಗಳ ಕೆಲಸದ ಖಾತರಿ ನೀಡುವ ಮೂಲಕ ದುರ್ಬಲ ವರ್ಗಗಳ ಬದುಕನ್ನು ರಕ್ಷಿಸುತ್ತಿತ್ತು. ಜತೆಗೆ ವಲಸೆ ತಡೆಯುವ ಮತ್ತು ಗ್ರಾಮಾಭಿವೃದ್ಧಿ ಸಾಧಿಸುವ ಉದ್ದೇಶ ಹೊಂದಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಗ್ರಾಮೀಣ ಆಸ್ತಿ ಸೃಜನೆಯಲ್ಲಿ ಮನರೇಗಾ ಪಾತ್ರ

ಮನರೇಗಾ ಅತ್ಯುತ್ತಮ ರಚನೆಯಾಗಿತ್ತು. ಮೂಲತಃ ಶೇ.60ರಷ್ಟು ಕೌಶಲ್ಯರಹಿತ ಕಾರ್ಮಿಕರಿಗೆ ಒತ್ತು ನೀಡುತ್ತಿತ್ತು. ಇದು ಕೇವಲ ಕೆಲಸವಾಗಿರಲಿಲ್ಲ, ಗ್ರಾಮೀಣ ಆಸ್ತಿ ಸೃಷ್ಟಿ ಮಾಡುತ್ತಿತ್ತು. ಮಾನವರಿಂದ ಮಾಡಲಾಗದ ಕೆಲಸಗಳಿಗೆ ಯಂತ್ರಗಳ ಸಹಾಯದಿಂದಲೂ ಕಾಮಗಾರಿ ನಡೆಸಬಹುದು ಎಂಬುದು ಮನರೇಗಾ ಕಾಯ್ದೆಯಲ್ಲಿ ಉಲ್ಲೇಖವಾಗಿದೆ. ಹಾಗಾಗಿ ಚೆಕ್ ಡ್ಯಾಮ್‌ಗಳು, ಪರ್ಕೊಲೇಷನ್ ಟ್ಯಾಂಕ್‌ಗಳು, ಕೃಷಿ ಹೊಂಡಗಳು, ನೀರಾವರಿ ಕಾಲುವೆಗಳು, ಜಮೀನುಗಳಿಗೆ ರಸ್ತೆಗಳು, ಜಮೀನು ಸಂರಕ್ಷಣೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿತ್ತು.

image 2026 04 08T122924.263

ಅಧ್ಯಯನಗಳ ಪ್ರಕಾರ ಇದು ಅಂತರ್ಜಲ ಮಟ್ಟವನ್ನು ಏರಿಸಿದೆ. ಬಾವಿಗಳ ಸಂಖ್ಯೆ ಹೆಚ್ಚಿಸಿದೆ ಮತ್ತು ನೀರಾವರಿ ಪ್ರದೇಶವನ್ನು ವಿಸ್ತರಿಸಿದೆ. ಯಂತ್ರಗಳನ್ನು ಬಳಸದಿದ್ದರೆ ಇದೆಲ್ಲಾ ಸಾಧ್ಯವಿರಲಿಲ್ಲ. ಎಲ್ಲ ಕೆಲಸಗಳಿಗೂ ಯಂತ್ರಗಳನ್ನು ಬಳಸಿದರೆ ಕೆಲಸಗಾರರ ಸಂಖ್ಯೆ ಕಡಿಮೆಯಾಗುತ್ತದೆ, ಆಸ್ತಿಗಳು ದುರ್ಬಲವಾಗುತ್ತವೆ, ಸ್ಥಳೀಯ ಜನರಿಗೆ ಆದಾಯ ಕಡಿಮೆಯಾಗುತ್ತದೆ. ಹೀಗಾಗಬಾರದು ಎಂಬುದಕ್ಕಾಗಿಯೇ 100 ದಿನಗಳ ಮಾನವ ಕೆಲಸಗಳನ್ನು ನೀಡಲಾಗುತ್ತಿತ್ತು.

