ಹಾಸನ ಮಣ್ಣಿನ ಹೆಣ್ಣು ದನಿಗಳು | ಚಿತ್ರಕಲಾ ಕ್ಷೇತ್ರದಲ್ಲಿ ಜಿಲ್ಲೆಯ ಕಲಾವಿದೆಯರು

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…

ಹೊಯ್ಸಳ ಶಿಲ್ಪಕಲೆ- ಮಂತ್ರ ಮುಗ್ಧಗೊಳಿಸುವ, ವಿಸ್ಮಯಗೊಳಿಸುವ ವಾಸ್ತು ಶಿಲ್ಪಕಲೆ. ಚಿತ್ರಕಲೆ ಮತ್ತು ಶಿಲ್ಪಕಲೆ ವಸ್ತುಗಳು ಬೇರೆಯಾದರೂ ರೇಖೆ ಆಕಾರ ಆಕೃತಿಗಳನ್ನು ಸೃಷ್ಟಿಸುವಲ್ಲಿ ಮೂಲ ರೇಖೆಯ ಪ್ರಮಾಣ ಬದ್ಧತೆಯಿಂದ ಬಹು ಆಯಾಮ ಸೃಷ್ಟಿಸುವಲ್ಲಿ ಯಶಸ್ವಿಯಾಗಿವೆ. ಸಾವಿರಾರು ವರ್ಷಗಳ ಹಿಂದೆಯೇ ಹಾಸನ ಮಣ್ಣಿನಲ್ಲಿ ಬದುಕಿದ ಅನೇಕ ಕಲಾವಿದರು ಕೌಶಲ್ಯ ಕ್ರಿಯಾಶೀಲತೆಯ ನೈಪುಣ್ಯತೆಯನ್ನು ಗಳಿಸಿದ್ದರು. ಅದರ ಸಾಕ್ಷಿಯಾಗಿ ಹೊಯ್ಸಳ ಶೈಲಿಯಲ್ಲಿ ನಿರ್ಮಾಣವಾದ ದೇಗುಲಗಳಾದ ಬೇಲೂರು ಹಳೇಬೀಡು ಮತ್ತು ಅದೇ ರೀತಿಯಲ್ಲಿ ನಿರ್ಮಾಣವಾದ 200ಕ್ಕೂ ಹೆಚ್ಚು ಹೊಯ್ಸಳ ದೇಗುಲಗಳು ಶತ ಶತಮಾನಗಳಿಂದ ತಲೆ ಎತ್ತಿ ನಿಂತಿವೆ. ಇಂಥ ಸೂಕ್ಷ್ಮತೆಯಿಂದ ನವಿರಾಗಿ ಮೂಡಿಸಿದ ಕೆತ್ತನೆ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ, ತ್ಯಾಗದ ಸಂಕೇತವಾಗಿ ನಿಂತ ಶ್ರವಣಬೆಳಗೊಳದ ಬೃಹತ್ತಾದ ಬಾಹುಬಲಿ ಗೊಮ್ಮಟೇಶ್ವರ ಮೂರ್ತಿ ಅದ್ಭುತ ಶಿಲ್ಪಕಲೆಗೆ ಇನ್ನೊಂದು ನಿದರ್ಶನ.

