ಐಪಿಎಲ್ 2025 | ಗೆಲುವಿನತ್ತ ಸಮೀಪಿಸಿದ್ದ ರಾಜಸ್ಥಾನ ರಾಯಲ್ಸ್ ಮಣಿಸಿದ ಆ ಒಂದು ಕ್ಯಾಚ್‌

Date:

ಕ್ಯಾಚುಗಳು ಮ್ಯಾಚುಗಳನ್ನು ಗೆಲ್ಲಿಸುತ್ತವೆ ಎಂಬುದಕ್ಕೆ 2025ನೇ ಆವೃತ್ತಿಯ ಆರ್‌ಸಿಬಿ ಹಾಗೂ ಆರ್‌ಆರ್‌ ನಡುವೆ ನಡೆದ 42ನೇ ಪಂದ್ಯ ಮತ್ತೊಮ್ಮೆ ಸಾಕ್ಷಿಯಾಗಿದೆ. ಆರ್‌ಸಿಬಿ ವಿರುದ್ಧದ ಪಂದ್ಯವನ್ನು 11 ರನ್​​ಗಳಿಂದ ಪರಾಭವಗೊಂಡ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 2025 ರ ಐಪಿಎಲ್ ಇನ್ನು ಮುಂದೆ ಕೇವಲ ಔಪಚಾರಿಕವಾಗಿದೆ. ಈಗಾಗಲೇ ಆಡಿರುವ 9 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಸೋತಿರುವ ಆರ್‌ಆರ್‌ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದು, ತಂಡದ ಪ್ರದರ್ಶನವನ್ನು ನೋಡಿದರೆ, ಇನ್ನುಳಿದ ಪಂದ್ಯಗಳನ್ನು ಗೆಲ್ಲುವುದು ಅಸಾಧ್ಯವೆನ್ನುವಂತಾಗಿದೆ.

- Advertisement -

ರಾಜಸ್ಥಾನ್ ಪ್ಲೇ ಆಫ್ ಕನಸು ಬಹುತೇಕ ನುಚ್ಚು ನೂರಾಗಿದೆ. ತಂಡದ ಈ ಕಳಪೆ ಪ್ರದರ್ಶನಕ್ಕೆ ಮಧ್ಯಮ ಕ್ರಮಾಂಕದ ವೈಫಲ್ಯವೇ ಪ್ರಮುಖ ಕಾರಣ ಎನ್ನಬಹುದು. ಸತತ ಮೂರು ಪಂದ್ಯಗಳಲ್ಲಿ ಆರ್‌ಆರ್‌ ತಾನು ಮಾಡಿದ ತಪ್ಪುಗಳಿಂದಲೇ ಸೋತಿದೆ. ಆರ್​ಸಿಬಿ ವಿರುದ್ಧದ ಪಂದ್ಯದಲ್ಲೂ ರಾಜಸ್ಥಾನ ಅದೇ ತಪ್ಪನ್ನು ಮಾಡಿ ಸೋತಿತ್ತಾದರೂ ಇಲ್ಲಿ ಆರ್​ಸಿಬಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ ತೋರಿದ ಚಾಣಾಕ್ಷತೆ ಆರ್​ಸಿಬಿ ಗೆಲುವಿಗೆ ಪ್ರಮುಖ ಕಾರಣವಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಆರ್​ಸಿಬಿ ನೀಡಿದ 205 ರನ್​ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್​ಗೆ ನಿರೀಕ್ಷೆಗೂ ಮೀರಿದ ಆರಂಭ ನೀಡುವಲ್ಲಿ ಆರಂಭಿಕ ಬ್ಯಾಟರ್‌ಗಳು ಯಶಸ್ವಿಯಾದರು. ತಂಡ ಕೇವಲ 9 ಓವರ್​ಗಲ್ಲಿ 3 ವಿಕೆಟ್ ಕಳೆದುಕೊಂಡು 110 ರನ್ ಕಲೆಹಾಕಿತು. ಆದಾಗ್ಯೂ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯ ರಾಜಸ್ಥಾನ​ ತಂಡಕ್ಕೆ ಮತ್ತೊಂದು ಸೋಲಿನ ಆಘಾತ ನೀಡಿತು. ಅದರಲ್ಲೂ 18ನೇ ಓವರ್​ನಲ್ಲಿ 22 ರನ್​ ಕಲೆಹಾಕಿ ರಾಜಸ್ಥಾನ್‌ಗೆ ಗೆಲುವಿನ ಭರವಸೆ ಮೂಡಿಸಿದ್ದ ಧೃವ್ ಜುರೇಲ್ 19ನೇ ಓವರ್​ನಲ್ಲಿ ವಿಕೆಟ್ ಒಪ್ಪಿಸಿದ್ದು ತಂಡವನ್ನು ಸೋಲಿನ ಕಡೆ ಸಿಲುಕಿಸಿತು. ಆದಾಗ್ಯೂ ಈ ವಿಕೆಟ್​ನ ಕ್ರೆಡಿಟ್ ಆರ್​ಸಿಬಿ ವಿಕೆಟ್ ಕೀಪರ್ ಜಿತೇಶ್ ಶರ್ಮಾಗೆ ಸಲ್ಲಬೇಕು.

