ಪ್ಯಾಲೆಸ್ತೀನ್ ಮಕ್ಕಳ ನರಮೇಧ: ಇಸ್ರೇಲ್‌ ಕುತಂತ್ರ ಬೆತ್ತಲೆ ಮಾಡಿದ ನ್ಯಾ. ಎಸ್ ಮುರಳೀಧರ್ ಯಾರು?

Date:

ಪ್ಯಾಲೆಸ್ತೀನಿ ಮಕ್ಕಳ ನರಮೇಧ ಕುರಿತು ಅತ್ಯಂತ ದಿಟ್ಟ ವರದಿಯನ್ನು ಭಾರತೀಯ ನ್ಯಾಯಮೂರ್ತಿ ಎಸ್ ಮುರಳೀಧರ್ ನೀಡಿದ್ದಾರೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ದೆಹಲಿ ಕೋಮುಗಲಭೆಗಳ ಕುರಿತು ಮಧ್ಯರಾತ್ರಿ ವಿಚಾರಣೆ ನಡೆಸಿ ಆದೇಶ ನೀಡಿದ್ದವರು ಮುರಳೀಧರ್. ಈ ಹಿಂದೆ ಮುರಳೀಧರ್ ಅವರಿಗೆ ಸಿಗಬೇಕಿದ್ದ ಸುಪ್ರೀಂ ಕೋರ್ಟ್ ಬಡ್ತಿಯನ್ನು ಮೋದಿ ಸರ್ಕಾರ ತಪ್ಪಿಸಿತ್ತು.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಸ್ವತಂತ್ರ ಅಂತಾರಾಷ್ಟ್ರೀಯ ತನಿಖಾ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡಿರುವ ಭಾರತದ ನಿವೃತ್ತ ನ್ಯಾಯಮೂರ್ತಿ ಎಸ್ ಮುರಳೀಧರ್ ಇತ್ತೀಚೆಗೆ ಜಿನೆವಾದಲ್ಲಿ ಅತ್ಯಂತ ಆಘಾತಕಾರಿ ಮತ್ತು ದಿಟ್ಟ ವರದಿಯೊಂದನ್ನು ಮಂಡಿಸಿದ್ದಾರೆ. ಪ್ಯಾಲೆಸ್ತೀನ್ ಮಕ್ಕಳ ನರಮೇಧದ ಹಿಂದೆ ಇಸ್ರೇಲ್ ಹೆಣೆದಿರುವ ಕುತಂತ್ರವನ್ನು ಮುರಳೀಧರ್ ನೀಡಿರುವ ವರದಿಯು ಬೆತ್ತಲೆ ಮಾಡಿದೆ.

- Advertisement -

ಇಸ್ರೇಲ್ ಮಿಲಿಟರಿ ಪಡೆಗಳು ಗಾಜಾ ಪಟ್ಟಿ ಮತ್ತು ವೆಸ್ಟ್ ಬ್ಯಾಂಕ್‌ನಲ್ಲಿ ಪ್ಯಾಲೆಸ್ತೀನ್ ಮಕ್ಕಳನ್ನು “ಉದ್ದೇಶಪೂರ್ವಕವಾಗಿ ಗುರಿಪಡಿಸಿ ಕೊಂದಿವೆ” ಎಂದು ವರದಿ ಬಹಿರಂಗಪಡಿಸಿದೆ. ಎರಡು ವರ್ಷಗಳ ಅವಧಿಯಲ್ಲಿ 20,000ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದು, 44,000ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ. ಇದು ಕೇವಲ ಯುದ್ಧದ ಅಡ್ಡಪರಿಣಾಮವಲ್ಲ, ಬದಲಿಗೆ ವ್ಯವಸ್ಥಿತ ನರಮೇಧವಾಗಿದೆ ಎಂದು ಭಾರತೀಯ ಮೂಲದ ನ್ಯಾಯಮೂರ್ತಿ ಎಸ್ ಮುರಳೀಧರ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಇದನ್ನೂ ಓದಿ: ಇಸ್ರೇಲ್ ಕ್ರೌರ್ಯ: ಗಾಜಾದಲ್ಲಿ 20, 179 ಮಕ್ಕಳು ಸಾವು; ಹಸಿದು ಬಳಲಿರುವ 12 ಲಕ್ಷ ಮಕ್ಕಳು

ಈ ವರದಿಯು ಇಸ್ರೇಲ್ ನಡೆಸಿದ ಮಕ್ಕಳ ನರಮೇಧದ ಅತ್ಯಂತ ಭೀಕರ ಸ್ವರೂಪವನ್ನು ಬಹಿರಂಗಪಡಿಸಿದೆ. ಸ್ನೈಪರ್ ರೈಫಲ್‌ಗಳು ಮತ್ತು ಸುಧಾರಿತ ಡ್ರೋನ್‌ಗಳ ಮೂಲಕ ಮಕ್ಕಳ ತಲೆ ಮತ್ತು ಕುತ್ತಿಗೆಯ ಭಾಗಕ್ಕೆ ನೇರವಾಗಿ ಶೂಟ್ ಮಾಡಿ ಕೊಲ್ಲಲಾಗಿರುವ ಸಾಕ್ಷ್ಯಗಳನ್ನೂ ವರದಿ ಒಳಗೊಂಡಿದೆ. ಆಸ್ಪತ್ರೆಗಳು, ಶಾಲೆಗಳು ಹಾಗೂ ಪ್ರಸೂತಿ ಕೇಂದ್ರಗಳ ಮೇಲಿನ ದಾಳಿಯು ಆ ಸಮುದಾಯದ ಭವಿಷ್ಯವನ್ನೇ ನಾಶಮಾಡುವ ಯತ್ನ ಎಂದು ಮುರಳೀಧರ್ ನೇತೃತ್ವದ ಸಮಿತಿ ವರದಿ ಮಾಡಿದೆ.

ನ್ಯಾಯಮೂರ್ತಿ ಎಸ್ ಮುರಳೀಧರ್ ಯಾರು?

ನ್ಯಾಯಮೂರ್ತಿ ಎಸ್. ಮುರಳೀಧರ್ ಅವರು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದವರು. ಅವರ ಆರಂಭಿಕ ವಿದ್ಯಾಭ್ಯಾಸವೆಲ್ಲವೂ ಚೆನ್ನೈನಲ್ಲೇ ನಡೆದಿದೆ. 1981ರಲ್ಲಿ ಚೆನ್ನೈನ ವಿವೇಕಾನಂದ ಕಾಲೇಜಿನಿಂದ ರಸಾಯನಶಾಸ್ತ್ರ ವಿಷಯದಲ್ಲಿ ಪ್ರಥಮ ದರ್ಜೆಯಲ್ಲಿ ಬಿ.ಎಸ್ಸಿ (B.Sc.) ಪದವಿ ಪಡೆದ ಮುರಳೀಧರ್, 1984ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಪ್ರಥಮ ರ‍್ಯಾಂಕ್‌ನೊಂದಿಗೆ ಬಿ.ಎಲ್. ಪದವಿ ಮುಗಿಸಿದ್ದಾರೆ.

ವಿದ್ಯಾರ್ಥಿಯಾಗಿದ್ದಾಗಲೇ ಅವರು ಪ್ರತಿಷ್ಠಿತ ‘ಫಿಲಿಪ್ ಸಿ. ಜೆಸ್ಸಪ್ ಅಂತಾರಾಷ್ಟ್ರೀಯ ಮೂಟ್ ಕೋರ್ಟ್’ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 1990ರಲ್ಲಿ ನಾಗ್ಪುರ ವಿಶ್ವವಿದ್ಯಾಲಯದಿಂದ ಸಾಂವಿಧಾನಿಕ ಮತ್ತು ಆಡಳಿತಾತ್ಮಕ ಕಾನೂನು ವಿಷಯದಲ್ಲಿ ಎಲ್.ಎಲ್.ಎಮ್. ಪದವಿಯನ್ನು ಪ್ರಥಮ ರ‍್ಯಾಂಕ್‌ನೊಂದಿಗೆ ತೇರ್ಗಡೆಯಾಗಿದ್ದಾರೆ. 2003ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ “ಭಾರತದಲ್ಲಿ ಕಾನೂನು ನೆರವು ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆ” ಎಂಬ ವಿಷಯದ ಸಂಶೋಧನೆಗಾಗಿ ಪಿಎಚ್.ಡಿ ಪದವಿ ಪಡೆದಿದ್ದಾರೆ.