- Advertisement -

ಹೊಯ್ಸಳ ಶಿಲ್ಪಕಲೆಯ ಮೂಲ ರೂವಾರಿ ಜಕಣಾಚಾರಿ ಎಂದು ಹೇಳುತ್ತಾರೆ. ನೂರಿನ್ನೂರು ವರ್ಷಗಳ ಕಾಲ ಕೇವಲ ಒಬ್ಬ ವ್ಯಕ್ತಿಯ ನಿರ್ದೇಶನದಲ್ಲಿ ಇಷ್ಟೆಲ್ಲಾ ಸೃಷ್ಟಿ ಆಗಿರಲು ಸಾಧ್ಯವೇ? ಹುಡುಕಿದಾಗ ಮತ್ತೆ ಪ್ರಮುಖ ಶಿಲ್ಪಿಗಳಾದ ದಾಸೋಜ, ನಾಡೋಜ, ಸಿದ್ದೋಜ, ಮಲ್ಲಿತಮ್ಮ, ಮಲ್ಲೋಜ, ಡಕ್ಕಣಾಚಾರ್ಯ ಹೀಗೆ ಹೆಸರುಗಳು ಸಿಕ್ಕುತ್ತಲೇ ಹೋಗುತ್ತವೆ. ಮಹಿಳಾ ಕಲಾವಿದೆಯರೂ ಇದ್ದಿರಬಹುದಲ್ಲವೇ? ಈ ಬಗ್ಗೆ ಸಂಶೋಧನೆ ಆಗಬೇಕಷ್ಟೇ. ಹಾಗೆ ಹಾಸನ ಜಿಲ್ಲೆಯ ಚಿತ್ರಕಲೆಗೆ ಜಕ್ಕನಹಳ್ಳಿಯಲ್ಲಿರುವ ಕಾಳೇಶ್ವರ ದೇವಾಲಯದ ನವರಂಗದಲ್ಲಿ ವರ್ಣಮಯ ಚಿತ್ರಗಳು ಕಂಡು ಬರುತ್ತವೆ. ಈ ದೇವಾಲಯ ಕ್ರಿ.ಶ. 1170ರಲ್ಲಿ ಹೊಯ್ಸಳ ಒಂದನೆಯ ನರಸಿಂಹನ ಕಾಲದಲ್ಲಿ ಹೆಗ್ಗಡೆ ಕಾಳಿಮಯ್ಯ ಕಟ್ಟಿಸಿದ್ದಾನೆ. ಹಾಗೇ ಶ್ರವಣಬೆಳಗೊಳದ ಚಂದ್ರಗಿರಿಯ ಮೇಲಿರುವ ಶಾಂತಿನಾಥ ಬಸದಿಯಲ್ಲಿಯೂ 12-13ನೆಯ ಶತಮಾನಕ್ಕೆ ಸೇರಿದ ಚಿತ್ರಗಳಿವೆ. ಇಲ್ಲಿರುವ ಜೈನಮಠದಲ್ಲಿ ಚಿತ್ರಕಲಾಕೃತಿಗಳ ಅಪೂರ್ವ ಭಂಡಾರ ಈಗಲೂ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಇದನ್ನು ಓದಿದ್ದೀರಾ?: ಜಿಲ್ಲೆಯ ಕಲಾವಿದೆಯರಿಂದ ಹಸನಾದ ರಂಗಭೂಮಿ

ಆದರೆ ಇಷ್ಟೆಲ್ಲಾ ಶಿಲ್ಪಕಲೆ, ಚಿತ್ರಕಲೆ ಪುರುಷರು ಸೃಷ್ಟಿಸಿದರೆಂಬ ದಾಖಲೆಗಳಿವೆಯೇ ಹೊರತು, ಒಬ್ಬರೇ ಒಬ್ಬ ಕಲಾವಿದೆಯ ಹೆಸರೂ ಇಲ್ಲೆಲ್ಲೂ ಗೋಚರಿಸುವುದಿಲ್ಲ. ಹಿಂದಿನಿಂದ ಈ ಪ್ರದೇಶದಲ್ಲಿ ಕಲಾವಿದೆಯರು ಇರಲಿಲ್ಲವೇ? ಆ ಕುರಿತು ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ. ಇಲ್ಲವೆಂದಾದರೆ ಏಕೆ? ಸಾಮಾಜಿಕ, ಕೌಟುಂಬಿಕ, ರಾಜಕೀಯ ಕಾರಣಗಳೇನಿರಬಹುದು ಎಂಬುದೂ ಅಧ್ಯಯನಗಳಾಗಬೇಕಿದೆ. ಅವರು ಈ ಶಿಲ್ಪಕಲಾ ಪ್ರಕಾರದ ರಚನೆಯಲ್ಲಿ ತೊಡಗಿದ್ದರೂ ಹೆಸರುಗಳು ದಾಖಲಾಗದೇ ಇರುವ ಸಾಧ್ಯತೆಗಳೂ ಇರಬಹುದೆ? ಎಂಬ ಪ್ರಶ್ನೆಗಳಿಗೂ ಉತ್ತರಗಳನ್ನು ಕಂಡುಕೊಳ್ಳಬೇಕಿದೆ.

ಏಕೆಂದರೆ ಮೂಲತಃ ಹೆಣ್ಣು ಸೂಕ್ಷ್ಮ ಮನಸಿನವಳಾಗಿದ್ದು, ತಲೆತಲಾಂತರದಿಂದ ಅನೇಕ ಬಗೆಯ ಅಭಿವ್ಯಕ್ತಿ ಕಲೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಲೇ ಬಂದಿದ್ದಾಳೆ. ಅವಳ ಅಭಿವ್ಯಕ್ತಿಗೆ ಕಾರಣಗಳು, ಸಾಧ್ಯತೆಗಳು ಮತ್ತು ವೇದಿಕೆಗಳು ಪುರುಷನದಕ್ಕಿಂತ ಬೇರೆ ಇರಬಹುದು. ತನ್ನ ಮಾನಸಿಕ ಒತ್ತಡ, ಏಕತಾನತೆಯನ್ನು ಕಳೆದುಕೊಳ್ಳಲು ಹೆಣ್ಣು- ಹಾಡು, ಹಸೆ, ಚಿತ್ರ, ಕಸೂತಿ, ಬರಹ, ಕರಕುಶಲತೆಗಳಲ್ಲಿ ಹಿಂದಿನಿಂದಲೂ ತೊಡಗುತ್ತಾ ಬಂದಿದ್ದು ಅವುಗಳಿಗೆ ಸಾಮಾಜಿಕ ಮಾನ್ಯತೆ, ಆರ್ಥಿಕ ಆಯಾಮ, ಮಾರುಕಟ್ಟೆ ವ್ಯವಸ್ಥೆ… ಮುಂತಾದುವು ಇಲ್ಲದಿದ್ದುದರಿಂದಾಗಿ ಆ ಕಲೆಗಳಿಗೆ ಹೊರ ರೂಪಗಳು, ಪ್ರಚಾರ, ಮಾನ್ಯತೆ, ಮೌಲ್ಯಗಳು ಇಲ್ಲವಾಗಿದ್ದು ಚರಿತ್ರೆಯ ವ್ಯಂಗ್ಯವಿರಬಹುದು.

ಇದನ್ನು ಓದಿದ್ದೀರಾ?: ಜಿಲ್ಲೆಯ ಗಮಕ ಲೋಕದ ತಾರೆಯರು

ಪ್ರಸ್ತುತ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಮಹಿಳಾ ಚಿತ್ರ ಕಲಾವಿದೆಯರು ಯಾರಿರಬಹುದೆಂದು ಹುಡುಕುವಾಗ- ಪ್ರಭಾ ಮಲ್ಲೇಶ್ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಅವರು ಅತ್ಯಂತ ಸೂಕ್ಷ್ಮ ಕುಸುರಿಯ ಮೈಸೂರು ಸಾಂಪ್ರದಾಯಿಕ ಚಿತ್ರಕಲೆಯಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಕಲಾಕೃತಿಗಳನ್ನು ತಯಾರಿಸಿ, ದೇಶವಿದೇಶದಲ್ಲಿ ಕಲಾ ಪ್ರದರ್ಶನ ಏರ್ಪಡಿಸಿ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಪ್ರಭಾ ಮಲ್ಲೇಶ್ ತವರು ಜಿಲ್ಲೆ ಚಿಕ್ಕಮಗಳೂರು. ಆದರೆ ಹಾಸನ ಜಿಲ್ಲೆಯ ಆಲೂರಿಗೆ ಸೊಸೆಯಾಗಿ ಆಗಮಿಸಿ, ಅವರು ಮಾಡಿದ ಸಾಧನೆ, ನಡೆದ ದಾರಿ ಅಪೂರ್ವವಾದದ್ದು.

