ಟ್ರಂಪ್‌ಗೆ ಬೆನ್ನಟ್ಟಿ ಕಾಡುತ್ತಿರುವ ಕರಾಳ ನೆರಳು ಯಾವುದು?

Date:

ಅಮೆರಿಕದ ರಾಜಕೀಯ ವಲಯ ಮತ್ತೊಮ್ಮೆ ತೀವ್ರ ಚರ್ಚೆಗೆ ಕಾರಣವಾಗಿದೆ. ಡೊನಾಲ್ಡ್ ಟ್ರಂಪ್ ಮೇಲೆ ನಡೆದ ಗುಂಡಿನ ದಾಳಿ ಯತ್ನದ ಹಿನ್ನೆಲೆಯಲ್ಲೇ, ಅವರ ಹೇಳಿಕೆಗಳು, ಆರೋಪಗಳು ಮತ್ತು ಹಳೆಯ ವಿವಾದಗಳು ಮತ್ತೆ ಚರ್ಚೆಗೆ ಬಂದಿವೆ. ಈ ಘಟನೆಯ ಒಳಹೊಕ್ಕರೆ, ಅದು ಅಮೆರಿಕದ ರಾಜಕೀಯ, ಮಾಧ್ಯಮ ಮತ್ತು ನ್ಯಾಯ ವ್ಯವಸ್ಥೆಯ ಸಂಕೀರ್ಣತೆಯನ್ನು ತೋರಿಸುತ್ತದೆ.

- Advertisement -

ಭಾನುವಾರ ನಡೆದ ಒಂದು ಭೋಜನ ಕೂಟದ ಗುಂಡಿನ ದಾಳಿಯ ಆರೋಪಿ ಎಂದು ಗುರುತಿಸಲ್ಪಟ್ಟಿರುವ ಕೋಲ್ ಥಾಮಸ್ ಅಲೆನ್ ಎಂಬಾತ, ತಾನು ಬರೆದಿದ್ದಾನೆ ಎನ್ನಲಾದ ಪತ್ರದಲ್ಲಿ ಗಂಭೀರ ಆರೋಪಗಳನ್ನು ಉಲ್ಲೇಖಿಸಿದ್ದಾನೆ. ಆ ಪತ್ರದಲ್ಲಿ “ಒಬ್ಬ ಅತ್ಯಾಚಾರಿ, ಶಿಶುಕಾಮಿ ಮತ್ತು ದ್ರೋಹಿ ಅಮೆರಿಕವನ್ನು ಆಳುವುದು ನನಗೆ ಇಷ್ಟವಿಲ್ಲ” ಎಂದು ಬರೆಯಲಾಗಿದೆ ಎಂದು ತಿಳಿದುಬಂದಿದೆ. ಈ ಘಟನೆಯು ಸಾರ್ವಜನಿಕ ವಲಯದಲ್ಲಿ ಮರೆತುಹೋಗಿದ್ದ ‘ಜೆಫ್ರಿ ಎಪ್‌ಸ್ಟೀನ್ ಫೈಲ್ಸ್’ ಎಂಬ ಕರಾಳ ಅಧ್ಯಾಯವನ್ನು ಮತ್ತೆ ಮುನ್ನೆಲೆಗೆ ತಂದಿದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಈ ಪತ್ರದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಟ್ರಂಪ್ ಸಿಟ್ಟಿನಲ್ಲೇ ಪ್ರತಿಕ್ರಿಯಿಸಿದರು. “ನಾನು ಅತ್ಯಾಚಾರಿ ಅಲ್ಲ, ನಾನು ಶಿಶುಕಾಮಿಯೂ ಅಲ್ಲ” ಎಂದು ತಮ್ಮನ್ನ ತಾವು ಸಮರ್ಥಿಸಿಕೊಂಡಿದ್ದಾರೆ. ಮಾಧ್ಯಮಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಅವರು, “ನೀವೆಲ್ಲಾ ಭಯಾನಕ ಜನ” ಎಂದು ಹೇಳುವ ಮೂಲಕ ತಮ್ಮ ಕೋಪವನ್ನು ಹೊರಹಾಕಿದರು. “ಹೌದು, ಆತ ಆ ರೀತಿಯಲ್ಲಿ ಬರೆದಿದ್ದಾನೆ. ಆದರೆ, ನಾನು ಅತ್ಯಾಚಾರಿ ಅಲ್ಲ. ನಾನು ಯಾರನ್ನೂ ಅತ್ಯಾಚಾರ ಮಾಡಿಲ್ಲ” ಎಂದು ಟ್ರಂಪ್ ಹೇಳಿದರು. 

