ಐಪಿಎಲ್‌ 2023 | ಇಂದು ಮೊದಲ ಡಬಲ್‌ ಹೆಡ್ಡರ್‌, ನೂತನ ನಾಯಕತ್ವಕ್ಕೆ ಮೊದಲ ಸವಾಲು

Date:

  • ಕೋಲ್ಕತ್ತಾ ಮತ್ತು ಪಂಜಾಬ್ ನಡುವೆ ಮೊದಲ ಪಂದ್ಯ
  • ಲಖನೌ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಎರಡನೇ ಪಂದ್ಯ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 16ನೇ ಆವೃತ್ತಿಯಲ್ಲಿ ಇಂದು (ಏಪ್ರಿಲ್‌ 1) ಎರಡು ಪಂದ್ಯಗಳು ನಡೆಯಲಿವೆ. ಮಧ್ಯಾಹ್ನ 3.30ಕ್ಕೆ ಮೊಹಾಲಿಯಲ್ಲಿ ನಡೆಯುವ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡಕ್ಕೆ ಪಂಜಾಬ್‌ ಕಿಂಗ್ಸ್‌ ಸವಾಲು ಎದುರಾಗಲಿದೆ.

ಲಖನೌನ ಏಕನಾ ಸ್ಟೇಡಿಯಂನಲ್ಲಿ ನಡೆಯುವ ಎರಡನೇ ಪಂದ್ಯದಲ್ಲಿ ಕೆ ಎಲ್ ರಾಹುಲ್‌ ಸಾರಥ್ಯದ ಲಖನೌ ಸೂಪರ್‌ ಜಯಂಟ್ಸ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಏಕನಾ ಸ್ಟೇಡಿಯಂನಲ್ಲಿ ಆತಿಥೇಯ ತಂಡ ಮೊದಲ ಬಾರಿಗೆ ಕಣಕ್ಕಿಳಿಯಲಿದೆ. ಈ ಮೈದಾನದಲ್ಲಿ ಇದುವರೆಗೂ 6 ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ನಡೆದಿದ್ದು, 5ರಲ್ಲೂ ಮೊದಲು ಬ್ಯಾಟ್‌ ಮಾಡಿದ ತಂಡ ಗೆಲುವು ಕಂಡಿದೆ. ಹೀಗಾಗಿ ಇಂದಿನ ಐಪಿಎಲ್ ಪಂದ್ಯದಲ್ಲಿ ಟಾಸ್‌ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ.

ಈ ಸುದ್ದಿ ಓದಿದ್ದೀರಾ?: ಐಪಿಎಲ್ 2023 | ಶುಭಮನ್‌ ಅಮೋಘ ಆಟ; ಗುಜರಾತ್‌ಗೆ ರೋಚಕ ಜಯ

ಪ್ರಮುಖ ಆಟಗಾರರು ಗೈರು

ಕೋಲ್ಕತ್ತಾ ನೈಟ್‌ ರೈಡರ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳ ಪ್ರಮುಖ ಆಟಗಾರರು ಶನಿವಾರದ ಪಂದ್ಯಕ್ಕೆ ಗೈರಾಗಲಿದ್ದಾರೆ. ನಾಯಕ ಶ್ರೇಯಸ್‌ ಅಯ್ಯರ್‌ ಗಾಯದ ಕಾರಣ ಸಂಪೂರ್ಣ ಐಪಿಎಲ್ ಟೂರ್ನಿಯಿಂದಲೇ ಹೊರನಡೆದಿದ್ದು, ಕೆಕೆಆರ್‌ ತಂಡವನ್ನು ನಿತೀಶ್‌ ರಾಣಾ ಮುನ್ನಡೆಸಲಿದ್ದಾರೆ. ಅನುಮತಿ ಪತ್ರ ದೊರೆಯದ ಕಾರಣ ಶಕೀಬ್‌ ಅಲ್‌ ಹಸನ್‌ ಇಂದಿನ ಪಂದ್ಯಕ್ಕೆ ಗೈರಾಗಲಿದ್ದಾರೆ.

ಪಂಜಾಬ್‌ ಐಪಿಎಲ್ ತಂಡಕ್ಕೆ ಹಿರಿಯ ಆಟಗಾರ ಶಿಖರ್‌ ಧವನ್‌ ನೂತನ ನಾಯಕನನ್ನಾಗಿ ನೇಮಕಗೊಂಡಿದ್ದಾರೆ. ಜಾನಿ ಬೇರ್‌ಸ್ಟೋ, ಕಗಿಸೋ ರಬಾಡಾ ಅನುಪಸ್ಥಿತಿಯಲ್ಲಿ ದುಬಾರಿ ಆಟಗಾರ ಸ್ಯಾಮ್‌ ಕರನ್‌ ಮೇಲೆ ಕಿಂಗ್ಸ್‌ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ.  

ಡೆಲ್ಲಿಗೆ ಡೇವಿಡ್‌ ನಾಯಕ

ಟೀಮ್‌ ಇಂಡಿಯಾದಲ್ಲಿ ಖಾಯಂ ಸ್ಥಾನ ಗಿಟ್ಟಿಸಲು ಕೆ ಎಲ್‌ ರಾಹುಲ್‌ ಅವರಿಗೆ ಈ ಬಾರಿಯ ಐಪಿಎಲ್‌ ಅತ್ಯಂತ ಮಹತ್ವಾದ್ದಾಗಿದೆ. ರಿಷಭ್‌ ಪಂತ್‌ ಅನುಪಸ್ಥಿತಿಯಲ್ಲಿ ಡೇವಿಡ್‌ ವಾರ್ನರ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ಬಲಿಷ್ಠ ಆಟಗಾರರನ್ನು ಹೊಂದಿರುವ ಡೆಲ್ಲಿ ಮೇಲ್ನೋಟಕ್ಕೆ ಲಖನೌ ವಿರುದ್ಧ ಗೆಲ್ಲುವ ಫೆವರಿಟ್‌ ತಂಡವಾಗಿ ಕಣಕ್ಕಿಳಿಯಲಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟಿ20 | ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾಗೆ ರೋಚಕ ಗೆಲುವು: ಜೋಶ್ ಇಂಗ್ಲಿಸ್ ಶತಕ ವ್ಯರ್ಥ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 2 ವಿಕೆಟ್...

ಕ್ರಿಕೆಟಿಗ ಶ್ರೀಶಾಂತ್ ವಿರುದ್ಧ 18.7 ಲಕ್ಷ ರೂ. ವಂಚನೆ, ದೂರು ದಾಖಲು

ಉತ್ತರ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ...

ಪಾಪಿಗಳು ಹಾಜರಾದ ಕಾರಣ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋತಿದೆ: ಮಮತಾ ಬ್ಯಾನರ್ಜಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಂತರ ಇದೀಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ...

ರೋಹಿತ್ ಶರ್ಮಾ ನಂತರ ಟೀಮ್ ಇಂಡಿಯಾದ ಕ್ಯಾಪ್ಟನ್ ಯಾರು?

2007ರಲ್ಲಿ ರಾಹುಲ್ ದ್ರಾವಿಡ್ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಯುವ ಹೊತ್ತಿಗೆ ಮಹೇಂದ್ರ ಸಿಂಗ್...