ಕೆಲಸ ನೀಡಲು ಗ್ರಾಮ ಸಭೆಗಳ ಮೂಲಕ ಯೋಜನೆಗಳನ್ನು ನಿರ್ಧರಿಸುತ್ತಿತ್ತು. ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ನೀರು ಸಂರಕ್ಷಣೆ, ಮಣ್ಣು ಸಂರಕ್ಷಣೆ ಮಾಡುತ್ತಿತ್ತು. ಎಲ್ಲ ಶಾಲೆಗಳಿಗೂ ತಡೆಗೋಡೆ, ಶೌಚಾಲಯ, ಆಟದ ಮೈದಾನಗಳು, ಅಂಗನವಾಡಿಯಂತಹ ಗ್ರಾಮೀಣ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದಲ್ಲದೆ, ದನದ ಕೊಟ್ಟಿಗೆಗಳು, ತೋಟಗಾರಿಕೆ ಕೃಷಿಹೊಂಡ ಹೀಗೆ ವೈಯಕ್ತಿಕ ಅಭಿವೃದ್ಧಿಗೂ ಅನುಕೂಲವಾಗುತ್ತಿತ್ತು. ಮನರೇಗಾದಲ್ಲಿ ಮಹಿಳೆಯರ ಭಾಗವಹಿಸುವಿಕೆ ಗಣನೀಯವಾಗಿತ್ತು. ಇದು ಸಮಾನ ವೇತನ, ಬ್ಯಾಂಕ್ ಖಾತೆಗಳ ಮೂಲಕ ವ್ಯವಹಾರದಿಂದಾಗಿ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ನೀಡಿತ್ತು. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿತ್ತು.

ಮನರೇಗಾ ಕಾಯ್ದೆಯಿಂದ ರಾಜ್ಯದ ಉತ್ತರ ಕರ್ನಾಟಕ, ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಕಾರ್ಮಿಕರು ಆಂಧ್ರಪ್ರದೇಶ, ಮುಂಬೈ, ಬೆಂಗಳೂರಿನಂತಹ ಪ್ರಮುಖ ನಗರಗಳಿಗೆ ಕೂಲಿಗಾಗಿ ಗುಳೆ ಹೋಗುವುದು ಅಕ್ಷರಶಃ ಕಡಿಮೆಯಾಗಿತ್ತು. ಹೈನುಗಾರಿಕೆ ವೃದ್ಧಿಯಾಗಿತ್ತು, ರೈತರ ತೋಟಗಾರಿಕೆಗೆ ನೆರವು ನೀಡುತ್ತಿತ್ತು. ಸರ್ಕಾರಿ ಶಾಲೆಗಳು, ಅಂಗನವಾಡಿ, ಕೆರೆ-ಕಟ್ಟೆ, ಅಂತರ್ಜಲ ಮಟ್ಟ ಹೆಚ್ಚಳ, ಕೊಳವೆ ಬಾವಿ, ರಸ್ತೆ ಸೇರಿದಂತೆ ಗ್ರಾಮಾಭಿವೃದ್ಧಿಗೆ ಅನುಕೂಲವಾಗಿತ್ತು. ಹಾಗಾಗಿ ಮನರೇಗಾ ಕೇವಲ ಉದ್ಯೋಗ ನೀಡುವುದಲ್ಲ, ಗ್ರಾಮೀಣ ಆಸ್ತಿ ಸೃಜನೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಆದರೆ 2014ರ ಲೋಕಸಭಾ ಚುನಾವಣೆ ವೇಳೆ ಮೋದಿಯವರು ಮನರೇಗಾವನ್ನು ಕಾಂಗ್ರೆಸ್ ವೈಫಲ್ಯದ ಸಂಕೇತವೆಂದು ತೀವ್ರವಾಗಿ ಟೀಕಿಸಿದರು. 2015ರ ಲೋಕಸಭೆಯಲ್ಲಿ ಮಾತನಾಡುತ್ತ, ”ಇದು ಕಾಂಗ್ರೆಸ್ ವೈಫಲ್ಯದ ಜೀವಂತ ಸ್ಮಾರಕ(living monument to the failure of Congress). 60 ವರ್ಷಗಳ ನಂತರವೂ ಜನರು ಕೇವಲ ಹೊಂಡಗಳನ್ನು ಅಗೆಯುತ್ತಿದ್ದಾರೆ. ಇದನ್ನು ನಿಲ್ಲಿಸಬಾರದು. ಇದು ಕಾಂಗ್ರೆಸ್ ವೈಫಲ್ಯದ ಸ್ಮಾರಕವಾಗಿ ಉಳಿಯಲಿ” ಎಂದು ಗೇಲಿ ಮಾಡಿದ್ದರು.