1984ರ ಸೆಪ್ಟೆಂಬರ್‌ನಲ್ಲಿ ಚೆನ್ನೈನಲ್ಲಿ ವಕೀಲಿ ವೃತ್ತಿ ಆರಂಭಿಸಿದ ಮುರಳೀಧರ್, ನಂತರ 1987ರಲ್ಲಿ ದೆಹಲಿಗೆ ತೆರಳಿ ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್‌ಗಳಲ್ಲಿ ಪ್ರಾಕ್ಟೀಸ್ ಆರಂಭಿಸಿದರು. ದೆಹಲಿಯಲ್ಲಿ ಭಾರತದ ಮಾಜಿ ಅಟಾರ್ನಿ ಜನರಲ್ ಜಿ. ರಾಮಸ್ವಾಮಿ ಅವರ ಕೈಕೆಳಗೆ ಜೂನಿಯರ್ ಆಗಿ ಕೆಲಸ ಮಾಡಿದ್ದಾರೆ. ಹಣವಿಲ್ಲದ ಬಡವರಿಗಾಗಿ ಮತ್ತು ಸಾಮಾಜಿಕ ಕಾಳಜಿಯ ಪ್ರಕರಣಗಳಿಗಾಗಿ ಅವರು ಸಾಕಷ್ಟು ಶ್ರಮಿಸಿದವರು ಮುರಳೀಧರ್. ಭೋಪಾಲ್ ಅನಿಲ ದುರಂತದ ಸಂತ್ರಸ್ತರ ಪರವಾಗಿ ಹಾಗೂ ನರ್ಮದಾ ನದಿ ಅಣೆಕಟ್ಟು ಯೋಜನೆಯಿಂದ ನಿರ್ವಸಿತರಾದ ಜನರಿಗಾಗಿ ಅವರು ಉಚಿತವಾಗಿ ಕಾನೂನು ಹೋರಾಟ ನಡೆಸಿದ್ದರು.

ಭಾರತೀಯ ಚುನಾವಣಾ ಆಯೋಗ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (NHRC) ಪರವಾಗಿಯೂ ವಕೀಲರಾಗಿ ಕಾರ್ಯನಿರ್ವಹಿಸಿದ್ದರು. 2002 ರಿಂದ 2006 ರವರೆಗೆ ಭಾರತದ ಕಾನೂನು ಆಯೋಗದ ಅರೆಕಾಲಿಕ ಸದಸ್ಯರಾಗಿದ್ದರು. 2006ರ ಮೇ ತಿಂಗಳಲ್ಲಿ ಎಸ್. ಮುರಳೀಧರ್ ಅವರನ್ನು ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಿಸಲಾಗಿತ್ತು. ಅಲ್ಲಿ ಅವರು ಸುಮಾರು 14 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಕೋರ್ಟ್‌ಗಳಲ್ಲಿ ಬ್ರಿಟಿಷ್ ಕಾಲದ “ಮೈ ಲಾರ್ಡ್” ಅಥವಾ “ಯುವರ್ ಲಾರ್ಡ್‌ಶಿಪ್” ಎಂದು ನ್ಯಾಯಾಧೀಶರನ್ನು ಕರೆಯುವುದನ್ನು ತಪ್ಪಿಸುವಂತೆ ವಕೀಲರಲ್ಲಿ ಅಧಿಕೃತವಾಗಿ ವಿನಂತಿಸಿಕೊಂಡು ಸರಳತೆಗೆ ಹೆಸರಾಗಿದವರು ಮುರಳೀಧರ್.

