ಅಕಾಲಿಕ ಮಳೆ | ಉತ್ತರ ಭಾರತ ಅಸ್ತವ್ಯಸ್ತ, 4 ಲಕ್ಷ ಹೆಕ್ಟೇರ್‌ ಬೆಳೆಹಾನಿ: ಸಂಕಷ್ಟಕ್ಕೆ ಸಿಲುಕಿದ ರೈತರು

Date:

ಅಕಾಲಿಕ ಮಳೆಯು ರೈತರಿಗೆ ಕೇವಲ ಆರ್ಥಿಕ ನಷ್ಟವಲ್ಲ, ಅವರ ಶ್ರಮದ ಮೇಲೆ ಬೀಳುವ ಬಹು ದೊಡ್ಡ ಪೆಟ್ಟು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರು ಮಾತ್ರವಲ್ಲ, ದೇಶದ ಆಹಾರ ಸುರಕ್ಷತೆಗೂ ಧಕ್ಕೆ ಉಂಟಾಗುತ್ತದೆ.

ಹವಾಮಾನ ವೈಪರೀತ್ಯಕ್ಕೆ ಭಾರತದ ಕೃಷಿ ವಲಯ ಮತ್ತೊಮ್ಮೆ ಸಂಕಷ್ಟಕ್ಕೆ ಈಡಾಗಿದೆ. ಏಪ್ರಿಲ್‌ನಲ್ಲಿ ಬರುವ ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯು ಕಟಾವಿಗೆ ಸಿದ್ಧವಾಗಿದ್ದ ರಬಿ ಬೆಳೆಗಳಾದ ಗೋಧಿ, ಕಡಲೆ, ಸಾಸಿವೆ ಇತ್ಯಾದಿ ಬೆಳೆಗಳಿಗೆ ಗಮನಾರ್ಹ ಹಾನಿಯನ್ನುಂಟುಮಾಡುತ್ತಿದೆ. ಇದರ ಬೆನ್ನಲ್ಲೇ ಭಾರತ ಹವಾಮಾನ ಇಲಾಖೆ, ‘ಉತ್ತರ ಮತ್ತು ಮಧ್ಯ ಭಾರತದಲ್ಲಿ ಮುಂದಿನ ಕೆಲವು ದಿನಗಳವರೆಗೆ ಮಳೆ, ಆಲಿಕಲ್ಲು ಮಳೆ ಮುಂದುವರಿಯುತ್ತದೆ. ಹೆಚ್ಚುವರಿಯಾಗಿ, ಉತ್ತರ ಭಾರತದಲ್ಲಿನ ಮಳೆಯು ಸತತವಾಗಿ ಪಶ್ಚಿಮದ ಅಡಚಣೆಗಳೊಂದಿಗೆ ಮುಂದುವರೆಯುವ ಸಾಧ್ಯತೆಯಿದೆ’ ಎಂದು ಸೂಚನೆ ನೀಡಿದೆ.

- Advertisement -

ಅಕಾಲಿಕ ಮಳೆಯಿಂದ ಗೋಧಿ ಬೆಳೆ ಹಾನಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಉತ್ತರ ಭಾರತದ ಆಹಾರ ಧಾನ್ಯಗಳ ಪೈಕಿ ಗೋಧಿ ಪ್ರಮುಖ ಪಾತ್ರ ವಹಿಸುತ್ತದೆ. ರಬಿ ಋತುವಿನಲ್ಲಿ ಒಟ್ಟಾರೆಯಾಗಿ ಶೇ.40-50ರಷ್ಟು ಗೋಧಿ ಬೆಳೆ ಉತ್ಪಾದನೆಯಾಗುತ್ತದೆ. ಈ ಬಾರಿ ಅಕಾಲಿಕ ಮಳೆಯು ಉತ್ತರ ಮತ್ತು ಮಧ್ಯ ಭಾರತದಾದ್ಯಂತ ಕೃಷಿ ವಲಯವನ್ನು ಅಸ್ತವ್ಯಸ್ತಗೊಳಿಸಿದೆ. ಕೆಲವು ಪ್ರದೇಶಗಳಲ್ಲಿ ಶೇ. 20-30ರಷ್ಟು ಹಾಗೂ ಇನ್ನೂ ಕೆಲವೆಡೆ ಶೇ.50-70ರವರೆಗೆ ಬೆಳೆ ನಷ್ಟವಾಗಿದೆ. ಇದರಿಂದ ರಸಗೊಬ್ಬರ, ಕೀಟನಾಶಕಗಳ ವೆಚ್ಚವನ್ನೂ ಭರಿಸದಂತಾಗಿದೆ.

ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ತೀವ್ರ ಆಲಿಕಲ್ಲು ಮಳೆ ಸುರಿದಿದೆ. ಇದರಿಂದಾಗಿ ಉತ್ತರ ಪ್ರದೇಶದ 17 ಜಿಲ್ಲೆಗಳಲ್ಲಿ 4,000ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ದಾಖಲಾಗಿದೆ. ಹರಿಯಾಣದಲ್ಲಿ ಸುಮಾರು 2.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿರುವುದಾಗಿ ವರದಿಯಾಗಿದೆ. ಒಟ್ಟಾರೆಯಾಗಿ ಉತ್ತರ ಭಾರತದಲ್ಲಿ 4 ಲಕ್ಷ ಹೆಕ್ಟೇರ್‌ಗಿಂತಲೂ ಅಧಿಕ ಪ್ರದೇಶದಲ್ಲಿ ಬೆಳೆಹಾನಿಯಾಗಿರುವುದಾಗಿ ಅಂದಾಜಿಸಲಾಗಿದೆ.

ಗೋಧಿ ಬೆಳೆ

ಗೋಧಿ ಬೆಳೆಯ ನಷ್ಟದಿಂದ ರೈತರ ಆದಾಯಕ್ಕೆ ನೇರ ಹೊಡೆತ ಬಿದ್ದಿದೆ. ಗೋಧಿ ಉತ್ಪಾದನೆಯಲ್ಲಿ ಶೇ.10-15ರಷ್ಟು ಕುಸಿತವಾಗಿದೆ. ಗೋಧಿ ಬೆಳೆ ಹೊರತುಪಡಿಸಿ, ಕಟಾವಿಗೆ ಬಂದಿದ್ದ ಕಡಲೆ, ಸಾಸಿವೆ, ಹಣ್ಣು, ತರಕಾರಿ ಬೆಳೆಗಳೂ ನಾಶವಾಗಿವೆ. ಸತತ ಹವಾಮಾನ ವೈಪರೀತ್ಯಗಳು ರೈತರ ನೆಮ್ಮದಿಗೆ ಭಂಗ ತಂದಿವೆ.

ಹವಾಮಾನ ವೈಪರೀತ್ಯಕ್ಕೆ ಒಳಗಾಗಿರುವ ರೈತರು ಕಟಾವು ಮಾಡಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದು, ಫಸಲನ್ನು ಟಾರ್ಪಲ್‌ಗಳಿಂದ ಮುಚ್ಚುವುದು, ನೀರು ಹರಿಯಲು ಚರಂಡಿಯನ್ನು ತೆಗೆಯುವಂತಹ ತುರ್ತು ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

ಹಠಾತ್ ಹವಾಮಾನ ಬದಲಾವಣೆಯಿಂದ ಹೆಚ್ಚಿನ ಬೆಳೆ ನಾಶವಾಗಿದ್ದು, ಹರಿಯಾಣ, ಉತ್ತರ ಪ್ರದೇಶದ ರೈತರು ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದಾರೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯ ಕೃಷಿ ಮಂತ್ರಿಗಳೊಂದಿಗೆ ಚರ್ಚೆ ನಡೆಸಿ, ಹಾನಿ ಅಂದಾಜನ್ನು ತಿಳಿಯಲು ತುರ್ತು ಸಮೀಕ್ಷೆ ನಡೆಸುವಂತೆ ಸೂಚನೆ ನೀಡಿದ್ದಾರೆ.

ಮಧ್ಯಪ್ರದೇಶದಂತಹ ರಾಜ್ಯಗಳು ಗೋಧಿಯನ್ನು ನಿಗದಿತ ಬೆಲೆಗೆ ಖರೀದಿಸಲು ಘೋಷಿಸಿವೆಯಾದರೂ, ಹೆಚ್ಚಿನ ರಾಜ್ಯಗಳಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿ ತ್ವರಿತ ಮತ್ತು ಪಾರದರ್ಶಕ ಪರಿಹಾರ ಪಾವತಿಯ ಅಗತ್ಯವಿದೆ. ಜತೆಗೆ ವಿಶೇಷ ಪರಿಹಾರ ಪ್ಯಾಕೇಜ್‌ಗಳು, ಬೆಳೆಹಾನಿ ಸಮೀಕ್ಷೆ(girdawari) ಮತ್ತು ಸಣ್ಣ-ಅತಿಸಣ್ಣ ರೈತರಿಗೆ ಆದ್ಯತೆ ನೀಡುವುದು ಮುಖ್ಯವಾಗಿದೆ.

ಮಾರುಕಟ್ಟೆ, ಬೆಲೆ ಮತ್ತು ಖರೀದಿ ಸವಾಲುಗಳು

ಮಾರುಕಟ್ಟೆ ಬೆಲೆಗಳಲ್ಲಿ ಕುಸಿತ ಈಗಾಗಲೇ ಗೋಚರಿಸುತ್ತಿದೆ. ಏಪ್ರಿಲ್ 6ರಂದು ಸರಾಸರಿ ಗೋಧಿ ಬೆಲೆ ಕ್ವಿಂಟಲ್‌ಗೆ 2,382.83 ರೂ.ಗಳಾಗಿದ್ದು, ಪ್ರಸಕ್ತ ಋತುವಿನ ಕ್ವಿಂಟಲ್‌ಗೆ ₹2,625 ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆಯಾಗಿದೆ.

ಮುಂದಿನ ಕೆಲವು ದಿನಗಳವರೆಗೆ ಹೀಗೆಯೇ ಮಳೆ ಮುಂದುವರೆದರೆ, ಕೃಷಿ ವಲಯವನ್ನು ಮೀರಿ ಪರಿಣಾಮ ಬೀರಬಹುದು. ಇಳುವರಿ ಮತ್ತಷ್ಟು ಕುಂಠಿತವಾಗಿ ಮಾರುಕಟ್ಟೆಯಲ್ಲಿ ಬೆಲೆ ದುಪ್ಪಟ್ಟಾಗಬಹುದು. ಗ್ರಾಹಕ ಬೆಲೆ ಸೂಚ್ಯಂಕ(CPI) ಹಣದುಬ್ಬರದಲ್ಲಿ ಏರಿಕೆಯಾಗುವ ಸಾಧ್ಯತೆಯೂ ಇದೆ.

ಇದನ್ನೂ ಓದಿದ್ದೀರಾ? ಐಶಾರಾಮಿ ಬದುಕಿಗಾಗಿ ಸಾಲದ ಮೊರೆ; ಇಎಂಐ ಕಟ್ಟಲಾಗದೇ ಯುವಜನರ ಪರದಾಟ: ಸಮೀಕ್ಷೆ

ಮೆಡಿಟರೇನಿಯನ್ ಸಮುದ್ರದಿಂದ ಬರುವ ತಂಪಾದ ಗಾಳಿ ಮತ್ತು ತೇವದ ಪ್ರಭಾವಗಳಿಂದ ಅಕಾಲಿಕ ಮಳೆ ಉಂಟಾಗಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಸೈಕ್ಲೋನ್‌ ಈ ಬಾರಿ ಏಪ್ರಿಲ್‌ನಲ್ಲಿಯೇ ತೀವ್ರವಾಗಿದೆ.

ಹವಾಮಾನ ಬದಲಾವಣೆ ಎದುರಿಸಲು ಹೈಬ್ರಿಡ್ ಬೆಳೆಗಳು, ಹೈಲ್ ನೆಟ್‌(ಕೃಷಿ ಜಾಲರಿ)ಗಳು, ಉತ್ತಮ ನೀರಾವರಿ ಮತ್ತು ಬೆಳೆವಿಮೆ ಪರಿಹಾರ ಹೆಚ್ಚಿಸುವ ಅಗತ್ಯವಿದೆ. ಅಲ್ಲದೆ ಹವಾಮಾನ ಇಲಾಖೆಯು ರೈತರಿಗೆ ಸಕಾಲದಲ್ಲಿ ಮುನ್ಸೂಚನೆಗಳನ್ನು ತಲುಪಿಸುವ ವ್ಯವಸ್ಥೆಯನ್ನು ಬಲಪಡಿಸಬೇಕು. ಇಲ್ಲವಾದರೆ ಪ್ರತಿ ವರ್ಷವೂ ಇಂತಹ ಹಾನಿಗಳು ಮುಂದುವರಿಯುತ್ತವೆ.

ಈ ಆಲಿಕಲ್ಲು/ಅಕಾಲಿಕ ಮಳೆಯು ರೈತರಿಗೆ ಕೇವಲ ಆರ್ಥಿಕ ನಷ್ಟವಲ್ಲ, ಅವರ ಶ್ರಮದ ಮೇಲೆ ಬೀಳುವ ದೊಡ್ಡ ಪೆಟ್ಟು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರು ಮಾತ್ರವಲ್ಲ, ದೇಶದ ಆಹಾರ ಸುರಕ್ಷತೆಗೂ ಧಕ್ಕೆಯಾಗುತ್ತದೆ. ಹಾಗಾಗಿ ಸರ್ಕಾರ, ಕೃಷಿ ವಿಜ್ಞಾನಿಗಳು ಮತ್ತು ರೈತ ಸಂಘಟನೆಗಳು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಈ ಸವಾಲನ್ನು ಎದುರಿಸಬಹುದಾಗಿದೆ. ರೈತರನ್ನು ಸಂಕಷ್ಟದಿಂದ ಪಾರು ಮಾಡಬಹುದಾಗಿದೆ.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುತ್ತಿಗೆಗಳು ಸುತ್ತುವರೆದಿರುವ ಗ್ಯಾನೇಶ್ ರಾಜೀನಾಮೆ ಸನ್ನಿಹಿತವೇ?

ದಿಲ್ಲಿ- ಮುಂಬಯಿಯಲ್ಲಿ‌ ಯುವಜನರು ಮತ್ತು  ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದಿವೆ. ಕಾಂಗ್ರೆಸ್ ಮತ್ತಿತರೆ ...

ವಿಜಯಪುರ | ಬರಪೀಡಿತ ಪ್ರದೇಶಗಳಿಗೆ ಡಿಸಿಎಂ ಪರಮೇಶ್ವರ್‌ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅ.8 ಹಾಗೂ 9ರಂದು ವಿಜಯಪುರ ಮತ್ತು...

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಕಮಲನಗರ | ಅರ್ಹ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ: ಕ್ಲಿನಿಕ್ ಸೀಜ್

ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಅಕ್ರಮವಾಗಿ...