ಅಂದರೆ ಯೋಜನೆಯನ್ನು ರದ್ದು ಮಾಡದೆ, ಅದನ್ನು ‘ಕಾಂಗ್ರೆಸ್ ವೈಫಲ್ಯದ ಸ್ಮಾರಕ’ವಾಗಿ ಬಿಟ್ಟುಕೊಡುವ ಮೂಲಕ ರಾಜಕೀಯ ಲಾಭ ಪಡೆಯುವ ನಿಲುವು ತೋರಿಸಿದರು. ಆದರೆ 2014ರಿಂದ ಇಲ್ಲಿಯವರೆಗೆ, ಬಿಜೆಪಿ ಆಡಳಿತದಲ್ಲಿ 12 ವರ್ಷಗಳಲ್ಲಿ ಮನರೇಗಾ ಕಾಯ್ದೆಯನ್ನು ಹಂತ ಹಂತವಾಗಿ ದುರ್ಬಲಗೊಳಿಸುವ ಕೆಲಸ ನಡೆಯಿತು.

ಹಂತ ಹಂತವಾಗಿ ಕಡಿತ: ಡೇಟಾ ಮತ್ತು ಸಾಕ್ಷ್ಯ

ಬಜೆಟ್ ಅನುದಾನ ಕಡಿತ: ಯುಪಿಎ ಕಾಲ(2006-07ರಿಂದ 2013-14)ದಲ್ಲಿ ಒಟ್ಟು 1,660 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿತ್ತು. 2014-15ರಿಂದ 2024-25ರವರೆಗೆ ಬಿಜೆಪಿ ಕಾಲದಲ್ಲಿ 2,923 ಮಾನವ ದಿನಗಳ ಉದ್ಯೋಗ ಸೃಷ್ಟಿಸಿದ್ದಾಗಿ ಸರ್ಕಾರಿ ಡೇಟಾ ಹೇಳುತ್ತದೆ. ಆದರೆ ಇದು‌ ನಗರಗಳಲ್ಲಿದ್ದ ವಲಸಿಗರು ಗ್ರಾಮೀಣ ಪ್ರದೇಶಗಳಿಗೆ ಮರಳುತ್ತಿದ್ದಂತೆ ಕೆಲಸದ ಬೇಡಿಕೆಯಲ್ಲಿ ಭಾರೀ ಏರಿಕೆ ಕಂಡುಬಂದ ಪರಿಣಾಮ ಆ ಹಣಕಾಸು ವರ್ಷದಲ್ಲಿ 389 ಕೋಟಿ ಮಾನವ ದಿನಗಳ ಕೆಲಸ ಸೃಷ್ಟಿಯಾಯಿತು. ನಂತರದ ವರ್ಷಗಳಲ್ಲಿ ಉದ್ಯೋಗ ಕಡಿತಗೊಳ್ಳುತ್ತ ಹೋಯಿತು. ಅಂದರೆ 2023-24ರಲ್ಲಿ 308.9 ಕೋಟಿ, 2024-25ರಲ್ಲಿ ಜನವರಿವರೆಗೆ ಕೇವಲ 220 ಕೋಟಿ, 2025-26ರಲ್ಲಿ ಇನ್ನೂ ಕುಸಿತವಾಯಿತು.