‘ಓಹ್, ಅವನು ನಿಮ್ಮನ್ನೇ ಉಲ್ಲೇಖಿಸುತ್ತಿದ್ದಾನೆಂದು ನೀವು ಭಾವಿಸುತ್ತೀರಾ?’ ಎಂದು ರಿಪೋರ್ಟರ್‌ ಕೇಳಿದ ಪ್ರಶ್ನೆಯನ್ನ ನಿರ್ಲಕ್ಷಿಸಿ, ‘ನಾನು ಶಿಶುಕಾಮಿಯೂ ಅಲ್ಲ’ ಎಂದು ಮತ್ತೆ ಒತ್ತಿ ಹೇಳಿದ್ದಾರೆ. ಇಂದು ನಾವು ಚರ್ಚಿಸಬೇಕಾದ ಅತಿ ದೊಡ್ಡ ಪ್ರಶ್ನೆಯೆಂದರೆ, ಈ ಎಪ್‌ಸ್ಟೀನ್ ಫೈಲ್ಸ್ ಹೇಳುವ ಭಯಾನಕ ಕತೆಗಳೇನು? ಹಾಗಾದ್ರೆ ಅದರಲ್ಲಿರುವ ಟ್ರಂಪ್‌ ಫೋಟೋಗಳೇ ಸುಳ್ಳಾ? 

ಯಾರು ಈ ಜೆಫ್ರಿ ಎಪ್‌ಸ್ಟೀನ್?

ಎಪ್‌ಸ್ಟೀನ್ ಕೇವಲ ಒಬ್ಬ ಶ್ರೀಮಂತ ಉದ್ಯಮಿಯಾಗಿದ್ದವನಲ್ಲ; ಆತ ಅಮೆರಿಕದ ಅತ್ಯಂತ ಪ್ರಭಾವಿ ವ್ಯಕ್ತಿಗಳ “ಕರಾಳ ರಹಸ್ಯಗಳ ಕೀಲಿ ಕೈ” ಆಗಿದ್ದ.  ಆತ ಅಮೆರಿಕ ಮಾತ್ರವಲ್ಲದೇ ದೇಶದ ಬೇರೆ ಬೇರೆ ಭಾಗಗಳ ಉನ್ನತ ವರ್ಗದ ವ್ಯಕ್ತಿಗಳ ದೌರ್ಬಲ್ಯಗಳನ್ನು ಬಳಸಿಕೊಂಡು ತನ್ನ ಸಾಮ್ರಾಜ್ಯ ಕಟ್ಟಿದ್ದ. ಆತನ ‘ಬ್ಲ್ಯಾಕ್ ಬುಕ್’ನಲ್ಲಿ ಜಗತ್ತಿನ ಪ್ರಭಾವಿ ರಾಜಕಾರಣಿಗಳು, ವಿಜ್ಞಾನಿಗಳು ಮತ್ತು ಉದ್ಯಮಿಗಳ ಹೆಸರುಗಳಿದ್ದವು. 

