ಭಾರತದ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಪುರುಷರ ಕುಸ್ತಿ ಸ್ಪರ್ಧೆಯಲ್ಲಿ 57 ಕೆಜಿ ವಿಭಾಗದಲ್ಲಿ 13-5 ಅಂತರದಲ್ಲಿ ಡೇರಿಯನ್ ಕ್ರೂಜ್ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
21 ವರ್ಷದ ಅಮನ್ ಸೆಹ್ರಾವತ್ ಪ್ಯಾರಿಸ್ ಒಲಿಂಪಿಕ್ಸ್ ವೈಯಕ್ತಿಕ ವಿಭಾಗದಲ್ಲಿ ಪದಕ ಗೆದ್ದ ಅತಿ ಕಿರಿಯ ಭಾರತೀಯ ಸ್ಪರ್ಧಿ ಎನಿಸಿಕೊಂಡಿದ್ದಾರೆ.
ಜಪಾನ್‌ನ ರೇ ಹಿಗುಚಿ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಸೋತ ಅಮನ್ ಸೆಹ್ರಾವತ್ ಶುಕ್ರವಾರ ಕಂಚಿನ ಪದಕದ ಹಣಾಹಣಿಯಲ್ಲಿ ಸ್ಪರ್ಧಿಸಬೇಕಾಯಿತು.
ಇದನ್ನು ಓದಿದ್ದೀರಾ? ಪ್ಯಾರಿಸ್ ಒಲಿಂಪಿಕ್ಸ್: ಹಾಕಿಯಲ್ಲಿ ಕಂಚು ಗೆದ್ದ ಭಾರತ, ಪದಕಗಳ ಸಂಖ್ಯೆ 4ಕ್ಕೆ ಏರಿಕೆ
ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಅಮನ್ ಭಾರತಕ್ಕೆ ಆರನೇ ಪದಕವನ್ನು ಗಳಿಸಿಕೊಟ್ಟಿದ್ದಾರೆ. ಹಾಗೆಯೇ ಭಾರತಕ್ಕೆ ಲಭಿಸಿದ ಐದನೇ ಕಂಚು ಇದಾಗಿದೆ.
At 21, India's Aman Sehrawat is the youngest Indian to win an individual medal at the Olympics 🇮🇳🥉#Paris2024 pic.twitter.com/W9UYDWX9aI
— Olympic Khel (@OlympicKhel) August 9, 2024