ಅಂತೆಯೇ ಬಜೆಟ್ ಅನುದಾನವೂ ಕುಸಿದಿದೆ. 2020-21ರಲ್ಲಿ 1.10 ಲಕ್ಷ ಕೋಟಿ ರೂಪಾಯಿಯಿಂದ 2025-26ರ ಹೊತ್ತಿಗೆ 86,000 ಕೋಟಿಗೆ ಇಳಿಯಿತು. ಅಂದರೆ ಶೇ.35.6ರಷ್ಟು ಅನುದಾನ ಕಡಿತವಾಯಿತು.

2023-24ನೇ ಸಾಲಿನ ಕೇಂದ್ರ ಬಜೆಟ್ ₹60,000 ಕೋಟಿಯನ್ನು ನಿಗದಿಪಡಿಸಿದರೂ, ಇದು 2022-23ನೇ ಸಾಲಿನ ಹಣಕಾಸು ವರ್ಷದ ₹89,000 ಕೋಟಿ ಪರಿಷ್ಕೃತ ಅಂದಾಜುಗಳಿಗಿಂತ ಶೇ.33ರಷ್ಟು ಕಡಿಮೆಯಾಗಿದೆ. 2022-23ನೇ ಸಾಲಿನ ಬಜೆಟ್ ಅನ್ನು ಹಿಂದಿನ ವರ್ಷದ ಪರಿಷ್ಕೃತ ಅಂದಾಜುಗಳಿಗೆ ಹೋಲಿಸಿದರೆ ಶೇ. 25ರಷ್ಟು ಕಡಿತಗೊಳಿಸಲಾಗಿದೆ. 2024-25ನೇ ಸಾಲಿನ ಬಜೆಟ್ ₹86,000 ಕೋಟಿಗಳನ್ನು ನಿಗದಿಪಡಿಸಲಾಗಿದೆ. ಇದು ಹಿಂದಿನ ವರ್ಷದ ಆರಂಭಿಕ ಬಜೆಟ್‌ಗಿಂತ ಹೆಚ್ಚಿದ್ದರೂ, 2023-24ರಲ್ಲಿ ವಾಸ್ತವಿಕ ವೆಚ್ಚಕ್ಕಿಂತ ₹19,297 ಕೋಟಿ ಕಡಿಮೆಯಾಗಿದೆ. ಇದು ಒಟ್ಟು ಬಜೆಟ್‌ನ ಶೇಕಡಾವಾರು ನಿಧಿಯಲ್ಲಿ 10 ವರ್ಷಗಳ ಕನಿಷ್ಠ ಮಟ್ಟವನ್ನು ಸೂಚಿಸುತ್ತದೆ.

ಬಜೆಟ್ ಅನುದಾನದಲ್ಲಿ ಕಡಿತ

2020-21: BE ₹61,500 ಕೋಟಿ → RE ₹1,11,500 ಕೋಟಿ → ವಾಸ್ತವಿಕ ₹1,11,170 ಕೋಟಿ(ಕೊರೊನಾ ವರ್ಷ ಬೇಡಿಕೆ)
2021-22: BE ₹73,000 ಕೋಟಿ → RE ₹98,000 ಕೋಟಿ.
2022-23: BE ₹73,000 ಕೋಟಿ → RE ₹89,400 ಕೋಟಿ.
2023-24: BE ₹60,000 ಕೋಟಿ → RE ₹86,000 ಕೋಟಿ.
2024-25: BE ₹86,000 ಕೋಟಿ → RE ₹86,000 ಕೋಟಿ.
2025-26: BE ₹86,000 ಕೋಟಿ → RE ಸುಮಾರು ₹88,000 ಕೋಟಿ(ಆದರೆ ಇನ್ನೂ ಪೂರ್ಣ ವೆಚ್ಚ ತಿಳಿದಿಲ್ಲ).
2026-27: ಮನರೇಗಾ ₹30,000 ಕೋಟಿ(ತೀವ್ರ ಕಡಿತ) + VB-G RAM G ₹95,692 ಕೋಟಿ.

ಯುಪಿಎ ಆಡಳಿದಲ್ಲಿ ರಾಜ್ಯದ ಪ್ರತಿ ಪಂಚಾಯತ್‌ಗೆ ಸರಾಸರಿ 1-2 ಕೋಟಿ ರೂಪಾಯಿ ಅನುದಾನ ಬರುತ್ತಿತ್ತು. ಕಾಲ ಕಳೆದಂತೆ ಪಂಚಾಯತ್‌ಗಳಿಗೆ ಬರುವ ಹಣವೂ ಕಡಿಮೆಯಾಯಿತು. ಪಂಚಾಯತ್‌ಗಳಿಗೆ ಅನುದಾನ ನೀಡಲು ವಿಳಂಬ ಮಾಡುತ್ತಿತ್ತು. ಕುಂಟುನೆಪಗಳನ್ನು ಹೇಳುತ್ತಿತ್ತು. ಇದೀಗ ಕೇಂದ್ರ 60% ಮಾತ್ರ ವೇತನಕ್ಕೆ ನೀಡುತ್ತದೆ. ಉಳಿದ 40% ರಾಜ್ಯಗಳು ನೀಡಬೇಕೆಂದು ಬಜೆಟ್ ಕ್ಯಾಪ್ ಹೇರಲಾಗಿದೆ.

image 2026 04 08T123212.010

ಡಿಜಿಟಲ್ ತೊಂದರೆಗಳು ಮತ್ತು ಕೆಲಸಗಾರರ ಡಿಲೀಷನ್

2025-26ರಲ್ಲಿ ತಪ್ಪು e-KYC, NMMS(ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್) ಮತ್ತು APBS(ಆಧಾರ್ ಪೇಮೆಂಟ್ ಬ್ರಿಜ್) ನಿಯಮಗಳಿಂದ ಲಕ್ಷಾಂತರ ಕೆಲಸಗಾರರ ಜಾಬ್ ಕಾರ್ಡ್‌ಗಳು ರದ್ದಾದವು. ಇದರಿಂದ ಕೆಲಸ ಪಡೆಯುವುದೇ ಕಷ್ಟಕರವಾಯಿತು. ಈಗ ಪ್ರತಿ ಕುಟುಂಬಕ್ಕೆ 100 ದಿನಗಳ ಬದಲು 45-50 ದಿನಗಳಷ್ಟೇ ಕೆಲಸ ಸಿಗುತ್ತಿದೆ.

ಹಿಂದೆ ಪಂಚಾಯತ್‌ಗಳು ಮನರೇಗಾ ಮೂಲಕ ಸ್ವಂತ ನಿರ್ಧಾರದಿಂದ ಕೆಲಸ ನಡೆಸುತ್ತಿದ್ದವು. ಈಗ ಕೇಂದ್ರೀಕರಣದಿಂದ ಅವುಗಳ ಅಧಿಕಾರ ಕಳೆದುಕೊಂಡಿವೆ. ಹಣದ ಹಂಚಿಕೆಯೂ ಕಡಿಮೆಯಾಗಿದೆ. ಇದು ಗ್ರಾಮೀಣ ಅಭಿವೃದ್ಧಿಗೆ ಕಂಟಕ ತಂದಿದೆ. ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಕೆಲಸ ಸಿಗದಂತಾಗಿದ್ದು, ಮತ್ತೊಮ್ಮೆ ಉದ್ಯೋಗ ಹುಡುಕಿ ನಗರಗಳತ್ತ ಗುಳೆ ಹೋಗುವ ದುಃಸ್ಥಿತಿ ಎದುರಾಗಿದೆ.

ಮೋದಿ ಸರ್ಕಾರದ ನೀತಿಗಳು(ಡಿಜಿಟಲ್ ನಿಯಂತ್ರಣ, ಬಜೆಟ್ ಕಡಿತ, ಕೇಂದ್ರೀಕರಣ) ಗ್ರಾಮೀಣ ಕಾರ್ಮಿಕರನ್ನು ಅಸಹಾಯಕರನ್ನಾಗಿ ಮಾಡಿವೆ. ನಗರಗಳಲ್ಲಿ ಅವರು ‘ಡಿಸ್ಪೋಸಬಲ್’ ಲೇಬರ್ ಆಗಿದ್ದಾರೆ. ಬೇಡಿಕೆ ಇದ್ದಾಗ ಬಳಸಿ, ಇಲ್ಲದಿದ್ದಾಗ ತ್ಯಜಿಸುವಂತಹ ಕ್ರೌರ್ಯಕ್ಕೆ ಒಳಗಾಗುತ್ತಿದ್ದಾರೆ. ಇದು ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯನ್ನು ದುರ್ಬಲಗೊಳಿಸಿದೆ.

ವಲಸಿಗರು ಸಸ್ತಾ ಮತ್ತು ಶೋಷಣೆಗೆ ಒಳಗಾಗುವ ಕಾರ್ಮಿಕರಾಗುತ್ತಾರೆ. ನಿರ್ಮಾಣ ಕ್ಷೇತ್ರ, ಫ್ಯಾಕ್ಟರಿ, ಇತರ ಸ್ವಚ್ಛತೆ ಕೆಲಸಗಳಲ್ಲಿ ಕಡಿಮೆ ವೇತನಕ್ಕೆ ಯಾವುದೇ ಸುರಕ್ಷತೆ ಇಲ್ಲದೆ ದುಡಿಯುತ್ತಾರೆ. ಮನರೇಗಾ ರದ್ದು ಮೂಲಕ ಕೃಷಿ ಮತ್ತು ಗ್ರಾಮೀಣ ಕೂಲಿ ಕಾರ್ಮಿಕರ ಬಲ ಕಿತ್ತುಕೊಳ್ಳಲಾಗಿದೆ; ವೇತನ ಚರ್ಚೆಯ ಹಕ್ಕು ಕಳೆದುಕೊಂಡಿದ್ದಾರೆ, ಕೃಷಿ ಬಿಕ್ಕಟ್ಟು ಹೆಚ್ಚಿದೆ.

ಮನರೇಗಾವನ್ನು ರದ್ದುಪಡಿಸಿ ಹೊಸ ಕಾಯ್ದೆ ತಂದಿದ್ದಾರೆ. ಇದು ‘ಡಿಮಾಂಡ್-ಡ್ರಿವನ್'(ಕೆಲಸ ಕೇಳಿದರೆ ಕೊಡುವುದು)ನಿಂದ ‘ಸಪ್ಲೈ-ಡ್ರಿವನ್'(ಕೇಂದ್ರ ನಿರ್ಧರಿಸುವುದು)ಗೆ ಬದಲಾಗಿದೆ. ರಾಜ್ಯಗಳಿಗೆ ಹೆಚ್ಚು ಹೊರೆಯಾಗಿದೆ, ಪಂಚಾಯತ್‌ಗಳ ಅಧಿಕಾರ ಕಸಿದುಕೊಂಡಿದೆ, ಕೆಲಸದ ವಿಧಗಳನ್ನು ಕೇಂದ್ರ ನಿಯಂತ್ರಿಸುತ್ತದೆ. ಆದರೆ ಇದು ಇನ್ನೂ ಆರಂಭವಾಗಿಲ್ಲದ ಕಾರಣ ಗ್ರಾಮೀಣ ಭಾಗಗಳಲ್ಲಿ ಕೆಲಸಗಳು ಸ್ಥಗಿತಗೊಂಡಿವೆ.

ಇದನ್ನೂ ಓದಿ: ಅಕಾಲಿಕ ಮಳೆ | ಉತ್ತರ ಭಾರತ ಅಸ್ತವ್ಯಸ್ತ, 4 ಲಕ್ಷ ಹೆಕ್ಟೇರ್‌ ಬೆಳೆಹಾನಿ: ಸಂಕಷ್ಟಕ್ಕೆ ಸಿಲುಕಿದ ರೈತರು

ಮನರೇಗಾ ಕ್ಷೀಣತೆಯು ಯೋಜನೆಯ ವೈಫಲ್ಯ ಎನ್ನುವುದಕ್ಕಿಂತ, ಗ್ರಾಮೀಣ ಭಾರತದ ಬದುಕಿನ ಮೇಲಿನ ನಡೆಯುತ್ತಿರುವ ದಾಳಿ. ವಿಬಿ ಜಿ ರಾಮ್ ಜಿ ಇನ್ನೂ ಆರಂಭವಾಗದಿದ್ದರೂ, ಹಳೆಯ ಯೋಜನೆಯ ಕೆಲಸಗಳು ನಿಂತಿರುವುದು ಸಾವಿರಾರು ಕುಟುಂಬಗಳನ್ನು ಹಸಿವಿನ ಅಂಚಿಗೆ ತಳ್ಳಿದೆ. ಮೋದಿ ಸರ್ಕಾರ ‘ವಿಕಸಿತ ಭಾರತ’ ಎಂದು ಹೇಳುತ್ತಿದ್ದರೂ, ಗ್ರಾಮೀಣ ಕೂಲಿಕಾರ್ಮಿಕರ ಕೈಯಲ್ಲಿದ್ದ ಖಾತರಿಯನ್ನು ಕಿತ್ತುಕೊಂಡು ಅವರನ್ನು ನಗರಗಳ ಸಸ್ತಾ ಶ್ರಮಕ್ಕೆ ತಳ್ಳಿದೆ. ಇದು ಕೃಷಿ, ಕೂಲಿ ಬಲವನ್ನು ನಾಶಮಾಡುತ್ತಿದೆ. ರಾಜಕೀಯ ನಿರ್ಧಾರಗಳು ಬಡವರ ಬದುಕನ್ನು ಮೂರಾಬಟ್ಟೆ ಮಾಡಿವೆ. ಮನರೇಗಾ ಕಾಯ್ದೆಯನ್ನು ರಕ್ಷಿಸದಿದ್ದರೆ ಗ್ರಾಮೀಣ ಭಾರತದ ಅಭಿವೃದ್ಧಿ ಕುಸಿಯುತ್ತದೆ. ಮೋದಿಯ ವಿಕಸಿತ ಭಾರತದ ಕನಸು ಕನಸಾಗಿಯೇ ಉಳಿಯಲಿದೆ.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾಳೆ ಜಿಎಸ್‌ಟಿ ಮಂಡಳಿ ಸಭೆ: ಅಧಿಕಾರ ಹಂಚಿಕೆಯ ಅಸಮತೋಲನ; ಏನಿದು ಜಿಎಸ್‌ಟಿ ಕೌನ್ಸಿಲ್?

ಜಿಎಸ್‌ಟಿ ಮಂಡಳಿಯು ದೇಶದ 'ಸಹಕಾರ ಒಕ್ಕೂಟ ವ್ಯವಸ್ಥೆ'ಗೆ ಒಂದು ಉದಾಹರಣೆಯಾಗಿದ್ದರೂ, ಮತದಾನದ...

ತನ್ನ ಕಾದಂಬರಿಗಳ ಪಾತ್ರಗಳಂತೆಯೇ ಜೀವಿಸಿದ್ದ ಜನಪ್ರಿಯ ಕಾದಂಬರಿಕಾರ ಜೆಫ್ರಿ ಆರ್ಚರ್!

ಜನಪ್ರಿಯ ಕಾದಂಬರಿಕಾರ ಜೆಫ್ರಿ ಆರ್ಚರ್, ತಮ್ಮ 86ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸೇನೆ,...

ಚುನಾವಣಾ ಆಯೋಗವು ತಾನೇ ಹಾಕಿಕೊಂಡ ಗಂಟುಗಳನ್ನು ಬಿಡಿಸಿಕೊಳ್ಳಬಲ್ಲದೇ? ಇದೇ ಈಗಿನ ಪ್ರಶ್ನೆ

SIR ನಡೆಸುವ ನಿರ್ಧಾರ ಸರ್ವಾನುಮತದಿಂದ ಕೂಡಿತ್ತು ಎಂದು ಜನ ನಂಬಬೇಕಾದರೆ, ಆಯೋಗವು...