ಬ್ರೆಜಿಲ್‌ನ ಸಾವೊ ಪಾಲೊದಲ್ಲಿ ವಿಮಾನವೊಂದು ಪತನಗೊಂಡಿದ್ದು, ಅದರಲ್ಲಿದ್ದ 61 ಮಂದಿಯೂ ಕೂಡಾ ಸಾವನ್ನಪ್ಪಿದ್ದಾರೆ.
ಬ್ರೆಜಿಲ್‌ನ ದಕ್ಷಿಣ ರಾಜ್ಯವಾದ ಪರಾನಾದಲ್ಲಿನ ಕ್ಯಾಸ್ಕಾವೆಲ್‌ನಿಂದ ಸಾವೊ ಪಾಲೊ ನಗರದ ಗೌರುಲ್ಹೋಸ್ ವಿಮಾನ ನಿಲ್ದಾಣಕ್ಕೆ ಹಾರುತ್ತಿದ್ದಾಗ ವಿನ್ಹೆಡೊ ಪಟ್ಟಣದಲ್ಲಿ ಪತನಗೊಂಡಿದೆ ಎಂದು ವೊಪಾಸ್ ಏರ್‌ಲೈನ್ ಹೇಳಿದೆ.
ಎಟಿಆರ್ 72-500 ವಿಮಾನದಲ್ಲಿ 57 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಗಳಿದ್ದರು. ಯಾರೂ ಕೂಡಾ ಬದುಕುಳಿದಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ವಿಮಾನವು ನೇರವಾಗಿ ನೆಲಕ್ಕೆ ಅಪ್ಪಳಿಸಿ, ಸುರುಳಿ ಸುತ್ತಿ ಬಿದ್ದಿರುವುದು ಕಂಡು ಬರುತ್ತದೆ.
ಇದನ್ನು ಓದಿದ್ದೀರಾ? ಬ್ರೆಜಿಲ್| ಭಾರೀ ಮಳೆಯಿಂದ ಪ್ರವಾಹ; 78 ಸಾವು- 1,15,000ಕ್ಕೂ ಅಧಿಕ ಜನರ ಸ್ಥಳಾಂತರ
ಬ್ರೆಜಿಲ್‌ನ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು ಸಂತ್ರಸ್ತರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಸಾವೊ ಪಾಲೊ ರಾಜ್ಯದ ಗವರ್ನರ್ ಟಾರ್ಸಿಯೊ ಗೋಮ್ಸ್ ಡಿ ಫ್ರೀಟಾಸ್ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದ್ದಾರೆ. ಇನ್ನು ಫ್ರೆಂಚ್-ಇಟಾಲಿಯನ್ ವಿಮಾನ ತಯಾರಕ ಎಟಿಆರ್ ತನಿಖೆಗೆ ಸಹಕರಿಸುವುದಾಗಿ ಹೇಳಿದೆ.
ವಿಮಾನವು ಜನವಸತಿ ಪ್ರದೇಶದಲ್ಲಿ ಬಿದ್ದಿದ್ದು ವಿಮಾನದಲ್ಲಿದ್ದ 61 ಮಂದಿಯ ಸಾವು ಹೊರತುಪಡಿಸಿ ಬೇರೆ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯ ಕಾಂಡೋಮಿನಿಯಂ ಕಾಂಪ್ಲೆಕ್ಸ್‌ನಲ್ಲಿರುವ ಒಂದು ಮನೆಗೆ ಮಾತ್ರ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Plane crash in Brazil's São Paulo state kills all 61 on board#PrimaMedia #PrimaNews #PrimaTVGhana #Brazil #InternationalNews https://t.co/jweBPba4iy
— Prima News (@primanewsghana) August 9, 2024