photo 6307523932675838021 w

ಹಣಕಾಸು ಹೂಡಿಕೆದಾರನಾಗಿ ವೃತ್ತಿ ಆರಂಭಿಸಿದ ಎಪ್‌ಸ್ಟೀನ್, ಅಲ್ಪ ಕಾಲದಲ್ಲೇ ನ್ಯೂಯಾರ್ಕ್‌ನಿಂದ ಹಿಡಿದು ಪ್ಯಾರಿಸ್‌ವರೆಗೆ ತನ್ನ ಜಾಲವನ್ನು ಹರಡಿದ್ದ. ಆತನ ಬಳಿ ಸ್ವಂತ ದ್ವೀಪವಿತ್ತು, ಖಾಸಗಿ ವಿಮಾನಗಳಿದ್ದವು ಮತ್ತು ಪ್ರಪಂಚದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳ ಸ್ನೇಹವಿತ್ತು. ಆದರೆ ಈ ಐಷಾರಾಮಿ ಜೀವನದ ಹಿಂದೆ ಇದ್ದದ್ದು ಅಪ್ರಾಪ್ತ ಬಾಲಕಿಯರ ಲೈಂಗಿಕ ಕಳ್ಳಸಾಗಣೆ ಮತ್ತು ಶೋಷಣೆಯ ಜಾಲ. 2019ರಲ್ಲಿ ಜೈಲಿನಲ್ಲಿದ್ದಾಗಲೇ ಆತ ನಿಗೂಢವಾಗಿ ಸಾವನ್ನಪ್ಪಿದ ನಂತರ, ಆತನಿಗೆ ಸಂಬಂಧಿಸಿದ ಸಾವಿರಾರು ಪುಟಗಳ ದಾಖಲೆಗಳನ್ನು ‘ಎಪ್‌ಸ್ಟೀನ್ ಫೈಲ್ಸ್’ ಎಂದು ಕರೆಯಲಾಗುತ್ತಿದೆ. ಇದೇ ಎಪ್ಸ್ಟೀನ್ ಜೊತೆ ಟ್ರಂಪ್‌ಗೆ ಹಳೆಯ ಪರಿಚಯವಿತ್ತು ಎಂಬುದು ದಾಖಲೆಗಳಲ್ಲಿ ಕಂಡುಬಂದಿದೆ. ಆದರೆ ಟ್ರಂಪ್ ಸದಾ ಇದನ್ನು ಅಲ್ಲಗಳೆಯುತ್ತಾ ಬಂದಿದ್ದಾರೆ. “ನನಗೆ ಅವನೊಂದಿಗೆ ಸಂಬಂಧವಿಲ್ಲ” ಎಂದು ಅವರು ಹಲವಾರು ಬಾರಿ ಹೇಳಿದ್ದಾರೆ. ಆದರೆ ಫ್ಲೋರಿಡಾದಲ್ಲಿರುವ ಟ್ರಂಪ್ ಅವರ ಐಷಾರಾಮಿ ಎಸ್ಟೇಟ್ ‘ಮಾರ್-ಎ-ಲಾಗೋ’, ಎಪ್‌ಸ್ಟೀನ್ ತನ್ನ ಲೈಂಗಿಕ ಕಳ್ಳಸಾಗಣೆಯ ಜಾಲಕ್ಕೆ ಬಾಲಕಿಯರನ್ನು ಹುಡುಕುತ್ತಿದ್ದ ಪ್ರಮುಖ ತಾಣವಾಗಿತ್ತು ಎಂದು ದಾಖಲೆಗಳೇ ಹೇಳುತ್ತವೆ.

ಟ್ರಂಪ್ ಮತ್ತು ಎಪ್‌ಸ್ಟೀನ್: ಸ್ನೇಹದ ಆರಂಭ

ಡೊನಾಲ್ಡ್ ಟ್ರಂಪ್ ಮತ್ತು ಜೆಫ್ರಿ ಎಪ್‌ಸ್ಟೀನ್ ನಡುವಿನ ನಂಟು ಸುಮಾರು ಮೂರು ದಶಕಗಳಷ್ಟು ಹಳೆಯದು. 1990ರ ದಶಕದ ಆರಂಭದಲ್ಲಿ ನ್ಯೂಯಾರ್ಕ್ ಮತ್ತು ಫ್ಲೋರಿಡಾದ ಉನ್ನತ ವರ್ಗದ ಪಾರ್ಟಿಗಳಲ್ಲಿ ಇವರಿಬ್ಬರೂ ಆಗಾಗ ಕಾಣಿಸಿಕೊಳ್ಳುತ್ತಿದ್ದರು. 2002ರಲ್ಲಿ ನ್ಯೂಯಾರ್ಕ್ ಮ್ಯಾಗಜೀನ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಟ್ರಂಪ್ ಸ್ವತಃ ಹೀಗೆ ಹೇಳಿದ್ದರು: “ನಾನು ಜೆಫ್ರಿಯನ್ನು 15 ವರ್ಷಗಳಿಂದ ಬಲ್ಲೆ. ಆತ ಒಬ್ಬ ಅದ್ಭುತ ವ್ಯಕ್ತಿ. ಆತನೊಂದಿಗೆ ಇರುವುದು ತುಂಬಾ ಮಜಾ ನೀಡುತ್ತದೆ. ಆತನಿಗೆ ಸುಂದರ ಹೆಣ್ಣುಮಕ್ಕಳೆಂದರೆ ಇಷ್ಟ, ನನ್ನಂತೆಯೇ. ಅವರಲ್ಲಿ ಹೆಚ್ಚಿನವರು ತುಸು ಚಿಕ್ಕ ವಯಸ್ಸಿನವರು.”  ಈ ಒಂದು ಹೇಳಿಕೆ ಇಂದು ಟ್ರಂಪ್ ಅವರ ಬೆನ್ನಿಗೆ ಬಿದ್ದಿರುವ ದೊಡ್ಡ ಭೂತವಾಗಿದೆ. ಇಲ್ಲಿ “ಚಿಕ್ಕ ವಯಸ್ಸಿನವರು” ಎಂಬ ಪದದ ಬಳಕೆ ಎಪ್‌ಸ್ಟೀನ್‌ನ ಶಿಶುಕಾಮದ ಪ್ರವೃತ್ತಿಯನ್ನು ಟ್ರಂಪ್ ಮೊದಲೇ ಬಲ್ಲವರಾಗಿದ್ದರು ಎಂಬ ಸಂಶಯಕ್ಕೆ ಪುಷ್ಟಿ ನೀಡುತ್ತದೆ.

ಎಪ್‌ಸ್ಟೀನ್ ಫೈಲ್ಸ್ ಹೇಳುವ ಭಯಾನಕ ಸಂಗತಿಗಳು

ಇನ್ನು ಈ ಎಪ್‌ಸ್ಟೀನ್ ಫೈಲ್ಸ್ನ ದಾಖಲೆಗಳ ಪ್ರಕಾರ, ಎಪ್‌ಸ್ಟೀನ್ ತನ್ನ ಖಾಸಗಿ ದ್ವೀಪವಾದ ‘ಲಿಟಲ್ ಸೇಂಟ್ ಜೇಮ್ಸ್’ಗೆ ಯಾರನ್ನೆಲ್ಲಾ ಕರೆದೊಯ್ಯುತ್ತಿದ್ದ ಎಂಬ ಪಟ್ಟಿಗಳಿವೆ. ಈ ದ್ವೀಪವನ್ನು ಸ್ಥಳೀಯರು “ಪಾಪದ ದ್ವೀಪ” (Sin Island) ಅಥವಾ “ಶಿಶುಕಾಮಿಗಳ ದ್ವೀಪ” ಎಂದು ಕರೆಯುತ್ತಿದ್ದರು.

ಎಪ್‌ಸ್ಟೀನ್‌ನ ಖಾಸಗಿ ವಿಮಾನಕ್ಕೆ ‘ಲೋಲಿತ್‌ ಎಕ್ಸ್‌ಪ್ರೆಸ್’ ಎಂಬ ಹೆಸರಿತ್ತು. ಈ ವಿಮಾನದ ಲಾಗ್‌ಬುಕ್‌ಗಳಲ್ಲಿ (ಪ್ರಯಾಣಿಕರ ಪಟ್ಟಿ) ಟ್ರಂಪ್ ಅವರ ಹೆಸರು ಹಲವು ಬಾರಿ ಕಂಡುಬಂದಿದೆ. ಟ್ರಂಪ್ ಆತನ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದು ನಿಜವಾದರೂ, ಅವರು ಆ ದ್ವೀಪಕ್ಕೆ ಹೋಗಿದ್ದರೇ ಎಂಬ ಬಗ್ಗೆ ಸ್ಪಷ್ಟ ಸಾಕ್ಷ್ಯಗಳಿಲ್ಲ ಎಂದು ಟ್ರಂಪ್‌ ಬೆಂಬಲಿಗರು ವಾದಿಸುತ್ತಾರೆ.

ಇನ್ನು ಎಪ್‌ಸ್ಟೀನ್ ಜಾಲದಿಂದ ಬದುಕುಳಿದ ಕೆಲವು ಮಹಿಳೆಯರು ತಮ್ಮ ಹೇಳಿಕೆಗಳಲ್ಲಿ ಟ್ರಂಪ್ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ವರ್ಜೀನಿಯಾ ಗಿಯುಫ್ರೆ ಎಂಬ ಮುಖ್ಯ ಸಾಕ್ಷಿ, ಎಪ್‌ಸ್ಟೀನ್ ತನ್ನನ್ನು ಅನೇಕ ಪ್ರಭಾವಿ ವ್ಯಕ್ತಿಗಳ ಬಳಿ ಕಳುಹಿಸುತ್ತಿದ್ದ ಎಂದು ಹೇಳಿಕೊಂಡಿದ್ದಾಳೆ. ಎಪ್‌ಸ್ಟೀನ್ ತನ್ನ ಮಸಾಜ್ ಪಾರ್ಲರ್‌ಗಳಿಗೆ ಬೇಕಾದ ಬಾಲಕಿಯರನ್ನು ಟ್ರಂಪ್ ಅವರ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದವರ ಮೂಲಕವೇ ಸಂಪರ್ಕಿಸುತ್ತಿದ್ದ ಎಂಬ ಮಾಹಿತಿಯಿದೆ. ಬಾಲಕಿಯರನ್ನು “ಮಸಾಜ್” ನೀಡಲು ಕರೆಸಿಕೊಂಡು ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗುತ್ತಿತ್ತು ಎಂದು ಫೈಲ್ಸ್‌ಗಳು ವಿವರಿಸುತ್ತವೆ. 1990ರ ದಶಕದ ಪಾರ್ಟಿಗಳಲ್ಲಿ ಟ್ರಂಪ್‌ ಹಾಗೂ ಎಪ್‌ಸ್ಟೀನ್‌ ಅತಿ ಆಪ್ತವಾಗಿ ಇರುತ್ತಿದ್ದರು. ಟ್ರಂಪ್ ಒಮ್ಮೆ ಎಪ್‌ಸ್ಟೀನ್‌ನನ್ನು “ಲೈಫ್ ಆಫ್ ದ ಪಾರ್ಟಿ” ಎಂದು ಕರೆದಿದ್ದರು. 

ಇಂದು ಇಂಟರ್ನೆಟ್‌ನಲ್ಲಿ ಟ್ರಂಪ್ ಮತ್ತು ಎಪ್‌ಸ್ಟೀನ್ ಒಟ್ಟಿಗಿರುವ ಹತ್ತಾರು ಫೋಟೋಗಳು ಲಭ್ಯವಿವೆ. ಇವುಗಳಲ್ಲಿ ಕೆಲವು ಎಡಿಟ್ ಮಾಡಲಾದ (Deepfake) ಫೋಟೋಗಳಿರಬಹುದು, ಆದರೆ ಅನೇಕ ಫೋಟೋಗಳು ಅಪ್ಪಟ ಸತ್ಯ. 1992ರಲ್ಲಿ ಟ್ರಂಪ್ ಅವರ ಮಾರ್-ಎ-ಲಾಗೋ ಎಸ್ಟೇಟ್‌ನಲ್ಲಿ ನಡೆದ ಪಾರ್ಟಿಯ ವಿಡಿಯೋ ತುಣುಕುಗಳೂ ಲಭ್ಯವಿವೆ. ಅಲ್ಲಿ ಇಬ್ಬರೂ ನಗುತ್ತಾ, ಹೆಣ್ಣುಮಕ್ಕಳ ಬಗ್ಗೆ ಮಾತನಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. 

ಇತ್ತೀಚೆಗೆ CBS ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಅವರು ಎಪ್‌ಸ್ಟೀನ್ ಬಗ್ಗೆ ಮಾತನಾಡುತ್ತಾ, “ನಾನು ಆತನೊಂದಿಗೆ ಜಗಳವಾಡಿದ್ದೆ, ಹಾಗಾಗಿ ಸಂಬಂಧ ಕಡಿದುಕೊಂಡೆ” ಎಂದಿದ್ದರು. ಆದರೆ ಈ ‘ಜಗಳ’ ನಡೆದದ್ದು ಎಪ್‌ಸ್ಟೀನ್‌ನ ಅಪರಾಧಗಳ ಕಾರಣಕ್ಕಲ್ಲ, ಬದಲಿಗೆ ಫ್ಲೋರಿಡಾದಲ್ಲಿ ಒಂದು ಆಸ್ತಿ ಖರೀದಿ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬಂದಿದ್ದಕ್ಕೆ ಎಂದು ತಿಳಿದುಬಂದಿದೆ. ಅಂದರೆ, ಎಪ್‌ಸ್ಟೀನ್ ಮಾಡುತ್ತಿದ್ದ ಲೈಂಗಿಕ ಅಪರಾಧಗಳ ಬಗ್ಗೆ ಟ್ರಂಪ್‌ಗೆ ಯಾವುದೇ ಆಕ್ಷೇಪವಿರಲಿಲ್ಲ, ಬದಲಿಗೆ ವ್ಯವಹಾರದಲ್ಲಿ ಆದ ಲಾಭ-ನಷ್ಟದ ಕಾರಣಕ್ಕೆ ಅವರು ದೂರಾಗಿದ್ದರು ಎಂಬುದು ಈ ಮೂಲಕ ಸ್ಪಷ್ಟವಾಗುತ್ತದೆ.

ಎಪ್‌ಸ್ಟೀನ್‌ ಜೊತೆಗಿನ ಫೋಟೋಗಳಿಗೆ ಟ್ರಂಪ್ ಸಮರ್ಥನೆ ನೀಡುತ್ತಾ, “ನಾನು ಸಾವಿರಾರು ಜನರ ಜೊತೆ ಫೋಟೋ ತೆಗೆಸಿಕೊಳ್ಳುತ್ತೇನೆ, ಅದರಲ್ಲಿ ಆತನೂ ಒಬ್ಬ” ಎಂದು ಹೇಳುತ್ತಾರೆ. ಆದರೆ, ಕೇವಲ ಫೋಟೋಗಳಿಗಿಂತ ಹೆಚ್ಚಾಗಿ, ಇವರಿಬ್ಬರ ನಡುವೆ ಇದ್ದ ವ್ಯವಹಾರಿಕ ಮತ್ತು ಸಾಮಾಜಿಕ ನಂಟು ಫೋಟೋಗಳನ್ನು ಮೀರಿಸುವಂತದ್ದು. ಎಪ್‌ಸ್ಟೀನ್ ಜೊತೆಗಿದ್ದ ಫೋಟೋಗಳನ್ನು ಟ್ರಂಪ್ ಸುಳ್ಳು ಎಂದು ಹೇಳಲು ಸಾಧ್ಯವಿಲ್ಲದ ಕಾರಣ, ಅವರು ಈಗ ಆತನೊಂದಿಗೆ ತನಗೆ ಜಗಳವಾಗಿತ್ತು ಮತ್ತು ಹಲವು ವರ್ಷಗಳಿಂದ ಮಾತಿಲ್ಲ ಎಂಬ ಇನ್ನೊಂದು ತಂತ್ರವನ್ನು ಬಳಸುತ್ತಿದ್ದಾರೆ.

ಟ್ರಂಪ್ ರೇಗಾಡಿದ್ದರ ಹಿಂದಿನ ಅಸಲಿ ಕಾರಣವೇನು?

ಪತ್ರಕರ್ತೆ, ದಾಳಿಕೋರ ಅಲೆನ್‌ನ ಪತ್ರವನ್ನು ಓದಿದಾಗ ಟ್ರಂಪ್ “ನಾನು ಶಿಶುಕಾಮಿಯಲ್ಲ, ನೀವು ಆತ ಬರೆದ ಪತ್ರವನ್ನ ಓದುತ್ತೀರಿ ಅಂತ ಗೊತ್ತಿತ್ತು. ನೀವೇಲ್ಲಾ ಕೆಟ್ಟ ಜನ” ಎಂದು ಮಾಧ್ಯಮಗಳ ಮೇಲೆ ಹರಿಹಾಯ್ದಿರುವುದು ಅನುಮಾನಗಳಿಗೂ ಕಾರಣವಾಗಿದೆ.  ಒಬ್ಬ ವ್ಯಕ್ತಿ ತಾನು ಮಾಡದ ತಪ್ಪಿನ ಬಗ್ಗೆ ಇಷ್ಟೊಂದು ತೀವ್ರವಾಗಿ ಮತ್ತು ಅಸಂಬದ್ಧವಾಗಿ ಪ್ರತಿಕ್ರಿಯಿಸುತ್ತಿದ್ದಾನೆ ಎಂದರೆ, ಅಲ್ಲಿ ಏನೋ ಮುಚ್ಚಿಡುವ ಪ್ರಯತ್ನ ನಡೆಯುತ್ತಿದೆ ಎಂಬ ಸಂಶಯ ಬರುವುದು ಸಹಜ. ಟ್ರಂಪ್ ಅವರ ಈ ವರ್ತನೆಯು “ನಾನು ಶಿಶುಕಾಮಿಯಲ್ಲ” ಎಂಬ ಸಮರ್ಥನೆಯ ಬದಲು, “ನನ್ನ ಹಳೆಯ ರಹಸ್ಯಗಳು ನೀವು ಕೆದಕಬಾರದು” ಎಂಬ ಆತಂಕದಂತೆ ಭಾಸವಾಗುತ್ತಿದೆ. ಎಪ್‌ಸ್ಟೀನ್ ಫೈಲ್ಸ್ ಅವರ ಇಮೇಜ್‌ಗೆ ಎಷ್ಟು ದೊಡ್ಡ ಹೊಡೆತ ನೀಡಿದೆ ಎಂಬುದನ್ನು ಸಾಬೀತುಪಡಿಸುತ್ತದೆ. 

ದಾಳಿಕೋರ ಅಲೆನ್ ಸೋಮವಾರ ಫೆಡರಲ್ ಕೋರ್ಟ್‌ಗೆ ಹಾಜರಾದಾಗ, ಆತನ ಉದ್ದೇಶ ಕೇವಲ ಹತ್ಯೆಯಾಗಿರಲಿಲ್ಲ, ಬದಲಿಗೆ ಟ್ರಂಪ್ ಅವರ ‘ಅಸಲಿ ಮುಖ’ವನ್ನು ಜಗತ್ತಿಗೆ ತೋರಿಸುವುದಾಗಿತ್ತು ಎಂದು ತನಿಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ತನಿಖಾಧಿಕಾರಿಗಳು ಪರಿಶೀಲಿಸುತ್ತಿರುವ ಪತ್ರವು ಎಪ್‌ಸ್ಟೀನ್ ಫೈಲ್ಸ್‌ನಲ್ಲಿರುವ ಹೆಸರುಗಳು ಮತ್ತು ಟ್ರಂಪ್ ಅವರ ನಂಟಿನ ಬಗ್ಗೆ ಹೊಸ ಸಾಕ್ಷ್ಯಗಳನ್ನು ಹೊಂದಿರಬಹುದೇ ಎಂಬ ಕುತೂಹಲವನ್ನ ಮೂಡಿಸಿದೆ. ಇನ್ನು ಈ ಫೈಲ್ಸ್ ಕೇವಲ ಟ್ರಂಪ್ ಅವರಿಗೆ ಮಾತ್ರ ಸೀಮಿತವಾಗಿಲ್ಲ. ಇದರಲ್ಲಿ ಬ್ರಿಟನ್‌ನ ರಾಜಕುಮಾರ ಆಂಡ್ರ್ಯೂ, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಮೋದಿ ಸೇರಿದಂತೆ ಹಲವರ ಹೆಸರುಗಳಿವೆ. ಆದರೆ ಟ್ರಂಪ್ ಈಗ ಅಧಿಕಾರದಲ್ಲಿ ಇರುವುದರಿಂದ ಮತ್ತು ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಈ ವಿಷಯ ಹೆಚ್ಚು ಚರ್ಚೆಯಾಗುತ್ತಿದೆ. 

1 69

ಎಪ್‌ಸ್ಟೀನ್ ಫೈಲ್ಸ್ ಎಂಬುದು ಒಂದು ಹೂತುಹಾಕಲ್ಪಟ್ಟ ಸತ್ಯದ ಭಂಡಾರ. ಡೊನಾಲ್ಡ್ ಟ್ರಂಪ್ ಅವರು ಈ ಸುಳಿಯಿಂದ ಹೊರಬರಲು ಎಷ್ಟೇ ಪ್ರಯತ್ನಿಸಿದರೂ, ಇತಿಹಾಸದ ಪುಟಗಳಲ್ಲಿ ದಾಖಲಾದ ಸಾಕ್ಷ್ಯಗಳು ಅವರನ್ನು ಬೆಂಬಿಡದೆ ಕಾಡುತ್ತಿವೆ. ಟ್ರಂಪ್ ಅವರ ಫೋಟೋಗಳು ಸುಳ್ಳಲ್ಲ, ಅವರ ಸ್ನೇಹವೂ ಸುಳ್ಳಲ್ಲ. ಆದರೆ ಆ ಸ್ನೇಹದ ಆಳದಲ್ಲಿ ನಡೆದಿದೆ ಎನ್ನಲಾದ ಕೃತ್ಯಗಳೇನು ಎಂಬುದು ಇಂದಿಗೂ ರಹಸ್ಯವಾಗಿದೆ. “ನಾನು ಅತ್ಯಾಚಾರಿ ಅಲ್ಲ” ಎಂಬ ಅವರ ಕಿರುಚಾಟವು ನ್ಯಾಯಾಲಯದ ದಾಖಲೆಗಳ ಮುಂದೆ ಎಷ್ಟು ಕಾಲ ನಿಲ್ಲಬಲ್ಲದು ಎಂಬುದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ. ಟ್ರಂಪ್‌ ಅವರ ರೇಗಾಟ, ಕೂಗಾಟ ಅವರ ಹತಾಶೆಯನ್ನು ತೋರಿಸುತ್ತದೆಯೇ ಹೊರತು ಅವರ ನಿರಪರಾಧಿತ್ವವನ್ನಲ್ಲ. 

ತನಿಖಾಧಿಕಾರಿಗಳು ಅಲೆನ್‌ನ ಪತ್ರವನ್ನು ಪರಿಶೀಲಿಸುತ್ತಿರುವ ಬೆನ್ನಲ್ಲೇ, ಎಪ್‌ಸ್ಟೀನ್ ಫೈಲ್ಸ್‌ನಿಂದ ಹೊಸ ಪುಟಗಳು ತೆರೆದುಕೊಳ್ಳುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಎಪ್‌ಸ್ಟೀನ್ ಎಂಬ ಕರಾಳ ನೆರಳು ಟ್ರಂಪ್ ಅವರನ್ನು ಬಿಟ್ಟು ಹೋಗುವ ಲಕ್ಷಣಗಳು ಕಾಣಿಸುತ್ತಿಲ್ಲ. 

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಜಯಭೇರಿ

ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರ ಪಶ್ಚಿಮ...

ಯುಪಿ ಚುನಾವಣೆ | ಮತದಾರರ ಮನಗೆಲ್ಲಲು ಯೋಗಿ ಸಂಪುಟದ ಮೆಗಾ ಪ್ಲ್ಯಾನ್; ಹಸು ಖರೀದಿಗೆ ಸಬ್ಸಿಡಿ, ಉಚಿತ ಕೋಳಿ ಮರಿ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ (2027ರ ಫೆಬ್ರವರಿ–ಮಾರ್ಚ್‌ನಲ್ಲಿ ನಡೆಯುವ ನಿರೀಕ್ಷೆಯಿದೆ)...

ಬ್ರೆಜಿಲ್‌ ಚುನಾವಣೆ | ಸೋಲುಂಡ ಬೆನ್ನಲ್ಲೇ‌ ಪ್ಲೇವಿಯೋ ಬೊಲ್ಸೊನಾರೊ ಅಮೆರಿಕಗೆ ಪಲಾಯನ!

ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರ ಪುತ್ರ, ಹಾಲಿ ಸೆನೆಟರ್...

ಕಲಬುರಗಿ | ಎಸ್ಐಆರ್ ಅಂತಿಮ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 18,94,144 ಮತದಾರರು:

ರಾಜ್ಯದಲ್ಲಿ ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (ಎಸ್ಐಆರ್) ಚುನಾವಣಾ ಆಯೋಗದ...