ಕಲಾವಿದೆ ಬಿ.ಆರ್.ರೂಪ ಹಾಸನದ ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿ ಗುಂಡನ ಬೆಳ್ಳೂರಿನವರು. ಶಾಂತಲಾ ಕಲಾ ಶಾಲೆ ಹಾಗೂ ಕೆನ್ ಕಲಾ ಶಾಲೆ ಬೆಂಗಳೂರಿನಲ್ಲಿ ಕಲಿತಿದ್ದಾರೆ. ಜೊತೆಗೆ ಚಿತ್ರಕಲಾ ಪರಿಷತ್ತು ಬೆಂಗಳೂರಿನಲ್ಲಿ ಕೂಡ ಅಧ್ಯಯನ ಮಾಡಿದ್ದಾರೆ. ಕಲೆಯ ಕುರಿತು ಉನ್ನತ ವ್ಯಾಸಂಗವನ್ನು ಗುಲ್ಬರ್ಗದಲ್ಲಿ ಮಾಡಿ, ರಾಜ್ಯ ರಾಷ್ಟ್ರ ಮಟ್ಟದ ಕಲಾಶಿಬಿರ ಮತ್ತು ಪ್ರದರ್ಶನಗಳಲ್ಲಿ ಪಾಲ್ಗೊಂಡು ಇವತ್ತಿಗೂ ಬೆಂಗಳೂರಿನಲ್ಲಿ ತಮ್ಮದೇ ಸ್ಟುಡಿಯೋ ನಿರ್ಮಿಸಿಕೊಂಡು ಸದ್ದಿಲ್ಲದೇ ಕಲಾಕೃತಿಗಳನ್ನು ರಚನೆ ಮಾಡುತ್ತಾ ಅಪರೂಪದ ಸಾಧನೆ ಮಾಡುತ್ತಿದ್ದಾರೆ.

ವೈ.ಬಿ.ಆಶಾರಾಣಿ, ಶಿಲ್ಪಕಲಾ ವೈಭವದ ಹಳೇಬೀಡಿನಲ್ಲಿ ಹುಟ್ಟಿ ಬೆಳೆದು, ಚಿತ್ರಕಲೆಯಲ್ಲಿ ಡಿಪ್ಲೋಮಾ ಮಾಡಿಕೊಂಡಿದ್ದಾರೆ. ನಂತರ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟಗಳಲ್ಲಿ ಚಿತ್ರಕಲಾ ಪ್ರದರ್ಶನ ಮಾಡುತ್ತಾ, ಅಕಾಡೆಮಿಯ ಕಲಾಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಪ್ರಸ್ತುತ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರೂ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನು ಓದಿದ್ದೀರಾ?: ಹಲವು ಮೊದಲುಗಳ ಅನನ್ಯ ರಂಗ ಭರವಸೆ- ಶ್ವೇತಾ ಎಚ್.ಕೆ.

ರೂಪ ಹಾಸನ ಅವರು ಕವಿಯಾಗಿ, ಲೇಖಕಿಯಾಗಿ, ಮಹಿಳೆಯರ ಮತ್ತು ಮಕ್ಕಳ ಸಂರಕ್ಷಣೆ ಮತ್ತು ಶ್ರೇಯೋಭಿವೃದ್ಧಿಗಾಗಿ ಕೆರೆಕಟ್ಟೆಗಳ ಉಳಿವು ಮತ್ತು ಸಮೃದ್ಧಿಗಾಗಿ ಅವಿರತ ಕಾರ್ಯನಿರ್ವಹಿಸುತ್ತಿರುವವರು. ರೂಪ ಅವರು ತಮ್ಮ ಆಂತರಿಕ ಸಂವೇದನೆಗಳ, ಮಾನಸಿಕ ತೊಳಲಾಟದ ಬಿಡುಗಡೆಯ ವಿಷಯಗಳನ್ನು ಇಟ್ಟುಕೊಂಡು ಸುಮ್ಮನೆ ಗೀಚುತ್ತಾ ಗೀಚುತ್ತಲೇ ಬಿಡಿಸಿರುವ ರೇಖಾಚಿತ್ರಗಳು ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತಮ್ಮ ಕಾವ್ಯ ಮತ್ತು ಲೇಖನಗಳ ಸಂಕಲನಗಳಿಗೆ ಅವರೇ ರಚಿಸಿದ ರೇಖಾಚಿತ್ರಗಳನ್ನು ಬಳಸಿಕೊಂಡಿದ್ದಾರೆ.

ಲತಾ ಪಾಟೀಲ್ ಹಾಸನದ ಶಾಂತಲಾ ಕಲಾ ಶಾಲೆಯ ಪ್ರಾಂಶುಪಾಲರಾಗಿ ನಿರಂತರ ಕಲಾಕೃತಿಗಳನ್ನು ರಚಿಸುತ್ತ ಪ್ರದರ್ಶನ ಮಾಡುತ್ತಾ ಬಂದಿದ್ದಾರೆ. ಅರಸೀಕೆರೆಯಲ್ಲಿ ಮಂಜುಳಾ ಚಿತ್ರಕಲಾ ಶಾಲೆ, ಹಾಸನದಲ್ಲಿ ನಿರ್ಮಲಾ ಹಾಗೂ ಶಾಂತಲಾ ಚಿತ್ರಕಲಾ ಮಹಾವಿದ್ಯಾಲಯಗಳು ಸುಮಾರು 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಸುಮಾರು ಜನ ಮಹಿಳೆಯರು ಚಿತ್ರಕಲಾ ಶಿಕ್ಷಣವನ್ನು ಮುಗಿಸಿ, ಕಲಾವಿದೆಯರಾಗಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಚದುರಿ ಹೋಗಿದ್ದಾರೆ. ಅರಸೀಕೆರೆಯ ನಿವೃತ್ತ ಶಿಕ್ಷಕಿ ಸಾವಿತ್ರಮ್ಮ, ಪ್ರೌಢಶಾಲಾ ಶಿಕ್ಷಕಿಯಾಗಿ ಬೇರೆ ಇತರೆ ವಿಷಯಗಳನ್ನು ಬೋಧಿಸುತ್ತಿದ್ದರೂ ಕವಿತೆ, ಲೇಖನ ಬರೆಯುತ್ತ, ಚಿತ್ರ ಬರೆಯುವುದನ್ನು ರೂಢಿಸಿಕೊಂಡು ತಮ್ಮ ಪಾಡಿಗೆ ತಾವು ಸ್ನೇಹಿತರ ಭಾವಚಿತ್ರ, ವ್ಯಂಗ್ಯ ಚಿತ್ರ ರಚಿಸಿ, ಕೆಲವು ಪ್ರದರ್ಶನಗಳನ್ನೂ ಮಾಡಿದ್ದಾರೆ.