ಇದನ್ನೂ ಓದಿ: ಗಾಜಾ ಮಕ್ಕಳ ಮೇಲಿನ ಇಸ್ರೇಲ್ ದಾಳಿ ‘ನರಮೇಧ’ಕ್ಕೆ ಸಮ: ವಿಶ್ವಸಂಸ್ಥೆ ವರದಿ

ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು. 2021ರ ಜನವರಿಯಲ್ಲಿ ಅವರು ಒಡಿಶಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಲ್ಲಿ ನ್ಯಾಯಾಂಗ ವ್ಯವಸ್ಥೆಯ ಡಿಜಿಟಲೀಕರಣ ಮತ್ತು ರೆಕಾರ್ಡ್‌ಗಳ ಆಧುನೀಕರಣಕ್ಕೆ ದೊಡ್ಡ ಕ್ರಾಂತಿ ಮಾಡಿದರು. 2023ರ ಆಗಸ್ಟ್‌ನಲ್ಲಿ ಅವರು ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾದರು. ನಿವೃತ್ತಿಯ ನಂತರ, ಅವರ ನಿಷ್ಪಕ್ಷಪಾತ ತನಿಖಾ ಶೈಲಿ ಮತ್ತು ಮಾನವ ಹಕ್ಕುಗಳ ಮೇಲಿನ ಬದ್ಧತೆಯನ್ನು ಗುರುತಿಸಿ ವಿಶ್ವಸಂಸ್ಥೆಯು ಅವರನ್ನು ಅಂತಾರಾಷ್ಟ್ರೀಯ ತನಿಖಾ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಿದೆ.

ದೆಹಲಿ ಕೋಮು ಗಲಭೆ: ಮಧ್ಯರಾತ್ರಿ ವಿಚಾರಣೆ ನಡೆಸಿ ಐತಿಹಾಸಿಕ ಆದೇಶ

2020ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ಭೀಕರ ಕೋಮು ಗಲಭೆಗಳು ಭುಗಿಲೆದ್ದಾಗ ನ್ಯಾಯಮೂರ್ತಿ ಮುರಳೀಧರ್ ಅವರು ದೆಹಲಿ ಹೈಕೋರ್ಟ್‌ನ ಹಿರಿಯ ನ್ಯಾಯಾಧೀಶರಾಗಿದ್ದರು. ಗಲಭೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನೂರಾರು ಜನರನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸಲು ಪೊಲೀಸರು ವಿಫಲರಾಗಿದ್ದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ನ್ಯಾಯಮೂರ್ತಿ ಮುರಳೀಧರ್, 2020ರ ಫೆಬ್ರವರಿ 26ರ ಮಧ್ಯರಾತ್ರಿ 12:30ಕ್ಕೆ ತಮ್ಮ ಸ್ವಗೃಹದಲ್ಲೇ ತುರ್ತು ವಿಚಾರಣೆ ನಡೆಸಿದ್ದರು.

ಗಲಭೆ ಪೀಡಿತ ಮುಸ್ತಫಾಬಾದ್‌ನ ಅಲ್-ಹಿಂದ್ ಆಸ್ಪತ್ರೆಯಲ್ಲಿ ಸಿಲುಕಿದ್ದ ಗಾಯಾಳುಗಳಿಗೆ ತಕ್ಷಣವೇ ಸೂಕ್ತ ಪೊಲೀಸ್ ರಕ್ಷಣೆ ನೀಡಿ, ಜಿಟಿಬಿ ಆಸ್ಪತ್ರೆಗೆ ಸುರಕ್ಷಿತವಾಗಿ ಸ್ಥಳಾಂತರಿಸಬೇಕು ಎಂದು ದೆಹಲಿ ಪೊಲೀಸರಿಗೆ ಖಡಕ್ ಆದೇಶ ನೀಡಿದ್ದರು. ಈ ಆದೇಶದಿಂದಾಗಿ ಅಂದು ಹಲವು ಅಮೂಲ್ಯ ಜೀವಗಳು ಉಳಿದವು.

ಮರುದಿನ ಮಧ್ಯಾಹ್ನ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಸಿದ ಅವರು, ಪ್ರಚೋದನಾಕಾರಿ ದ್ವೇಷ ಭಾಷಣ ಮಾಡಿದ ಬಿಜೆಪಿ ನಾಯಕರಾದ ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್ ಮುಂತಾದವರ ವಿರುದ್ಧ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡುತ್ತಿದ್ದ ದೆಹಲಿ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. “ನಮ್ಮ ಕಣ್ಣೆದುರೇ ಮತ್ತೊಂದು 1984ರ ಸಿಖ್ ವಿರೋಧಿ ದಂಗೆಯಂತಹ ಘಟನೆ ಮರುಕಳಿಸಲು ಬಿಡುವುದಿಲ್ಲ” ಎಂದು ಎಚ್ಚರಿಸಿದ್ದರು.

ಸುಪ್ರೀಂ ಕೋರ್ಟ್ ಬಡ್ತಿಯನ್ನು ಮೋದಿ ಸರ್ಕಾರ ತಪ್ಪಿಸಿದ್ದೇಕೆ?

ದೆಹಲಿ ಗಲಭೆ ಪ್ರಕರಣದಲ್ಲಿ ಪೊಲೀಸರು ಮತ್ತು ಬಿಜೆಪಿ ಸರ್ಕಾರದ ವೈಫಲ್ಯವನ್ನು ತರಾಟೆಗೆ ತೆಗೆದುಕೊಂಡ ಅದೇ ದಿನದ ಮಧ್ಯರಾತ್ರಿ ಅಂದರೆ 2020ರ ಫೆಬ್ರವರಿ 26ರಂದು ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಅವರನ್ನು ತರಾತುರಿಯಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಈ ಹಠಾತ್ ವರ್ಗಾವಣೆಯು ನ್ಯಾಯಾಂಗ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ಈ ವರ್ಗಾವಣೆಯು ಸರ್ಕಾರದ ‘ದಕ್ಕಿಸಿಕೊಳ್ಳುವ ಮತ್ತು ದಂಡಿಸುವ ಕ್ರಮ’ (Punitive Strike) ಎಂದು ಖಂಡಿಸಿ ಪ್ರತಿಭಟಿಸಿತ್ತು.

ನ್ಯಾಯಮೂರ್ತಿ ಮುರಳೀಧರ್ ಅವರ ಹಿರಿತನ, ಪ್ರಾಮಾಣಿಕತೆ ಮತ್ತು ತೀರ್ಪುಗಳ ಗುಣಮಟ್ಟವನ್ನು ಪರಿಗಣಿಸಿದರೆ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಬೇಕಾಗಿತ್ತು. 2022ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಅವರನ್ನು ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾಯಿಸಲು ಶಿಫಾರಸು ಮಾಡಿತಾದರೂ, ಕೇಂದ್ರ ಸರ್ಕಾರವು ಆ ಫೈಲ್ ಅನ್ನು ತಿಂಗಳುಗಟ್ಟಲೆ ತಡೆಹಿಡಿಯಿತು. ಮೋದಿ ಸರ್ಕಾರದ ತೀವ್ರ ಅಸಹಕಾರದಿಂದಾಗಿ ಕೊಲಿಜಿಯಂ ಅಂತಿಮವಾಗಿ ಆ ಶಿಫಾರಸನ್ನು ಹಿಂಪಡೆಯಬೇಕಾಯಿತು. ಸರ್ಕಾರದ ಈ ನಿರಂತರ ಉದ್ದೇಶಿತ ಉಪೇಕ್ಷೆಯಿಂದಾಗಿ ಅವರು ಸುಪ್ರೀಂ ಕೋರ್ಟ್‌ನ ಬಡ್ತಿ ಪಡೆಯದೆಯೇ ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾಗಬೇಕಾಯಿತು.

ಒಡಿಶಾ ಹೈಕೋರ್ಟ್ ನೀಡಿದ ಸ್ಮರಣೀಯ ಬೀಳ್ಕೊಡುಗೆ

ಒಡಿಶಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಅವರು ಇಡೀ ರಾಜ್ಯದ ನ್ಯಾಯಾಂಗ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಿದರು. ಹಾಗೆಯೇ ಜನಸಾಮಾನ್ಯರಿಗೆ ನ್ಯಾಯದಾನ ಸುಲಭವಾಗುವಂತೆ ಮಾಡಿದರು. 2023ರ ಆಗಸ್ಟ್‌ನಲ್ಲಿ ಅವರು ನಿವೃತ್ತರಾದಾಗ ಒಡಿಶಾದ ನ್ಯಾಯವಾದಿಗಳು ಮತ್ತು ಸಾರ್ವಜನಿಕರು ನೀಡಿದ ಬೀಳ್ಕೊಡುಗೆ ಭಾರತೀಯ ನ್ಯಾಯಾಂಗ ಇತಿಹಾಸದಲ್ಲೇ ಅಭೂತಪೂರ್ವವಾದದ್ದಾಗಿತ್ತು.

ಇದನ್ನೂ ಓದಿ: ಇಸ್ರೇಲ್ ಸಾರಿದ ಕೃತ್ರಿಮ ಕದನವಿರಾಮ-ಪ್ಯಾಲೆಸ್ತೀನಿಯರ ಅಗೋಚರ ನರಮೇಧ ನಿತ್ಯ ನಿರಂತರ!

ಸಾಮಾನ್ಯವಾಗಿ ನ್ಯಾಯಾಧೀಶರ ನಿವೃತ್ತಿ ಕಾರ್ಯಕ್ರಮಗಳು ಕೋರ್ಟ್ ಹಾಲ್‌ನ ಒಳಗಡೆಗೆ ಸೀಮಿತವಾಗಿರುತ್ತವೆ. ಆದರೆ ಮುರಳೀಧರ್ ಅವರ ನಿವೃತ್ತಿಯ ದಿನ, ನೂರಾರು ವಕೀಲರು, ಕೋರ್ಟ್ ಸಿಬ್ಬಂದಿ ಮತ್ತು ಸಾರ್ವಜನಿಕರು ನ್ಯಾಯಾಲಯದ ಒಳಗಿನಿಂದ ಹಿಡಿದು ಹೊರಗಿನ ರಸ್ತೆಯವರೆಗೂ ನಡುರಸ್ತೆಯಲ್ಲಿ ಸಾಲಾಗಿ ನಿಂತು (Human Chain) ಅವರಿಗೆ ಹಸ್ತಲಾಘವ ನೀಡುತ್ತಾ, ಕಣ್ಣೀರು ಹಾಕುತ್ತಾ ಗೌರವ ಸಲ್ಲಿಸಿದರು.

ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಸಹ ನ್ಯಾಯಮೂರ್ತಿಗಳು, “ಮುರಳೀಧರ್ ಅವರು ಕೇವಲ ಆಡಳಿತ ಮತ್ತು ನ್ಯಾಯದಾನದಲ್ಲಿ ಅಷ್ಟೇ ಅಲ್ಲ, ಹೃದಯವಂತಿಕೆಯಲ್ಲಿ ಅಪ್ರತಿಮರು. ಅವರು ಕೇವಲ ಗೌರವಕ್ಕೆ ಮಾತ್ರವಲ್ಲ, ನಮ್ಮ ಆರಾಧನೆಗೆ ಅರ್ಹರು” ಎಂದು ಬಣ್ಣಿಸಿದ್ದರು.

ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಮತ್ತು ತಾರತಮ್ಯದ ವಿರುದ್ಧ ದನಿ ಎತ್ತುವ ಅವರ ಗುಣವೇ ಇಂದು ಜಾಗತಿಕ ಮಟ್ಟದಲ್ಲಿ ವಿಶ್ವಸಂಸ್ಥೆಯು ಇಸ್ರೇಲ್‌ನಂತಹ ಮಿಲಿಟರಿ ಶಕ್ತಿಯ ವಿರುದ್ಧ ತನಿಖೆ ನಡೆಸುವ ಜವಾಬ್ದಾರಿಯನ್ನು ಅವರಿಗೆ ನೀಡಲು ಪ್ರಮುಖ ಕಾರಣವಾಗಿದೆ. ಆ ಹೊಣೆಯನ್ನು ದಿಟ್ಟವಾಗಿ ನಿರ್ವಹಿಸಿದವರು ಮುರಳೀಧರ್.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...