ಈ ಸುದ್ದಿ ಓದಬೇಕು? IPL 2025 | ದಾಖಲೆಯ 27 ಕೋಟಿಗೆ ಹರಾಜು ಆಗಿದ್ದರೂ ಶೂನ್ಯಕ್ಕೆ ಔಟಾಗುತ್ತಿರುವ ಲಖನೌ ಆಟಗಾರ

ಹೇಜಲ್​ವುಡ್‌ನಿಂದ ಬೌಲಿಂಗ್‌, ಜಿತೇಶ್‌ ನಿರ್ಧಾರ!

ವಾಸ್ತವವಾಗಿ ರಾಜಸ್ಥಾನ್ ಗೆಲುವಿಗೆ ಕೊನೆಯ 3 ಓವರ್​ಗಳಲ್ಲಿ 40 ರನ್ ಬೇಕಾಗಿದ್ದವು. ಈ ವೇಳೆ ಆರ್​ಸಿಬಿ ಮೇಲುಗೈ ಸಾಧಿಸಿತ್ತು. ಆದರೆ 18ನೇ ಓವರ್ ಬೌಲ್ ಮಾಡಿದ ಭುವನೇಶ್ವರ್ ಬರೋಬ್ಬರಿ 22 ರನ್ ಬಿಟ್ಟುಕೊಟ್ಟರು. ಈ ಓವರ್​ನಲ್ಲಿ ಜುರೇಲ್ 1 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿ ಆರ್​ಸಿಬಿಗೆ ಕಂಟಕವಾಗಿದ್ದರು. ಕೊನೆಯ 2 ಓವರ್​ಗಳಲ್ಲಿ 18 ರನ್ ಬೇಕಿದ್ದಾಗ ಗೆಲುವು ರಾಜಸ್ಥಾನ ಪರ ವಾಲಿದ್ದಂತೆ ಕಾಣುತ್ತಿತ್ತು. ಆದರೆ 19ನೇ ಓವರ್​ನಲ್ಲಿ ದಾಳಿಗಿಳಿದ ಜೋಶ್ ಹೇಜಲ್​ವುಡ್ ಪಂದ್ಯವನ್ನು ಮತ್ತೆ ಆರ್​ಸಿಬಿಯತ್ತ ತಿರುಗಿಸಿದರು.

ಈ ಓವರ್​ನಲ್ಲಿ ಹೇಜಲ್​ವುಡ್ ಕೇವಲ 1 ರನ್​ ನೀಡಿ 2 ಪ್ರಮುಖ ವಿಕೆಟ್‌ಗಳನ್ನು ಉರುಳಿಸಿದರು. ಅದರಲ್ಲೂ ಸ್ಫೋಟಕ ಬ್ಯಾಟಿಂಗ್‌ ಮಾಡುತ್ತಿದ್ದ ಜುರೇಲ್ ವಿಕೆಟ್ ಉರುಳಿಸುವ ಮೂಲಕ ಹೇಜಲ್​ವುಡ್​ ತಂಡದ ಗೆಲುವನ್ನು ಖಚಿತಪಡಿಸಿದರು. ಈ ವಿಕೆಟ್ ಉರುಳಿಸಿದ್ದು ಹೇಜಲ್​ವುಡ್ ಆದರೂ ವಿಕೆಟ್ ಕೀಪರ್ ಜಿತೇಶ್ ಅವರ ಚುರುಕುತನ ವಿಕೆಟ್ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿತು.