ಇದರೊಂದಿಗೆ ಚಿತ್ರಕಲಾ ಶಿಕ್ಷಕಿಯರಾದ ಲಕ್ಷ್ಮಿ ಕಾರದಕಟ್ಟಿ, ಶೋಭಾ ಪ್ರಭಾಕರ್, ವಿನೋದ, ಅಶ್ವಿನಿ, ಚಂದ್ರಪ್ರಭ, ಪುಷ್ಪ,  ಭಾಗ್ಯಲಕ್ಷ್ಮಿ, ನಂದಿನಿ, ಮಮತಾ, ಸೌಮ್ಯ, ಲಿಖಿತ, ಮಮತಾ, ಮಣಿ, ರಾಧಿಕಾ, ಲಕ್ಷ್ಮಿ, ಅಕ್ಷತಾ ಯು.ಎಂ, ಲಲಿತಾ ಎಂ.ಜಿ, ಚಂದ್ರಪ್ರಭ, ವಿಮಲಾ, ಮಂಜುಳಾ, ಪ್ರೇಮ, ಕೋಮಲಾ ಜೈನ್, ವೃತ್ತಿಕಾ, ಹಂಸ… ಇನ್ನೂ ಅನೇಕ ಮಹಿಳೆಯರು ಗುಂಪು ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಕೆಲವರು ಇತ್ತೀಚೆಗಷ್ಟೇ ಏಕವ್ಯಕ್ತಿ ಕಲಾ ಪ್ರದರ್ಶನಕ್ಕೆ ಮುಂದಾಗಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ವೃತ್ತಿಪರ ಕಲಾವಿದರೊಂದಿಗೆ ಹವ್ಯಾಸಿ ಕಲಾವಿದರು ಕೂಡ ಜಿಲ್ಲೆಯ ಕಲಾ ಪರಂಪರೆಯಲ್ಲಿ ಹೆಜ್ಜೆಯ ಗುರುತು ಮೂಡಿಸಿದ್ದಾರೆ. ಸ್ಪೂರ್ತಿ, ದಿವ್ಯ ಭಾರತಿ, ಭವಾನಿ… ಮುಂತಾದ ಕಲಾ ಕ್ಷೇತ್ರದ ವಿದ್ಯಾರ್ಥಿನಿಯರೂ ತಮ್ಮ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಮುಂದಾಗಿರುವುದು ಹೆಚ್ಚಿನ ಭರವಸೆಯನ್ನು ಮೂಡಿಸಿದೆ.

ಇದನ್ನು ಓದಿದ್ದೀರಾ?: ಜಿಲ್ಲಾ ಲೇಖಕಿಯರ ಬಳಗ ನಡೆದು ಬಂದ ಹಾದಿ

ಖಾಸಗಿಯಾಗಿ ಹವ್ಯಾಸಿ ಕಲಾ ಶಾಲೆಗಳನ್ನು ನಡೆಸುವವರ ಸಂಖ್ಯೆಯು ಇತ್ತೀಚೆಗೆ ಹೆಚ್ಚಾಗಿದ್ದು, ಅದರಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಪಾಲು ಹೆಚ್ಚಾಗಿದೆ. ಹಾಗೇ ಇದರಲ್ಲಿ ಕಲಿಯಲು ಹೆಚ್ಚಿನ ಮಹಿಳೆಯರು ಮುಂದೆ ಬರುತ್ತಿದ್ದಾರೆ ಎನ್ನುವುದು ಸಂತೋಷದ ಸಂಗತಿ. ನಮ್ಮ ಹಾಸನ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ‘ಪರಿಸರ ಜಾಗೃತಿಗಾಗಿ ಚಿತ್ತಾರ’ದ ಹೆಸರಿನಲ್ಲಿ ರಾಜ್ಯದ ಬೇರೆ ಬೇರೆ ಭಾಗದಲ್ಲಿ ಹಾಗೂ ಜಲಚರ ಜೀವಿಗಳ ಉಳಿವಿಗಾಗಿ ನದಿ, ಕೆರೆ, ಕಟ್ಟೆಗಳ ಹತ್ತಿರವೇ ಕಡಿಮೆ ಸಮಯದಲ್ಲಿ ಬೃಹತ್ತಾದ ಅಪೂರ್ವ ಚಿತ್ರಗಳನ್ನು ರಚಿಸುತ್ತ, ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಯನ್ನು ಮಾಡಿದ್ದಾರೆ. ಅವರಲ್ಲಿ ಎಂ.ಜಿ.ಗ್ರೀಷ್ಮ, ಸುಚೇತ ಎಸ್.ಸ್ವಾಮಿ, ಕವನ, ಸಂಯುಕ್ತ, ಐಶ್ವರ್ಯ, ಶೃಂಗ, ಸಿಂಧು ಕೆ.ಮೂರ್ತಿ, ಪೂಜಾಶ್ರೀ, ನಿತ್ಯಶ್ರೀ, ಪ್ರಿಯಾಂಕಾ ರೇಷ್ಮಾ, ಮಾಧುರಿ ಕಶ್ಯಪ್, ಅನುಷಾ, ಶ್ರೇಯಸ್ವಿನಿ, ದಿಶಾ, ಪರಿಣಿತ, ಪ್ರಶಂಸಾ, ಎಸ್.ಶಿವಾನಿ ಶೆಟ್ಟಿ, ಭಾವನಾ, ಸಿಂಚನ, ಕೇತಕಿ, ಅನಿಷಾ, ಹೇಮಶ್ರೀ, ತನುಷಾ, ವಿಮರ್ಶಾ, ಬಿಂದಿಯಾ, ರಾಶಿ, ಸಾನ್ವಿ, ಪುನರ್ವಿ, ಮಾನ್ಯ… ಹೀಗೆ ಇನ್ನೂ ಅದೆಷ್ಟೋ ಕಲಾವಿದೆಯರು! ಎಲೆಮರೆ ಕಾಯಿಯಂತೆ ಅನೇಕರು ಉಳಿದುಕೊಂಡಿದ್ದಾರೆ.

ಎಲ್ಲ ಕಲಾವಿದೆಯರ ಕಲಾಕೃತಿಗಳು ಮೊದಲಿಗೆ ಇಲ್ಲಿ ಪ್ರದರ್ಶನಗೊಳ್ಳಬೇಕು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿಬಿಂಬಿತವಾಗಲು ಕಲಾವಿದೆಯರು ಇನ್ನಷ್ಟು ಗಂಭೀರವಾಗಿ ಕಲೆಯಲ್ಲಿ ತೊಡಗಬೇಕು. ನಿರಂತರ ಪ್ರಯತ್ನದಿಂದ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಿದೆಯಷ್ಟೇ. ಎಲ್ಲ ಕಲೆಗಳಲ್ಲೂ ಹಾಸನದ ಮಹಿಳೆಯರು ತಮ್ಮ ಕುರುಹುಗಳನ್ನು ಉಳಿಸಿರುವಂತೆ ಚಿತ್ರಕಲೆಯಲ್ಲೂ ಉಳಿಸಿದ್ದಾರೆ, ಬೆಳೆಸುತ್ತಿದ್ದಾರೆ. ಅದು ಸಂತೋಷದ ವಿಚಾರವಾಗಿದೆ.

-ಬಿ.ಎಸ್.ದೇಸಾಯಿ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | SIR ರದ್ದತಿ ಆಗ್ರಹಿಸಿ ಸಿಪಿಐ(ಎಂ)ನಿಂದ ಮೇಣದಬತ್ತಿ ಪ್ರತಿಭಟನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ...

ಸಿದ್ದರಾಮಯ್ಯ ‘ಸ್ಟಿಂಗ್’ ವಿವಾದದ ಅಸಲಿ ವೃತ್ತಾಂತವೇನು? ‘ಸತ್ಯಕ್ಕೇ ಜಯ’ ಎಂದು ಮಾಜಿ ಸಿಎಂ ಹೇಳಿದ್ದೇಕೆ?

ಕರ್ನಾಟಕ ರಾಜಕಾರಣದಲ್ಲಿ ಇದೀಗ ‘ಸ್ಟಿಂಗ್ ಆಪರೇಷನ್’ ಹೆಸರಿನಲ್ಲಿ ಹೊಸ ವಿವಾದ ಭುಗಿಲೆದ್ದಿದೆ....

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...