ವಾಸ್ತವವಾಗಿ ಹೇಜಲ್​ವುಡ್ 19ನೇ ಓವರ್​ನ 3ನೇ ಎಸೆತವನ್ನು ಯಾರ್ಕರ್ ಬೌಲ್ ಮಾಡಿದರು. ಈ ಎಸೆತವನ್ನು ಸಿಕ್ಸರ್​ಗಟ್ಟಲು ಧೃವ್ ಜುರೇಲ್ ಯತ್ನಿಸಿದರು. ಆದರೆ ಆ ಯತ್ನದಲ್ಲಿ ಅವರು ಸಫಲರಾಗಲಿಲ್ಲ. ಚೆಂಡು ನೇರವಾಗಿ ವಿಕೆಟ್ ಕೀಪರ್​ ಕೈಗೆ ಹೋಯಿತು. ಈ ಹಂತದಲ್ಲಿ ಎಲ್ಲರೂ ಇದು ಡಾಟ್ ಬಾಲ್ ಎಂದು ಭಾವಿಸಿದ್ದರು. ಆದರೆ ಚೆಂಡು ಧೃವ್ ಅವರ ಬ್ಯಾಟ್​ಗೆ ತಾಗಿದೆ ಎಂಬುದು ಜಿತೇಶ್​ಗೆ ಮಾತ್ರ ಗೊತ್ತಿತ್ತು. ಹೀಗಾಗಿ ಮೊದಲು ಅಂಪೈರ್ ಬಳಿ ಔಟ್​ಗೆ ಮನವಿ ಮಾಡಿದ ಜಿತೇಶ್, ಅಂಪೈರ್ ಔಟ್ ನೀಡದಿದ್ದಾಗ ರಜತ್​ಗೆ ರಿವ್ಯೂ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.

ಆರಂಭದಲ್ಲಿ ರಜತ್​ ಹಿಂದೇಟು ಹಾಕಿದರೂ, ಪಟ್ಟು ಬಿಡದ ಜಿತೇಶ್ ರಿವ್ಯೂ ತೆಗೆದುಕೊಳ್ಳುವಂತೆ ಕೇಳಿಕೊಂಡರು. ಕೊನೆಗೂ ಒತ್ತಡಕ್ಕೆ ಮಣಿದ ರಜತ್ ರಿವ್ಯೂ ತೆಗೆದುಕೊಂಡರು. ರಿವ್ಯೂನಲ್ಲಿ ಚೆಂಡು ಧೃವ್ ಅವರ ಬ್ಯಾಟ್​ಗೆ ತಾಗಿರುವುದು ಸ್ಪಷ್ಟವಾಗಿ ಗೋಚರಿಸಿತು. ಹೀಗಾಗಿ ಮೊದಲು ನಾಟೌಟ್ ನೀಡಿದ್ದ ಅಂಪೈರ್ ಆ ಬಳಿಕ ತಮ್ಮ ನಿರ್ಧಾರವನ್ನು ಬದಲಿಸಬೇಕಾಯಿತು. ಇತ್ತ ಧೃವ್ ಔಟಾದ ಬಳಿಕ ರಾಜಸ್ಥಾನದ ಸೋಲು ಬಹುತೇಕ ಖಚಿತವಾಯಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್: ಲವ್ಲಿನಾಗೆ ಚಿನ್ನ, ಬಿಲ್ಲುಗಾರಿಕೆಯಲ್ಲಿ ಐತಿಹಾಸಿಕ ಸಾಧನೆ; ಪದಕ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು...

ಏಷ್ಯನ್ ಗೇಮ್ಸ್: ಪಾಕ್ ಮಣಿಸಿ ಫೈನಲ್‌ಗೇರಿದ ಭಾರತ ಹಾಕಿ ತಂಡ; ಕುಸ್ತಿಯಲ್ಲಿ ನಿತೇಶ್‌ಗೆ ಬೆಳ್ಳಿ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ 13ನೇ ದಿನವಾದ...

ಏಷ್ಯಾಡ್’ನಲ್ಲಿ ಶ್ರೀಲಂಕಾ ಸೋಲಿಸಿದ ಟೀಮ್ ಇಂಡಿಯಾ: ಚಿನ್ನದ ಪದಕಕ್ಕಾಗಿ ಪಾಕ್ ಎದುರು ಸೆಣಸು

ಸಂಘಟಿತ ಪ್ರದರ್ಶನ ನೀಡಿದ ಭಾರತ ಪುರುಷರ ಕ್ರಿಕೆಟ್ ತಂಡ, ಇಲ್ಲಿ ನಡೆಯುತ್ತಿರುವ...

ಗಿಲ್ ಅಮೋಘ ದ್ವಿಶತಕದಾಟ, ರೋಹಿತ್ ಶತಕ: 406 ರನ್ ಗುರಿ ಮುಟ್ಟಿ ಐತಿಹಾಸಿಕ ಜಯ ಸಾಧಿಸಿದ ಭಾರತ

ಗುವಾಹಟಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಇತಿಹಾಸ...